Leviticus · chapter 13 · verse 46
Leviticus 13:46 in Kannada
ಆ ವ್ಯಾಧಿಯು ಅವನಲ್ಲಿ ಇರುವಷ್ಟು ದಿನಗಳು ಹೊಲೆಯಾಗಿರುವನು; ಅವನು ಅಶುದ್ಧನು; ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು.
Aa vyaadhiyu avanalli iruvashtu dinagalu holeyaagiruvanu; avanu ashuddhanu; paaleyada horage ontiyaagi vaasisabeku.
Leviticus 13:46 in English
- King James Version (KJV)
- All the days wherein the plague [shall be] in him he shall be defiled; he [is] unclean: he shall dwell alone; without the camp [shall] his habitation [be].
- World English Bible (WEB)
- All the days in which the plague is in him he shall be unclean. He is unclean. He shall dwell alone. His dwelling shall be outside of the camp.
- American Standard Version (ASV)
- All the days wherein the plague is in him he shall be unclean; he is unclean: he shall dwell alone; without the camp shall his dwelling be.
- Bible in Basic English (BBE)
- While the disease is on him, he will be unclean. He is unclean: let him keep by himself, living outside the tent-circle.
- Darby Translation (DBY)
- All the days that the sore shall be in him he shall be unclean: he is unclean; he shall dwell apart; outside the camp shall his dwelling be.
- Webster's Bible (WBS)
- All the days in which the plague [shall be] in him he shall be defiled; he [is] unclean: he shall dwell alone, without the camp [shall] his habitation [be] .
- Young's Literal Translation (YLT)
- all the days that the plague [is] in him he is unclean; he [is] unclean, alone he doth dwell, at the outside of the camp [is] his dwelling.
Read in context
- 44ವ್ಯಾಧಿಯು ಅವನ ತಲೆಯಲ್ಲಿದೆ ಯೆಂದೂ ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು.
- 45ಆ ವ್ಯಾಧಿ ಇರುವ ಕುಷ್ಠರೋಗಿಯು ತನ್ನ ಬಟ್ಟೆ ಗಳನ್ನು ಹರಿದುಕೊಂಡು ಬರೀ ತಲೆಯಲ್ಲಿ ಮೇಲ್ತುಟಿ ಯನ್ನು ಮುಚ್ಚಿಕೊಂಡು--ನಾನು ಅಶುದ್ಧನು, ಅಶು ದ್ಧನು ಎಂದು ಕೂಗಬೇಕು.
- 46ಆ ವ್ಯಾಧಿಯು ಅವನಲ್ಲಿ ಇರುವಷ್ಟು ದಿನಗಳು ಹೊಲೆಯಾಗಿರುವನು; ಅವನು ಅಶುದ್ಧನು; ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು.
- 47ಕುಷ್ಠವ್ಯಾಧಿಯು ಅವನ ಉಡುಪಿನಲ್ಲಿದ್ದರೆ ಅದು ಉಣ್ಣೆಯ ಉಡುಪಾಗಲಿ ನಾರಿನ ಉಡುಪಾಗಲಿ
- 48ಉಣ್ಣೆಯ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ಚರ್ಮ ದಲ್ಲಾಗಲಿ ಚರ್ಮದಿಂದ ಮಾಡಿದ ಯಾವ ವಸ್ತುವಿನ ಲ್ಲಾಗಲಿ
Cross references
- 2 Kings 7:3 2 ಅರಸುಗಳು 7:3ಆಗ ಊರು ಬಾಗಲ ದ್ವಾರದಲ್ಲಿ ನಾಲ್ಕುಮಂದಿ ಕುಷ್ಠರೋಗಿಗಳು ಇದ್ದರು. ಅವರು ಒಬ್ಬರಿಗೊಬ್ಬರುನಾವು ಸಾಯುವ ವರೆಗೂ ಇಲ್ಲಿ ಕುಳಿತುಕೊಂಡಿ ರುವದೇನು?
- 2 Kings 15:5 2 ಅರಸುಗಳು 15:5ಕರ್ತನು ಅರಸನನ್ನು ಹೊಡೆದದ್ದರಿಂದ ಅವನು ತನ್ನ ಜೀವದಿಂದಿರು ವರೆಗೂ ಕುಷ್ಠರೋಗಿಯಾಗಿದ್ದು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗನಾದ ಯೋತಾಮನು ಮನೆ ಯಜಮಾನನಾಗಿದ್ದು ದೇಶದ ಜನರಿಗೆ ನ್ಯಾಯ ತೀರಿಸುತ್ತಿದ್ದನು.
- 2 Chronicles 26:21 2 ಪೂರ್ವಕಾಲವೃತ್ತಾಂತ 26:21ಅರಸನಾದ ಉಜ್ಜೀಯನು ಸಾಯುವ ದಿವಸದ ವರೆಗೂ ಕುಷ್ಠರೋಗಿಯಾಗಿದ್ದನು. ಅವನು ಕುಷ್ಠರೋಗವುಳ್ಳವನಾದದರಿಂದ ಪ್ರತ್ಯೇಕವಾದ ಮನೆ ಯಲ್ಲಿ ವಾಸವಾಗಿದ್ದನು. ಯಾಕಂದರೆ ಅವನು ಕರ್ತನ ಆಲಯದಿಂದ ತೆಗೆದುಹಾಕಲ್ಪಟ್ಟವನಾಗಿದ್ದನು. ಅವನ ಮಗನಾದ ಯೋತಾಮನು ಅರಸನ ಮನೆಯ ಮೇಲೆ ಇದ್ದು ದೇಶದ ಜನರಿಗೆ ನ್ಯಾಯತೀರಿಸುತ್ತಾ ಇದ್ದನು.
- Numbers 12:14–15 ಅರಣ್ಯಕಾಂಡ 12:14–15ಆಗ ಕರ್ತನು ಮೋಶೆಗೆ--ಆಕೆಯ ತಂದೆ ಆಕೆಯ ಮುಖದ ಮೇಲೆ ಉಗುಳಿದರೆ ಆಕೆಯು ಏಳು ದಿವಸ ನಾಚಿಕೊಳ್ಳುವದಿಲ್ಲವೋ? ಆಕೆಯು ಏಳು ದಿವಸ ಪಾಳೆಯದ ಹೊರಗೆ ಮರೆಯಾಗಿದ್ದು ತರುವಾಯ ಸೇರಿಸಲ್ಪಡಲಿ ಎಂದು ಹೇಳಿದನು. ಹಾಗೆಯೇ ಮಿರ್ಯಾಮಳನ್ನು ಪಾಳೆಯದ ಹೊರಗೆ ಏಳು ದಿವಸ ಮರೆಯಾಗಿಯಿಟ್ಟರು. ಮಿರ್ಯಾಮಳು ತಿರಿಗಿ ಒಳಗೆ ಬರುವ ವರೆಗೆ ಜನರು ಪ್ರಯಾಣ ಮಾಡಲಿಲ್ಲ.ತರುವಾಯ ಜನರು ಹಚೇರೋತಿನಿಂದ ಹೊರಟು ಪಾರಾನ್ ಅರಣ್ಯದಲ್ಲಿ ಇಳುಕೊಂಡರು.
- Numbers 5:1–4 ಅರಣ್ಯಕಾಂಡ 5:1–4ಇದಲ್ಲದೆ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- ಕುಷ್ಠವಿ ರುವವರೆಲ್ಲರನ್ನೂ ಮೇಹವುಳ್ಳವರೆಲ್ಲರನ್ನೂ ಹೆಣದಿಂದ ಅಶುದ್ಧವಾದವರೆಲ್ಲರನ್ನೂ ಪಾಳೆಯದೊಳಗಿಂದ ಕಳು ಹಿಸಬೇಕೆಂದು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸು. ಗಂಡಸನ್ನಾಗಲಿ ಹೆಂಗಸನ್ನಾಗಲಿ ನೀವು ಹೊರಗೆ ಕಳುಹಿಸಬೇಕು. ನಾನು ಅವರ ಮಧ್ಯದಲ್ಲಿ ವಾಸ ಮಾಡುವ ಪಾಳೆಯವನ್ನು ಅವರು ಅಶುದ್ಧ ಮಾಡದ ಹಾಗೆ ನೀವು ಅವರನ್ನು ಹೊರಗೆ ಕಳುಹಿಸಬೇಕು ಎಂಬದೇ. ಆಗ ಇಸ್ರಾಯೇಲ್ ಮಕ್ಕಳು ಹಾಗೆ ಮಾಡಿ ಅವರನ್ನು ಪಾಳೆಯದ ಹೊರಗೆ ಕಳುಹಿಸಿದರು. ಕರ್ತನು ಮೋಶೆಗೆ ಹೇಳಿದ ಹಾಗೆ ಇಸ್ರಾಯೇಲ್ ಮಕ್ಕಳು ಮಾಡಿದರು.
- 2 Thessalonians 3:14 2 ಥೆಸಲೊನೀಕದವರಿಗೆ 3:14ಈ ಪತ್ರಿಕೆಯ ಮೂಲಕ ವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ವಿಧೇಯನಾಗದಿದ್ದರೆ ಅವನನ್ನು ಗುರುತು ಇಟ್ಟು ಕೊಂಡು ಅವನಿಗೆ ನಾಚಿಕೆಯಾಗುವಂತೆ ಅವನ ಸಹವಾಸದಲ್ಲಿ ಸೇರಬೇಡಿರಿ.
- Revelation 21:27 ಪ್ರಕಟನೆ 21:27ಅದರಲ್ಲಿ ಹೊಲೆ ಮಾಡುವಂಥದ್ದು ಯಾವದೂ ಸೇರುವದಿಲ್ಲ. ಅಸಹ್ಯವಾದದ್ದನ್ನೂ ಸುಳ್ಳಾದದ್ದನ್ನೂ ನಡಿಸುವವನು ಅಲ್ಲಿ ಸೇರುವದಿಲ್ಲ. ಆದರೆ ಕುರಿಮರಿಯಾದಾತನ ಜೀವಗ್ರಂಥದಲ್ಲಿ ಬರೆಯಲ್ಪಟ್ಟವರು ಮಾತ್ರ ಸೇರುವರು.
- Revelation 22:15 ಪ್ರಕಟನೆ 22:15ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆ ಗಾರರೂ ವಿಗ್ರಹಾರಾಧಕರೂ ಸುಳ್ಳಾದದ್ದನ್ನು ಪ್ರೀತಿಸಿ ನಡಿಸುವವರೆಲ್ಲರೂ ಹೊರಗಿರುವರು ಎಂದು ಹೇಳಿದನು.
- 1 Timothy 6:5 1 ತಿಮೊಥೆಯನಿಗೆ 6:5ಇದ್ದಲ್ಲದೆ ಬುದ್ದಿಗೆಟ್ಟು ಸತ್ಯವಿಹೀನರಾಗಿದ್ದು ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ವ್ಯರ್ಥ ವಾದ ವಿವಾದಗಳು ಉಂಟಾಗುತ್ತವೆ. ಇಂಥವರಿಂದ ದೂರವಾಗಿರ್ರಿ.
- 1 Corinthians 5:5 1 ಕೊರಿಂಥದವರಿಗೆ 5:5ಕರ್ತನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯ ದಿನದಲ್ಲಿ ಅಂಥವನ ಆತ್ಮವು ರಕ್ಷಣೆ ಹೊಂದುವದಕ್ಕಾಗಿ ಅವನ ಶರೀರವು ನಾಶವಾಗ ಬೇಕೆಂದು ನಮ್ಮ ಕರ್ತನಾದ ಯೇಸುವಿನ ಹೆಸರಿನಲ್ಲಿ ಅವನನ್ನು ಸೈತಾನನಿಗೆ ಒಪ್ಪಿಸಿಕೊಡಬೇಕೆಂಬದೇ.
- 1 Corinthians 5:9–13 1 ಕೊರಿಂಥದವರಿಗೆ 5:9–13ಜಾರರ ಸಹವಾಸವನ್ನು ಮಾಡಬಾರದೆಂದು ಒಂದು ಪತ್ರಿಕೆಯಲ್ಲಿ ನಿಮಗೆ ಬರೆದಿದ್ದೆನು. ಈ ಲೋಕದಲ್ಲಿರುವ ಜಾರರು, ಲೋಭಿಗಳು, ಸುಲು ಕೊಳ್ಳುವವರು, ವಿಗ್ರಹಾರಾಧಕರು ಇವರನ್ನು ಬಿಟ್ಟು ಬಿಡಬೇಕೆಂದು ನನ್ನ ತಾತ್ವರ್ಯವಲ್ಲ; ಹಾಗೆ ಬಿಡ ಬೇಕಾದರೆ ನೀವು ಈ ಲೋಕವನ್ನೇ ಬಿಟ್ಟು ಹೋಗ ಬೇಕಾಗುವದು. ಆದರೆ ಸಹೋದರ ನೆನಿಸಿಕೊಂಡ ವನು ಜಾರನಾದರೂ ಲೋಭಿಯಾದರೂ ವಿಗ್ರಹಾ ರಾಧಕನಾದರೂ ಬೈಯುವವನಾದರೂ ಕುಡುಕ ನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅಂಥವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟ ಮಾಡಲೂಬಾರದು ಎಂದು ನಾನು ಈಗ ಬರೆದಿದ್ದೇನೆ. ಹೊರಗಿನವರಿಗೆ ಸಹ ತೀರ್ಪು ಮಾಡುವದಕ್ಕೆ ನನಗೇನಿದೆ? ಒಳಗಿನವರಿಗೆ ತೀರ್ಪು ಮಾಡುವವರು ನೀವೇ ಅಲ್ಲವೇ?ಹೊರಗಿನವರಿಗೆ ತೀರ್ಪುಮಾಡುವಾತನು ದೇವರು. ಆದದರಿಂದ ಆ ದುಷ್ಟನನ್ನು ನಿಮ್ಮ ಮಧ್ಯದಿಂದ ಹೊರಗೆ ಹಾಕಿರಿ. ಹೊರಗಿನವರಿಗೆ ತೀರ್ಪುಮಾಡುವಾತನು ದೇವರು. ಆದದರಿಂದ ಆ ದುಷ್ಟನನ್ನು ನಿಮ್ಮ ಮಧ್ಯದಿಂದ ಹೊರಗೆ ಹಾಕಿರಿ.
- Lamentations 1:8 ಪ್ರಲಾಪಗಳು 1:8ಯೆರೂಸ ಲೇಮು ಘೋರವಾಗಿ ಪಾಪಮಾಡಿದೆ; ಆದದರಿಂದ ಅವಳು ತೆಗೆದುಹಾಕಲ್ಪಟ್ಟಿದ್ದಾಳೆ; ಅವಳನ್ನು ಸನ್ಮಾನಿಸಿ ದವರೆಲ್ಲರೂ ಅವಳನ್ನು ಹೀನೈಸುತ್ತಾರೆ; ಅವರು ಅವಳ ಬೆತ್ತಲೆತನವನ್ನು ನೋಡಿದ್ದಾರೆ; ಹೌದು, ಅವಳು ನಿಟ್ಟುಸಿರಿಟ್ಟು ಹಿಂದಕ್ಕೆ ತಿರುಗುತ್ತಾಳೆ.