Lamentations · chapter 3 · verse 47
Lamentations 3:47 in Kannada
ಭಯವೂ ಬೋನೂ ನಾಶನವೂ ಸಂಹಾರವೂ ನಮ್ಮ ಮೇಲೆ ಬಂದಿವೆ.
Bhayavoo bonoo naashanavoo sanhaaravoo namma mele bandive.
Lamentations 3:47 in English
- King James Version (KJV)
- Fear and a snare is come upon us, desolation and destruction.
- World English Bible (WEB)
- Terror and the pit have come on us, devastation and destruction.”
- American Standard Version (ASV)
- Fear and the pit are come upon us, devastation and destruction.
- Bible in Basic English (BBE)
- Fear and deep waters have come on us, wasting and destruction.
- Darby Translation (DBY)
- Fear and the pit are come upon us, devastation and ruin.
- Webster's Bible (WBS)
- Fear and a snare is come upon us, desolation and destruction.
- Young's Literal Translation (YLT)
- Fear and a snare hath been for us, Desolation and destruction.
Read in context
- 45ನೀನು ನಮ್ಮನ್ನು ಜನರ ಮಧ್ಯದಲ್ಲಿ ಕಲ್ಮಷವನ್ನಾಗಿಯೂ ಕಸವನ್ನಾಗಿಯೂ ಮಾಡಿದ್ದೀ.
- 46ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ.
- 47ಭಯವೂ ಬೋನೂ ನಾಶನವೂ ಸಂಹಾರವೂ ನಮ್ಮ ಮೇಲೆ ಬಂದಿವೆ.
- 48ನನ್ನ ಜನರ ಕುಮಾರಿಯ ನಾಶನದ ನಿಮಿತ್ತವಾಗಿ ನನ್ನ ಕಣ್ಣಿನಿಂದ ನೀರು ನದಿಯಾಗಿ ಹರಿದುಹೋಗುತ್ತದೆ.
- 49ಕರ್ತನು ಕಟಾಕ್ಷಿಸಿ ಪರಲೋಕದಿಂದ ನೋಡುವ ತನಕ ನೇತ್ರವು ಎಡೆಬಿಡದೆ ಕಣ್ಣೀರು ಸುರಿಸುತ್ತದೆ;
Cross references
- Isaiah 51:19 ಯೆಶಾಯ 51:19ಈ ಎರಡು ಸಂಗತಿ ಗಳು ನಿನಗೆ ಸಂಭವಿಸಿವೆ; ನಿನಗೋಸ್ಕರ ಚಿಂತಿಸು ವವರು ಯಾರಿದ್ದಾರೆ? ನಾಶನವೋ ಸಂಹಾರವೋ ಕ್ಷಾಮವೋ ಕತ್ತಿಯೋ ನಾನು ಯಾರಿಂದ ನಿನ್ನನ್ನು ಆಧರಿಸಲಿ?
- Isaiah 24:17–18 ಯೆಶಾಯ 24:17–18ಓ, ಭೂಮಿಯ ನಿವಾಸಿಗಳೇ, ಭಯವೂ ಗುಂಡಿಯೂ ಬಲೆಯೂ ನಿಮಗೆ ಕಾದಿವೆ. ಆಗ ಭಯದ ಶಬ್ದಕ್ಕೆ ಓಡಿ ಹೋಗುವವನು, ಕುಣಿಯೊಳಗೆ ಬೀಳುವನು; ಆ ಕುಣಿಯೊಳಗಿಂದ ಏರಿ ಬರುವವನು ಬಲೆಗೆ ಬೀಳು ವನು; ಮೇಲಿನ ಕಿಟಕಿಗಳು (ಆಕಾಶದ ದ್ವಾರಗಳು) ತೆರೆಯಲ್ಪಟ್ಟಿವೆ. ಭೂಮಿಯ ಅಸ್ತಿವಾರಗಳು ನಡುಗು ತ್ತವೆ. (ಕಂಪಿಸುತ್ತವೆ).
- Jeremiah 48:43–44 ಯೆರೆಮೀಯ 48:43–44ಮೋವಾಬಿನ ನಿವಾಸಿಯೇ, ಹೆದರಿಕೆಯೂ ಕುಣಿಯೂ ಬೋನೂ ನಿನ್ನ ಮೇಲೆ ಇರುವವೆಂದು ಕರ್ತನು ಅನ್ನುತ್ತಾನೆ. ಹೆದರಿಕೆಗೆ ಓಡಿ ಹೋಗುವವನು ಕುಣಿಯಲ್ಲಿ ಬೀಳುವನು; ಕುಣಿ ಯೊಳಗಿಂದ ಏರಿಬರುವವನು ಬೋನಿನಲ್ಲಿ ಹಿಡಿಯ ಲ್ಪಡುವನು; ನಾನು ಅದರ ಮೇಲೆ ಅಂದರೆ ಮೋವಾ ಬಿನ ಮೇಲೆಯೇ ಅವರ ವಿಚಾರಣೆಯ ವರುಷವನ್ನು ತರುವೆನೆಂದು ಕರ್ತನು ಅನ್ನುತ್ತಾನೆ.
- Luke 21:35 ಲೂಕನು 21:35ಯಾಕಂದರೆ ಅದು ಭೂಮಿಯ ಮೇಲೆ ವಾಸವಾಗಿರುವವರೆಲ್ಲರ ಮೇಲೆ ಉರ್ಲಿನಂತೆ ಬರುವದು.
- Lamentations 1:13 ಪ್ರಲಾಪಗಳು 1:13ಆತನು ಮೇಲಿನಿಂದ ನನ್ನ ಎಲುಬುಗಳಿಗೆ ಬೆಂಕಿಯನ್ನು ಕಳುಹಿಸಿ ದ್ದಾನೆ, ಅದು ಅವುಗಳನ್ನು ವಶಪಡಿಸಿಕೊಂಡಿದೆ; ನನ್ನ ಪಾದದ ಮೇಲೆ ಒಂದು ಬಲೆಯನ್ನು ಬೀಸಿ ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ; ನನ್ನನ್ನು ದಿನವೆಲ್ಲಾ ಹಾಳಾಗಿಯೂ ಮೂರ್ಛೆ ಹೋಗುವಂತೆಯೂ ಮಾಡಿದ್ದಾನೆ.
- Lamentations 2:1–9 ಪ್ರಲಾಪಗಳು 2:1–9ಕರ್ತನು ಹೇಗೆ ತನ್ನ ಕೋಪದಲ್ಲಿ ಮೇಘದಿಂದ ಚೀಯೋನಿನ ಮಗಳನ್ನು ಮುಚ್ಚಿ, ಇಸ್ರಾಯೇಲಿನ ಸೌಂದರ್ಯವನ್ನು ಆಕಾಶದಿಂದ ಭೂಮಿಗೆ ಎಸೆದು ತನ್ನ ಕೋಪದ ದಿನದಲ್ಲಿ ತನ್ನ ಪಾದಪೀಠವನ್ನು ಜ್ಞಾಪಕಮಾಡಿಕೊಳ್ಳಲಿಲ್ಲಾ! ಕರ್ತನು ಯಾಕೋಬಿನ ಎಲ್ಲಾ ನಿವಾಸಿಗಳನ್ನು ಕನಿಕರಿಸದೆ ನುಂಗಿದ್ದಾನೆ; ಯೆಹೂದದ ಮಗಳ ಭದ್ರವಾದ ಸ್ಥಾನಗಳನ್ನು ತನ್ನ ರೋಷದಲ್ಲಿ ಕೆಡವಿಹಾಕಿ ದ್ದಾನೆ; ಆತನು ಅವುಗಳನ್ನು ನೆಲ ಸಮ ಮಾಡಿದ್ದಾನೆ; ಆತನು ರಾಜ್ಯವನ್ನೂ ಪ್ರಭುಗಳನ್ನೂ ಅಪವಿತ್ರ ಮಾಡಿದ್ದಾನೆ. ಆತನು ತನ್ನ ತೀಕ್ಷ್ಣ ಕೋಪದಲ್ಲಿ ಇಸ್ರಾಯೇಲಿನ ಕೊಂಬುಗಳನ್ನೆಲ್ಲಾ ಕಡಿದು ಹಾಕಿದ್ದಾನೆ. ಆತನು ಶತ್ರುವಿನ ಎದುರಿನಿಂದ ತನ್ನ ಬಲಗೈಯನ್ನು ಹಿಂತೆಗೆದುಕೊಂಡಿದ್ದಾನೆ. ಆತನು ಸುತ್ತಲೂ ಪ್ರಜ್ವಲಿಸಿ ದಹಿಸುವ ಬೆಂಕಿಯ ಹಾಗೆ ಯಾಕೋಬನಿಗೆ ವಿರುದ್ಧ ವಾಗಿ ದಹಿಸಿಬಿಟ್ಟಿದ್ದಾನೆ. ಆತನು ಶತ್ರುವಿನ ಹಾಗೆ ತನ್ನ ಬಿಲ್ಲನ್ನು ಬೊಗ್ಗಿಸಿದ್ದಾನೆ, ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾನೆ. ಆತನು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಮಗಳ ಗುಡಾರದಲ್ಲಿ ಸುರಿದಿದ್ದಾನೆ. ಕರ್ತನು ಶತ್ರುವಿನಂತೆ ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾನೆ; ಆತನು ಅವನ ಅರಮನೆಗಳನ್ನೆಲ್ಲಾ ನುಂಗಿಬಿಟ್ಟಿದ್ದಾನೆ, ಆತನು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾನೆ; ಯೆಹೂದದ ಮಗಳ ದುಃಖವನ್ನೂ ಪ್ರಲಾಪವನ್ನೂ ಹೆಚ್ಚಿಸಿದ್ದಾನೆ. ಆತನು ತನ್ನ ಗುಡಾರವನ್ನು ತೋಟದಂತೆ ಬಲಾತ್ಕಾರವಾಗಿ ತೆಗೆದುಹಾಕಿದ್ದಾನೆ. ಆತನು ತನ್ನ ಸಭಾಸ್ಥಾನಗಳನ್ನು ನಾಶಮಾಡಿದ್ದಾನೆ; ಕರ್ತನು ಚೀಯೋನಿನಲ್ಲಿ ಪವಿತ್ರ ಹಬ್ಬಗಳನ್ನೂ ಸಬ್ಬತ್ತನ್ನೂ ಮರೆತುಬಿಡುವಂತೆ ಮಾಡಿದ್ದಾನೆ, ತನ್ನ ಕೋಪದ ಉರಿಯಲ್ಲಿ ಅರಸನನ್ನೂ ಯಾಜಕನನ್ನೂ ತುಚ್ಛೀಕರಿ ಸಿದ್ದಾನೆ. ಕರ್ತನು ತನ್ನ ಯಜ್ಞವೇದಿಯನ್ನು ತಳ್ಳಿಬಿಟ್ಟಿ ದ್ದಾನೆ; ತನ್ನ ಪರಿಶುದ್ಧ ಸ್ಥಳವನ್ನು ಅಸಹ್ಯಪಡಿಸಿದ್ದಾನೆ; ಆತನು ಅವಳ ಅರಮನೆಗಳ ಗೋಡೆಗಳನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಪರಿಶುದ್ಧ ಹಬ್ಬದ ದಿನದಲ್ಲಿ ಮಾಡಿದ ಹಾಗೆ ಅವರು ಕರ್ತನ ಆಲಯದಲ್ಲಿ ಶಬ್ದಮಾಡಿದ್ದಾರೆ. ಕರ್ತನು ಚೀಯೋನಿನ ಮಗಳ ಗೋಡೆಯನ್ನು ನಾಶ ಮಾಡಬೇಕೆಂದು ಉದ್ದೇಶಿಸಿದ್ದಾನೆ; ಗೆರೆಯನ್ನು ಎಳೆದಿದ್ದಾನೆ. ತನ್ನ ಕೈಯನ್ನು ಕೆಡಿಸುವದರಿಂದ ಹಿಂತೆಗೆಯಲಿಲ್ಲ; ಕಲ್ಲಿನ ಪ್ರಾಕಾರವನ್ನೂ ಮತ್ತು ಗೋಡೆ ಯನ್ನೂ ಗೋಳಾಡುವಂತೆ ಆತನು ಮಾಡಿದ್ದಾನೆ, ಅವೆರಡೂ ಜೊತೆಯಾಗಿ ಕುಸಿದು ಹೋಗಿವೆ. ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ; ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. ಅವಳ ಅರಸನು ಮತ್ತು ಪ್ರಭುಗಳು ಅನ್ಯಜನಾಂಗಗಳ ಮಧ್ಯೆ ಇರುವರು; ಇನ್ನು ನ್ಯಾಯ ಪ್ರಮಾಣವು ಇರುವದೇ ಇಲ್ಲ; ಆಕೆಯ ಪ್ರವಾದಿಗಳು ಸಹ ಕರ್ತನಿಂದ ದರ್ಶನವನ್ನು ಕಂಡು ಕೊಳ್ಳುವದಿಲ್ಲ.
- Lamentations 1:4 ಪ್ರಲಾಪಗಳು 1:4ಚೀಯೋನಿನ ಮಾರ್ಗಗಳು ದುಃಖಿಸುತ್ತವೆ, ಯಾಕಂದರೆ ಪವಿತ್ರ ಹಬ್ಬಗಳಿಗೆ ಯಾರೂ ಬರಲಿಲ್ಲ; ಆಕೆಯ ಎಲ್ಲಾ ಬಾಗಿಲುಗಳು ಹಾಳುಬಿದ್ದಿವೆ. ಯಾಜಕರು ನಿಟ್ಟುಸಿರಿಡುತ್ತಾರೆ, ಕನ್ಯೆಯರು ಸಂಕಟಪಡುತ್ತಾರೆ. ಆಕೆಯು ವ್ಯಥೆಯಲ್ಲಿದ್ದಾಳೆ.