Leviticus · chapter 11 · verse 13
Leviticus 11:13 in Kannada
ಪಕ್ಷಿಗಳೊಳಗೆ ನಿಮಗೆ ಅಶುದ್ಧವಾಗಿರುವವುಗಳು ಇವೇ; ಇವುಗಳನ್ನು ನೀವು ತಿನ್ನಬಾರದು, ಇವು ನಿಮಗೆ ಅಶುದ್ಧ: ಹದ್ದು, ಕಡಲ ಹದ್ದು, ವಿಾನು ತಿನ್ನುವ ದೊಡ್ಡ ಜಾತಿಯ ಪಕ್ಷಿ,
Pakshigalolage nimage ashuddhavaagiruvavugalu ive; ivugalannu neevu tinnabaaradu, ivu nimage ashuddha: haddu, kadala haddu, viాnu tinnuva dodda jaatiya pakshi,
Leviticus 11:13 in English
- King James Version (KJV)
- And these [are they which] ye shall have in abomination among the fowls; they shall not be eaten, they [are] an abomination: the eagle, and the ossifrage, and the ospray,
- World English Bible (WEB)
- “‘You shall detest these among the birds; they shall not be eaten because they are an abomination: the eagle, the vulture, the black vulture,
- American Standard Version (ASV)
- And these ye shall have in abomination among the birds; they shall not be eaten, they are an abomination: the eagle, and the gier-eagle, and the ospray,
- Bible in Basic English (BBE)
- And among birds these are to be disgusting to you, and not to be used for food: the eagle and the gier-eagle and the ospray;
- Darby Translation (DBY)
- And these shall ye have in abomination of the fowls; they shall not be eaten; an abomination shall they be: the eagle, and the ossifrage, and the sea-eagle,
- Webster's Bible (WBS)
- And these [are they which] ye shall have in abomination among the fowls; they shall not be eaten, they [are] an abomination: the eagle, and the ossifrage, and the ospray,
- Young's Literal Translation (YLT)
- 'And these ye do abominate of the fowl; they are not eaten, an abomination they [are]: the eagle, and the ossifrage, and the ospray,
Read in context
- 11ಅವು ನಿಮಗೆ ಅಶುದ್ಧ ವಾಗಿಯೇ ಇರುವವು; ನೀವು ಅವುಗಳ ಮಾಂಸವನ್ನು ತಿನ್ನಬಾರದು, ಅವುಗಳ ಶವಗಳು ನಿಮಗೆ ಅಶುದ್ಧ ವಾಗಿರಬೇಕು.
- 12ನೀರಲ್ಲಿ ಯಾವದಕ್ಕೆ ಈಜು ರೆಕ್ಕೆಯೂ ಪೊರೆಗಳೂ ಇಲ್ಲವೊ ಅವು ನಿಮಗೆ ಅಶುದ್ಧ ವಾಗಿರುವವು.
- 13ಪಕ್ಷಿಗಳೊಳಗೆ ನಿಮಗೆ ಅಶುದ್ಧವಾಗಿರುವವುಗಳು ಇವೇ; ಇವುಗಳನ್ನು ನೀವು ತಿನ್ನಬಾರದು, ಇವು ನಿಮಗೆ ಅಶುದ್ಧ: ಹದ್ದು, ಕಡಲ ಹದ್ದು, ವಿಾನು ತಿನ್ನುವ ದೊಡ್ಡ ಜಾತಿಯ ಪಕ್ಷಿ,
- 14ರಣಹದ್ದು, ಅದರ ಜಾತಿಯ ಹದ್ದು;
- 15ಅದರ ಜಾತಿಗನುಸಾರವಾದ ಪ್ರತಿಯೊಂದು ಕಾಗೆ,
Cross references
- Job 39:27–30 ಯೋಬನು 39:27–30ರಣ ಹದ್ದು ಎತ್ತರಕ್ಕೆ ಹೋಗುವದೂ ತನ್ನ ಗೂಡನ್ನು ಎತ್ತುವದೂ ನಿನ್ನ ಅಪ್ಪಣೆಯ ಪ್ರಕಾರವೋ? ಅದು ಬಂಡೆಯಲ್ಲಿ ವಾಸಿಸುತ್ತದೆ; ಬಂಡೆಯ ಸಂದುಗಳ ಲ್ಲಿಯೂ ದುರ್ಗಗಳಲ್ಲಿಯೂ ಅದು ಉಳುಕೊಳ್ಳುತ್ತದೆ. ಅಲ್ಲಿಂದ ಆಹಾರವನ್ನು ಹುಡುಕುತ್ತದೆ. ಅದರ ಕಣ್ಣುಗಳು ದೂರಕ್ಕೆ ನೋಡುತ್ತವೆ.ಅದರ ಮರಿ ಗಳು ರಕ್ತವನ್ನು ಹೀರುತ್ತವೆ; ಹೆಣ ಇದ್ದಲ್ಲೇ ಅದು ಇರುವದು. ಅದರ ಮರಿ ಗಳು ರಕ್ತವನ್ನು ಹೀರುತ್ತವೆ; ಹೆಣ ಇದ್ದಲ್ಲೇ ಅದು ಇರುವದು.
- Habakkuk 1:8 ಹಬಕ್ಕೂಕ 1:8ಅವರ ಕುದುರೆಗಳು ಸಹ ಚಿರತೆಗಳಿಗಿಂತ ವೇಗ ವಾಗಿಯೂ ಸಂಜೆಯ ತೋಳಗಳಿಗಿಂತ ಚುರುಕಾ ಗಿಯೂ ಅವೆ; ಅವರ ಕುದುರೆ ಸವಾರರು ತಾವೇ ಹರಡಿಕೊಳ್ಳುವರು; ಅವರ ಸವಾರರು ದೂರದಿಂದ ಬರುವರು; ತಿನ್ನುವದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿಬರುವರು.
- Jeremiah 4:22 ಯೆರೆಮೀಯ 4:22ನನ್ನ ಜನರು ಮೂಢರಾಗಿದ್ದಾರೆ, ನನ್ನನ್ನು ಅವರು ಅರಿಯರು; ಕುಡಿಕರಾದ ಮಕ್ಕಳಾಗಿದ್ದಾರೆ, ಗ್ರಹಿಕೆ ಯುಳ್ಳವರಲ್ಲ; ಕೆಟ್ಟದ್ದನ್ನು ಮಾಡುವದಕ್ಕೆ ಜಾಣರಾಗಿ ದ್ದಾರೆ, ಒಳ್ಳೇದನ್ನು ಮಾಡುವದನ್ನು ಅರಿಯರು.
- Titus 3:3 ತೀತನಿಗೆ 3:3ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದ ವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ದಾಸರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆ ಮಾಡುವವರೂ ಆಗಿದ್ದೆವು.
- Matthew 24:28 ಮತ್ತಾಯನು 24:28ಯಾಕಂದರೆ ಹೆಣ ಇದ್ದಲ್ಲಿ ಹದ್ದುಗಳು ಕೂಡಿಕೊಳ್ಳುವವು.
- Jeremiah 4:13 ಯೆರೆಮೀಯ 4:13ಇಗೋ, ಮೇಘಗಳ ಹಾಗೆ ಏರಿ ಬರುವನು; ಆತನ ರಥಗಳು ಬಿರುಗಾಳಿಯ ಹಾಗೆ ಇರುವವು, ಆತನ ಕುದುರೆಗಳು ಹದ್ದುಗಳಿಗಿಂತ ತೀವ್ರವಾಗಿವೆ. ನಮಗೆ ಅಯ್ಯೋ, ಹಾಳಾದೆವು.
- Lamentations 4:19 ಪ್ರಲಾಪಗಳು 4:19ನಮ್ಮನ್ನು ಹಿಂಸಿಸುವವರು ಆಕಾಶದಲ್ಲಿ ಹಾರುವ ಹದ್ದುಗಳಿಗಿಂತ ತೀವ್ರ ವಾಗಿದ್ದಾರೆ; ಅವರು ಪರ್ವತಗಳ ಮೇಲೆ ನಮ್ಮನ್ನು ಹಿಂದಟ್ಟಿ ಅರಣ್ಯದಲ್ಲಿ ಹೊಂಚುಹಾಕಿದರು.
- Romans 3:13–17 ರೋಮಾಪುರದವರಿಗೆ 3:13–17ಅವರ ಗಂಟಲು ತೆರೆದಿರುವ ಸಮಾಧಿಯಾಗಿದೆ. ಅವರು ತಮ್ಮ ನಾಲಿಗೆಗಳಿಂದ ವಂಚಿಸುತ್ತಾರೆ; ಅವರ ತುಟಿಗಳ ಕೆಳಗೆ ಹಾವಿನ ವಿಷವಿದೆ. ಅವರ ಬಾಯಿ ಶಾಪದಿಂದಲೂ ವಿಷದಿಂದಲೂ ತುಂಬಿ ಅದೆ. ಅವರ ಕಾಲುಗಳು ರಕ್ತವನ್ನು ಸುರಿಸಲು ಆತುರ ಪಡುತ್ತವೆ. ಅವರ ದಾರಿಗಳಲ್ಲಿ ನಾಶ ಸಂಕಟಗಳು ಉಂಟಾಗುತ್ತವೆ. ಅವರು ಸಮಾಧಾನದ ಮಾರ್ಗ ವನ್ನೇ ಅರಿತವರಲ್ಲ;
- Hosea 8:1 ಹೋಶೇಯ 8:1ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ, ಅವರು ನನ್ನ ಒಡಂಬಡಿಕೆಯನ್ನು ವಿಾರಿ ನನ್ನ ನ್ಯಾಯಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ ಅವನು ಹದ್ದಿನ ಹಾಗೆ ಕರ್ತನ ಆಲಯಕ್ಕೆ ವಿರುದ್ಧವಾಗಿ ಬರುತ್ತಾನೆ.
- Deuteronomy 14:12–20 ಧರ್ಮೋಪದೇಶಕಾಂಡ 14:12–20ಪಕ್ಷಿ ಜಾತಿಯಲ್ಲಿ ನೀವು ತಿನ್ನಬಾರದವುಗಳು ಯಾವ ವೆಂದರೆ: ಗರುಡ, ಬೆಟ್ಟದಹದ್ದು, ಕ್ರೌಂಚ, ಗಿಡಗ, ಹಕ್ಕಿಸಾಲೆ, ಗಿಡಗವೂ ಬೈರಿಯೂ ಜಾತ್ಯಾನುಸಾರ ವಾದ ರಣಹದ್ದು ಜಾತ್ಯಾನುಸಾರವಾದ ಸಕಲ ಕಾಗೆಯೂ ಉಷ್ಟ್ರಪಕ್ಷಿಯೂ ಗೂಬೆಯೂ ಕಡಲ್ಕಾ ಗೆಯೂ ಜಾತ್ಯಾನುಸಾರವಾದ ಡೇಗೆಯೂ ಚಿಕ್ಕ ಗೂಬೆಯೂ ದೊಡ್ಡಗೂಬೆಯೂ ಕೊಕ್ಕರೆಯೂ ನೀರು ಕೋಳಿಯೂ ಹೆಣಹದ್ದೂ ಬೆಳ್ವಕ್ಕಿಯೂ ನೀರು ಕೊಕ್ಕರೆಯೂ ಜಾತ್ಯಾನುಸಾರವಾದ ಬಕವೂ ಬುಡ್ಡಗೋಳಿಯೂ ರಾತ್ರಿಗೀಜಕವೂ. ಇದಲ್ಲದೆ ಹಾರುವ ಎಲ್ಲಾ ಹುಳಗಳು ನಿಮಗೆ ಅಶುದ್ಧವೇ, ಅವುಗಳನ್ನು ತಿನ್ನಬಾರದು. ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು.
- Job 28:7 ಯೋಬನು 28:7ಆ ಹಾದಿಯನ್ನು ಪಕ್ಷಿ ತಿಳಿಯಲಿಲ್ಲ; ಹದ್ದಿನ ಕಣ್ಣು ಅದನ್ನು ದೃಷ್ಟಿಸಲಿಲ್ಲ;
- Romans 1:28–32 ರೋಮಾಪುರದವರಿಗೆ 1:28–32ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು. ಹೀಗೆ ಅವರು ಸಕಲ ಅನೀತಿಯಿಂದಲೂ ಜಾರತ್ವ ದುರ್ಮಾರ್ಗತನ ದುರಾಶೆ ದುಷ್ಟತ್ವ ಇವುಗಳಿಂದಲೂ ತುಂಬಿದವರಾಗಿ ಹೊಟ್ಟೇಕಿಚ್ಚು ಕೊಲೆ ವಿವಾದ ಮೋಸ ತುಂಬಿದವರೂ ಅತಿಉಗ್ರತೆಯಿಂದ ತುಂಬಿದವರೂ ಪಿಸುಗುಟ್ಟುವ ವರೂ ಚಾಡಿಹೇಳುವವರೂ ದೇವರನ್ನು ಹಗೆ ಮಾಡುವವರೂ ಧಿಕ್ಕರಿಸುವವರೂ ಅಹಂಕಾರಿಗಳೂ ಉಬ್ಬಿಕೊಳ್ಳುವವರೂ ಕೆಟ್ಟವುಗಳನ್ನು ಕಲ್ಪಿಸುವವರೂ ತಂದೆತಾಯಿಗಳಿಗೆ ಅವಿಧೇಯರೂ ತಿಳುವಳಿಕೆಯಿಲ್ಲ ದವರೂ ಪ್ರಮಾಣಕ್ಕೆ ತಪ್ಪುವವರೂ ಸ್ವಾಭಾವಿಕವಾದ ಮಮತೆಯಿಲ್ಲದವರೂ ಸಮಾಧಾನವಾಗದವರೂ ಕರುಣೆಯಿಲ್ಲದವರೂ ಆದರು.ಇಂಥವುಗಳನ್ನು ಮಾಡುವವರು ಮರಣಕ್ಕೆ ಯೋಗ್ಯರೆಂಬ ದೇವರ ನ್ಯಾಯತೀರ್ಪನ್ನು ಅವರು ತಿಳಿದವರಾಗಿದ್ದರೂ ಅವು ಗಳನ್ನು ಮಾಡುವದಲ್ಲದೆ ಅಂಥವುಗಳನ್ನು ಮಾಡುವವ ರಲ್ಲಿ ಸಂತೋಷಪಡುತ್ತಾರೆ. ಇಂಥವುಗಳನ್ನು ಮಾಡುವವರು ಮರಣಕ್ಕೆ ಯೋಗ್ಯರೆಂಬ ದೇವರ ನ್ಯಾಯತೀರ್ಪನ್ನು ಅವರು ತಿಳಿದವರಾಗಿದ್ದರೂ ಅವು ಗಳನ್ನು ಮಾಡುವದಲ್ಲದೆ ಅಂಥವುಗಳನ್ನು ಮಾಡುವವ ರಲ್ಲಿ ಸಂತೋಷಪಡುತ್ತಾರೆ.