Leviticus · chapter 3 · verse 5
Leviticus 3:5 in Kannada
ಆರೋನನ ಕುಮಾರರು ಅದನ್ನು ಯಜ್ಞವೇದಿಯಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನ ಬಲಿಯಾಗಿ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು ಕರ್ತನಿಗೆ ಸುವಾಸನೆಯಾಗಿರುವದು.
Aaronana kumaararu adannu yajnyavediyalli benkiya meliruva kattigeya mele dahana baliyaagi sudabeku; adu benkiyinda maadida kaanikeyaagiddu kartanige suvaasaneyaagiruvadu.
Leviticus 3:5 in English
- King James Version (KJV)
- And Aaron’s sons shall burn it on the altar upon the burnt sacrifice, which [is] upon the wood that [is] on the fire: [it is] an offering made by fire, of a sweet savour unto the LORD.
- World English Bible (WEB)
- Aaron’s sons shall burn it on the altar on the burnt offering, which is on the wood that is on the fire: it is an offering made by fire, of a pleasant aroma to the LORD.
- American Standard Version (ASV)
- And Aaron’s sons shall burn it on the altar upon the burnt-offering, which is upon the wood that is on the fire: it is an offering made by fire, of a sweet savor unto Jehovah.
- Bible in Basic English (BBE)
- That it may be burned by Aaron's sons on the altar, on the burned offering which is on the wood on the fire: it is an offering made by fire of a sweet smell to the Lord.
- Darby Translation (DBY)
- and Aaron's sons shall burn it on the altar upon the burnt-offering which [lieth] on the wood that is upon the fire: [it is] an offering by fire to Jehovah of a sweet odour.
- Webster's Bible (WBS)
- And Aaron's sons shall burn it on the altar, upon the burnt-sacrifice which [is] upon the wood that [is] on the fire: [it is] an offering made by fire, of a sweet savor to the LORD.
- Young's Literal Translation (YLT)
- and sons of Aaron have made it a perfume on the altar, on the burnt-offering which [is] on the wood, which [is] on the fire — a fire-offering of sweet fragrance to Jehovah.
Read in context
- 3ಅವನು ಸಮಾಧಾನದ ಕಾಣಿಕೆಯ ಯಜ್ಞಾ ರ್ಪಣೆಯನ್ನು ಅಂದರೆ ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ
- 4ಎರಡು ಮೂತ್ರಜನಕಾಂಗಗಳನ್ನೂ ಪಕ್ಕೆಯ ಬದಿ ಯಲ್ಲಿ ಅವುಗಳ ಮೇಲಿರುವ ಕೊಬ್ಬನ್ನೂ ಮೂತ್ರಜನ ಕಾಂಗಗಳ ಮೇಲಿರುವ ಪೊರೆಯನ್ನೂ ಮೂತ್ರಜನ ಕಾಂಗಗಳೊಂದಿಗೆ ಅದನ್ನು ತೆಗೆದುಕೊಂಡು ಕರ್ತನಿಗೆ ಬೆಂಕಿಯಿಂದ ಕಾಣಿಕೆಯಾಗಿ ಸಮರ್ಪಿಸಬೇಕು.
- 5ಆರೋನನ ಕುಮಾರರು ಅದನ್ನು ಯಜ್ಞವೇದಿಯಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನ ಬಲಿಯಾಗಿ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು ಕರ್ತನಿಗೆ ಸುವಾಸನೆಯಾಗಿರುವದು.
- 6ಅವನ ಕಾಣಿಕೆಯು ಸಮಾಧಾನದ ಸಮರ್ಪಣೆಯ ಯಜ್ಞವಾಗಿ ಅದು ತನ್ನ ಹಿಂಡಿನಿಂದಾದ ಕಾಣಿಕೆ ಯಾಗಿದ್ದರೆ ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ದೋಷ ವಿಲ್ಲದ್ದಾಗಿ ಅದನ್ನು ಅವನು ಕರ್ತನಿಗೆ ಸಮರ್ಪಿಸಬೇಕು.
- 7ಅವನು ಕುರಿಮರಿಯನ್ನು ಅರ್ಪಣೆಗೋಸ್ಕರ ಅರ್ಪಿಸುವದಾದರೆ ಅದನ್ನು ಅವನು ಕರ್ತನ ಎದುರಿ ನಲ್ಲಿ ಸಮರ್ಪಿಸಬೇಕು.
Cross references
- Leviticus 6:12 ಯಾಜಕಕಾಂಡ 6:12ಯಜ್ಞವೇದಿಯ ಮೇಲಿನ ಬೆಂಕಿಯು ಅದರೊಳಗೆ ಸುಡುತ್ತಿರಬೇಕು; ಅದು ಉರಿಯುತ್ತಲೇ ಇರಬೇಕು. ಪ್ರತಿ ಮುಂಜಾನೆ ಯಾಜಕನು ಅದರ ಮೇಲೆ ಕಟ್ಟಿಗೆ ಯನ್ನು ಸುಡಬೇಕು ಮತ್ತು ದಹನಬಲಿಯನ್ನು ಅದರ ಮೇಲೆ ಕ್ರಮವಾಗಿ ಇಡಬೇಕು; ಇದಲ್ಲದೆ ಅವನು ಅದರ ಮೇಲೆ ಸಮಾಧಾನ ಯಜ್ಞಗಳ ಕೊಬ್ಬನ್ನು ಸುಡಬೇಕು.
- 1 Peter 2:5 1 ಪೇತ್ರನು 2:5ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮಸಂಬಂಧ ವಾದ ಮಂದಿರವಾಗುವದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ, ಮತ್ತು ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕ ವಾದ ಆತ್ಮೀಯ ಯಜ್ಞಗಳನ್ನು ಸಮರ್ಪಿಸುವದಕ್ಕೆ ಪವಿತ್ರ ಯಾಜಕ ವರ್ಗದವರಾಗಿದ್ದೀರಿ.
- Exodus 29:13 ವಿಮೋಚನಕಾಂಡ 29:13ನೀನು ಕರುಳುಗಳನ್ನೂ ಅವುಗಳ ಮೇಲೆ ಇರುವ ಎಲ್ಲಾ ಕೊಬ್ಬನ್ನೂ ಕಲಿಜದ ಮೇಲೆ ಬರುವ ಕೊಬ್ಬನ್ನೂ ಎರಡು ಮೂತ್ರಜನಕಾಂಗಗಳನ್ನೂ ಅವುಗಳ ಮೇಲೆ ಇರುವ ಕೊಬ್ಬನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಡಬೇಕು.
- 1 Kings 8:64 1 ಅರಸುಗಳು 8:64ಅದೇ ದಿನದಲ್ಲಿ ಅರಸನು ಕರ್ತನ ಮನೆಯ ಮಧ್ಯ ಅಂಗಳವನ್ನು ಪರಿಶುದ್ಧ ಮಾಡಿದನು. ಕರ್ತನ ಮುಂದಿರುವ ತಾಮ್ರದ ಬಲಿ ಪೀಠದ ಮೇಲೆ ದಹನ ಬಲಿಗಳನ್ನೂ ಕಾಣಿಕೆಗಳನ್ನೂ ಸಮಾಧಾನದ ಬಲಿಗಳ ಕೊಬ್ಬನ್ನೂ ಇಡುವದಕ್ಕೆ ಸ್ಥಳ ಸಾಲದೆ ಇದ್ದದರಿಂದ ಅಲ್ಲಿ ದಹನಬಲಿಗಳನ್ನೂ ಕಾಣಿಕೆಗಳನ್ನೂ ಸಮಾಧಾನದ ಬಲಿಗಳ ಕೊಬ್ಬನ್ನೂ ಅರ್ಪಿಸಿದನು.
- Ezekiel 44:15 ಯೆಹೆಜ್ಕೇಲನು 44:15ಆದರೆ ಇಸ್ರಾಯೇಲಿನ ಮಕ್ಕಳು ನನ್ನನ್ನು ಬಿಟ್ಟು ಹೋದಾಗ ನನ್ನ ಪರಿಶುದ್ಧ ಸ್ಥಳದ ಕಾಯಿದೆಯನ್ನು ಕೈಕೊಂಡ ಚಾದೋಕನ ಮಕ್ಕಳಾಗಿರುವ ಲೇವಿಯರಾದ ಯಾಜಕರೂ ಇವರು ನನಗೆ ಸೇವೆಮಾಡುವ ಹಾಗೆ ನನ್ನ ಸವಿಾಪಕ್ಕೆ ಬಂದು, ನನ್ನ ಮುಂದೆ ನಿಂತು, ನನಗೆ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವರೆಂದು ದೇವರಾದ ಕರ್ತನು ಹೇಳುತ್ತಾನೆ.
- 1 Samuel 2:15–16 1 ಸಮುವೇಲನು 2:15–16ಇದಲ್ಲದೆ ಕೊಬ್ಬನ್ನು ಸುಡುವದಕ್ಕಿಂತ ಮುಂಚೆ ಯಾಜಕನ ಸೇವಕನು ಬಂದು ಬಲಿಯನ್ನು ಅರ್ಪಿಸುವವನ ಸಂಗಡ--ಯಾಜಕನಿಗೆ ಸುಡುವದಕ್ಕೆ ಮಾಂಸವನ್ನು ಕೊಡು; ಯಾಕಂದರೆ ಅವನು ನಿನ್ನ ಕೈಯಿಂದ ಬೆಂದ ಮಾಂಸವನ್ನು ತಕ್ಕೊಳ್ಳು ವದಿಲ್ಲ; ಅದು ಹಸಿಮಾಂಸವೇ ಆಗಬೇಕು ಅನ್ನು ವನು. ಯಾವ ಮನುಷ್ಯನಾದರೂ ಅವನಿಗೆ--ಅವರು ದಿನವೆಲ್ಲಾ ಹಾಗೆ ಕೊಬ್ಬನ್ನು ಸುಡಲೇಬೇಕು. ತರುವಾಯ ನೀನು ನಿನ್ನ ಪ್ರಾಣದ ಇಚ್ಛೆಯ ಪ್ರಕಾರ ತೆಗೆದುಕೋ ಎಂದು ಹೇಳಿದರೆ ಅವನು--ಹಾಗಲ್ಲ, ಈಗಲೇ ಕೊಡು; ಇಲ್ಲದಿದ್ದರೆ ಬಲವಂತವಾಗಿ ತಕ್ಕೊಳ್ಳುವೆನು ಎಂದು ಅನ್ನುವನು.
- Leviticus 7:29–34 ಯಾಜಕಕಾಂಡ 7:29–34ಇಸ್ರಾಯೇಲ್ ಮಕ್ಕಳೊಂದಿಗೆ ಮಾತ ನಾಡಿ ಹೀಗೆ ಹೇಳು--ಕರ್ತನಿಗೆ ತನ್ನ ಯಜ್ಞದ ಸಮಾಧಾನ ಬಲಿಯನ್ನು ಅರ್ಪಿಸುವವನು ಯಜ್ಞದ ಸಮಾಧಾನ ಬಲಿಯ ತನ್ನ ಕಾಣಿಕೆಯನ್ನು ಕರ್ತನಿಗೆ ತರಬೇಕು. ಬೆಂಕಿಯಿಂದ ಮಾಡಿದ ಕರ್ತನ ಅರ್ಪಣೆ ಗಳನ್ನು ತನ್ನ ಸ್ವಂತ ಕೈಗಳಿಂದಲೇ ತರಬೇಕು. ಕರ್ತನ ಮುಂದೆ ಅಲ್ಲಾಡುವ ಸಮರ್ಪಣೆಗಾಗಿ ಎದೆಯು ಅಲ್ಲಾಡಿಸಲ್ಪಡುವಂತೆ ಕೊಬ್ಬಿನೊಂದಿಗೆ ಎದೆಯನ್ನು ತರಬೇಕು. ಯಾಜಕನು ಆ ಕೊಬ್ಬನ್ನು ಯಜ್ಞವೇದಿಯ ಮೇಲೆ ಸುಡಬೇಕು; ಆದರೆ ಎದೆಯು ಆರೋನನ ಮತ್ತು ಅವನ ಮಕ್ಕಳದ್ದಾಗಿರುವದು. ಬಲಭುಜವನ್ನು ನೀವು ಯಾಜಕನಿಗೆ ನಿಮ್ಮ ಸಮಾಧಾನದ ಯಜ್ಞಗಳ ಎತ್ತುವ ಸಮರ್ಪಣೆಗಾಗಿ ಕೊಡಬೇಕು. ಸಮಾ ಧಾನದ ಸಮರ್ಪಣೆಗಳ ರಕ್ತವನ್ನೂ ಕೊಬ್ಬನ್ನೂ ಸಮ ರ್ಪಿಸುವ ಆರೋನನ ಕುಮಾರರಲ್ಲಿ ಒಬ್ಬನು ಭುಜದ ಬಲಭಾಗವನ್ನು ತನ್ನ ಪಾಲಾಗಿ ತೆಗೆದುಕೊಳ್ಳಲಿ. ಆಡಿಸುವ ಎದೆಭಾಗವನ್ನು ಪ್ರತ್ಯೇಕವಾದ ಭುಜ ಭಾಗವನ್ನು ಇಸ್ರಾಯೇಲಿನ ಮಕ್ಕಳ ಸಮಾಧಾನದ ಸಮರ್ಪಣೆಗಳ ಯಜ್ಞಗಳಿಂದ ನಾನು ತೆಗೆದುಕೊಂಡು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲಿನ ಮಕ್ಕಳಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿ ಕೊಟ್ಟಿ ದ್ದೇನೆ.
- Leviticus 4:35 ಯಾಜಕಕಾಂಡ 4:35ಇದಲ್ಲದೆ ಸಮಾಧಾನ ಯಜ್ಞ ಸಮರ್ಪಣೆಗಳ ಕುರಿಮರಿಯ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನೂ ತೆಗೆಯಬೇಕು; ಯಾಜಕನು ಬೆಂಕಿಯ ಸಮರ್ಪಣೆಗಳನ್ನು ಕರ್ತನಿಗೆ ಮಾಡಿ ದಂತೆಯೇ ಯಜ್ಞವೇದಿಯ ಮೇಲೆ ಅವುಗಳನ್ನು ಸುಡ ಬೇಕು; ಅವನು ಮಾಡಿದ ಪಾಪಕ್ಕೆ ಯಾಜಕನು ಪ್ರಾಯಶ್ಚಿತ್ತ ಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
- Leviticus 4:31 ಯಾಜಕಕಾಂಡ 4:31ಅವನು ಸಮಾಧಾನ ಯಜ್ಞ ಸಮರ್ಪಣೆಯ ಕೊಬ್ಬನ್ನು ತೆಗೆದಂತೆ ಅದರ ಎಲ್ಲಾ ಕೊಬ್ಬನ್ನು ತೆಗೆಯ ಬೇಕು; ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಕರ್ತನಿಗೆ ಸುವಾಸನೆಯನ್ನಾಗಿ ಸುಡಬೇಕು; ಇದಲ್ಲದೆ ಯಾಜಕನು ಅವನಿಗಾಗಿ ಪ್ರಾಯಶ್ಚಿತ್ತಮಾಡ ಬೇಕು. ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
- Ezekiel 44:7 ಯೆಹೆಜ್ಕೇಲನು 44:7ಅವು ಗಳಲ್ಲಿ ನೀವು ನನ್ನ ರೊಟ್ಟಿಯನ್ನೂ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವಾಗ ನಿಮ್ಮ ಎಲ್ಲಾ ಅಸಹ್ಯಗಳಿ ಗೋಸ್ಕರ ನನ್ನ ಒಡಂಬಡಿಕೆಯನ್ನು ವಿಾರುವಂಥ ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿ ಯಿಲ್ಲದಂಥ ಪರಕೀಯರನ್ನು ನನ್ನ ಪರಿಶುದ್ಧಸ್ಥಳಕ್ಕೆ ಕರೆತಂದು ನನ್ನ ಆಲಯವನ್ನು ಅಪವಿತ್ರಪಡಿಸಿದಿರಿ;
- Leviticus 1:9 ಯಾಜಕಕಾಂಡ 1:9ಅದರ ಕರುಳುಗಳನ್ನೂ ಕಾಲುಗಳನ್ನೂ ಅವನು ನೀರಿನಲ್ಲಿ ತೊಳೆಯಬೇಕು; ಯಾಜಕನು ಎಲ್ಲವನ್ನೂ ಯಜ್ಞವೇದಿಯ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ ಕರ್ತನಿಗೆ ಸುವಾಸನೆಯಾಗು ವಂತೆಯೂ ಸುಡಬೇಕು.
- 2 Chronicles 35:14 2 ಪೂರ್ವಕಾಲವೃತ್ತಾಂತ 35:14ತರುವಾಯ ತಮಗೋಸ್ಕ ರವೂ ಯಾಜಕರಿಗೋಸ್ಕರವೂ ಸಿದ್ಧಮಾಡಿದರು. ಯಾಕಂದರೆ ಆರೋನನ ಮಕ್ಕಳಾದ ಯಾಜಕರು ರಾತ್ರಿಯ ಪರ್ಯಂತರ ದಹನ ಬಲಿಗಳನ್ನೂ ಕೊಬ್ಬನ್ನೂ ಅರ್ಪಿಸುವದರಲ್ಲಿದ್ದರು. ಆದದರಿಂದ ಲೇವಿಯರು ತಮಗೋಸ್ಕರವೂ ಆರೋನನ ಮಕ್ಕಳಾದ ಯಾಜಕರಿ ಗೋಸ್ಕರವೂ ಸಿದ್ಧಮಾಡಿದರು.