Lamentations · chapter 3 · verse 51
Lamentations 3:51 in Kannada
ನನ್ನ ನಗರದ ಕುಮಾರ್ತೆಯರೆಲ್ಲರ ನಿಮಿತ್ತವಾಗಿ ನನ್ನ ಕಣ್ಣು ನನ್ನ ಹೃದಯವನ್ನು ಪೀಡಿಸಿದೆ.
Nanna nagarada kumaarteyarellara nimittavaagi nanna kannu nanna hrudayavannu peediside.
Lamentations 3:51 in English
- King James Version (KJV)
- Mine eye affecteth mine heart because of all the daughters of my city.
- World English Bible (WEB)
- My eye affects my soul, because of all the daughters of my city.
- American Standard Version (ASV)
- Mine eye affecteth my soul, because of all the daughters of my city.
- Bible in Basic English (BBE)
- The Lord is unkind to my soul, more than all the daughters of my town.
- Darby Translation (DBY)
- Mine eye affecteth my soul, because of all the daughters of my city.
- Webster's Bible (WBS)
- My eye affecteth my heart because of all the daughters of my city.
- Young's Literal Translation (YLT)
- My eye affecteth my soul, Because of all the daughters of my city.
Read in context
- 49ಕರ್ತನು ಕಟಾಕ್ಷಿಸಿ ಪರಲೋಕದಿಂದ ನೋಡುವ ತನಕ ನೇತ್ರವು ಎಡೆಬಿಡದೆ ಕಣ್ಣೀರು ಸುರಿಸುತ್ತದೆ;
- 50ವಿಶ್ರಮಿಸಿಕೊಳ್ಳುವದೂ ಇಲ್ಲ.
- 51ನನ್ನ ನಗರದ ಕುಮಾರ್ತೆಯರೆಲ್ಲರ ನಿಮಿತ್ತವಾಗಿ ನನ್ನ ಕಣ್ಣು ನನ್ನ ಹೃದಯವನ್ನು ಪೀಡಿಸಿದೆ.
- 52ನನ್ನ ಶತ್ರುಗಳು ಕಾರಣವಿಲ್ಲದೆ ಪಕ್ಷಿಯಂತೆ ನನ್ನನ್ನು ಕಠೋರವಾಗಿ ಹಿಂದಟ್ಟಿ ಬೇಟೆಯಾಡಿದರು.
- 53ಅವರು ಕಾರಾಗೃಹದಲ್ಲಿ ನನ್ನ ಜೀವವನ್ನು ತೆಗೆದುಹಾಕಿ ನನ್ನ ಮೇಲೆ ಕಲ್ಲನ್ನು ಹಾಕಿದ್ದಾರೆ.
Cross references
- Luke 19:41–44 ಲೂಕನು 19:41–44ತರುವಾಯ ಆತನು ಸವಿಾಪಿಸಿದಾಗ ಪಟ್ಟಣ ವನ್ನು ನೋಡಿ ಅದರ ವಿಷಯವಾಗಿ ಅತ್ತು-- ನೀನು ಈ ನಿನ್ನ ದಿನದಲ್ಲಿಯಾದರೂ ನಿನ್ನ ಸಮಾ ಧಾನಕ್ಕೆ ಸಂಬಂಧಪಟ್ಟವುಗಳನ್ನು ತಿಳಿದುಕೊಳ್ಳಬೇಕಾ ಗಿತ್ತು; ಆದರೆ ಈಗ ಅವುಗಳು ನಿನ್ನ ಕಣ್ಣುಗಳಿಗೆ ಮರೆಯಾಗಿವೆ. ಯಾಕಂದರೆ ನಿನ್ನ ಶತೃಗಳು ನಿನ್ನ ಸುತ್ತಲೂ ಕಂದಕವನ್ನು ತೋಡಿ ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಒಳಗೆ ಇರಿಸುವ ದಿನಗಳು ನಿನ್ನ ಮೇಲೆ ಬರುವವು. ಇದಲ್ಲದೆ ಅವರು ನಿನ್ನನ್ನೂ ನಿನ್ನೊಳ ಗಿರುವ ನಿನ್ನ ಮಕ್ಕಳನ್ನೂ ನೆಲಸಮ ಮಾಡುವರು; ಮತ್ತು ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಇರದಂತೆ ಮಾಡುವರು; ಯಾಕಂದರೆ ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳುಕೊಳ್ಳಲಿಲ್ಲ ಅಂದನು.
- Jeremiah 19:9 ಯೆರೆಮೀಯ 19:9ಅವರು ತಮ್ಮ ಕುಮಾರರ ಕುಮಾರ್ತೆಯರ ಮಾಂಸವನ್ನೂ ತಿನ್ನುವಂತೆ ಮಾಡುವೆನು; ಮುತ್ತಿಗೆಯಲ್ಲಿ ಸಹ ಅವರ ಶತ್ರುಗಳೂ ಅವರ ಪ್ರಾಣವನ್ನು ಹುಡುಕುವವರೂ ಅವರಿಗೆ ಮಾಡುವ ಇಕ್ಕಟ್ಟಿನಲ್ಲಿಯೂ ಅವರು ತಮ್ಮ ತಮ್ಮ ಸ್ನೇಹಿತರ ಮಾಂಸವನ್ನು ತಿನ್ನುವರು.
- Lamentations 5:11 ಪ್ರಲಾಪಗಳು 5:11ಅವರು ಚೀಯೋನಿನಲ್ಲಿ ಹೆಂಗಸರನ್ನೂ ಯೆಹೂದದ ನಗರಗಳಲ್ಲಿ ಕನ್ಯೆಯರನ್ನೂ ಕೆಡಿಸಿದರು.
- Jeremiah 11:22 ಯೆರೆಮೀಯ 11:22ಸೈನ್ಯ ಗಳ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ಅವರನ್ನು ಶಿಕ್ಷಿಸುತ್ತೇನೆ, ಯೌವನಸ್ಥರು ಕತ್ತಿಯಿಂದ ಸಾಯುವರು; ಅವರ ಕುಮಾರ ಕುಮಾರ್ತೆಯರು ಹಸಿವೆಯಿಂದ ಸಾಯುವರು.ಅವರಲ್ಲಿ ಶೇಷವು ಇರುವದಿಲ್ಲ; ನಾನು ಅನಾತೋತಿನ ಮನುಷ್ಯರ ಮೇಲೆ ಕೇಡನ್ನು ಅಂದರೆ ಅವರ ವಿಚಾರಣೆಯ ವರುಷವನ್ನೇ ತರುತ್ತೇನೆ.
- Jeremiah 4:19–21 ಯೆರೆಮೀಯ 4:19–21ನನ್ನ ಕರುಳುಗಳು, ನನ್ನ ಕರುಳುಗಳು! ನನ್ನ ಹೃದಯದಲ್ಲಿಯೇ ನೊಂದುಕೊಂಡಿದ್ದೇನೆ; ನನ್ನ ಹೃದ ಯವು ನನ್ನಲ್ಲಿ ಕೂಗುತ್ತದೆ, ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿಯ ಶಬ್ದವನ್ನೂ ಯುದ್ಧದ ಆರ್ಭಟವನ್ನೂ ನೀನು ಕೇಳಿದ್ದೀ. ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು. ಎಷ್ಟರ ವರೆಗೆ ನಾನು ಧ್ವಜವನ್ನು ನೋಡುತ್ತಾ ತುತೂರಿಯ ಶಬ್ದವನ್ನು ಕೇಳಲಿ?
- Lamentations 2:21 ಪ್ರಲಾಪಗಳು 2:21ಎಳೇ ಪ್ರಾಯದವರೂ ಮುದುಕರೂ ಬೀದಿಗಳಲ್ಲಿ ಬಿದ್ದಿದ್ದಾರೆ; ನನ್ನ ಕನ್ಯೆಯರೂ ಯೌವನಸ್ಥರೂ ಕತ್ತಿಯಿಂದ ಹತರಾಗಿದ್ದಾರೆ; ನಿನ್ನ ಕೋಪದ ದಿನದಲ್ಲಿ ನೀನು ಅವರನ್ನು ಸಾಯಿಸಿರುವಿ; ಕನಿಕರಿಸದೆ ಕೊಂದುಹಾಕಿ ಬಿಟ್ಟಿದ್ದೀ.ಪರಿಶುದ್ಧ ದಿನದಲ್ಲಿ ಆದ ಹಾಗೆ ಸುತ್ತಲೂ ನನ್ನ ಭಯಾನಕಗಳನ್ನು ನೀನು ಕರೆದಿರುವಿ, ಆದರೆ ಕರ್ತನ ಕೋಪದ ದಿನದಲ್ಲಿ ತಪ್ಪಿಸಿಕೊಂಡು ಉಳಿದವನು ಒಬ್ಬನೂ ಇಲ್ಲ; ನಾನು ಸಾಕಿ ಬೆಳೆಸಿದವರನ್ನು ನನ್ನ ಶತ್ರುವು ನಿರ್ಮೂಲ ಮಾಡಿದ್ದಾನೆ.
- Lamentations 1:18 ಪ್ರಲಾಪಗಳು 1:18ಕರ್ತನು ನೀತಿವಂತನು, ನಾನು ಆತನ ಆಜ್ಞೆಗೆ ವಿರುದ್ಧವಾಗಿ ತಿರುಗಿಬಿದ್ದಿದ್ದೇನೆ; ಎಲ್ಲಾ ಜನರೇ, ಕೇಳಿರಿ, ನಾನು ನಿಮ್ಮನ್ನು ಕೇಳಿ ಕೊಳ್ಳುತ್ತೇನೆ; ನನ್ನ ದುಃಖವನ್ನು ನೋಡಿರಿ, ನನ್ನ ಕನ್ಯೆಯರೂ ನನ್ನ ಯೌವನಸ್ಥರೂ ಸೆರೆಗೆ ಹೋಗಿದ್ದಾರೆ.
- Jeremiah 14:16 ಯೆರೆಮೀಯ 14:16ಅವರ ಪ್ರವಾದನೆಯನು ಕೇಳುವ ಜನರು ಕ್ಷಾಮದ ಮತ್ತು ಕತ್ತಿಯ ನಿಮಿತ್ತ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು; ಅವರನ್ನೂ ಹೆಂಡತಿಯರನ್ನೂ ಕುಮಾರರನ್ನೂ ಕುಮಾರ್ತೆಯರನ್ನೂ ಹೂಣಿಡುವದಕ್ಕೆ ಯಾರೂ ಇರು ವದಿಲ್ಲ; ನಾನು ಅವರ ಕೆಟ್ಟತನವನ್ನು ಅವರ ಮೇಲೆ ಹೊಯಿದು ಬಿಡುವೆನು.
- Jeremiah 14:18 ಯೆರೆಮೀಯ 14:18ನಾನು ಹೊಲಕ್ಕೆ ಹೋದರೆ, ಇಗೋ, ಕತ್ತಿಯಿಂದ ಕೊಲ್ಲಲ್ಪಟ್ಟವರು ಪಟ್ಟಣದಲ್ಲಿ ಪ್ರವೇಶಿಸಿದರೆ, ಇಗೋ, ಕ್ಷಾಮದಿಂದ ರೋಗದಲ್ಲಿ ಬಿದ್ದವರು. ಹೌದು, ಪ್ರವಾದಿಯೂ ಯಾಜಕನೂ ತಮಗೆ ತಿಳಿಯದ ದೇಶಕ್ಕೆ ಸಂಚಾರ ಮಾಡುವರು.
- 1 Samuel 30:3–4 1 ಸಮುವೇಲನು 30:3–4ದಾವೀದನೂ ಅವನ ಜನರೂ ಆ ಪಟ್ಟಣಕ್ಕೆ ಬಂದಾಗ ಇಗೋ, ಅದು ಬೆಂಕಿಯಿಂದ ಸುಟ್ಟು ಹಾಕಲ್ಪಟ್ಟಿತ್ತು. ಇದಲ್ಲದೆ ಅವರ ಹೆಂಡತಿಯರೂ ಕುಮಾರರೂ ಕುಮಾರ್ತೆಯರೂ ಸೆರೆಯಾಗಿ ಒಯ್ಯಲ್ಪಟ್ಟಿದ್ದರು. ದಾವೀದನೂ ಅವನ ಸಂಗಡವಿದ್ದ ಜನರೂ ಅಳುವದಕ್ಕೆ ತಮ್ಮಲ್ಲಿ ಶಕ್ತಿ ಇಲ್ಲದೆ ಹೋಗುವವರೆಗೂ ಗಟ್ಟಿಯಾಗಿ ಅತ್ತರು.
- Genesis 44:34 ಆದಿಕಾಂಡ 44:34ಹುಡುಗನು ನನ್ನ ಬಳಿಯಲ್ಲಿರದೆ ನಾನು ಹೇಗೆ ನನ್ನ ತಂದೆಯ ಬಳಿಗೆ ಹೋಗಲಿ? ಹೋದರೆ ನನ್ನ ತಂದೆಗೆ ಬರುವ ಕೇಡನ್ನು ನಾನು ನೋಡ ಬೇಕಾದೀತು ಅಂದನು.