Leviticus · chapter 17 · verse 6
Leviticus 17:6 in Kannada
ಯಾಜಕನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಯಜ್ಞವೇದಿಯ ಮೇಲೆ ರಕ್ತವನ್ನು ಚಿಮುಕಿಸಬೇಕು. ಕೊಬ್ಬನ್ನು ಕರ್ತನಿಗೆ ಸುಗಂಧವಾಸನೆಯಾಗಿ ಸುಡಬೇಕು.
Yaajakanu sabheya gudaarada baagila baliyalli kartana yajnyavediya mele raktavannu chimukisabeku. Kobbannu kartanige sugandhavaasaneyaagi sudabeku.
Leviticus 17:6 in English
- King James Version (KJV)
- And the priest shall sprinkle the blood upon the altar of the LORD [at] the door of the tabernacle of the congregation, and burn the fat for a sweet savour unto the LORD.
- World English Bible (WEB)
- The priest shall sprinkle the blood on the LORD’s altar at the door of the Tent of Meeting, and burn the fat for a pleasant aroma to the LORD.
- American Standard Version (ASV)
- And the priest shall sprinkle the blood upon the altar of Jehovah at the door of the tent of meeting, and burn the fat for a sweet savor unto Jehovah.
- Bible in Basic English (BBE)
- And the priest will put blood on the altar of the Lord at the door of the Tent of meeting, burning the fat for a sweet smell to the Lord.
- Darby Translation (DBY)
- And the priest shall sprinkle the blood upon the altar of Jehovah, at the entrance of the tent of meeting, and burn the fat for a sweet odour to Jehovah.
- Webster's Bible (WBS)
- And the priest shall sprinkle the blood upon the altar of the LORD [at] the door of the tabernacle of the congregation, and burn the fat for a sweet savor to the LORD.
- Young's Literal Translation (YLT)
- 'And the priest hath sprinkled the blood upon the altar of Jehovah, at the opening of the tent of meeting, and hath made perfume with the fat for sweet fragrance to Jehovah;
Read in context
- 4ಕರ್ತನಿಗೆ ಸಮರ್ಪಿಸುವ ಬಲಿಯಾಗಿ ಕರ್ತನ ಸನ್ನಿಧಿಯಲ್ಲಿರುವ ಸಭೆಯ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ ಆ ಮನುಷ್ಯನ ಮೇಲೆ ರಕ್ತಾ ಪರಾಧವು ಹೊರಿಸಲ್ಪಡಬೇಕು; ಅವನು ರಕ್ತ ಸುರಿಸಿ ರುವನು; ಆ ಮನುಷ್ಯನು ತನ್ನ ಜನರ ಮಧ್ಯದೊ ಳಗಿಂದ ತೆಗೆದುಹಾಕಲ್ಪಡಬೇಕು.
- 5ಇಸ್ರಾಯೇಲ್ ಮಕ್ಕಳು ತಾವು ಬಯಲಿನಲ್ಲಿ ಸಮರ್ಪಿಸುವ ಬಲಿಗಳನ್ನು ಕರ್ತನಿಗೆ ಸಭೆಯ ಗುಡಾರದ ಬಾಗಿಲಿನ ಬಳಿಯಲ್ಲಿ ಯಾಜಕನ ಬಳಿಗೆ ತಂದು ಕರ್ತನಿಗೆ ಸಮಾಧಾನದ ಬಲಿಯಾಗಿ ಸಮರ್ಪಿಸಬೇಕು.
- 6ಯಾಜಕನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಯಜ್ಞವೇದಿಯ ಮೇಲೆ ರಕ್ತವನ್ನು ಚಿಮುಕಿಸಬೇಕು. ಕೊಬ್ಬನ್ನು ಕರ್ತನಿಗೆ ಸುಗಂಧವಾಸನೆಯಾಗಿ ಸುಡಬೇಕು.
- 7ಅವರು ಜಾರತ್ವ ಮಾಡುವಂತೆ ಯಾರ ಹಿಂದೆ ಹೋದರೋ ಆ ದೆವ್ವ ಗಳಿಗೆ ಇನ್ನೆಂದಿಗೂ ಅವರು ತಮ್ಮ ಯಜ್ಞಗಳನ್ನು ಸಮರ್ಪಿಸಬಾರದು. ಇದು ಅವರಿಗೆ ಅವರ ತಲ ತಲಾಂತರಗಳ ವರೆಗೆ ಶಾಶ್ವತವಾದ ನಿಯಮವಾಗಿ ರುವದು.
- 8ಇದಲ್ಲದೆ ನೀನು ಅವರಿಗೆ ಹೇಳಬೇಕಾದದ್ದೇ ನಂದರೆ--ಇಸ್ರಾಯೇಲಿನ ಮನೆತನದವರಲ್ಲಿ ಯಾವ ಮನುಷ್ಯನಾದರೂ ನಿಮ್ಮೊಳಗೆ ಪ್ರವಾಸಿಯರಾಗಿದ್ದ ಪರಕೀಯರು ದಹನಬಲಿಯನ್ನಾಗಲಿ ಯಜ್ಞಸಮ ರ್ಪಣೆಯನ್ನಾಗಲಿ ಅರ್ಪಿಸಿದರೆ
Cross references
- Numbers 18:17 ಅರಣ್ಯಕಾಂಡ 18:17ಆದರೆ ಪಶು ಕುರಿ ಮೇಕೆ ಇವುಗಳ ಚೊಚ್ಚಲನ್ನಾದರೂ ನೀನು ವಿಮೋಚಿಸಿಕೊಳ್ಳಬಾರದು; ಅವು ಪರಿಶುದ್ಧವಾಗಿವೆ; ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸ ಬೇಕು; ಅವುಗಳ ಕೊಬ್ಬನ್ನು ಕರ್ತನಿಗೆ ದಹನ ವಾಗಿಯೂ ಸುವಾಸನೆಗಾಗಿಯೂ ಸುಡಬೇಕು.
- Leviticus 3:2 ಯಾಜಕಕಾಂಡ 3:2ಅವನು ಸಮರ್ಪಿ ಸುವದರ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ಅದನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ವಧಿಸ ಬೇಕು; ಯಾಜಕರಾದ ಆರೋನನ ಕುಮಾರರು ಯಜ್ಞವೇದಿಯ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸ ಬೇಕು.
- Exodus 29:13 ವಿಮೋಚನಕಾಂಡ 29:13ನೀನು ಕರುಳುಗಳನ್ನೂ ಅವುಗಳ ಮೇಲೆ ಇರುವ ಎಲ್ಲಾ ಕೊಬ್ಬನ್ನೂ ಕಲಿಜದ ಮೇಲೆ ಬರುವ ಕೊಬ್ಬನ್ನೂ ಎರಡು ಮೂತ್ರಜನಕಾಂಗಗಳನ್ನೂ ಅವುಗಳ ಮೇಲೆ ಇರುವ ಕೊಬ್ಬನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಡಬೇಕು.
- Leviticus 3:16 ಯಾಜಕಕಾಂಡ 3:16ಯಾಜಕನು ಅವುಗಳನ್ನು ಯಜ್ಞವೇದಿಯ ಮೇಲೆ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಯಜ್ಞಾ ರ್ಪಣೆಯು ಸುವಾಸನೆಯ ಆಹಾರವಾಗಿರುವದು. ಎಲ್ಲಾ ಕೊಬ್ಬು ಕರ್ತನದೇ.ನೀವು ಕೊಬ್ಬನ್ನಾಗಲಿ ರಕ್ತವನ್ನಾಗಲಿ ತಿನ್ನದಂತೆ ಇದು ನಿಮ್ಮ ಸಂತತಿಯ ವರಿಗೆಲ್ಲಾ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವದು.
- Leviticus 3:11 ಯಾಜಕಕಾಂಡ 3:11ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಸುಡಬೇಕು; ಅದು ಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯ ಆಹಾರವಾಗಿರುತ್ತದೆ.
- Leviticus 4:31 ಯಾಜಕಕಾಂಡ 4:31ಅವನು ಸಮಾಧಾನ ಯಜ್ಞ ಸಮರ್ಪಣೆಯ ಕೊಬ್ಬನ್ನು ತೆಗೆದಂತೆ ಅದರ ಎಲ್ಲಾ ಕೊಬ್ಬನ್ನು ತೆಗೆಯ ಬೇಕು; ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಕರ್ತನಿಗೆ ಸುವಾಸನೆಯನ್ನಾಗಿ ಸುಡಬೇಕು; ಇದಲ್ಲದೆ ಯಾಜಕನು ಅವನಿಗಾಗಿ ಪ್ರಾಯಶ್ಚಿತ್ತಮಾಡ ಬೇಕು. ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
- Leviticus 3:13 ಯಾಜಕಕಾಂಡ 3:13ಅವನು ಅದರ ತಲೆಯ ಮೇಲೆ ತನ್ನ ಕೈಯನ್ನಿಟ್ಟು ಸಭೆಯ ಗುಡಾರದ ಮುಂದೆ ಅದನ್ನು ವಧಿಸಬೇಕು; ಆಗ ಆರೋನನ ಕುಮಾರರು ಅದರ ರಕ್ತವನ್ನು ಯಜ್ಞ ವೇದಿಯ ಸುತ್ತಲೂ ಚಿಮುಕಿಸಬೇಕು.
- Leviticus 3:5 ಯಾಜಕಕಾಂಡ 3:5ಆರೋನನ ಕುಮಾರರು ಅದನ್ನು ಯಜ್ಞವೇದಿಯಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನ ಬಲಿಯಾಗಿ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು ಕರ್ತನಿಗೆ ಸುವಾಸನೆಯಾಗಿರುವದು.
- Leviticus 3:8 ಯಾಜಕಕಾಂಡ 3:8ಅವನು ತನ್ನ ಅರ್ಪಣೆಯ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ಅದನ್ನು ಸಭೆಯ ಗುಡಾರದ ಎದುರಿನಲ್ಲಿ ವಧಿಸಬೇಕು. ಇದಲ್ಲದೆ ಆರೋನನ ಕುಮಾರರು ಯಜ್ಞವೇದಿಯ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸಬೇಕು.
- Exodus 29:18 ವಿಮೋಚನಕಾಂಡ 29:18ಆ ಟಗರನ್ನು ಯಜ್ಞವೇದಿಯ ಮೇಲೆ ಸುಡಬೇಕು, ಅದು ಕರ್ತನಿಗೆ ದಹನಬಲಿಯಾಗಿದೆ. ಅದು ಕರ್ತನಿಗೆ ಸುವಾಸನೆಯ ದಹನಬಲಿಯಾಗಿದೆ.