Leviticus · chapter 11 · verse 20
Leviticus 11:20 in Kannada
ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳೆಲ್ಲವೂ ನಿಮಗೆ ಹೇಯವಾಗಿರಬೇಕು.
Rekkeyullavugalaagi kaalugalinda haridaaduva krimikeetagalellavoo nimage heyavaagirabeku.
Leviticus 11:20 in English
- King James Version (KJV)
- All fowls that creep, going upon [all] four, [shall be] an abomination unto you.
- World English Bible (WEB)
- “‘All flying insects that walk on all fours are an abomination to you.
- American Standard Version (ASV)
- All winged creeping things that go upon all fours are an abomination unto you.
- Bible in Basic English (BBE)
- Every winged four-footed thing which goes on the earth is disgusting to you;
- Darby Translation (DBY)
- Every winged crawling thing that goeth upon all four shall be an abomination unto you.
- Webster's Bible (WBS)
- All fowls that creep, going upon [all] four, [shall be] an abomination to you.
- Young's Literal Translation (YLT)
- 'Every teeming creature which is flying, which is going on four — an abomination it [is] to you.
Read in context
- 18ಇದಲ್ಲದೆ ಹಂಸ, ನೀರು ಕೋಳಿ, ರಣಹದ್ದು,
- 19ಕೊಕ್ಕರೆ, ಬಕ, ಬಾವಲಿ, ಕಣ್ಣ ಕಪಡಿ.
- 20ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳೆಲ್ಲವೂ ನಿಮಗೆ ಹೇಯವಾಗಿರಬೇಕು.
- 21ಆದರೆ ಕಾಲುಳ್ಳ ಯಾವ ಕ್ರಿಮಿಕೀಟಗಳಿಗೆ ನೆಲದ ಮೇಲೆ ಹಾರುವದಕ್ಕೋಸ್ಕರ ಮುದುರಿಕೊಂಡಿರುವ ತೊಡೆಗಳು ಇರುತ್ತವೆಯೋ ಅವುಗಳನ್ನು ನೀವು ತಿನ್ನ ಬಹುದು.
- 22ಅವುಗಳ ಜಾತಿಗನುಸಾರವಾಗಿ ಮಿಡತೆಗಳನ್ನೂ ಬೋಳುಮಿಡತೆಗಳನ್ನೂ ಜಿಟ್ಟೆಮಿಡತೆಗಳನ್ನೂ ಸಣ್ಣ ಮಿಡಿತೆಗಳನ್ನೂ ತಿನ್ನಬಹುದು.
Cross references
- Matthew 6:24 ಮತ್ತಾಯನು 6:24ಯಾವ ಮನುಷ್ಯನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಇನ್ನೊಬ್ಬನನ್ನು ಪ್ರೀತಿಮಾಡುವನು; ಇಲ್ಲವಾದರೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬ ನನ್ನು ಅಸಡ್ಡೆ ಮಾಡುವನು. ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ.
- Jude 1:19 ಯೂದನು 1:19ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ ಪ್ರಾಕೃತಮನುಷ್ಯರೂ ಆತ್ಮವಿಲ್ಲದವರೂ ಆಗಿದ್ದಾರೆ.
- Deuteronomy 14:19 ಧರ್ಮೋಪದೇಶಕಾಂಡ 14:19ಇದಲ್ಲದೆ ಹಾರುವ ಎಲ್ಲಾ ಹುಳಗಳು ನಿಮಗೆ ಅಶುದ್ಧವೇ, ಅವುಗಳನ್ನು ತಿನ್ನಬಾರದು.
- Leviticus 11:27 ಯಾಜಕಕಾಂಡ 11:27ನಾಲ್ಕು ಕಾಲುಗಳ ಮೇಲೆ ಹೋಗುವ ಎಲ್ಲಾ ಬಗೆಯ ಮೃಗಗಳಲ್ಲಿ ಅಂಗಾಲಿನ ಮೇಲೆ ಹೋಗುವ ದೆಲ್ಲವೂ ನಿಮಗೆ ಅಶುದ್ಧವಾಗಿರುವವು, ಯಾವನಾ ದರೂ ಅವುಗಳ ಶವವನ್ನು ಮುಟ್ಟಿದರೆ ಅವನು ಸಂಜೆಯ ವರೆಗೂ ಅಶುದ್ಧನಾಗಿರುವನು.
- Philippians 3:18–19 ಫಿಲಿಪ್ಪಿಯವರಿಗೆ 3:18–19(ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಾನು ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ. ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆ ಕೆಲಸಗಳಲ್ಲಿಯೇ ಅವರ ಗೌರವವು. ಅವರು ಭೂಸಂಬಂಧವಾದವುಗಳ ಮೇಲೆ ಮನಸ್ಸಿಡುತ್ತಾರೆ.)
- 2 Timothy 4:10 2 ತಿಮೊಥೆಯನಿಗೆ 4:10ಯಾಕಂದರೆ ದೇಮನು ಇಹಲೋಕವನ್ನು ಪ್ರೀತಿಸಿ ನನ್ನನ್ನು ತೊರೆದುಬಿಟ್ಟು ಥೆಸಲೋನಿಕಕ್ಕೆ ಹೋದನು; ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು;
- Jude 1:10 ಯೂದನು 1:10ಆದರೆ ಈ ಜನರು ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡುತ್ತಾರೆ ಮತ್ತು ತಾವು ವಿವೇಕಶೂನ್ಯ ಮೃಗಗಳಂತೆ ಸ್ವಾಭಾವಿಕವಾಗಿ ಯಾವವುಗಳನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.
- 2 Kings 17:28–41 2 ಅರಸುಗಳು 17:28–41ಆಗ ಅವರು ಸಮಾರ್ಯ ದಿಂದ ತಂದ ಯಾಜಕರಲ್ಲಿ ಒಬ್ಬನು ಬಂದು ಬೇತೇಲಿ ನಲ್ಲಿ ವಾಸವಾಗಿದ್ದು ಅವರು ಕರ್ತನಿಗೆ ಭಯಪಡತಕ್ಕ ವಿಧವನ್ನು ಅವರಿಗೆ ಬೋಧಿಸಿದನು. ಆದರೆ ಪ್ರತಿ ಜನಾಂಗದವರೂ ತಾವು ನಿವಾಸಿಸಿದ ಪಟ್ಟಣಗಳಲ್ಲಿ ತಮಗೆ ದೇವರುಗಳನ್ನು ಮಾಡಿ ಸಮಾರ್ಯದವರು ಮಾಡಿದ ಉನ್ನತ ಸ್ಥಳಗಳ ಮನೆಗಳಲ್ಲಿ ಅವುಗಳನ್ನು ಇರಿಸಿದರು. ಬಾಬೆಲಿನ ಜನರು ಸುಕ್ಕೋತ್ಬೆನೋತನ್ನು ಮಾಡಿದರು; ಕೂತದವರು ನೇರ್ಗಲನ್ನು ಮಾಡಿದರು; ಹಮಾತಿನ ಮನುಷ್ಯರು ಅಷೀಮನನ್ನು ಮಾಡಿದರು. ಅವ್ವೀಯರು ನಿಭಜನನ್ನೂ ತರ್ತಕನನ್ನೂ ಮಾಡಿ ದರು. ಸೆಫರ್ವಯಿಮಿನವರು ಸೆಫರ್ವಾಯಿಮಿನ ದೇವ ರುಗಳಾದ ಅದ್ರಮ್ಮೆಲಕಿಗೂ ಅನಮ್ಮೆಲಕಿಗೂ ತಮ್ಮ ಮಕ್ಕಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು. ಹೀಗೆ ಅವರು ಕರ್ತನಿಗೆ ಭಯಪಟ್ಟು ತಮ್ಮಲ್ಲಿರುವ ನೀಚ ರೊಳಗೆ ಉನ್ನತ ಸ್ಥಾನಕ್ಕೋಸ್ಕರ ಯಾಜಕರನ್ನು ಮಾಡಿ ಕೊಂಡರು. ಇವರು ಉನ್ನತ ಸ್ಥಳಗಳ ಮೇಲಿರುವ ಮನೆಗಳಲ್ಲಿ ಅವರಿಗೋಸ್ಕರ ಬಲಿಗಳನ್ನು ಅರ್ಪಿಸುತ್ತಾ ಇದ್ದರು. ಅವರು ಕರ್ತನಿಗೆ ಭಯಪಟ್ಟು ಅವರು ಅಲ್ಲಿಂದ ಒಯ್ದು ಜನಾಂಗಗಳ ಪದ್ಧತಿಯ ಪ್ರಕಾರ ತಮ್ಮ ದೇವರುಗಳನ್ನು ಸೇವಿಸಿದರು. ಈ ದಿವಸದ ವರೆಗೂ ಅವರು ತಮ್ಮ ಪೂರ್ವದ ನ್ಯಾಯಗಳ ಪ್ರಕಾರ ಮಾಡುತ್ತಾರೆ; ಅವರು ಕರ್ತನಿಗೆ ಭಯಪಡದೆ ತಮ್ಮ ಕಟ್ಟಳೆಗಳ ಪ್ರಕಾರವಾಗಿಯೂ ತಮ್ಮ ನೀತಿಗಳ ಪ್ರಕಾರವಾಗಿಯೂ ನ್ಯಾಯಪ್ರಮಾ ಣದ ಪ್ರಕಾರವಾಗಿಯೂ ಕರ್ತನು ಇಸ್ರಾಯೇಲೆಂದು ಹೆಸರಿಟ್ಟ ಯಾಕೋಬನ ಮಕ್ಕಳಿಗೆ ಆಜ್ಞಾಪಿಸಿದ ಆಜ್ಞೆಯ ಪ್ರಕಾರವಾಗಿಯೂ ಮಾಡದೆ ಇದ್ದಾರೆ. ಕರ್ತನು ಅವರ ಸಂಗಡ ಒಡಂಬಡಿಕೆ ಮಾಡಿ ಅವರಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ--ನೀವು ಇತರ ದೇವರುಗಳಿಗೆ ಭಯಪಡದೆ ಅಡ್ಡಬೀಳದೆ ಸೇವಿಸದೆ ಅವುಗಳಿಗೆ ಬಲಿ ಯನ್ನು ಅರ್ಪಿಸದೆ ಇರ್ರಿ. ಆದರೆ ಮಹಾಶಕ್ತಿ ಯಿಂದಲೂ ಭುಜಪರಾಕ್ರಮದಿಂದಲೂ ಐಗುಪ್ತದೇಶ ದಿಂದ ನಿಮ್ಮನ್ನು ಬರಮಾಡಿದ ಕರ್ತನಿಗೆ ನೀವು ಭಯಪಟ್ಟು ಅಡ್ಡಬಿದ್ದು ಆತನಿಗೆ ಬಲಿಯನ್ನು ಅರ್ಪಿ ಸಿರಿ. ಇದಲ್ಲದೆ ಆತನು ನಿಮಗೆ ಬರೆದುಕೊಟ್ಟ ಕಟ್ಟಳೆಗಳನ್ನೂ ನೀತಿಗಳನ್ನೂ ನ್ಯಾಯಪ್ರಮಾಣವನ್ನೂ ಆಜ್ಞೆಯನ್ನೂ ನೀವು ನಿರಂತರವಾಗಿ ಕೈಕೊಳ್ಳಲು ಎಚ್ಚರಿಕೆ ಯಾಗಿರಬೇಕು; ಇತರ ದೇವರುಗಳಿಗೆ ಭಯಪಡ ಬೇಡಿರಿ. ನಾನು ನಿಮ್ಮ ಸಂಗಡ ಮಾಡಿದ ಒಡಂಬಡಿ ಕೆಯನ್ನು ನೀವು ಮರೆಯದೆ ಇತರ ದೇವರುಗಳಿಗೆ ಭಯಪಡದೆ ನಿಮ್ಮ ದೇವರಾದ ಕರ್ತನಿಗೆ ಭಯ ಪಡಿರಿ. ಆಗ ಆತನು ನಿಮ್ಮನ್ನು ನಿಮ್ಮ ಶತ್ರುಗಳ ಕೈಯೊಳಗಿಂದ ವಿಮೋಚನೆ ಮಾಡುವನು ಅಂದನು. ಆದರೆ ಅವರು ಕೇಳದೆ ತಮ್ಮ ಪೂರ್ವದ ಪದ್ಧತಿ ಹಾಗೆ ಮಾಡಿದರು.ಹೀಗೆಯೇ ಈ ಜನಾಂಗಗಳು ಕರ್ತನಿಗೆ ಭಯಪಡದೆ ತಮ್ಮ ಕೆತ್ತಿದ ವಿಗ್ರಹಗಳನ್ನು ಸೇವಿಸಿದರು; ಅವರ ಪಿತೃಗಳು ಮಾಡಿದ ಹಾಗೆ ಅವರೂ ಅವರ ಮಕ್ಕಳೂ ಮೊಮ್ಮಕ್ಕಳೂ ಇಂದಿನ ವರೆಗೂ ಮಾಡುತ್ತಿರುತ್ತಾರೆ. ಹೀಗೆಯೇ ಈ ಜನಾಂಗಗಳು ಕರ್ತನಿಗೆ ಭಯಪಡದೆ ತಮ್ಮ ಕೆತ್ತಿದ ವಿಗ್ರಹಗಳನ್ನು ಸೇವಿಸಿದರು; ಅವರ ಪಿತೃಗಳು ಮಾಡಿದ ಹಾಗೆ ಅವರೂ ಅವರ ಮಕ್ಕಳೂ ಮೊಮ್ಮಕ್ಕಳೂ ಇಂದಿನ ವರೆಗೂ ಮಾಡುತ್ತಿರುತ್ತಾರೆ.
- Leviticus 11:23 ಯಾಜಕಕಾಂಡ 11:23ಆದರೆ ನಾಲ್ಕು ಪಾದಗಳುಳ್ಳ ಎಲ್ಲಾ ಹಾರಾಡುವ, ಹರಿದಾಡುವ ಬೇರೆಯವುಗಳೆಲ್ಲಾ ನಿಮಗೆ ಅಶುದ್ಧವಾಗಿರುವವು.
- Psalm 17:14 ಕೀರ್ತನೆಗಳು 17:14ಓ ಕರ್ತನೇ, ನಿನ್ನ ಕೈಚಾಚಿ ಈ ಮನುಷ್ಯರಿಂದ ಅಂದರೆ ಜೀವನದಲ್ಲಿ ತಮ್ಮ ಪಾಲಿಗಿರುವ ಈ ಲೋಕದ ಜನರಿಂದ ನನ್ನನ್ನು ಪಾರುಮಾಡು. ಅವರ ಹೊಟ್ಟೆಯನ್ನು ಮರೆಯಾದ ನಿನ್ನ ನಿಕ್ಷೇಪದಿಂದ ತುಂಬಿಸುತ್ತೀ; ಅವರು ಮಕ್ಕಳಿಂದ ತೃಪ್ತರಾಗಿ ತಮ್ಮ ಮಿಕ್ಕ ಆಸ್ತಿಯನ್ನು ತಮ್ಮ ಶಿಶುಗಳಿಗೆ ಉಳಿಸುತ್ತಾರೆ.ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.
- 1 John 2:15–17 1 ಯೋಹಾನನು 2:15–17ಲೋಕವನ್ನಾಗಲಿ ಲೋಕದಲ್ಲಿರುವವುಗಳ ನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕ ವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವವುಗಳೆಲ್ಲವು ಅಂದರೆ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಗೆ ಸಂಬಂಧ ಪಟ್ಟವುಗಳಲ್ಲ, ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ. ಲೋಕವು ಅದರ ಆಶೆಯೂ ಗತಿಸಿಹೋಗುತ್ತವೆ, ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.