1 Samuel · chapter 12 · verse 14
1 Samuel 12:14 in Kannada
ನೀವು ಕರ್ತನ ಮಾತಿಗೆ ವಿರೋಧವಾಗಿ ತಿರುಗಿ ಬೀಳದೆ ಕರ್ತನಿಗೆ ಭಯಪಟ್ಟು ಆತನನ್ನು ಸೇವಿಸಿ ಆತನ ಮಾತಿಗೆ ವಿಧೇಯರಾದರೆ ನೀವೂ ನಿಮ್ಮ ಮೇಲೆ ಆಳುವ ಅರಸನೂ ನಿಮ್ಮ ದೇವರಾದ ಕರ್ತನನ್ನು ತಪ್ಪದೆ ಹಿಂಬಾಲಿಸುವಿರಿ.
Neevu kartana maatige virodhavaagi tirugi beelade kartanige bhayapattu aatanannu sevisi aatana maatige vidheyaraadare neevoo nimma mele aaluva arasanoo nimma devaraada kartanannu tappade himbaalisuviri.
1 Samuel 12:14 in English
- King James Version (KJV)
- If ye will fear the LORD, and serve him, and obey his voice, and not rebel against the commandment of the LORD, then shall both ye and also the king that reigneth over you continue following the LORD your God:
- World English Bible (WEB)
- If you will fear the LORD, and serve him, and listen to his voice, and not rebel against the commandment of the LORD, then both you and also the king who reigns over you are followers of the LORD your God.
- American Standard Version (ASV)
- If ye will fear Jehovah, and serve him, and hearken unto his voice, and not rebel against the commandment of Jehovah, and both ye and also the king that reigneth over you be followers of Jehovah your God, [well]:
- Bible in Basic English (BBE)
- If in the fear of the Lord you are his servants, hearing his voice and not going against the orders of the Lord, but being true to the Lord your God, you and the king ruling over you, then all will be well:
- Darby Translation (DBY)
- If ye fear Jehovah, and serve him, and hearken to his voice, and rebel not against the commandment of Jehovah, then both ye and the king also that reigns over you shall continue following Jehovah your God.
- Webster's Bible (WBS)
- If ye will fear the LORD, and serve him, and obey his voice, and not rebel against the commandment of the LORD, then shall both ye, and also the king that reigneth over you continue following the LORD your God.
- Young's Literal Translation (YLT)
- 'If ye fear Jehovah, and have served Him, and hearkened to His voice, then ye do not provoke the mouth of Jehovah, and ye have been — both ye and the king who hath reigned over you — after Jehovah your God.
Read in context
- 12ಆದರೆ ಅಮ್ಮೋನನ ಮಕ್ಕಳ ಅರಸನಾದ ನಾಹಾಷನು ನಿಮಗೆ ವಿರೋಧವಾಗಿ ಯುದ್ಧ ಮಾಡಲು ಬರುವದನ್ನು ನೋಡಿದಾಗ ನಿಮ್ಮ ದೇವರಾದ ಕರ್ತನೇ ನಿಮಗೆ ಅರಸನಾಗಿದ್ದರೂ ನೀವು ನನಗೆ--ಹಾಗೆ ಬೇಡ; ಒಬ್ಬ ಅರಸನು ನಮ್ಮನ್ನು ಆಳಬೇಕು ಅಂದಿರಿ.
- 13ಇಗೋ, ನೀವು ಆರಿಸಿಕೊಂಡು ಅಪೇಕ್ಷಿಸಿದ ಅರಸನು ಇಲ್ಲಿ ಇದ್ದಾನೆ. ಇಗೋ, ಕರ್ತನು ನಿಮ್ಮ ಮೇಲೆ ಅವನನ್ನು ಅರಸನನ್ನಾಗಿ ನೇಮಿಸಿದ್ದಾನೆ.
- 14ನೀವು ಕರ್ತನ ಮಾತಿಗೆ ವಿರೋಧವಾಗಿ ತಿರುಗಿ ಬೀಳದೆ ಕರ್ತನಿಗೆ ಭಯಪಟ್ಟು ಆತನನ್ನು ಸೇವಿಸಿ ಆತನ ಮಾತಿಗೆ ವಿಧೇಯರಾದರೆ ನೀವೂ ನಿಮ್ಮ ಮೇಲೆ ಆಳುವ ಅರಸನೂ ನಿಮ್ಮ ದೇವರಾದ ಕರ್ತನನ್ನು ತಪ್ಪದೆ ಹಿಂಬಾಲಿಸುವಿರಿ.
- 15ನೀವು ಕರ್ತನ ಮಾತಿಗೆ ವಿಧೇಯರಾಗದಿದ್ದರೆ, ಕರ್ತನ ಆಜ್ಞೆಗೆ ವಿರೋಧವಾಗಿ ತಿರಿಗಿ ಬಿದ್ದರೆ, ಕರ್ತನ ಹಸ್ತವು ನಿಮ್ಮ ತಂದೆಗಳಿಗೆ ವಿರೋಧವಾಗಿದ್ದಂತೆಯೇ ನಿಮಗೂ ವಿರೋಧವಾಗಿ ರುವದು.
- 16ಈಗ ನಿಂತುಕೊಂಡು ಕರ್ತನು ನಿಮ್ಮ ಕಣ್ಣುಗಳ ಮುಂದೆ ಮಾಡುವ ಈ ದೊಡ್ಡ ಕಾರ್ಯ ವನ್ನು ನೋಡಿರಿ.
Cross references
- Joshua 24:14 ಯೆಹೋಶುವ 24:14ಆದದರಿಂದ ಈಗ ಕರ್ತನಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಆತನನ್ನು ಸೇವಿಸಿರಿ. ನಿಮ್ಮ ತಂದೆಗಳು ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಸೇವಿ ಸಿದ ದೇವರುಗಳನ್ನು ತೊರೆದುಬಿಟ್ಟು ಕರ್ತನನ್ನೇ ನೀವು ಸೇವಿಸಿರಿ.
- Deuteronomy 28:1–14 ಧರ್ಮೋಪದೇಶಕಾಂಡ 28:1–14ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ಮಾತನ್ನು ಎಚ್ಚರಿಕೆಯಿಂದ ಕೇಳಿ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ಕೈಕೊಂಡರೆ ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಎಲ್ಲಾ ಜನಾಂಗಗಳಿಗಿಂತ ಉನ್ನತದಲ್ಲಿರಿಸುವನು. ನೀನು ನಿನ್ನ ದೇವರಾದ ಕರ್ತನ ವಾಕ್ಯವನ್ನು ಕೇಳಿದರೆ ಈ ಎಲ್ಲಾ ಆಶೀರ್ವಾದಗಳು ನಿನ್ನ ಮೇಲೆ ಬಂದು ನಿನಗೆ ಪ್ರಾಪ್ತವಾಗುವವು. ಪಟ್ಟಣದಲ್ಲಿ ನಿನಗೆ ಆಶೀರ್ವಾದ, ಹೊಲದಲ್ಲಿ ನಿನಗೆ ಆಶೀರ್ವಾದ, ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ. ನಿನ್ನ ಪುಟ್ಟಿಗೂ ಕಣಜಕ್ಕೂ ಆಶೀರ್ವಾದ. ಬರುವಾಗ ನಿನಗೆ ಆಶೀರ್ವಾದ; ಹೊರಡುವಾಗ ನಿನಗೆ ಆಶೀರ್ವಾದ. ನಿನಗೆ ವಿರೋಧವಾಗಿ ಏಳುವ ನಿನ್ನ ಶತ್ರುಗಳನ್ನು ಕರ್ತನು ನಿನ್ನ ಮುಂದೆ ಹೊಡೆದು ಬಿಡುವನು; ಅವರು ಒಂದೇ ಮಾರ್ಗದಲ್ಲಿ ನಿನಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ನಿನ್ನ ಮುಂದೆ ಓಡಿಹೋಗುವರು. ನಿನ್ನ ಕಣಜಗಳಲ್ಲಿಯೂ ನೀನು ಕೈಹಾಕುವ ಎಲ್ಲಾದರಲ್ಲಿಯೂ ನಿನಗೆ ಆಶೀರ್ವಾದ ಬರುವ ಹಾಗೆ ಕರ್ತನು ಅಪ್ಪಣೆಕೊಡುವನು; ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯಲ್ಲಿ ಆಶೀರ್ವಾದ ಕೊಡುವನು. ನೀನು ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ಕಾಪಾಡಿ ಆತನ ಮಾರ್ಗಗಳಲ್ಲಿ ನಡೆದರೆ ಕರ್ತನು ನಿನಗೆ ಪ್ರಮಾಣಮಾಡಿದ ಹಾಗೆ ನಿನ್ನನ್ನು ತನಗೆ ಪರಿಶುದ್ಧ ಜನವಾಗಿ ಸ್ಥಾಪಿಸುವನು. ಆಗ ನೀನು ಕರ್ತನ ಹೆಸರಿನಿಂದ ಕರೆಯಲ್ಪಡುವದನ್ನು ಭೂಮಿಯ ಜನಗಳೆಲ್ಲಾ ನೋಡಿ ನಿನಗೆ ಭಯಪಡುವರು; ಇದಲ್ಲದೆ ನಿನಗೆ ಕೊಡುತ್ತೇನೆಂದು ನಿನ್ನ ಪಿತೃಗಳಿಗೆ ಆಣೆ ಇಟ್ಟ ಕರ್ತನು ಭೂಮಿಯಮೇಲೆ ನಿನ್ನನ್ನು ಸರಕುಗಳಲ್ಲಿಯೂ ಗರ್ಭದ ಫಲದಲ್ಲಿಯೂ ಪಶುಗಳ ಫಲದಲ್ಲಿಯೂ ಭೂಮಿಯ ಫಲದಲ್ಲಿಯೂ ಸಮೃದ್ಧಿ ಹೊಂದುವಂತೆ ಮಾಡುವನು. ಕರ್ತನು ಆಕಾಶ ವೆಂಬ ತನ್ನ ಒಳ್ಳೆ ಉಗ್ರಾಣವನ್ನು ನಿನಗೆ ತೆರೆದು ನಿನ್ನ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು ನಿನ್ನ ಕೈಕೆಲಸವನ್ನೆಲ್ಲಾ ಆಶೀರ್ವದಿಸುವನು; ನೀನು ಸಾಲ ತಕ್ಕೊಳ್ಳದೆ ಬಹಳ ಜನಾಂಗಗಳಿಗೆ ಸಾಲ ಕೊಡುವಿ. ನಾನು ಈಹೊತ್ತು ನಿನಗೆ ಆಜ್ಞಾಪಿಸುವ ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ನೀನು ಕೇಳಿ ಕಾಪಾಡಿ ಕೈಕೊಂಡರೆ ಕರ್ತನು ನಿನ್ನನ್ನು ಬಾಲವನ್ನಲ್ಲ, ತಲೆಯಾಗಿ ಮಾಡುವನು; ನೀನು ಕೆಳಗಲ್ಲ, ಮೇಲೆಯೇ ಇರುವಿ. ಹೀಗಿರುವದರಿಂದ ಬೇರೆ ದೇವರುಗಳನ್ನು ಹಿಂಬಾ ಲಿಸಿ ಸೇವಿಸದಂತೆ ನಾನು ಈಹೊತ್ತು ನಿನಗೆ ಆಜ್ಞಾಪಿ ಸುವ ಮಾತುಗಳನ್ನೆಲ್ಲಾ ಬಿಟ್ಟು ಎಡಕ್ಕಾದರೂ ಬಲ ಕ್ಕಾದರೂ ತೊಲಗಬಾರದು.
- Leviticus 20:1–13 ಯಾಜಕಕಾಂಡ 20:1–13ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- ನೀನು ತಿರಿಗಿ ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳಬೇಕು--ಇಸ್ರಾಯೇಲ್ ಮಕ್ಕಳಲ್ಲಾಗಲಿ ಇಸ್ರಾಯೇಲಿ ನಲ್ಲಿ ಪ್ರವಾಸಿಯಾದ ಪರಕೀಯರಲ್ಲಾಗಲಿ ಯಾವನಾ ದರೂ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟರೆ ನಿಶ್ಚಯವಾಗಿ ಅವನಿಗೆ ಮರಣವನ್ನು ವಿಧಿಸಬೇಕು; ದೇಶದ ಜನರು ಅವನಿಗೆ ಕಲ್ಲೆಸೆಯಬೇಕು. ನಾನು ಆ ಮನುಷ್ಯನಿಗೆ ವಿಮುಖನಾಗಿರುವೆನು; ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು; ಅವನು ನನ್ನ ಹೆಸರನ್ನು ಅಪವಿತ್ರಗೊಳಿಸುವಂತೆ ಮತ್ತು ನನ್ನ ಪವಿತ್ರ ಸ್ಥಳವನ್ನು ಹೊಲೆಮಾಡುವಂತೆ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟಿದ್ದಾನೆ. ಆ ಮನು ಷ್ಯನು ತನ್ನ ಸಂತತಿಯನ್ನು ಮೋಲೆಕನಿಗೆ ಕೊಡುವಾಗ ಹೇಗಾದರೂ ಜನರು ತಮ್ಮ ಕಣ್ಣುಗಳನ್ನು ಮರೆಮಾಡಿ ಅವನನ್ನು ಕೊಲ್ಲದೆ ಹೋದರೆ ಆಗ ನಾನು ಆ ಮನುಷ್ಯನಿಗೂ ಅವನ ಕುಟುಂಬಕ್ಕೂ ವಿರೋಧವಾ ಗಿಯೂ ವಿಮುಖನಾಗಿಯೂ ಇರುವೆನು. ಮೋಲೆಕ ನೊಂದಿಗೆ ವ್ಯಭಿಚಾರಮಾಡಿದ್ದಕ್ಕಾಗಿ ಅವನನೂ ವ್ಯಭಿಚಾರಮಾಡುವದಕ್ಕೆ ಹಿಂಬಾಲಿಸುವವರೆಲ್ಲರನ್ನೂ ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. ಮಂತ್ರವಾದಿಗಳ ಕಡೆಗೆ ತಿರುಗಿ ಕೊಳ್ಳುವವನಿಗೂ ವ್ಯಭಿಚಾರಮಾಡುವಂತೆ ಮಾಟಗಾರರನ್ನು ಹಿಂಬಾಲಿಸುವವನಿಗೂ ನಾನು ವಿಮುಖನಾಗಿರುವೆನು, ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. ಆದದರಿಂದ ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ಪರಿಶುದ್ಧರಾಗಿರಿ; ನಿಮ್ಮ ದೇವರಾಗಿರುವ ಕರ್ತನು ನಾನೇ. ನೀವು ನನ್ನ ನಿಯಮಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ನಿಮ್ಮನ್ನು ಶುದ್ಧಪಡಿಸುವ ಕರ್ತನು ನಾನೇ. ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವ ವನಿಗೆ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು; ಯಾವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವನೋ ಅವನ ರಕ್ತವು ಅವನ ಮೇಲೆಯೇ ಇರುವದು. ಒಬ್ಬನು ಮತ್ತೊಬ್ಬನ ಹೆಂಡತಿಯೊಡನೆ ವ್ಯಭಿ ಚಾರಮಾಡಿದರೆ, ಅಂದರೆ ತನ್ನ ನೆರೆಯವನ ಹೆಂಡ ತಿಯೊಡನೆ ವ್ಯಭಿಚಾರಮಾಡಿದರೆ ವ್ಯಭಿಚಾರ ಮಾಡುವವನಿಗೂ ವ್ಯಭಿಚಾರಮಾಡುವವಳಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು. ತನ್ನ ತಂದೆಯ ಹೆಂಡತಿಯೊಡನೆ ಸಂಗಮಿಸುವವನು ತನ್ನ ತಂದೆಯ ಬೆತ್ತಲೆತನವನ್ನು ಕಾಣುವಂತೆ ಮಾಡಿದ್ದಾನೆ; ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರ ರಕ್ತವು ಅವರ ಮೇಲೆ ಇರುವದು; ಒಬ್ಬನು ತನ್ನ ಸೊಸೆಯೊಂದಿಗೆ ಸಂಗಮಿಸಿದರೆ ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರು ಗಲಿಬಿಲಿಯನ್ನುಂಟುಮಾಡಿದ್ದಾರೆ; ಅವರ ರಕ್ತವು ಅವರ ಮೇಲೆ ಇರುವದು. ಒಬ್ಬ ಮನುಷ್ಯನು ಸ್ತ್ರೀಯೊಂದಿಗೆ ಮಲಗುವಂತೆ ಮತ್ತೊಬ್ಬ ಮನುಷ್ಯನೊಂದಿಗೆ ಮಲಗಿದರೆ ಅವರಿಬ್ಬರೂ ಅಸಹ್ಯ ವಾದದ್ದನ್ನು ಮಾಡಿದವರಾಗಿದ್ದಾರೆ; ಅವರಿಗೆ ನಿಶ್ಚಯ ವಾಗಿಯೂ ಮರಣದಂಡನೆ ವಿಧಿಸಬೇಕು; ಅವರ ರಕ್ತವು ಅವರ ಮೇಲೆ ಇರುವದು.
- Psalm 81:12–15 ಕೀರ್ತನೆಗಳು 81:12–15ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು. ಹಾ, ನನ್ನ ಜನರು ನನ್ನ ಮಾತನ್ನು ಕೇಳಿ, ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ, ತೀವ್ರವಾಗಿ ಅವರ ಶತ್ರುಗಳನ್ನು ಅಣಗಿಸುವೆನು; ಅವರ ವೈರಿಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು. ಕರ್ತನನ್ನು ಹಗೆಮಾಡುವವರು ಆತನಿಗೆ ತಮ್ಮನ್ನು ತಾವೇ ಒಪ್ಪಿಸಿಕೊಟ್ಟಿದ್ದರೆ ಅವರ ಕಾಲವು ಎಂದೆಂದಿಗೂ ಇರುತ್ತಿತ್ತು.ಇದಲ್ಲದೆ ಆತನು ಉತ್ತಮವಾದ ಗೋಧಿ ಯಿಂದ ಅವರಿಗೆ ಊಟಕ್ಕೆ ಕೊಟ್ಟು ಬಂಡೆಯೊಳಗಿನ ಜೇನಿನಿಂದ ತೃಪ್ತಿಪಡಿಸುವನು.
- Isaiah 3:10 ಯೆಶಾಯ 3:10ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.
- Joshua 24:20 ಯೆಹೋಶುವ 24:20ಕರ್ತನನ್ನು ಬಿಟ್ಟು ಅನ್ಯ ದೇವರುಗಳನ್ನು ಸೇವಿಸಿದರೆ ಒಳ್ಳೇದನ್ನು ಮಾಡದೆ ಆತನು ನಿಮಗೆ ಕೇಡುಮಾಡಿ ನಿಮ್ಮನ್ನು ದಹಿಸಿಬಿಡುವನು ಎಂದು ಹೇಳಿದನು.
- Romans 2:7 ರೋಮಾಪುರದವರಿಗೆ 2:7ಯಾರು ಒಳ್ಳೆಯದನ್ನು ಮಾಡುವದರಲ್ಲಿ ತಾಳ್ಮೆಯಿಂದಿದ್ದು ಮಹಿಮೆ ಮಾನ ಮತ್ತು ನಿರ್ಲಯತ್ವವನ್ನು ಹುಡುಕು ತ್ತಾರೋ ಅವರಿಗೆ ನಿತ್ಯಜೀವವನ್ನೂ