Leviticus · chapter 25 · verse 32
Leviticus 25:32 in Kannada
ಇದಲ್ಲದೆ ಲೇವಿಯರ ಪಟ್ಟಣಗಳ ವಿಷಯವಾ ಗಿಯೂ ಅವರ ಸ್ವಾಸ್ತ್ಯವಾಗಿರುವ ಪಟ್ಟಣಗಳಲ್ಲಿನ ಮನೆಗಳ ವಿಷಯವಾಗಿಯೂ ಲೇವಿಯರು ಯಾವ ಸಮಯದಲ್ಲಿಯಾದರೂ ಬಿಡಿಸಿಕೊಳ್ಳಬಹುದು.
Idallade leviyara pattanagala vishayavaa giyoo avara svaastyavaagiruva pattanagalallina manegala vishayavaagiyoo leviyaru yaava samayadalliyaadaroo bidisikollabahudu.
Leviticus 25:32 in English
- King James Version (KJV)
- Notwithstanding the cities of the Levites, [and] the houses of the cities of their possession, may the Levites redeem at any time.
- World English Bible (WEB)
- “‘Nevertheless, in the cities of the Levites, the Levites may redeem the houses in the cities of their possession at any time.
- American Standard Version (ASV)
- Nevertheless the cities of the Levites, the houses of the cities of their possession, may the Levites redeem at any time.
- Bible in Basic English (BBE)
- But the houses in the towns of the Levites may be got back by the Levites at any time.
- Darby Translation (DBY)
- But as to the cities of the Levites, the houses in the cities of their possession, the Levites shall have a perpetual right of redemption.
- Webster's Bible (WBS)
- Notwithstanding the cities of the Levites, [and] the houses of the cities of their possession, may the Levites redeem at any time.
- Young's Literal Translation (YLT)
- 'As to cities of the Levites — houses of the cities of their possession — redemption age-during is to the Levites;
Read in context
- 30ಆದರೆ ವರುಷವು ಪೂರ್ಣವಾಗುವದರೊಳಗಾಗಿ ಅದು ಬಿಡುಗಡೆಯಾಗದಿದ್ದರೆ ಗೋಡೆಯ ಪಟ್ಟಣದೊಳಗಿರುವ ಆ ಮನೆಯು ಅದನ್ನು ಕೊಂಡುಕೊಂಡವನಿಗೆ ಅವನ ತಲತಲಾಂತರಕ್ಕೂ ಸ್ಥಿರವಾಗಿಡಲ್ಪಡಬೇಕು; ಸಂಭ್ರಮದ ವರುಷದಲ್ಲಿ ಅದು ಬಿಡುಗಡೆಯಾಗ ಬಾರದು.
- 31ಆದರೆ ಸುತ್ತಲೂ ಗೋಡೆಗಳಿಲ್ಲದ ಹಳ್ಳಿಗಳಲ್ಲಿಯ ಮನೆಗಳು ದೇಶದ ಭೂಮಿಯೊಂದಿಗೆ ಲೆಕ್ಕಿಸಲ್ಪಡಬೇಕು. ಅವುಗಳಿಗೆ ಬಿಡುಗಡೆ ಇರಬೇಕು; ಸಂಭ್ರಮ ವರುಷದಲ್ಲಿ ಅವು ಬಿಡುಗಡೆಯಾಗಬೇಕು.
- 32ಇದಲ್ಲದೆ ಲೇವಿಯರ ಪಟ್ಟಣಗಳ ವಿಷಯವಾ ಗಿಯೂ ಅವರ ಸ್ವಾಸ್ತ್ಯವಾಗಿರುವ ಪಟ್ಟಣಗಳಲ್ಲಿನ ಮನೆಗಳ ವಿಷಯವಾಗಿಯೂ ಲೇವಿಯರು ಯಾವ ಸಮಯದಲ್ಲಿಯಾದರೂ ಬಿಡಿಸಿಕೊಳ್ಳಬಹುದು.
- 33ಲೇವಿಯರಿಂದ ಏನಾದರೂ ಕೊಂಡುಕೊಂಡರೆ ಕೊಂಡುಕೊಂಡ ಮನೆಯೂ ಅವನ ಸ್ವಾಸ್ತ್ಯದ ಪಟ್ಟಣವೂ ಸಂಭ್ರಮದ ವರುಷದಲ್ಲಿ ಬಿಡುಗಡೆಯಾಗ ಬೇಕು; ಲೇವಿಯರ ಪಟ್ಟಣಗಳ ಮನೆಗಳು ಇಸ್ರಾ ಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವಾಗಿವೆ.
- 34ಆದರೆ ಅವರ ಪಟ್ಟಣಗಳಿಗೆ ಸೇರಿರುವ ಉಪ ನಗರಗಳ ಹೊಲವನ್ನು ಮಾರಬಾರದು. ಅದು ಅವರಿಗೆ ನಿತ್ಯವಾದ ಸ್ವಾಸ್ತ್ಯವೇ.
Cross references
- Joshua 21:1–45 ಯೆಹೋಶುವ 21:1–45ಲೇವಿಯರ ಪಿತೃಗಳ ಹಿರಿಯರು ಕಾನಾನ್ ದೇಶದ ಶೀಲೋವಿನಲ್ಲಿರುವ ಯಾಜಕ ನಾದ ಎಲಿಯಾಜರನ ಬಳಿಗೂ ನೂನನ ಮಗನಾದ ಯೆಹೋಶುವನ ಬಳಿಗೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ಪಿತೃಗಳಲ್ಲಿರುವ ಹಿರಿಯರ ಬಳಿಗೂ ಬಂದು ಅವರ ಸಂಗಡ ಮಾತನಾಡಿ-- ನಾವು ವಾಸವಾಗಿರುವ ಪಟ್ಟಣಗಳನ್ನು ನಮ್ಮ ಪಶುಗಳಿಗೋಸ್ಕರ ಅವುಗಳ ಉಪನಗರಗಳೊಂದಿಗೆ ನಮಗೆ ಕೊಡಬೇಕೆಂದು ಕರ್ತನು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿ ದ್ದಾನೆ ಅಂದರು. ಹಾಗೆಯೇ ಇಸ್ರಾಯೇಲ್ ಮಕ್ಕಳು ತಮ್ಮ ಬಾಧ್ಯತೆಯಲ್ಲಿ ಲೇವಿಯರಿಗೆ ಕರ್ತನ ಅಜ್ಞೆಯ ಪ್ರಕಾರ ಪಟ್ಟಣಗಳನ್ನೂ ಅವುಗಳ ಉಪನಗರಗಳನ್ನೂ ಕೊಟ್ಟರು. ಅವು ಯಾವವೆಂದರೆ-- ಕೆಹಾತ್ಯರ ಗೋತ್ರಗಳಿಗೆ ಚೀಟು ಹಾಕಿದಾಗ ಲೇವಿಯರಲ್ಲಿ ಯಾಜಕನಾದ ಆರೋನನ ಮಕ್ಕಳಿಗೆ ಯೂದನ ಗೋತ್ರದಲ್ಲಿಯೂ ಸಿಮೆಯೋನನ ಗೋತ್ರ ದಲ್ಲಿಯೂ ಬೆನ್ಯಾವಿಾನನ ಗೋತ್ರದಲ್ಲಿಯೂ ಹದಿ ಮೂರು ಪಟ್ಟಣಗಳು ದೊರಕಿದವು. ಕೆಹಾತನ ಉಳಿದ ಮಕ್ಕಳಿಗೆ ಎಫ್ರಾಯಾಮನ ಗೊತ್ರದಲ್ಲಿಯೂ ದಾನನ ಗೋತ್ರದಲ್ಲಿಯೂ ಮನಸ್ಸೆಯ ಅರ್ಧಗೋತ್ರದ ಲ್ಲಿಯೂ ಹತ್ತು ಪಟ್ಟಣಗಳೂ ದೊರಕಿದವು. ಗೆರ್ಷೋನ್ಯನ ಮಕ್ಕಳಿಗೆ ಚೀಟಿ ಹಾಕಿದಾಗ ಇಸ್ಸಾಕಾರನ ಗೋತ್ರಗಳ ಕುಟುಂಬಗಳಲ್ಲಿಯೂ ಆಶೇರನ ಗೋತ್ರದಲ್ಲಿಯೂ ನಫ್ತಾಲಿಯ ಗೋತ್ರ ದಲ್ಲಿಯೂ ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ದೊರ ಕಿದವು. ಇದಲ್ಲದೆ ಮೆರಾರಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ರೂಬೇನನ ಗೋತ್ರದಲ್ಲಿಯೂ ಗಾದನ ಗೋತ್ರದಲ್ಲಿಯೂ ಜೆಬುಲೂನನ ಗೋತ್ರ ದಲ್ಲಿಯೂ ಹನ್ನೆರಡು ಪಟ್ಟಣಗಳು ದೊರಕಿದವು. ಈ ಪಟ್ಟಣಗಳನ್ನು ಅವುಗಳ ಉಪನಗರಗಳನ್ನು ಇಸ್ರಾಯೇಲ್ ಮಕ್ಕಳು ಕರ್ತನು ಮೋಶೆಯ ಮುಖಾಂತರ ಆಜ್ಞಾಪಿಸಿದ ಪ್ರಕಾರ ಲೇವಿಯರಿಗೆ ಚೀಟುಹಾಕಿ ಕೊಟ್ಟರು. ಆದರೆ ಲೇವಿಯ ಮಕ್ಕಳಲ್ಲಿ ಮೊದಲನೇ ಚೀಟು ಬಿದ್ದ ಕೆಹಾತ್ಯರ ಗೋತ್ರಗಳಲ್ಲಿ ಇರುವ ಆರೋನನ ಮಕ್ಕಳಿಗೆ ಯೂದನ ಮಕ್ಕಳ ಗೋತ್ರದಲ್ಲಿಯೂ ಸಿಮೆಯೋನನ ಮಕ್ಕಳ ಗೋತ್ರದಲ್ಲಿಯೂ ಕೊಡಲ್ಪಟ್ಟ ಪಟ್ಟಣಗಳ ಹೆಸರುಗಳು ಯಾವವಂದರೆ--ಲೇವಿ ಕುಲದವರೂ ಕೆಹಾತನ ಗೋತ್ರದವರೂ ಆದ ಆರೋನನ ಕುಟುಂಬದವರಿಗೆ ಚೀಟು ಮೊದಲು ಬಿದದ್ದರಿಂದ ಯೂದನ ಬೆಟ್ಟಗಳಲ್ಲಿರುವ ಅನಾಕನ ತಂದೆಯಾದ ಅರ್ಬನ ಹೆಸರಿನ ಪಟ್ಟಣ ಹೆಬ್ರೋ ನನ್ನೂ ಅದರ ಸುತ್ತಲಿರುವ ಉಪನಗರಗಳನ್ನೂ ಅವ ರಿಗೆ ಕೊಟ್ಟರು. ಆದರೆ ಆ ಪಟ್ಟಣದ ಹೊಲಗ ಳನ್ನೂ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೆ ಬಾಧ್ಯತೆಯಾಗಿ ಕೊಟ್ಟರು. ಹೀಗೆಯೇ ಯಾಜಕನಾದ ಆರೋನನ ಮಕ್ಕಳಿಗೆ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಹೆಬ್ರೋನನ್ನೂ ಅದರ ಉಪನಗರಗಳನ್ನೂ ಲಿಬ್ನಾವನ್ನೂ ಅದರ ಉಪ ನಗರಗಳನ್ನೂ ಯತ್ತೀರನ್ನೂ ಅದರ ಉಪನಗರ ಗಳನ್ನೂ ಎಷ್ಟೆಮೋಹವನ್ನೂ ಅದರ ಉಪನಗರಗ ಳನ್ನೂ ಹೋಲೋನನ್ನೂ ಅದರ ಉಪನಗರಗ ಳನ್ನೂ ದೆಬೀರನ್ನೂ ಅದರ ಉಪನಗರಗಳನ್ನೂ ಆಯಿನನ್ನೂ ಅದರ ಉಪನಗರಗಳನ್ನೂ ಯುಟ್ಟಾ ವನ್ನೂ ಅದರ ಉಪನಗರಗಳನ್ನೂ ಬೇತ್ಷೆಮೆಷನ್ನೂ ಅದರ ಉಪನಗರಗಳನ್ನೂ; ಹೀಗೆಯೇ ಆ ಎರಡು ಗೋತ್ರಗಳಿಂದ ಈ ಒಂಭತ್ತು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ಬೆನ್ಯಾವಿಾನನ ಗೋತ್ರದಲ್ಲಿ ಗಿಬ್ಯೋ ನನ್ನೂ ಅದರ ಉಪನಗರಗಳನ್ನೂ ಗೆಬವನ್ನೂ ಅದರ ಉಪನಗರಗಳನ್ನೂ ಅನಾತೋತನ್ನೂ ಅದರ ಉಪನಗರಗಳನ್ನೂ ಅಲ್ಮೋನನ್ನೂ ಅದರ ಉಪನಗರ ಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಯಾಜಕನಾದ ಆರೋನನ ಮಕ್ಕಳ ಪಟ್ಟಣಗಳೆಲ್ಲಾ ಹದಿಮೂರು ಪಟ್ಟಣಗಳೂ ಅವುಗಳ ಉಪನಗರಗಳೂ. ಇದಲ್ಲದೆ ಲೇವಿಯರಾದ ಕೆಹಾತನ ಮಕ್ಕಳ ಕುಟುಂಬದಲ್ಲಿ ಉಳಿದವರಿಗೆ ಎಫ್ರಾಯಾಮನ ಗೋತ್ರದಲ್ಲಿ ಚೀಟಿನಿಂದ ದೊರಕಿದ ಪಟ್ಟಣಗಳು, ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಎಫ್ರಾಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಅದರ ಉಪನಗರಗಳನ್ನೂ ಗೆಜೆರನ್ನೂ ಅದರ ಉಪನಗರ ಗಳನ್ನೂ ಕಿಬ್ಚೈಮನ್ನೂ ಅದರ ಉಪನಗರಗಳನ್ನೂ; ಬೇತ್ಹೋರೋನನ್ನೂ ಆದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ದಾನನ ಗೋತ್ರದಲ್ಲಿ ಎಲ್ತೆಕೇಯನ್ನೂ ಅದರ ಉಪ ನಗರಗಳನ್ನೂ ಗಿಬ್ಬೆತೋನನ್ನೂ ಅದರ ಉಪನಗರ ಗಳನ್ನೂ; ಅಯ್ಯಾಲೋನನ್ನೂ ಅದರ ಉಪನಗರ ಗಳನ್ನೂ ಗತ್ರಿಮ್ಮೋನನ್ನೂ ಅದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಮನಸ್ಸೆಯ ಅರ್ಧಗೋತ್ರದಲ್ಲಿ ತಾನಾಕನ್ನೂ ಅದರ ಉಪನಗರ ಗಳನ್ನೂ; ಗತ್ರಿಮ್ಮೋನನ್ನೂ ಅದರ ಉಪನಗರ ಗಳನ್ನೂ ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು. ಹಾಗೆಯೇ ಉಳಿದಂಥ ಕೆಹಾತನ ಮಕ್ಕಳ ಕುಟುಂಬಗಳಿಗೆ ದೊರೆತ ಪಟ್ಟಣಗಳೆಲ್ಲಾ ಹತ್ತು ಪಟ್ಟಣಗಳೂ ಅವುಗಳ ಉಪನಗರಗಳೂ. ಲೇವಿಯರ ಕುಟುಂಬಗಳಲ್ಲಿರುವ ಗೆರ್ಷೋನಿನ ಮಕ್ಕಳಿಗೆ ಮನಸ್ಸೆಯ ಅರ್ಧ ಗೋತ್ರದಲ್ಲಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಬಾಷಾನಿ ನಲ್ಲಿರುವ ಗೋಲಾನನ್ನೂ ಅದರ ಉಪನಗರಗಳನ್ನೂ ಬೆಯೆಷ್ಟೆರಾವನ್ನೂ ಅದರ ಉಪನಗರಗಳನ್ನೂ; ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ಇಸ್ಸಾಕಾರನ ಗೋತ್ರದಲ್ಲಿ ಕಿಷ್ಯೋನನ್ನೂ ಅದರ ಉಪ ನಗರಗಳನ್ನೂ ದಾಬೆರತನ್ನೂ ಅದರ ಉಪನಗರ ಗಳನ್ನೂ ಯರ್ಮೂತನ್ನೂ ಅದರ ಉಪನಗರ ಗಳನ್ನೂ ಏಂಗನ್ನೀಮನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಆಶೇರನ ಗೋತ್ರದಲ್ಲಿ ಮಿಷಾಲನ್ನೂ ಅದರ ಉಪನಗರ ಗಳನ್ನೂ ಅಬ್ದೋನನ್ನೂ ಅದರ ಉಪನಗರಗಳನ್ನೂ ಹೆಲ್ಕಾತನ್ನೂ ಅದರ ಉಪನಗರಗಳನ್ನೂ ರೆಹೋ ಬನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ನಫ್ತಾಲಿಯ ಗೋತ್ರ ದಲ್ಲಿ ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಗಲಿಲಾಯದಲ್ಲಿರುವ ಕೆದೆಷನ್ನೂ ಅದರ ಉಪನಗರ ಗಳನ್ನೂ ಹಮ್ಮೋತ್ದೋರನ್ನೂ ಅದರ ಉಪನಗರ ಗಳನ್ನೂ ಕರ್ತಾನನ್ನೂ ಅದರ ಉಪನಗರಗಳನ್ನೂ; ಹೀಗೆ ಮೂರು ಪಟ್ಟಣಗಳನ್ನು ಕೊಟ್ಟರು. ಗೆರ್ಷೋನ್ಯರಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಪಟ್ಟಣಗಳೆಲ್ಲಾ ಹದಿಮೂರು ಪಟ್ಟಣಗಳೂ ಅವುಗಳ ಉಪನಗರಗಳೂ. ಉಳಿದ ಲೇವಿಯರಾದ ಮೆರಾರೀಯ ಮಕ್ಕಳ ಕುಟುಂಬಗಳಿಗೆ ಜೆಬುಲೂನನ ಗೋತ್ರದಲ್ಲಿ ಯೊಕ್ನೆ ಯಾಮನ್ನೂ ಆದರ ಉಪನಗರಗಳನ್ನೂ ಕರ್ತಾನನ್ನೂ ಅದರ ಉಪನಗರಗಳನ್ನೂ ದಿಮ್ನಾವನ್ನೂ ಅದರ ಉಪನಗರಗಳನ್ನೂ ನಹಲಾಲನ್ನೂ ಅದರ ಉಪ ನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ರೂಬೇನನ ಗೋತ್ರದಲ್ಲಿ ಬೆಚೆರನ್ನೂ ಅದರ ಉಪನಗರಗಳನ್ನೂ ಯಹಚಾ ವನ್ನೂ ಅದರ ಉಪನಗರಗಳನ್ನೂ ಕೆದೇಮೋತನ್ನೂ ಅದರ ಉಪನಗರಗಳನ್ನೂ ಮೆಫಾಗತನ್ನೂ ಅದರ ಉಪ ನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಗಾದನ ಗೋತ್ರದಲ್ಲಿ ಕೊಲೆ ಮಾಡಿ ದವನಿಗೆ ಆಶ್ರಯ ಪಟ್ಟಣವಾದ ಗಿಲ್ಯಾದಿನಲ್ಲಿರುವ ರಾಮೋತನ್ನೂ ಅದರ ಉಪನಗರಗಳನ್ನೂ ಮಹನ ಯಿಮನ್ನೂ ಅದರ ಉಪನಗರಗಳನ್ನೂ ಹೆಷ್ಬೋ ನನ್ನೂ ಅದರ ಉಪನಗರಗಳನ್ನೂ ಯಗ್ಜೇರನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣ ಗಳನ್ನು ಕೊಟ್ಟರು. ಹೀಗೆಯೇ ಲೇವಿಯರ ಕುಟುಂಬಗಳಲ್ಲಿ ಉಳಿದಂಥ ಮೆರಾರೀಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಚೀಟಿನಿಂದ ದೊರೆತ ಪಟ್ಟಣಗಳೆಲ್ಲಾ ಹನ್ನೆರಡು ಪಟ್ಟಣಗಳೂ ಅವುಗಳ ಉಪನಗರಗಳೂ. ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯದ ಮಧ್ಯದಲ್ಲಿ ಇರುವ ಲೇವಿಯರ ಎಲ್ಲಾ ಪಟ್ಟಣಗಳೂ ಅವುಗಳ ಉಪನಗರಗಳೂ ನಾಲ್ವತ್ತೆಂಟು ಪಟ್ಟಣಗಳು. ಈ ಪಟ್ಟಣಗಳಲ್ಲಿ ಪ್ರತಿಯೊಂದಕ್ಕೂ ಅದರದರ ಸುತ್ತಲೂ ಉಪನಗರಗಳು ಇದ್ದವು; ಪಟ್ಟಣಗಳಿಗೆಲ್ಲಾ ಹೀಗೆಯೇ ಇದ್ದವು. ಕರ್ತನು ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟನು; ಅವರು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸವಾಗಿದ್ದರು. ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ಪ್ರಕಾರವೆಲ್ಲಾ ಅವರ ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು; ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ; ಅವರ ಶತ್ರುಗಳನ್ನೆಲ್ಲಾ ಕರ್ತನು ಅವರ ಕೈಗಳಿಗೆ ಒಪ್ಪಿಸಿದನು.ಕರ್ತನು ಇಸ್ರಾಯೇಲ್ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು. ಕರ್ತನು ಇಸ್ರಾಯೇಲ್ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು.
- Numbers 35:1–8 ಅರಣ್ಯಕಾಂಡ 35:1–8ಕರ್ತನು ಯೆರಿಕೋವಿಗೆದುರಾಗಿ ಯೊರ್ದ ನಿನ ಬಳಿಯಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ-- ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ಅವರು ತಮ್ಮ ಸ್ವಾಸ್ತ್ಯದ ಭಾಗದಿಂದ ಲೇವಿ ಯರಿಗೆ ವಾಸಮಾಡುವದಕ್ಕೆ ಪಟ್ಟಣಗಳನ್ನು ಕೊಡ ಬೇಕು; ಪಟ್ಟಣಗಳ ಸುತ್ತಮುತ್ತಲಿರುವ ಉಪನಗರ ಗಳನ್ನು ನೀವು ಲೇವಿಯರಿಗೆ ಕೊಡಬೇಕು. ಪಟ್ಟಣಗಳು ಅವರಿಗೆ ವಾಸಮಾಡುವದಕ್ಕೂ ಅವುಗಳ ಉಪನಗರ ಗಳು ಅವರ ಪಶುಗಳಿಗೋಸ್ಕರವೂ ಸಮಸ್ತ ಸರಕುಗಳಿ ಗೋಸ್ಕರವೂ ಸಮಸ್ತ ಪ್ರಾಣಿಗಳಿಗೋಸ್ಕರವೂ ಇರ ಬೇಕು. ನೀವು ಲೇವಿಯರಿಗೆ ಕೊಡಬೇಕಾದ ಪಟ್ಟಣ ಗಳ ಉಪನಗರಗಳು ಪಟ್ಟಣದ ಗೋಡೆಯಿಂದ ಸುತ್ತಲೂ ಸಾವಿರ ಮೊಳ ಅಗಲವಾಗಿರಬೇಕು. ನೀವು ಪಟ್ಟಣದ ಹೊರಗೆ ಪೂರ್ವ ಕಡೆಯಲ್ಲಿ ಎರಡು ಸಾವಿರ ಮೊಳ, ದಕ್ಷಿಣ ಕಡೆಯಲ್ಲಿ ಎರಡು ಸಾವಿರ ಮೊಳ, ಪಶ್ಚಿಮ ಕಡೆಯಲ್ಲಿ ಎರಡು ಸಾವಿರ ಮೊಳ, ಉತ್ತರ ಕಡೆಯಲ್ಲಿ ಎರಡು ಸಾವಿರ ಮೊಳ ಅಳೆಯಬೇಕು; ಮಧ್ಯದಲ್ಲಿ ಪಟ್ಟಣವಿರಬೇಕು; ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು. ನೀವು ಲೇವಿಯರಿಗೆ ಕೊಡುವ ಪಟ್ಟಣಗಳೊಳಗೆ ಮನುಷ್ಯಹತ್ಯಮಾಡಿದ ವನು ಓಡುವಹಾಗೆ ಆರು ಆಶ್ರಯದ ಪಟ್ಟಣಗಳನ್ನು ನೇಮಿಸಬೇಕು; ಅವುಗಳ ಹೊರತು ನೀವು ನಾಲ್ವತ್ತೆರಡು ಪಟ್ಟಣಗಳನ್ನು ಕೊಡಬೇಕು. ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು ಅವುಗಳ ಉಪ ನಗರಗಳ ಸಂಗಡ ನಾಲ್ವತ್ತೆಂಟು ಪಟ್ಟಣಗಳಾಗಿರಬೇಕು. ನೀವು ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ ತಕ್ಕೊಳ್ಳಬೇಕು; ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತಕ್ಕೊಳ್ಳಬೇಕು; ಒಬ್ಬೊಬ್ಬನು ತಾನು ಹೊಂದುವ ಸ್ವಾಸ್ತ್ಯಕ್ಕನುಸಾರವಾಗಿ ತನ್ನ ಪಟ್ಟಣ ಗಳೊಳಗಿಂದ ಲೇವಿಯರಿಗೆ ಕೊಡಬೇಕು ಎಂದು ಹೇಳಿದನು.