Joshua · chapter 5 · verse 2
Joshua 5:2 in Kannada
ಆ ಕಾಲದಲ್ಲಿ ಕರ್ತನು ಯೆಹೋಶುವ ನಿಗೆ--ನೀನು ಹರಿತವಾದ ಚೂರಿಗಳನ್ನು ಮಾಡಿ ಕೊಂಡು ತಿರಿಗಿ ಎರಡನೇ ಸಾರಿ ಇಸ್ರಾಯೇಲ್ ಮಕ್ಕಳಿಗೆ ಸುನ್ನತಿಮಾಡು ಅಂದನು.
Aa kaaladalli kartanu yehoshuva nige--neenu haritavaada choorigalannu maadi kondu tirigi eradane saari israayel makkalige sunnatimaadu andanu.
Joshua 5:2 in English
- King James Version (KJV)
- At that time the LORD said unto Joshua, Make thee sharp knives, and circumcise again the children of Israel the second time.
- World English Bible (WEB)
- At that time, the LORD said to Joshua, “Make flint knives, and circumcise again the sons of Israel the second time.”
- American Standard Version (ASV)
- At that time Jehovah said unto Joshua, Make thee knives of flint, and circumcise again the children of Israel the second time.
- Bible in Basic English (BBE)
- At that time the Lord said to Joshua, Make yourself stone knives and give the children of Israel circumcision a second time.
- Darby Translation (DBY)
- At that time Jehovah said to Joshua, Make thee stone-knives, and circumcise again the children of Israel the second time.
- Webster's Bible (WBS)
- At that time the LORD said to Joshua, Make thee sharp knives, and circumcise again the children of Israel the second time.
- Young's Literal Translation (YLT)
- At that time said Jehovah unto Joshua, 'Make for thee knives of flint, and turn back, circumcise the sons of Israel a second time;'
Read in context
- 1ಇದಾದ ಮೇಲೆ ಇಸ್ರಾಯೇಲ್ ಮಕ್ಕಳು ದಾಟಿಹೋಗುವ ಪರಿಯಂತರ ಕರ್ತನು ಅವರ ಮುಂದೆ ಯೊರ್ದನನ್ನು ಒಣಗಿಹೋಗ ಮಾಡಿ ದ್ದನ್ನು ಆಚೇ ದಡದ ಪಶ್ಚಿಮದಲ್ಲಿ ವಾಸಿಸಿದ್ದ ಅಮೋರಿ ಯರ ಸಕಲ ಅರಸುಗಳೂ ಸಮುದ್ರದ ಆಚೆಯಲ್ಲಿ ವಾಸಿಸಿದ ಕಾನಾನ್ಯರ ಸಕಲ ಅರಸುಗಳೂ ಕೇಳಿದಾಗ ಅವರ ಹೃದಯವು ಕರಗಿಹೋಯಿತು. ಇಸ್ರಾಯೇಲ್ ಮಕ್ಕಳ ನಿಮಿತ್ತವಾಗಿ ಅವರಿಗೆ ಪ್ರಾಣಹೋದಂತೆ ಆಯಿತು.
- 2ಆ ಕಾಲದಲ್ಲಿ ಕರ್ತನು ಯೆಹೋಶುವ ನಿಗೆ--ನೀನು ಹರಿತವಾದ ಚೂರಿಗಳನ್ನು ಮಾಡಿ ಕೊಂಡು ತಿರಿಗಿ ಎರಡನೇ ಸಾರಿ ಇಸ್ರಾಯೇಲ್ ಮಕ್ಕಳಿಗೆ ಸುನ್ನತಿಮಾಡು ಅಂದನು.
- 3ಆಗ ಯೆಹೋಶುವನು ತಾನು ಹರಿತವಾದ ಚೂರಿಗಳನ್ನು ಮಾಡಿಕೊಂಡು ಇಸ್ರಾಯೇಲ್ ಮಕ್ಕಳಿಗೆ ಸುನ್ನತಿ ಗುಡ್ಡದಲ್ಲಿ ಸುನ್ನತಿ ಮಾಡಿದನು.
- 4ಯೆಹೋಶುವನು ಸುನ್ನತಿಮಾಡಿದ ಕಾರಣವೇನಂದರೆ--ಐಗುಪ್ತದಿಂದ ಹೊರಟ ಸಕಲ ಜನರು ಗಂಡಸರಾದ ಯುದ್ಧದ ಮನುಷ್ಯರೆಲ್ಲರು ಐಗುಪ್ತದಿಂದ ಹೊರಟಾಗ ಅರಣ್ಯದೊಳಗೆ ಮಾರ್ಗ ದಲ್ಲಿ ಸತ್ತು ಹೋದರು.
Cross references
- Deuteronomy 10:16 ಧರ್ಮೋಪದೇಶಕಾಂಡ 10:16ಹೀಗಿರುವದರಿಂದ ನಿಮ್ಮ ಹೃದಯದಲ್ಲೇ ಸುನ್ನತಿ ಮಾಡಿಕೊಳ್ಳಿರಿ. ಇನ್ನು ಮೇಲೆ ಬಗ್ಗದ ಕುತ್ತಿಗೆಯುಳ್ಳವ ರಾಗಿರಬೇಡಿರಿ.
- Deuteronomy 30:6 ಧರ್ಮೋಪದೇಶಕಾಂಡ 30:6ಆಗ ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಪ್ರೀತಿಮಾಡಿ ನೀನು ಬದು ಕುವ ಹಾಗೆ ಆತನು ನಿನ್ನ ಹೃದಯವನ್ನೂ ನಿನ್ನ ಸಂತತಿಯ ಹೃದಯವನ್ನೂ ಪರಿಛೇದಿಸುವನು.
- Exodus 4:25 ವಿಮೋಚನಕಾಂಡ 4:25ಆಗ ಚಿಪ್ಪೋರಳು ಹದವಾದ ಕಲ್ಲನ್ನು ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿ ಮಾಡಿ ಅದನ್ನು ಅವನ ಕಾಲುಗಳ ಮುಂದೆ ಹಾಕಿ ಮೋಶೆಗೆ--ನಿಜವಾಗಿ ನೀನು ನನಗೆ ರಕ್ತದ ಗಂಡನು ಅಂದಳು.
- Colossians 2:11 ಕೊಲೊಸ್ಸೆಯವರಿಗೆ 2:11ನೀವು ಆತನಲ್ಲಿ ಸುನ್ನತಿಯನ್ನೂ ಹೊಂದಿದ್ದಿರಿ; ಆ ಸುನ್ನತಿಯು ಕೈಯಿಂದ ಮಾಡಿದ್ದಲ್ಲ; ಇದು ಕ್ರಿಸ್ತನಿಂದಾದ ಸುನ್ನತಿಯಾಗಿದ್ದು ಪಾಪದ ಶರೀರ ವನ್ನು ವಿಸರ್ಜಿಸುವದೇ.
- Romans 4:11 ರೋಮಾಪುರದವರಿಗೆ 4:11ಆಮೇಲೆ ನೀತಿಗೆ ಮುದ್ರೆಯಾಗಿ ಸುನ್ನತಿಯನ್ನು ಗುರುತಾಗಿ ಹೊಂದಿದನು. ಇದು ಸುನ್ನತಿಯಾಗುವದಕ್ಕೆ ಮೊದಲೇ ಅವನಿಗಿದ್ದ ನಂಬಿಕೆಯಿಂದಾಯಿತು. ಹೀಗೆ ಅವನು ನಂಬುವವರೆಲ್ಲರಿಗೆ ಅಂದರೆ ಅವರು ಸುನ್ನತಿ ಯಿಲ್ಲದವರಾದಾಗ್ಯೂ ಅವರಿಗೆ ತಂದೆಯಾದನು; ಹೀಗೆ ಅವರೂ ನೀತಿವಂತರೆಂದು ಎಣಿಸಲ್ಪಡುವರು.
- Genesis 17:10–14 ಆದಿಕಾಂಡ 17:10–14ನನಗೂ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನೀವು ಕೈಕೊಳ್ಳತಕ್ಕ ನನ್ನ ಒಡಂಬಡಿಕೆ ಏನಂದರೆ--ನಿಮ್ಮಲ್ಲಿರುವ ಗಂಡಸರೆಲ್ಲರಿಗೆ ಸುನ್ನತಿಯಾಗಬೇಕು. ನಿಮ್ಮ ಮುಂದೊಗಲಿನ ಮಾಂಸವನ್ನು ಸುನ್ನತಿಮಾಡಿಸಬೇಕು; ಅದು ನನಗೂ ನಿಮಗೂ ಮಧ್ಯೆ ಇರುವ ಒಡಂಬಡಿಕೆಗೆ ಗುರುತಾಗಿ ರುವದು. ನಿಮ್ಮ ವಂಶಾವಳಿಗಳಲ್ಲಿ ಪ್ರತಿಯೊಂದು ಗಂಡು ಮಗುವಿಗೆ ಎಂಟು ದಿನಗಳಾದ ಮೇಲೆ ಸುನ್ನತಿಮಾಡಿಸಬೇಕು; ಮನೆಯಲ್ಲಿ ಹುಟ್ಟಿದವನಾಗಲಿ ನಿನ್ನ ಸಂತತಿಯಲ್ಲದೆ ಪರರ ಮಕ್ಕಳನ್ನು ಹಣಕೊಟ್ಟು ಕೊಂಡುಕೊಳ್ಳಲ್ಪಟ್ಟವರಾಗಲಿ ನಿನ್ನ ಮನೆಯಲ್ಲಿ ಹುಟ್ಟಿದವನಿಗೂ ನಿನ್ನ ಹಣದಿಂದ ಕೊಂಡುಕೊಂಡ ವನಿಗೂ ಸುನ್ನತಿಮಾಡಿಸತಕ್ಕದ್ದು. ಹೀಗೆ ನನ್ನ ಒಡಂಬಡಿಕೆಯು ನಿಮ್ಮ ಶರೀರದಲ್ಲಿ ನಿತ್ಯವಾದ ಒಡಂಬಡಿಕೆಯಾಗಿರುವದು. ಸುನ್ನತಿಯಾಗದ ಗಂಡಸಿಗೆ ನನ್ನ ಒಡಂಬಡಿಕೆಯನ್ನು ವಿಾರಿದ ಕಾರಣ ಅವನು ಜನರೊಳಗಿಂದ ತೆಗೆದುಹಾಕಲ್ಪಡಬೇಕು ಅಂದನು.
- Romans 2:29 ರೋಮಾಪುರದವರಿಗೆ 2:29ಆದರೆ ಒಳಗೆ ಯೆಹೂದ್ಯ ನಾಗಿರುವವನೇ ಯೆಹೂದ್ಯನು; ಸುನ್ನತಿಯು ಹೃದಯಕ್ಕೆ ಸಂಬಂಧಪಟ್ಟದ್ದಾಗಿ ಅಕ್ಷರೀಕವಾಗಿರದೆ ಆತ್ಮೀಕವಾದದ್ದೇ ಆಗಿದೆ. ಹೀಗೆ ಅವನ ಹೊಗಳಿಕೆಯು ಮನುಷ್ಯರಿಂದಾ ಗಿರದೆ ದೇವರಿಂದಲೇ ಆಗಿರುವದು.