Leviticus · chapter 20 · verse 25
Leviticus 20:25 in Kannada
ಆದದರಿಂದ ನೀವು ಶುದ್ಧವಾದ ಮತ್ತು ಅಶುದ್ಧವಾದ ಪಶುಗಳ ಮಧ್ಯದಲ್ಲಿಯೂ ಅಶುದ್ಧವಾದ ಮತ್ತು ಶುದ್ಧವಾದ ಪಕ್ಷಿಗಳ ಮಧ್ಯದಲ್ಲಿಯೂ ವ್ಯತ್ಯಾಸ ಮಾಡಬೇಕು. ಇದಲ್ಲದೆ ನಾನು ನಿಮ್ಮಿಂದ ಪ್ರತ್ಯೇಕಿಸಿದ ಅಶುದ್ಧವಾದ ಪಶುಗಳಿಂದಲೂ ಪಕ್ಷಿಗಳಿಂದಲೂ ಭೂಮಿಯ ಮೇಲೆ ಚಲಿಸುವ ಯಾವ ತರವಾದ ಜೀವಿಯಿಂದಲೂ ನೀವು ನಿಮ್ಮನ್ನು ಅಶುದ್ಧಮಾಡಿ ಕೊಳ್ಳಬಾರದು.
Aadadarinda neevu shuddhavaada mattu ashuddhavaada pashugala madhyadalliyoo ashuddhavaada mattu shuddhavaada pakshigala madhyadalliyoo vyatyaasa maadabeku. Idallade naanu nimminda pratyekisida ashuddhavaada pashugalindaloo pakshigalindaloo bhoomiya mele chalisuva yaava taravaada jeeviyindaloo neevu nimmannu ashuddhamaadi kollabaaradu.
Leviticus 20:25 in English
- King James Version (KJV)
- Ye shall therefore put difference between clean beasts and unclean, and between unclean fowls and clean: and ye shall not make your souls abominable by beast, or by fowl, or by any manner of living thing that creepeth on the ground, which I have separated from you as unclean.
- World English Bible (WEB)
- “‘You shall therefore make a distinction between the clean animal and the unclean, and between the unclean fowl and the clean. You shall not make yourselves abominable by animal, or by bird, or by anything with which the ground teems, which I have separated from you as unclean for you.
- American Standard Version (ASV)
- Ye shall therefore make a distinction between the clean beast and the unclean, and between the unclean fowl and the clean: and ye shall not make your souls abominable by beast, or by bird, or by anything wherewith the ground teemeth, which I have separated from you as unclean.
- Bible in Basic English (BBE)
- So then, make division between the clean beast and the unclean, and between the clean bird and the unclean: do not make yourselves disgusting by any beast or bird or anything which goes flat on the earth, which has been marked by me as unclean for you.
- Darby Translation (DBY)
- And ye shall make a separation between the clean beast and the unclean, and between the unclean fowl and the clean, and ye shall not make yourselves an abomination by beast, or by fowl, or by anything that creepeth on the ground which I have separated for you, declaring [it] as unclean.
- Webster's Bible (WBS)
- Ye shall therefore distinguish between clean beasts and unclean, and between unclean fowls and clean: and ye shall not make your souls abominable by beast or by fowl, or by any manner of living animal that creepeth on the ground, which I have separated from you as unclean.
- Young's Literal Translation (YLT)
- 'And ye have made separation between the pure beasts and the unclean, and between the unclean fowl and the pure, and ye do not make yourselves abominable by beast or by fowl, or by anything which creepeth [on] the ground which I have separated to you for unclean;
Read in context
- 23ನಾನು ನಿಮ್ಮೆದುರಿನಲ್ಲಿಯೇ ಹೊರಗೆ ಹಾಕಿದ ಜನಾಂಗಗಳಂತೆ ನೀವು ನಡೆಯಬಾರದು; ಅವರು ಇಂಥವುಗಳನ್ನೆಲ್ಲಾ ಮಾಡಿದ್ದಾರೆ; ಆದಕಾರಣ ನಾನು ಅವರನ್ನು ಅಸಹ್ಯಿಸಿಕೊಂಡಿದ್ದೇನೆ.
- 24ನಾನು ನಿಮಗೆ ಹೇಳಿದ್ದೇನಂದರೆ--ನೀವು ಅವರ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವಿರಿ. ಹಾಲೂ ಜೇನೂ ಹರಿಯುವ ಆ ದೇಶವನ್ನು ನೀವು ಸ್ವಾಧೀನಪಡಿಸಿಕೊಳ್ಳುವಂತೆ ನಾನು ಅದನ್ನು ನಿಮಗೆ ಕೊಡುತ್ತೇನೆ. ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಪಡಿಸಿದಂಥ ನಿಮ್ಮ ದೇವರಾಗಿರುವ ಕರ್ತನು ನಾನೇ.
- 25ಆದದರಿಂದ ನೀವು ಶುದ್ಧವಾದ ಮತ್ತು ಅಶುದ್ಧವಾದ ಪಶುಗಳ ಮಧ್ಯದಲ್ಲಿಯೂ ಅಶುದ್ಧವಾದ ಮತ್ತು ಶುದ್ಧವಾದ ಪಕ್ಷಿಗಳ ಮಧ್ಯದಲ್ಲಿಯೂ ವ್ಯತ್ಯಾಸ ಮಾಡಬೇಕು. ಇದಲ್ಲದೆ ನಾನು ನಿಮ್ಮಿಂದ ಪ್ರತ್ಯೇಕಿಸಿದ ಅಶುದ್ಧವಾದ ಪಶುಗಳಿಂದಲೂ ಪಕ್ಷಿಗಳಿಂದಲೂ ಭೂಮಿಯ ಮೇಲೆ ಚಲಿಸುವ ಯಾವ ತರವಾದ ಜೀವಿಯಿಂದಲೂ ನೀವು ನಿಮ್ಮನ್ನು ಅಶುದ್ಧಮಾಡಿ ಕೊಳ್ಳಬಾರದು.
- 26ನೀವು ನನ್ನವರಾಗಿರುವಂತೆ ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಿಸಿದ್ದ ಕರ್ತನಾದ ನಾನು ಪರಿಶುದ್ಧನಾಗಿರುವದರಿಂದ ನೀವು ನನಗೆ ಪರಿಶುದ್ಧ ರಾಗಿರಬೇಕು.ಮನುಷ್ಯನಾಗಲಿ ಸ್ತ್ರೀಯಾಗಲಿ ಮಂತ್ರವಾದಿ ಇಲ್ಲವೆ ಮಾಟಗಾರರಾಗಿರುವದಾಗಿದ್ದರೆ ಅವರನ್ನು ನಿಶ್ಚಯವಾಗಿ ಕಲ್ಲೆಸೆದು ಕೊಲ್ಲಬೇಕು; ಅವರ ರಕ್ತವು ಅವರ ಮೇಲೆ ಇರುವದು.
- 27ಮನುಷ್ಯನಾಗಲಿ ಸ್ತ್ರೀಯಾಗಲಿ ಮಂತ್ರವಾದಿ ಇಲ್ಲವೆ ಮಾಟಗಾರರಾಗಿರುವದಾಗಿದ್ದರೆ ಅವರನ್ನು ನಿಶ್ಚಯವಾಗಿ ಕಲ್ಲೆಸೆದು ಕೊಲ್ಲಬೇಕು; ಅವರ ರಕ್ತವು ಅವರ ಮೇಲೆ ಇರುವದು.
Cross references
- Leviticus 11:1–47 ಯಾಜಕಕಾಂಡ 11:1–47ಕರ್ತನು ಮೋಶೆ ಆರೋನರೊಂದಿಗೆ ಮಾತನಾಡಿ ಅವರಿಗೆ ಹೇಳಿದ್ದೇನಂದರೆ ಇಸ್ರಾಯೇಲನ ಮಕ್ಕಳೊಂದಿಗೆ ಮಾತನಾಡಿ ಹೀಗೆ ಹೇಳಬೇಕು--ಭೂಮಿಯ ಮೇಲೆ ಇರುವ ಎಲ್ಲಾ ಪಶುಗಳಲ್ಲಿ ನೀವು ತಿನ್ನಬೇಕಾದವುಗಳು ಇವೇ: ಪಶುಗಳಲ್ಲಿ ಕಾಲ್ಗೊರಸು ಸೀಳಿದ್ದಾಗಿದ್ದು ಮೇವನ್ನು ಮೆಲುಕಾಡಿಸುವದನ್ನು ನೀವು ತಿನ್ನಬೇಕು. ಮೇವನ್ನು ಮೆಲುಕಾಡಿಸದ ಇಲ್ಲವೆ ಗೊರಸು ಸೀಳದಿರುವ ಯಾವದನ್ನೂ ನೀವು ತಿನ್ನಬಾರದು. ಒಂಟೆಯು ಮೇವನ್ನು ಮೆಲುಕಾಡಿಸುವದಾದರೂ ಗೊರಸು ಸೀಳಲ್ಪಟ್ಟಿಲ್ಲ, ಅದು ನಿಮಗೆ ಅಶುದ್ಧವಾಗಿದೆ. ಬೆಟ್ಟದ ಮೊಲವು ಮೇವನ್ನು ಮೆಲುಕು ಹಾಕುವದಾದರೂ ಅದರ ಗೊರಸು ಸೀಳಲ್ಪಟ್ಟಿಲ್ಲ, ಅದು ನಿಮಗೆ ಅಶುದ್ಧ ವಾಗಿರುವದು. ಮೊಲವು ಮೆಲುಕು ಹಾಕುವ ದಾದರೂ ಅದರ ಗೊರಸು ಸೀಳಲ್ಪಟ್ಟಿಲ್ಲ, ಅದು ನಿಮಗೆ ಅಶುದ್ಧವಾಗಿರುವದು. ಹಂದಿಯ ಗೊರಸು ಸೀಳಲ್ಪಟ್ಟಿದ್ದರೂ ಅದು ಮೇವನ್ನು ಮೆಲುಕು ಹಾಕು ವದಿಲ್ಲ; ಅದು ನಿಮಗೆ ಅಶುದ್ಧವಾಗಿರುವದು. ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಶವಗಳನ್ನು ನೀವು ಮುಟ್ಟಬಾರದು; ಅವು ನಿಮಗೆ ಅಶುದ್ಧವಾಗಿವೆ. ನೀರೊಳಗಿರುವ ಇವುಗಳನ್ನು ನೀವು ತಿನ್ನಬಹುದು: ಸಮುದ್ರದಲ್ಲಿಯೂ ನದಿಯಲ್ಲಿರುವ ನೀರಿನಲ್ಲಿಯೂ ಈಜು ರೆಕ್ಕೆಗಳ್ಳಿದ್ದು ಪೊರೆಯಿರುವವುಗಳನ್ನು ತಿನ್ನಬೇಕು. ಸಮುದ್ರಗಳಲ್ಲಿಯೂ ನದಿಗಳಲ್ಲಿಯೂ ನೀರೊಳಗೆ ಚಲಿಸುವವುಗಳಾಗಿದ್ದು ಮತ್ತು ಜೀವಿಸುವ ಎಲ್ಲವುಗಳಲ್ಲಿ ಈಜು ರೆಕ್ಕೆಯೂ ಪೊರೆಯಿಲ್ಲದವುಗಳೂ ನಿಮಗೆ ಅಶುದ್ಧವಾಗಿರುವವು. ಅವು ನಿಮಗೆ ಅಶುದ್ಧ ವಾಗಿಯೇ ಇರುವವು; ನೀವು ಅವುಗಳ ಮಾಂಸವನ್ನು ತಿನ್ನಬಾರದು, ಅವುಗಳ ಶವಗಳು ನಿಮಗೆ ಅಶುದ್ಧ ವಾಗಿರಬೇಕು. ನೀರಲ್ಲಿ ಯಾವದಕ್ಕೆ ಈಜು ರೆಕ್ಕೆಯೂ ಪೊರೆಗಳೂ ಇಲ್ಲವೊ ಅವು ನಿಮಗೆ ಅಶುದ್ಧ ವಾಗಿರುವವು. ಪಕ್ಷಿಗಳೊಳಗೆ ನಿಮಗೆ ಅಶುದ್ಧವಾಗಿರುವವುಗಳು ಇವೇ; ಇವುಗಳನ್ನು ನೀವು ತಿನ್ನಬಾರದು, ಇವು ನಿಮಗೆ ಅಶುದ್ಧ: ಹದ್ದು, ಕಡಲ ಹದ್ದು, ವಿಾನು ತಿನ್ನುವ ದೊಡ್ಡ ಜಾತಿಯ ಪಕ್ಷಿ, ರಣಹದ್ದು, ಅದರ ಜಾತಿಯ ಹದ್ದು; ಅದರ ಜಾತಿಗನುಸಾರವಾದ ಪ್ರತಿಯೊಂದು ಕಾಗೆ, ಗೂಬೆ, ಗಿಡುಗ, ಕೋಗಿಲೆ, ಅದರ ಪ್ರತಿಯೊಂದು ಜಾತಿಯ ಗಿಡುಗ, ಸಣ್ಣ ಗೂಬೆ, ಹೊಟ್ಟೆ ಬಾಕ ಪಕ್ಷಿ ಮತ್ತು ಹೆಗ್ಗೂಬೆ; ಇದಲ್ಲದೆ ಹಂಸ, ನೀರು ಕೋಳಿ, ರಣಹದ್ದು, ಕೊಕ್ಕರೆ, ಬಕ, ಬಾವಲಿ, ಕಣ್ಣ ಕಪಡಿ. ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳೆಲ್ಲವೂ ನಿಮಗೆ ಹೇಯವಾಗಿರಬೇಕು. ಆದರೆ ಕಾಲುಳ್ಳ ಯಾವ ಕ್ರಿಮಿಕೀಟಗಳಿಗೆ ನೆಲದ ಮೇಲೆ ಹಾರುವದಕ್ಕೋಸ್ಕರ ಮುದುರಿಕೊಂಡಿರುವ ತೊಡೆಗಳು ಇರುತ್ತವೆಯೋ ಅವುಗಳನ್ನು ನೀವು ತಿನ್ನ ಬಹುದು. ಅವುಗಳ ಜಾತಿಗನುಸಾರವಾಗಿ ಮಿಡತೆಗಳನ್ನೂ ಬೋಳುಮಿಡತೆಗಳನ್ನೂ ಜಿಟ್ಟೆಮಿಡತೆಗಳನ್ನೂ ಸಣ್ಣ ಮಿಡಿತೆಗಳನ್ನೂ ತಿನ್ನಬಹುದು. ಆದರೆ ನಾಲ್ಕು ಪಾದಗಳುಳ್ಳ ಎಲ್ಲಾ ಹಾರಾಡುವ, ಹರಿದಾಡುವ ಬೇರೆಯವುಗಳೆಲ್ಲಾ ನಿಮಗೆ ಅಶುದ್ಧವಾಗಿರುವವು. ಇವುಗಳು ನಿಮಗೆ ಅಶುದ್ಧವಾಗಿರುವವು. ಅವುಗಳ ಶವಗಳನ್ನು ಮುಟ್ಟುವವನು ಸಾಯಂಕಾಲದ ವರೆಗೂ ಅಶುದ್ಧನಾಗಿರುವನು. ಯಾವನಾದರೂ ಅವುಗಳ ಶವವನ್ನು ಹೊತ್ತರೆ ತನ್ನ ಬಟ್ಟೆಗಳನ್ನು ಒಗೆಸಿಕೊಂಡು ಸಾಯಂಕಾಲದ ವರೆಗೂ ಅಶುದ್ಧನಾಗಿರುವನು. ಗೊರಸು ಸೀಳದೆಯೂ ನಖವು ಇಗ್ಗೊರಸಾಗಿರ ದೆಯೂ ಮೆಲಕು ಹಾಕದೆಯೂ ಇರುವ ಪ್ರತಿಯೊಂದು ಮೃಗದ ಶವವು ನಿಮಗೆ ಅಶುದ್ಧವಾಗಿರುವದು. ಅದನ್ನು ಮುಟ್ಟಿದ ಪ್ರತಿಯೊಬ್ಬನೂ ಅಶುದ್ಧನಾಗಿರುವನು. ನಾಲ್ಕು ಕಾಲುಗಳ ಮೇಲೆ ಹೋಗುವ ಎಲ್ಲಾ ಬಗೆಯ ಮೃಗಗಳಲ್ಲಿ ಅಂಗಾಲಿನ ಮೇಲೆ ಹೋಗುವ ದೆಲ್ಲವೂ ನಿಮಗೆ ಅಶುದ್ಧವಾಗಿರುವವು, ಯಾವನಾ ದರೂ ಅವುಗಳ ಶವವನ್ನು ಮುಟ್ಟಿದರೆ ಅವನು ಸಂಜೆಯ ವರೆಗೂ ಅಶುದ್ಧನಾಗಿರುವನು. ಅವುಗಳ ಶವವನ್ನು ಹೊರುವವನು ತನ್ನ ಬಟ್ಟೆಗಳನ್ನು ಒಗೆದು ಕೊಳ್ಳಬೇಕು. ಅವನು ಸಾಯಂಕಾಲದ ವರೆಗೂ ಅಶುದ್ಧ ನಾಗಿರುವನು; ಅವು ನಿಮಗೆ ಅಶುದ್ಧವಾದವುಗಳು. ಭೂಮಿಯ ಮೇಲೆ ಹರಿದಾಡುವವುಗಳಲ್ಲಿ ಮುಂಗುಲಿ, ಇಲಿ, ಅದರ ಜಾತಿಗನುಸಾರವಾದ ಆಮೆ, ಅರೆ ಪಳಗಿಸಿದ ಪ್ರಾಣಿ, ಊಸುರುವಳ್ಳಿ, ಹಲ್ಲಿ, ಬಸವನಹುಳ ಮತ್ತು ಚಿಟ್ಟಿಲಿ ಇವು ಸಹ ನಿಮಗೆ ಅಶುದ್ಧವಾಗಿರುವವು. ಹರಿದಾಡುವವುಗಳೆಲ್ಲವು ಗಳಲ್ಲಿ ಇವು ನಿಮಗೆ ಅಶುದ್ಧವಾಗಿರುವವು: ಅವು ಸತ್ತಿರುವಾಗ ಅವುಗಳನ್ನು ಯಾವನಾದರೂ ಮುಟ್ಟಿದರೆ ಅವನು ಸಂಜೆಯ ವರೆಗೂ ಅಶುದ್ಧನಾಗಿರುವನು. ಅವು ಸತ್ತುಹೋಗಿ ಯಾವದರ ಮೇಲೆ ಬೀಳುವವೊ ಅವೆಲ್ಲಾ ಅಶುದ್ಧವಾಗಿರುವವು; ಅದು ಮರದ ಪಾತ್ರೆ ಯಾಗಲಿ ಉಡುಪಾಗಲಿ ಚರ್ಮವಾಗಲಿ ಚೀಲ ವಾಗಲಿ ಕೆಲಸಮಾಡುವ ಯಾವ ಸಾಮಾನಾಗಲಿ ಅದು ಏನೇ ಆಗಿರಲಿ ಸಾಯಂಕಾಲದ ವರೆಗೆ ನೀರಲ್ಲಿ ಇಡಲ್ಪಟ್ಟು ಅಶುದ್ಧವಾಗಿರುವದು; ತರುವಾಯ ಅದು ಶುದ್ಧವಾಗುವದು. ಪ್ರತಿಯೊಂದು ಮಣ್ಣಿನ ಪಾತ್ರೆ ಯೊಳಗೆ ಅವುಗಳಲ್ಲಿ ಯಾವದಾದರೂ ಬಿದ್ದರೆ, ಅದರಲ್ಲಿ ಏನಿದ್ದರೂ ಅಶುದ್ಧವಾಗುವದು ನೀವು ಅದನ್ನು ಒಡೆದುಹಾಕಬೇಕು. ತಿನ್ನುವ ಆಹಾರದ ಮೇಲೆ ಅಂಥ ನೀರು ಬಿದ್ದಿದ್ದರೆ ಅದು ಅಶುದ್ಧವಾಗಿರುವದು; ಅಂಥ ಪ್ರತಿ ಪಾತ್ರೆಯಲ್ಲಿ ಕುಡಿಯುವ ಎಲ್ಲಾ ಪಾನವೂ ಅಶುದ್ಧವಾಗಿರುವದು. ಅವುಗಳ ಹೆಣವು ಯಾವದರ ಮೇಲಾದರೂ ಬಿದ್ದರೆ ಅದು ಅಶುದ್ಧವಾಗಿರುವದು; ಅದು ಒಲೆಯಾಗಿರಲಿ, ಮಣ್ಣಿನ ಒಲೆಯಾಗಿರಲಿ ಒಡೆದು ಹಾಕಲ್ಪಡಬೇಕು, ಅವು ಅಶುದ್ಧವಾಗಿವೆ; ಅವು ನಿಮಗೆ ಅಶುದ್ಧವಾಗಿರುವವು. ಆದಾಗ್ಯೂ ನೀರು ಹೆಚ್ಚಾಗಿರುವ ಬುಗ್ಗೆಯಾಗಲಿ ಹಳ್ಳವಾಗಲಿ ಶುದ್ಧವಾಗಿರುವದು; ಆದರೆ ಅವುಗಳ ಶವಗಳನ್ನು ಮುಟ್ಟಿದ್ದು ಅಶುದ್ಧವಾಗಿರುವದು. ಅವುಗಳ ಶವದಲ್ಲಿ ಯಾವ ಭಾಗವಾದರೂ ಬಿತ್ತುವ ಬೀಜದಲ್ಲಿ ಬಿದ್ದರೆ ಅದು ಶುದ್ಧವಾಗಿರುವದು. ಮೂತ್ರಜನಕಾಂಗದ ಮೇಲೆ ಯಾವದಾದರೂ ನೀರು ಬಿದ್ದು ಅವುಗಳ ಶವದ ಯಾವ ಭಾಗವಾದರೂ ಅದರಲ್ಲಿ ಬಿದ್ದರೆ ಅದು ನಿಮಗೆ ಅಶುದ್ಧವಾಗಿರುವದು. ನೀವು ತಿನ್ನುವ ಯಾವದಾದರೂ ಪಶುವು ಸತ್ತಿದ್ದರೆ ಅದರ ಶವವನ್ನು ಮುಟ್ಟಿದವನು ಸಂಜೆಯ ವರೆಗೆ ಅಶುದ್ಧನಾಗಿರುವನು. ಅದರ ಶವವನ್ನು ತಿನ್ನುವವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವನು ಸಂಜೆಯ ವರೆಗೆ ಅಶುದ್ಧನಾಗಿರುವನು: ಅದರ ಶವವನ್ನು ಹೊರುವವನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಅವನು ಸಂಜೆಯ ವರೆಗೆ ಅಶುದ್ಧನಾಗಿರುವನು. ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯೂ ಅಶುದ್ಧವಾಗಿದೆ; ಅದನ್ನು ತಿನ್ನಬಾರದು. ಹೊಟ್ಟೆಯಿಂದ ಹರಿದಾಡುವ ಯಾವದನ್ನೂ ನಾಲ್ಕು ಕಾಲಿನ ಮೇಲೆ ನಡೆದಾಡುವ ಯಾವದನ್ನೂ ಇಲ್ಲವೆ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳಲ್ಲಿ ಬಹಳ ಕಾಲುಗಳಿದ್ದ ಯಾವದನ್ನಾದರೂ ನೀವು ತಿನ್ನ ಬಾರದು; ಅವು ಅಶುದ್ಧವಾಗಿವೆ. ಯಾವದೇ ಹರಿದಾಡುವ ಪ್ರಾಣಿಯೊಡನೆಯೂ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬಾರದು ಇಲ್ಲವೆ ನೀವು ಅವುಗಳೊಂದಿಗೆ ನಿಮ್ಮನ್ನು ಅಶುದ್ಧಪಡಿಸಿಕೊಂಡು ಮಲಿನರಾಗಬಾರದು. ಯಾಕಂದರೆ ನಾನೇ ನಿಮ್ಮ ದೇವರಾದ ಕರ್ತನು. ಆದದರಿಂದ ನಿಮ್ಮನ್ನು ನೀವು ಶುದ್ಧೀಕರಿಸಿಕೊಂಡು ಪರಿಶುದ್ಧರಾಗಿರ್ರಿ; ನಾನು ಪರಿಶುದ್ಧನು. ಇದಲ್ಲದೆ ಭೂಮಿಯ ಮೇಲೆ ಹರಿದಾ ಡುವ ಯಾವ ಬಗೆಯ ಜಂತುಗಳಿಂದಲೂ ನಿಮ್ಮನ್ನು ಮಲಿನ ಮಾಡಿಕೊಳ್ಳಬಾರದು. ನಿಮ್ಮ ದೇವರಾಗಿ ರುವದಕ್ಕೆ ಐಗುಪ್ತದೇಶದಿಂದ ನಿಮ್ಮನ್ನು ಹೊರಗೆ ಕರೆತಂದ ಕರ್ತನು ನಾನೇ. ನಾನು ಪರಿಶುದ್ಧನಾಗಿ ರುವದರಿಂದ ನೀವೂ ಪರಿಶುದ್ಧರಾಗಿರಬೇಕು. ಭೂಮೃಗಗಳ, ಪಕ್ಷಿಗಳ, ಪ್ರತಿಯೊಂದು ಜಲ ಜೀವಿ, ಭೂಮಿಯ ಮೇಲೆ ಹರಿದಾಡುವ ಪ್ರತಿ ಯೊಂದು ಕ್ರಿಮಿಯ ನಿಯಮವು ಇದೇ.ಅಶುದ್ಧ ಶುದ್ಧಗಳ ನಡುವಿನ ವ್ಯತ್ಯಾಸವನ್ನೂ ಮತ್ತು ತಿನ್ನುವಂತ ಪಶು ತಿನ್ನಬಾರದ ಪಶುಗಳ ವ್ಯತ್ಯಾಸವನ್ನೂ ಹೀಗೆ ನೀವು ಮಾಡುವಿರಿ. ಅಶುದ್ಧ ಶುದ್ಧಗಳ ನಡುವಿನ ವ್ಯತ್ಯಾಸವನ್ನೂ ಮತ್ತು ತಿನ್ನುವಂತ ಪಶು ತಿನ್ನಬಾರದ ಪಶುಗಳ ವ್ಯತ್ಯಾಸವನ್ನೂ ಹೀಗೆ ನೀವು ಮಾಡುವಿರಿ.
- Deuteronomy 14:3–21 ಧರ್ಮೋಪದೇಶಕಾಂಡ 14:3–21ಅಸಹ್ಯವಾದ ಯಾವದನ್ನಾದರೂ ತಿನ್ನಬಾರದು. ನೀವು ತಿನ್ನತಕ್ಕ ಪ್ರಾಣಿಗಳು ಇವೇ: ಎತ್ತು, ಕುರಿ, ಮೇಕೆ, ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ ಕೊಂಡಗುರಿ. ಮೃಗಜಾತಿಯಲ್ಲಿ ಗೊರ ಸೆಯು ಭೇದಿಸಿರುವ ಆ ಭೇದವನ್ನು ಎರಡು ಗೊರಸೆ ಗಳಾಗಿ ವಿಭಾಗಿಸಿದ್ದು ಮೆಲುಕು ಹಾಕುವಂಥ ಮೃಗಗಳ ನ್ನೆಲ್ಲಾ ನೀವು ತಿನ್ನಬಹುದು. ಆದರೆ ಮೆಲುಕು ಹಾಕಿ ಉಗುರುಳ್ಳ ಗೊರಸೆಯನ್ನು ಭೇದಿಸಿಕೊಂಡಿರುವವು ಗಳಲ್ಲಿ ಇವುಗಳನ್ನು ನೀವು ತಿನ್ನಬಾರದು; ಯಾವ ವೆಂದರೆ: ಒಂಟೆ, ಮೊಲ, ಕುಣಿಮೊಲ. ಯಾಕಂದರೆ ಅವು ಮೆಲುಕು ಹಾಕಿದರೂ ಗೊರಸೆಯನ್ನು ಭೇದಿಸು ವದಿಲ್ಲ; ಅವು ನಿಮಗೆ ಅಶುದ್ಧವಾಗಿವೆ. ಹಂದಿಯನ್ನು ತಿನ್ನಬಾರದು. ಅದು ಗೊರಸೆ ಭೇದಿಸಿದರೂ ಮೆಲುಕು ಹಾಕುವದಿಲ್ಲ; ಅದು ನಿಮಗೆ ಅಶುದ್ಧವೇ. ಅವುಗಳ ಮಾಂಸವನ್ನು ತಿನ್ನಬಾರದು. ಅವುಗಳ ಹೆಣವನ್ನು ಮುಟ್ಟಬಾರದು. ನೀರಿನಲ್ಲಿರುವ ಎಲ್ಲವುಗಳಲ್ಲಿ ನೀವು ಇವುಗಳನ್ನು ತಿನ್ನಬಹುದು: ರೆಕ್ಕೆಗಳೂ ಪೊರೆಗಳೂ ಉಳ್ಳವುಗ ಳನ್ನೆಲ್ಲಾ ತಿನ್ನಬಹುದು. ಆದರೆ ರೆಕ್ಕೆಗಳೂ ಪೊರೆ ಗಳೂ ಇಲ್ಲದವುಗಳನ್ನೆಲ್ಲಾ ತಿನ್ನಬಾರದು; ಅವು ನಿಮಗೆ ಅಶುದ್ಧವಾಗಿವೆ. ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು. ಪಕ್ಷಿ ಜಾತಿಯಲ್ಲಿ ನೀವು ತಿನ್ನಬಾರದವುಗಳು ಯಾವ ವೆಂದರೆ: ಗರುಡ, ಬೆಟ್ಟದಹದ್ದು, ಕ್ರೌಂಚ, ಗಿಡಗ, ಹಕ್ಕಿಸಾಲೆ, ಗಿಡಗವೂ ಬೈರಿಯೂ ಜಾತ್ಯಾನುಸಾರ ವಾದ ರಣಹದ್ದು ಜಾತ್ಯಾನುಸಾರವಾದ ಸಕಲ ಕಾಗೆಯೂ ಉಷ್ಟ್ರಪಕ್ಷಿಯೂ ಗೂಬೆಯೂ ಕಡಲ್ಕಾ ಗೆಯೂ ಜಾತ್ಯಾನುಸಾರವಾದ ಡೇಗೆಯೂ ಚಿಕ್ಕ ಗೂಬೆಯೂ ದೊಡ್ಡಗೂಬೆಯೂ ಕೊಕ್ಕರೆಯೂ ನೀರು ಕೋಳಿಯೂ ಹೆಣಹದ್ದೂ ಬೆಳ್ವಕ್ಕಿಯೂ ನೀರು ಕೊಕ್ಕರೆಯೂ ಜಾತ್ಯಾನುಸಾರವಾದ ಬಕವೂ ಬುಡ್ಡಗೋಳಿಯೂ ರಾತ್ರಿಗೀಜಕವೂ. ಇದಲ್ಲದೆ ಹಾರುವ ಎಲ್ಲಾ ಹುಳಗಳು ನಿಮಗೆ ಅಶುದ್ಧವೇ, ಅವುಗಳನ್ನು ತಿನ್ನಬಾರದು. ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು. ತಾನೇ ಸತ್ತ ಯಾವದನ್ನಾದರೂ ತಿನ್ನಬಾರದು, ನಿಮ್ಮ ಬಾಗಲುಗಳಲ್ಲಿರುವ ಅನ್ಯನಿಗೆ ಅವನು ತಿನ್ನುವ ಹಾಗೆ ಕೊಡಬೇಕು; ಇಲ್ಲವೆ ಪರದೇಶದವನಿಗೆ ಮಾರಬಹುದು. ಯಾಕಂದರೆ ನೀನು ನಿನ್ನ ದೇವರಾದ ಕರ್ತ ನಿಗೆ ಪರಿಶುದ್ಧ ಜನವೇ. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಕುದಿಸಬಾರದು.
- Ephesians 5:7–11 ಎಫೆಸದವರಿಗೆ 5:7–11ಆದದರಿಂದ ನೀವು ಅವರೊಂದಿಗೆ ಪಾಲುಗಾರ ರಾಗಿರಬೇಡಿರಿ. ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿ ಬೆಳಕಾಗಿರುವದರಿಂದ ಬೆಳಕಿನ ಮಕ್ಕಳಂತೆ ನಡೆದುಕೊಳ್ಳಿರಿ. ಆತ್ಮನ ಫಲವು ಎಲ್ಲಾ ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯ ದಲ್ಲಿಯೂ ಇರುತ್ತದೆ. ಕರ್ತನಿಗೆ ಮೆಚ್ಚಿಕೆಯಾದದ್ದೇ ನೆಂಬದನ್ನು ಪರಿಶೋಧಿಸಿರಿ. ತ್ತಲೆಗೆ ಸಂಬಂಧ ವಾದ ಕೃತ್ಯಗಳಿಂದ ಯಾವ ಫಲವೂ ಬರಲಾರದು; ಅವುಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಖಂಡಿಸಿರಿ.
- Acts 10:11–15 ಅಪೊಸ್ತಲರ ಕೃತ್ಯಗಳು 10:11–15ಆಕಾಶವು ತೆರೆದಿರುವದನ್ನೂ ಒಂದು ಪಾತ್ರೆ ಯಂತಿರುವ ನಾಲ್ಕು ಮೂಲೆಗಳನ್ನು ಕಟ್ಟಿದ್ದ ದೊಡ್ಡ ಜೋಳಿಗೆಯು ಭೂಮಿಯ ಮೇಲೆ ಅವನ ಬಳಿಗೆ ಇಳಿಯುವದನ್ನೂ ಕಂಡನು. ಭೂಮಿಯ ಮೇಲಿ ರುವ ನಾಲ್ಕು ಕಾಲುಗಳುಳ್ಳ ಎಲ್ಲಾ ತರವಾದ ಪಶು ಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟ ಗಳೂ ಆಕಾಶದ ಪಕ್ಷಿಗಳೂ ಅದರೊಳಗೆ ಇದ್ದವು. ಆಗ--ಪೇತ್ರನೇ, ಎದ್ದು ಕೊಯ್ದು ತಿನ್ನು ಎಂದು ಹೇಳುವ ಒಂದು ಧ್ವನಿಯು ಅವನಿಗೆ ಕೇಳಿಸಿತು. ಅದಕ್ಕೆ ಪೇತ್ರನು--ಕರ್ತನೇ, ಹಾಗಲ್ಲ, ನಾನೆಂದೂ ಹೊಲೆಯಾದ ಪದಾರ್ಥವನ್ನಾಗಲೀ ಅಶುದ್ಧ ಪದಾ ರ್ಥವನ್ನಾಗಲೀ ತಿಂದವನಲ್ಲ ಅಂದನು. ದೇವರು ಶುದ್ಧಮಾಡಿದ್ದನ್ನು ನೀನು ಹೊಲೆಯೆನ್ನಬೇಡ ಎಂದು ತಿರಿಗಿ ಎರಡನೆಯ ಸಾರಿ ಅವನಿಗೆ ಹೇಳುವ ಧ್ವನಿಯು ಕೇಳಿಸಿತು.
- Acts 10:28 ಅಪೊಸ್ತಲರ ಕೃತ್ಯಗಳು 10:28ಅವ ರಿಗೆ--ಯೆಹೂದ್ಯನಾಗಿರುವವನು ಅನ್ಯಜನಾಂಗದವ ರಲ್ಲಿ ಒಬ್ಬನ ಕೂಡ ಹೊಕ್ಕು ಬಳಿಕೆ ಮಾಡುವದಾಗಲೀ ಅವನ ಬಳಿಗೆ ಬರುವದಾಗಲೀ ನ್ಯಾಯವಲ್ಲವೆಂದು ನೀವು ಬಲ್ಲಿರಷ್ಟೆ. ನನಗಂತೂ ಯಾವ ಮನುಷ್ಯನನ್ನಾ ದರೂ ಹೊಲೆಯನು ಇಲ್ಲವೆ ಅಶುದ್ಧನು ಅನ್ನಬಾರ ದೆಂದು ದೇವರು ನನಗೆ ತೋರಿ
Original words (Hebrew)
- difference · H914בָּדַל bâdal
- clean · H2889טָהוֹר ṭâhôwr
- beasts · H929בְּהֵמָה bᵉhêmâh
- unclean · H2931טָמֵא ṭâmêʼ
- unclean · H2931טָמֵא ṭâmêʼ
- fowls · H5775עוֹף ʻôwph
- clean · H2889טָהוֹר ṭâhôwr
- souls · H5315נֶפֶשׁ nephesh
- abominable · H8262שָׁקַץ shâqats
- beast · H929בְּהֵמָה bᵉhêmâh
- fowl · H5775עוֹף ʻôwph
- creepeth · H7430רָמַשׂ râmas
- ground · H127אֲדָמָה ʼădâmâh
- separated · H914בָּדַל bâdal
- unclean · H2930טָמֵא ṭâmêʼ