Lamentations · chapter 2 · verse 9
Lamentations 2:9 in Kannada
ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ; ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. ಅವಳ ಅರಸನು ಮತ್ತು ಪ್ರಭುಗಳು ಅನ್ಯಜನಾಂಗಗಳ ಮಧ್ಯೆ ಇರುವರು; ಇನ್ನು ನ್ಯಾಯ ಪ್ರಮಾಣವು ಇರುವದೇ ಇಲ್ಲ; ಆಕೆಯ ಪ್ರವಾದಿಗಳು ಸಹ ಕರ್ತನಿಂದ ದರ್ಶನವನ್ನು ಕಂಡು ಕೊಳ್ಳುವದಿಲ್ಲ.
Avala baagilugalu neladolage hootukondive; aatanu aakeya aguligalannu muridu haalu maadiddaane. Avala arasanu mattu prabhugalu anyajanaangagala madhye iruvaru; innu nyaaya pramaanavu iruvade illa; aakeya pravaadigalu saha kartaninda darshanavannu kandu kolluvadilla.
Lamentations 2:9 in English
- King James Version (KJV)
- Her gates are sunk into the ground; he hath destroyed and broken her bars: her king and her princes [are] among the Gentiles: the law [is] no [more;] her prophets also find no vision from the LORD.
- World English Bible (WEB)
- Her gates have sunk into the ground. He has destroyed and broken her bars. Her king and her princes are among the nations where the law is not. Yes, her prophets find no vision from the LORD.
- American Standard Version (ASV)
- Her gates are sunk into the ground; he hath destroyed and broken her bars: Her king and her princes are among the nations where the law is not; Yea, her prophets find no vision from Jehovah.
- Bible in Basic English (BBE)
- Her doors have gone down into the earth; he has sent destruction on her locks: her king and her princes are among the nations where the law is not; even her prophets have had no vision from the Lord.
- Darby Translation (DBY)
- Her gates are sunk into the ground; he hath destroyed and broken her bars. Her king and her princes are among the nations: the law is no [more]; her prophets also find no vision from Jehovah.
- Webster's Bible (WBS)
- Her gates are sunk into the ground; he hath destroyed and broken her bars: her king and her princes [are] among the Gentiles: the law [is] no [more] : her prophets also find no vision from the LORD.
- Young's Literal Translation (YLT)
- Sunk into the earth have her gates, He hath destroyed and broken her bars, Her king and her princes [are] among the nations, There is no law, also her prophets Have not found vision from Jehovah.
Read in context
- 7ಕರ್ತನು ತನ್ನ ಯಜ್ಞವೇದಿಯನ್ನು ತಳ್ಳಿಬಿಟ್ಟಿ ದ್ದಾನೆ; ತನ್ನ ಪರಿಶುದ್ಧ ಸ್ಥಳವನ್ನು ಅಸಹ್ಯಪಡಿಸಿದ್ದಾನೆ; ಆತನು ಅವಳ ಅರಮನೆಗಳ ಗೋಡೆಗಳನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಪರಿಶುದ್ಧ ಹಬ್ಬದ ದಿನದಲ್ಲಿ ಮಾಡಿದ ಹಾಗೆ ಅವರು ಕರ್ತನ ಆಲಯದಲ್ಲಿ ಶಬ್ದಮಾಡಿದ್ದಾರೆ.
- 8ಕರ್ತನು ಚೀಯೋನಿನ ಮಗಳ ಗೋಡೆಯನ್ನು ನಾಶ ಮಾಡಬೇಕೆಂದು ಉದ್ದೇಶಿಸಿದ್ದಾನೆ; ಗೆರೆಯನ್ನು ಎಳೆದಿದ್ದಾನೆ. ತನ್ನ ಕೈಯನ್ನು ಕೆಡಿಸುವದರಿಂದ ಹಿಂತೆಗೆಯಲಿಲ್ಲ; ಕಲ್ಲಿನ ಪ್ರಾಕಾರವನ್ನೂ ಮತ್ತು ಗೋಡೆ ಯನ್ನೂ ಗೋಳಾಡುವಂತೆ ಆತನು ಮಾಡಿದ್ದಾನೆ, ಅವೆರಡೂ ಜೊತೆಯಾಗಿ ಕುಸಿದು ಹೋಗಿವೆ.
- 9ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ; ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. ಅವಳ ಅರಸನು ಮತ್ತು ಪ್ರಭುಗಳು ಅನ್ಯಜನಾಂಗಗಳ ಮಧ್ಯೆ ಇರುವರು; ಇನ್ನು ನ್ಯಾಯ ಪ್ರಮಾಣವು ಇರುವದೇ ಇಲ್ಲ; ಆಕೆಯ ಪ್ರವಾದಿಗಳು ಸಹ ಕರ್ತನಿಂದ ದರ್ಶನವನ್ನು ಕಂಡು ಕೊಳ್ಳುವದಿಲ್ಲ.
- 10ಚೀಯೋನ್ ಮಗಳ ಹಿರಿಯರು ನೆಲದ ಮೇಲೆ ಕುಳಿತುಕೊಂಡು ನಿಶ್ಯಬ್ಧವಾಗಿದ್ದಾರೆ; ತಮ್ಮ ತಲೆಗಳ ಮೇಲೆ ದೂಳು ಹಾಕಿಕೊಂಡಿದ್ದಾರೆ; ಅವರು ಗೊಣೀತಟ್ಟನ್ನು ಸುತ್ತಿಕೊಂಡಿದ್ದಾರೆ; ಯೆರೂಸಲೇ ಮಿನ ಕನ್ಯೆಯರು ತಮ್ಮ ತಲೆಯನ್ನು ನೆಲದ ಕಡೆಗೆ ಬೊಗ್ಗಿಸಿಕೊಂಡಿದ್ದಾರೆ.
- 11ನನ್ನ ಕಣ್ಣುಗಳು ಕಣ್ಣೀರನ್ನು ಸುರಿಸುತ್ತಲೇ ಇವೆ. ನನ್ನ ಕರುಳುಗಳು ಕುದಿಯುತ್ತವೆ, ನನ್ನ ಪಿತ್ತಕೋಶವು ನೆಲದ ಮೇಲೆ ಸುರಿಯಲ್ಪಟ್ಟಿದೆ, ಯಾಕಂದರೆ ನನ್ನ ಜನರ ಮಗಳು ನಾಶವಾಗಿದ್ದಾಳೆ. ಮಕ್ಕಳೂ ಮೊಲೆಕೂಸುಗಳೂ ನಗರದ ಬೀದಿಗಳಲ್ಲಿ ಮೂರ್ಛೆ ಹೋಗಿದ್ದಾರೆ.
Cross references
- Ezekiel 7:26 ಯೆಹೆಜ್ಕೇಲನು 7:26ಕೇಡಿನ ಮೇಲೆ ಕೇಡು ಬರು ವದು; ಸುದ್ದಿಯ ಮೇಲೆ ಸುದ್ದಿ ಬರುವದು. ಆಗ ಅವರು ಪ್ರವಾದಿಯ ದರ್ಶನವನ್ನು ಹುಡುಕುವರು. ಆದರೆ ನ್ಯಾಯಪ್ರಮಾಣವು ಯಾಜಕರನ್ನೂ ಆಲೋ ಚನೆಯು ಪೂರ್ವಿಕರನ್ನೂ ಬಿಟ್ಟು ನಾಶವಾಗುವದು.ಅರಸನು ದುಃಖಿಸುವನು, ಪ್ರಧಾನನು ನಿರ್ಗತಿಕನಾ ಗುವನು; ದೇಶದ ಜನರ ಕೈಗಳು ತೊಂದರೆಗೊಳ್ಳು ವವು; ಅವರ ಮಾರ್ಗಗಳ ಪ್ರಕಾರ ಅವರ ಹಾಗೆಯೇ ಮಾಡುವೆನು; ಅವರ ನ್ಯಾಯಗಳ ಪ್ರಕಾರ ಅವರಿಗೆ ನ್ಯಾಯತೀರಿಸುವೆನು. ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- Hosea 3:4 ಹೋಶೇಯ 3:4ಇಸ್ರಾಯೇಲಿನ ಮಕ್ಕಳು ಬಹಳ ದಿವಸಗಳ ವರೆಗೆ ಅರಸನಿಲ್ಲದೆ ಪ್ರಧಾ ನನಿಲ್ಲದೆ ಬಲಿ ಇಲ್ಲದೆ ವಿಗ್ರಹವಿಲ್ಲದೆ ಎಫೋದ್ ಇಲ್ಲದೆ ವಿಗ್ರಹಗಳು ಇಲ್ಲದೆ ಇರುವರು.ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.
- Nehemiah 1:3 ನೆಹೆಮೀಯ 1:3ಅವರು ನನಗೆ--ಸೆರೆ ಯನ್ನು ಬಿಟ್ಟ್ಟು ಉಳಿದವರು ಆ ಸೀಮೆಯಲ್ಲಿದ್ದು ಮಹಾ ಕೇಡನ್ನೂ ನಿಂದೆಯನ್ನೂ ಅನುಭವವಿಸುತ್ತಿದ್ದಾರೆ. ಇದ ಲ್ಲದೆ ಯೆರೂಸಲೇಮಿನ ಗೋಡೆಯು ಸಹ ಕೆಡವಲ್ಪ ಟ್ಟಿದೆ; ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿವೆ ಎಂದು ಹೇಳಿದರು.
- Psalm 74:9 ಕೀರ್ತನೆಗಳು 74:9ನಮ್ಮ ಗುರುತುಗಳನ್ನು ನೋಡದೆ ಇದ್ದೇವೆ; ಇನ್ನು ಮೇಲೆ ಯಾವ ಪ್ರವಾದಿಯೂ ಇರುವದಿಲ್ಲ ಇಲ್ಲವೆ ಇದು ಎಷ್ಟರವರೆಗೆ ಎಂದು ತಿಳಿದವನು ನಮ್ಮಲ್ಲಿ ಯಾರೂ ಇಲ್ಲ.
- Micah 3:6–7 ಮೀಕ 3:6–7ದರ್ಶನವಿಲ್ಲದ ನಿಮಗೆ ರಾತ್ರಿ ಯಾಗುವದು; ಶಕುನವಿಲ್ಲದೆ ನಿಮಗೆ ಕತ್ತಲಾಗುವದು; ಹೌದು, ಪ್ರವಾದಿಗಳ ಮೇಲೆ ಸೂರ್ಯ ಮುಣುಗು ವದು, ಅವರ ಮೇಲೆ ಹಗಲು ಕತ್ತಲಾಗುವದು. ಆಗ ದರ್ಶಿಗಳು ನಾಚಿಕೆಪಡುವರು, ಶಕುನಗಾರರು ವಿಸ್ಮಯಗೊಳ್ಳುವರು; ಹೌದು, ದೇವರಿಂದ ಉತ್ತರ ವಿಲ್ಲದ ಕಾರಣ ಎಲ್ಲರೂ ತಮ್ಮ ತುಟಿಗಳನ್ನು ಮುಚ್ಚಿ ಕೊಳ್ಳುವರು.
- 2 Chronicles 15:3 2 ಪೂರ್ವಕಾಲವೃತ್ತಾಂತ 15:3ಆತನನ್ನು ಬಿಟ್ಟುಬಿಟ್ಟರೆ ಆತನು ನಿಮ್ಮನ್ನು ಬಿಟ್ಟುಬಿಡುವನು ಅಂದನು. ಬಹುಕಾಲ ಇಸ್ರಾಯೇಲ್ಯರು ನಿಜವಾದ ದೇವರಿಲ್ಲದೆ ಬೋಧಿಸುವ ಯಾಜಕನಿಲ್ಲದೆ ನ್ಯಾಯಪ್ರಮಾಣವಿಲ್ಲದೆ ಇದ್ದರು.
- Deuteronomy 28:36 ಧರ್ಮೋಪದೇಶಕಾಂಡ 28:36ಕರ್ತನು ನಿನ್ನನ್ನೂ ನೀನು ನಿನ್ನ ಮೇಲೆ ಇರಿಸಿಕೊಳ್ಳುವ ಅರಸನನ್ನೂ ನೀನೂ ನಿನ್ನ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗ ಮಾಡುವನು; ಅಲ್ಲಿ ಮರವೂ ಕಲ್ಲೂ ಆಗಿರುವ ಬೇರೆ ದೇವರುಗಳನ್ನು ನೀನು ಸೇವಿಸುವಿ.
- Jeremiah 51:30 ಯೆರೆಮೀಯ 51:30ಬಾಬೆಲಿನ ಪರಾಕ್ರಮಶಾಲಿಗಳು ಯುದ್ಧ ಮಾಡುವದನ್ನು ಬಿಟ್ಟಿದ್ದಾರೆ; ಅವರ ಭದ್ರ ಸ್ಥಾನಗಳಲ್ಲಿ ನಿಲ್ಲುತ್ತಾರೆ; ಅವರ ಪರಾಕ್ರಮತನ ತಪ್ಪಿತು; ಅವರು ಹೆಂಗಸರಂತೆ ಅಬಲರಾದರು. ಅದರ ನಿವಾಸಗಳನ್ನು ಸುಟ್ಟಿದ್ದಾರೆ. ಅದರ ಅಗುಳಿಗಳು ಮುರಿಯಲ್ಪಟ್ಟಿವೆ.
- Amos 8:11–12 ಆಮೋಸ 8:11–12ಇಗೋ, ದಿನಗಳು ಬರುವವು, ಆಗ ನಾನು ದೇಶದಲ್ಲಿ ಕ್ಷಾಮವನ್ನು ಕಳುಹಿಸುವೆನು. ಅದು ರೊಟ್ಟಿಯ ಕ್ಷಾಮವಲ್ಲ, ನೀರಿನ ದಾಹದ ಬರವಲ್ಲ; ಕರ್ತನ ವಾಕ್ಯಗಳನ್ನು ಕೇಳಬೇಕೆಂಬ ಕ್ಷಾಮ ವನ್ನೇ ಎಂಬದಾಗಿ ದೇವರಾದ ಕರ್ತನು ಹೇಳುತ್ತಾನೆ. ಆಗ ಅವರು ಸಮುದ್ರದಿಂದ ಸಮುದ್ರಕ್ಕೂ ಉತ್ತರ ದಿಂದ ಪೂರ್ವಕ್ಕೂ ಅಲೆದು ಕರ್ತನ ವಾಕ್ಯವನ್ನು ಹುಡುಕುವದಕ್ಕೆ ಅತ್ತಿತ್ತ ಓಡಾಡಿ ಅದನ್ನು ಕಾಣದೆ ಹೋಗುವರು.
- 2 Kings 24:12–16 2 ಅರಸುಗಳು 24:12–16ಆಗ ಯೆಹೂದದ ಅರಸನಾದ ಯೆಹೋಯಾಖೀನನೂ ಅವನ ತಾಯಿಯೂ ಸೇವ ಕರೂ ಪ್ರಧಾನರೂ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬೆಲಿನ ಅರಸನ ಬಳಿಗೆ ಹೋದರು. ಬಾಬೆಲಿನ ಅರಸನು ತನ್ನ ಆಳಿಕೆಯ ಎಂಟನೇ ವರುಷ ದಲ್ಲಿ ಅವನನ್ನು ಸೆರೆಹಿಡಿದನು. ಕರ್ತನು ಹೇಳಿದ ಪ್ರಕಾರವೇ ಅವನು ಅಲ್ಲಿಂದ ಕರ್ತನ ಮನೆಯ ಎಲ್ಲಾ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕರ್ತನ ಮನೆಯಲ್ಲಿ ಮಾಡಿದ ಬಂಗಾರದ ಎಲ್ಲಾ ಪಾತ್ರೆಗಳನ್ನೂ ತುಂಡು ತುಂಡಾಗಿ ಕತ್ತರಿಸಿಬಿಟ್ಟನು. ಅವನು ಯೆರೂಸಲೇಮಿನವರೆಲ್ಲರನ್ನೂ ಎಲ್ಲಾ ಪ್ರಧಾನರನ್ನೂ ಎಲ್ಲಾ ಸ್ಥಿತಿಯುಳ್ಳ ಪರಾಕ್ರಮಶಾಲಿ ಗಳನ್ನೂ ಹತ್ತು ಸಾವಿರ ಸೆರೆಯವರನ್ನೂ ಮತ್ತು ಎಲ್ಲಾ ಕೌಶಲ್ಯಗಾರರನ್ನೂ ಕಮ್ಮಾರರನ್ನೂ ಅಲ್ಲಿಂದ ಒಯ್ದನು; ದೇಶದ ಬಡವರ ಹೊರತು ಉಳಿದವರು ಯಾರೂ ಅಲ್ಲಿ ಇರಲಿಲ್ಲ. ಯೆಹೋಯಾಖೀನನನ್ನು ಬಾಬೆ ಲಿಗೆ ಒಯ್ದನು; ಅವನು ಅರಸನ ತಾಯಿಯನ್ನೂ ಅರಸನ ಹೆಂಡತಿಯರನ್ನೂ ಅವನ ಅಧಿಕಾರಿಗಳನ್ನೂ ದೇಶದ ಬಲಶಾಲಿಗಳನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ಒಯ್ದನು. ಬಾಬೆಲಿನ ಅರಸನು ಎಲ್ಲಾ ಸ್ಥಿತಿವಂತರಾದ ಏಳುಸಾವಿರ ಜನರನ್ನೂ ಕೌಶಲ್ಯಗಾರರೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಲವುಳ್ಳ ಯುದ್ಧ ಮಾಡತಕ್ಕವರೆಲ್ಲರನ್ನೂ ಬಾಬೆಲಿಗೆ ಸೆರೆಯಾಗಿ ಒಯ್ದನು.
- Jeremiah 52:8–9 ಯೆರೆಮೀಯ 52:8–9ಆಗ ಕಸ್ದೀಯರ ದಂಡು ಅರಸನನ್ನು ಹಿಂದಟ್ಟಿ ಚಿದ್ಕೀಯನನ್ನು ಯೆರಿಕೋವಿನ ಬೈಲಿನಲ್ಲಿ ಹಿಡಿದರು. ಅವನ ದಂಡೆಲ್ಲಾ ಅವನನ್ನು ಬಿಟ್ಟು ಚದರಿಹೋಯಿತು. ಆಗ ಅವರು ಅರಸನನ್ನು ಹಿಡಿದು, ಬಾಬೆಲಿನ ಅರಸನ ಬಳಿಗೆ ಹಮಾತ್ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು; ಅಲ್ಲಿ ಅವನು ಅವನ ವಿಷಯ ನ್ಯಾಯತೀರ್ಪು ಮಾಡಿದನು.
- Lamentations 4:15 ಪ್ರಲಾಪಗಳು 4:15ಅವರು ಜನರಿಗೆ--ನೀವು ಸರಿಯಿರಿ ಇದು ಅಶುದ್ಧವಾಗಿದೆ; ಸರಿಯಿರಿ, ಸರಿಯಿರಿ; ಮುಟ್ಟಬೇಡಿರಿ ಎಂದು ಕೂಗಿ ಕೊಂಡರು. ಅವರು ಓಡಿಹೋಗಿ ಅಲೆದಾಡುತ್ತಿರು ವಾಗ--ಅವರು ಇನ್ನು ಮೇಲೆ ಅಲ್ಲಿ ವಾಸಮಾಡು ವದಿಲ್ಲ ಎಂದು ಅನ್ಯ ಜನಾಂಗಗಳೊಳಗೆ ಹೇಳಿದರು.
Original words (Hebrew)
- gates · H8179שַׁעַר shaʻar
- sunk · H2883טָבַע ṭâbaʻ
- ground · H776אֶרֶץ ʼerets
- destroyed · H6אָבַד ʼâbad
- broken · H7665שָׁבַר shâbar
- bars · H1280בְּרִיחַ bᵉrîyach
- king · H4428מֶלֶךְ melek
- princes · H8269שַׂר sar
- Gentiles · H1471גּוֹי gôwy
- law · H8451תּוֹרָה tôwrâh
- prophets · H5030נָבִיא nâbîyʼ
- find · H4672מָצָא mâtsâʼ
- vision · H2377חָזוֹן châzôwn