Leviticus · chapter 4 · verse 26
Leviticus 4:26 in Kannada
ಅವರು ಸಮಾಧಾನದ ಯಜ್ಞ ಸಮರ್ಪಣೆಯ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನು ಯಜ್ಞವೇದಿಯ ಮೇಲೆ ಸುಡಬೇಕು. ಯಾಜ ಕನು ಅವನ ಪಾಪದ ವಿಷಯದಲ್ಲಿ ಅವನಿಗೆ ಪ್ರಾಯಶ್ಚಿತ್ತ ಮಾಡಬೇಕು; ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
Avaru samaadhaanada yajnya samarpaneya kobbinanteye adara ellaa kobbannu yajnyavediya mele sudabeku. Yaaja kanu avana paapada vishayadalli avanige praayashchitta maadabeku; aaga adu avanige kshamisalpaduvadu.
Leviticus 4:26 in English
- King James Version (KJV)
- And he shall burn all his fat upon the altar, as the fat of the sacrifice of peace offerings: and the priest shall make an atonement for him as concerning his sin, and it shall be forgiven him.
- World English Bible (WEB)
- All its fat he shall burn on the altar, like the fat of the sacrifice of peace offerings; and the priest shall make atonement for him concerning his sin, and he will be forgiven.
- American Standard Version (ASV)
- And all the fat thereof shall he burn upon the altar, as the fat of the sacrifice of peace-offerings; and the priest shall make atonement for him as concerning his sin, and he shall be forgiven.
- Bible in Basic English (BBE)
- And all the fat of it is to be burned on the altar like the fat of the peace-offering; and the priest will take away his sin and he will have forgiveness.
- Darby Translation (DBY)
- And he shall burn all its fat on the altar, as the fat of the sacrifice of peace-offering; and the priest shall make atonement for him [to cleanse him] from his sin, and it shall be forgiven him.
- Webster's Bible (WBS)
- And he shall burn all his fat upon the altar, as the fat of the sacrifice of peace-offerings: and the priest shall make an atonement for him as concerning his sin, and it shall be forgiven him.
- Young's Literal Translation (YLT)
- and with all its fat he doth make perfume on the altar, as the fat of the sacrifice of the peace-offerings; and the priest hath made atonement for him because of his sin, and it hath been forgiven him.
Read in context
- 24ಅವನು ತನ್ನ ಕೈಯನ್ನು ಆ ಮೇಕೆ ತಲೆಯ ಮೇಲೆ ಇಟ್ಟು ಕರ್ತನ ಮುಂದೆ ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ಅದನ್ನು ವಧಿಸಬೇಕು; ಅದು ಪಾಪದ ಬಲಿಯಾಗಿರುವದು.
- 25ಯಾಜಕನು ಪಾಪದ ಬಲಿಯ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು ದಹನಬಲಿ ಯಜ್ಞವೇದಿಯ ಕೊಂಬುಗಳ ಮೇಲೆ ಹಚ್ಚಿ ಅದರ ರಕ್ತವನ್ನು ದಹನಬಲಿ ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು.
- 26ಅವರು ಸಮಾಧಾನದ ಯಜ್ಞ ಸಮರ್ಪಣೆಯ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನು ಯಜ್ಞವೇದಿಯ ಮೇಲೆ ಸುಡಬೇಕು. ಯಾಜ ಕನು ಅವನ ಪಾಪದ ವಿಷಯದಲ್ಲಿ ಅವನಿಗೆ ಪ್ರಾಯಶ್ಚಿತ್ತ ಮಾಡಬೇಕು; ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
- 27ಸಾಮಾನ್ಯ ಜನರಲ್ಲಿ ಯಾವನಾದರೂ ಮಾಡ ಬಾರದವುಗಳನ್ನು ಕರ್ತನ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಪಾಪಮಾಡಿ ಅಪರಾಧಿಯಾಗಿದ್ದರೆ
- 28ಇಲ್ಲವೆ ಅವನು ಮಾಡಿದ ಪಾಪವು ಅವನಿಗೆ ತಿಳಿದುಬಂದರೆ ಅವನು ಬಲಿಗಾಗಿ ಮೇಕೆಗಳಲ್ಲಿ ದೋಷವಿಲ್ಲದ ಒಂದು ಹೆಣ್ಣು ಮರಿಯನ್ನು ತಾನು ಮಾಡಿದ ಪಾಪಕ್ಕಾಗಿ ತರಬೇಕು.
Cross references
- Leviticus 4:20 ಯಾಜಕಕಾಂಡ 4:20ಪಾಪದ ಬಲಿ ಗಾಗಿ ಇರುವ ಆ ಹೋರಿಗೆ ಮಾಡಿದಂತೆಯೇ ಈ ಹೋರಿಗೂ ಮಾಡಬೇಕು; ಇದಲ್ಲದೆ ಯಾಜಕನು ಅವರಿಗಾಗಿ ಪ್ರಾಯಶ್ಚಿತ್ತಮಾಡಬೇಕು. ಆಗ ಅದು ಅವರಿಗೆ ಕ್ಷಮಿಸಲ್ಪಡುವದು.
- Leviticus 3:5 ಯಾಜಕಕಾಂಡ 3:5ಆರೋನನ ಕುಮಾರರು ಅದನ್ನು ಯಜ್ಞವೇದಿಯಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನ ಬಲಿಯಾಗಿ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು ಕರ್ತನಿಗೆ ಸುವಾಸನೆಯಾಗಿರುವದು.
- Numbers 15:28 ಅರಣ್ಯಕಾಂಡ 15:28ತಿಳಿಯದೆ ಪಾಪಮಾಡಿ ದಂಥ ಆ ಪಾಪಮಾಡಿದವನಿಗೋಸ್ಕರ ಯಾಜಕನು ಕರ್ತನ ಮುಂದೆ ಪ್ರಾಯಶ್ಚಿತ್ತಮಾಡಬೇಕು. ಅದು ಪರಿಹಾರವಾಗುವ ಹಾಗೆ ಅದಕ್ಕೋಸ್ಕರ ಪ್ರಾಯಶ್ಚಿತ್ತ ಮಾಡಬೇಕು.
- Leviticus 4:31 ಯಾಜಕಕಾಂಡ 4:31ಅವನು ಸಮಾಧಾನ ಯಜ್ಞ ಸಮರ್ಪಣೆಯ ಕೊಬ್ಬನ್ನು ತೆಗೆದಂತೆ ಅದರ ಎಲ್ಲಾ ಕೊಬ್ಬನ್ನು ತೆಗೆಯ ಬೇಕು; ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಕರ್ತನಿಗೆ ಸುವಾಸನೆಯನ್ನಾಗಿ ಸುಡಬೇಕು; ಇದಲ್ಲದೆ ಯಾಜಕನು ಅವನಿಗಾಗಿ ಪ್ರಾಯಶ್ಚಿತ್ತಮಾಡ ಬೇಕು. ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
- Leviticus 4:35 ಯಾಜಕಕಾಂಡ 4:35ಇದಲ್ಲದೆ ಸಮಾಧಾನ ಯಜ್ಞ ಸಮರ್ಪಣೆಗಳ ಕುರಿಮರಿಯ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನೂ ತೆಗೆಯಬೇಕು; ಯಾಜಕನು ಬೆಂಕಿಯ ಸಮರ್ಪಣೆಗಳನ್ನು ಕರ್ತನಿಗೆ ಮಾಡಿ ದಂತೆಯೇ ಯಜ್ಞವೇದಿಯ ಮೇಲೆ ಅವುಗಳನ್ನು ಸುಡ ಬೇಕು; ಅವನು ಮಾಡಿದ ಪಾಪಕ್ಕೆ ಯಾಜಕನು ಪ್ರಾಯಶ್ಚಿತ್ತ ಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
- Leviticus 5:10 ಯಾಜಕಕಾಂಡ 5:10ಅವನು ಕ್ರಮದ ಪ್ರಕಾರ ಎರಡನೆಯದನ್ನು ದಹನ ಬಲಿಯಾಗಿ ಸಮರ್ಪಿಸಬೇಕು; ಅವನು ಮಾಡಿದ ಪಾಪಕ್ಕಾಗಿ ಯಾಜಕನು ಪ್ರಾಯಶ್ಚಿತ್ತಮಾಡಬೇಕು. ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
- Leviticus 5:18 ಯಾಜಕಕಾಂಡ 5:18ಅಲ್ಲದೆ ಅವನು ಹಿಂಡಿನೊಳಗಿಂದ ದೋಷವಿಲ್ಲದ ಒಂದು ಟಗರನ್ನು ನಿನ್ನ ಅಂದಾಜಿ ಗನುಸಾರ ಅತಿಕ್ರಮದ ಬಲಿಗಾಗಿ ಯಾಜಕನ ಬಳಿಗೆ ತರಬೇಕು; ತನ್ನ ಅಜ್ಞಾನದಲ್ಲಿ ಅವನು ಉದ್ದೇಶವಿಲ್ಲದೆ ಮಾಡಿದ ತಪ್ಪಿಗಾಗಿ ಯಾಜಕನು ಪ್ರಾಯಶ್ಚಿತ್ತವನ್ನು ಮಾಡಬೇಕು. ಅದು ಅವನಿಗೆ ಕ್ಷಮಿಸಲ್ಪಡುವದು.ಇದು ಅತಿಕ್ರಮದ ಬಲಿಯಾಗಿದೆ; ಅವನು ನಿಶ್ಚಯ ವಾಗಿಯೂ ಕರ್ತನಿಗೆ ವಿರುದ್ಧವಾಗಿ ಅತಿಕ್ರಮಿಸಿದ್ದಾನೆ ಅಂದನು.
- Leviticus 6:20–30 ಯಾಜಕಕಾಂಡ 6:20–30ಆರೋನನೂ ಅವನ ಕುಮಾರರೂ ಅಭಿಷಿಕ್ತರಾದ ದಿನದಲ್ಲಿ ಕರ್ತನಿಗೆ ಸಮರ್ಪಿಸಬೇಕಾದ ಬಲಿಯು ಇದೇ; ಒಂದು ಎಫದ ಹತ್ತನೆಯ ಭಾಗ ನಯವಾದ ಹಿಟ್ಟಿನಲ್ಲಿ ನಿರಂತರವಾಗಿರುವ ಆಹಾರ ಬಲಿಗಾಗಿ ಮುಂಜಾನೆ ಅದರಲ್ಲಿ ಅರ್ಧ ಭಾಗವನ್ನೂ ರಾತ್ರಿ ಅದರಲ್ಲಿ ಅರ್ಧ ಭಾಗವನ್ನೂ ಅರ್ಪಿಸಬೇಕು. ಅದನ್ನು ಒಂದು ಬೋಗುಣಿಯಲ್ಲಿ ಎಣ್ಣೆಯೊಂದಿಗೆ ಮಾಡಬೇಕು; ಅದು ಬೇಯಿಸಲ್ಪಟ್ಟಾಗ ನೀನು ಅದನ್ನು ಒಳಗೆ ತರಬೇಕು; ಬೇಯಿಸಲ್ಪಟ್ಟ ಆಹಾರ ಬಲಿಯ ತುಂಡುಗಳನ್ನು ನೀನು ಕರ್ತನಿಗೆ ಸುವಾಸನೆಗಾಗಿ ಸಮರ್ಪಿಸಬೇಕು. ಅವನ ಕುಮಾರರಲ್ಲಿ ಅವನಿಗೆ ಬದಲಾಗಿ ಅಭಿಷಿಕ್ತನಾದ ಯಾಜಕನು ಅದನ್ನು ಸಮರ್ಪಿಸಬೇಕು; ಇದು ಕರ್ತನಿಗಾಗಿ ನಿರಂತರವಾದ ಒಂದು ಕಟ್ಟಳೆಯಾಗಿದೆ; ಅದು ಸಂಪೂರ್ಣವಾಗಿ ಸುಡಲ್ಪಡಬೇಕು. ಯಾಜಕನಿಗಾಗಿರುವ ಪ್ರತಿ ಯೊಂದು ಆಹಾರ ಬಲಿ ಸಂಪೂರ್ಣವಾಗಿ ಸುಡಲ್ಪಡ ಬೇಕು; ಅದನ್ನು ತಿನ್ನಬಾರದು ಅಂದನು. ಕರ್ತನು ಮೋಶೆಯೊಂದಿಗೆ ಮಾತನಾಡಿ-- ಆರೋನನಿಗೂ ಅವನ ಕುಮಾರರಿಗೂ ಹೇಳಬೇಕಾ ದದ್ದೇನಂದರೆ, ಪಾಪದ ಬಲಿಯ ನಿಯಮವು ಇದೇ. ದಹನಬಲಿಯು ವಧಿಸಲ್ಪಡುವ ಸ್ಥಳದಲ್ಲಿ ಪಾಪದ ಬಲಿಯೂ ಕರ್ತನ ಸನ್ನಿಧಿಯಲ್ಲಿ ವಧಿಸಲ್ಪಡ ಬೇಕು; ಅದು ಅತಿ ಪರಿಶುದ್ಧವಾದದ್ದು. ಪಾಪಕ್ಕಾಗಿ ಸಮರ್ಪಣೆ ಮಾಡುವ ಯಾಜಕನು ಅದನ್ನು ತಿನ್ನಬೇಕು; ಅದನ್ನು ಸಭೆಯ ಗುಡಾರ ಅಂಗಳದ ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕು. ಯಾವನಾದರೂ ಅದರ ಮಾಂಸವನ್ನು ಮುಟ್ಟಿದರೆ ಅದು ಪರಿಶುದ್ಧವಾಗುವದು; ಯಾವದಾ ದರೂ ಉಡುಪಿನ ಮೇಲೆ ಅದರ ರಕ್ತವು ಚಿಮುಕಿಸ ಲ್ಪಟ್ಟಾಗ ನೀನು ಅದನ್ನು ಚಿಮುಕಿಸದ ಪರಿಶುದ್ಧ ಸ್ಥಳದಲ್ಲಿಯೇ ತೊಳೆಯಬೇಕು. ಆದರೆ ಅದನ್ನು ಬೇಯಿಸಿದ ಮಣ್ಣಿನ ಪಾತ್ರೆಯು ಒಡೆಯಲ್ಪಡಬೇಕು; ಅದನ್ನು ಒಂದು ಹಿತ್ತಾಳೆಯ ಪಾತ್ರೆಯಲ್ಲಿ ಬೇಯಿಸಿ ದ್ದಾದರೆ ಅದನ್ನು ಬೆಳಗಿ ನೀರಿನಿಂದ ತೊಳೆಯಬೇಕು. ಯಾಜಕರಲ್ಲಿ ಇರುವ ಗಂಡಸರೆಲ್ಲಾ ಅದನ್ನು ತಿನ್ನಬೇಕು; ಅದು ಅತಿ ಪರಿಶುದ್ಧವಾದದ್ದು.ಯಾವ ಪಾಪದ ಬಲಿಯ ರಕ್ತವು ಸಭೆಯ ಡೇರೆಯೊಳಗೆ ಸಮಾಧಾನಕ್ಕಾಗಿ ತರಲ್ಪಟ್ಟಿತೋ ಆ ಪಾಪದ ಬಲಿಯನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬಾರದು; ಅದನ್ನು ಬೆಂಕಿಯಿಂದ ಸುಡಬೇಕು. ಯಾವ ಪಾಪದ ಬಲಿಯ ರಕ್ತವು ಸಭೆಯ ಡೇರೆಯೊಳಗೆ ಸಮಾಧಾನಕ್ಕಾಗಿ ತರಲ್ಪಟ್ಟಿತೋ ಆ ಪಾಪದ ಬಲಿಯನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬಾರದು; ಅದನ್ನು ಬೆಂಕಿಯಿಂದ ಸುಡಬೇಕು.
- Leviticus 4:8–10 ಯಾಜಕಕಾಂಡ 4:8–10ಅವನು ಪಾಪದ ಬಲಿಗಾಗಿರುವ ಹೋರಿಯ ಎಲ್ಲಾ ಕೊಬ್ಬನ್ನು ಅದರಿಂದ ತೆಗೆಯಬೇಕು; ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಜನಕಾಂಗಗಳನ್ನೂ ಪಕ್ಕೆಯ ಬದಿಯಲ್ಲಿರುವ ಕೊಬ್ಬನ್ನೂ ಮೂತ್ರಜನಕಾಂಗಗಳೊಂದಿಗೆ ಕಲಿಜದ ಮೇಲಿರುವ ಪೊರೆಯನ್ನೂ ಅವನು ತೆಗೆಯಬೇಕು. ಸಮಾಧಾನದ ಯಜ್ಞಸಮರ್ಪಣೆಯನ್ನು ಹೋರಿ ಯಿಂದ ತೆಗೆಯಲ್ಪಟ್ಟಂತೆಯೇ ತೆಗೆಯಬೇಕು; ಯಾಜಕನು ದಹನಬಲಿ ಯಜ್ಞವೇದಿಯ ಮೇಲೆ ಅವುಗಳನ್ನು ಸುಡಬೇಕು.
- Leviticus 5:16 ಯಾಜಕಕಾಂಡ 5:16ಪರಿಶುದ್ಧ ವಾದದ್ದಲ್ಲದೆ ಮಾಡಿದ ಕೇಡಿಗೆ ಬದಲು ಕೊಟ್ಟು ಅದಕ್ಕೆ ಐದನೇ ಪಾಲನ್ನು ಕೂಡಿಸಿ ಅದನ್ನು ಯಾಜಕನಿಗೆ ಕೊಡಬೇಕು, ಯಾಜಕನು ಅವನಿಗಾಗಿ ಅತಿಕ್ರಮದ ಬಲಿಯಾದ ಟಗರಿನಿಂದ ಪ್ರಾಯಶ್ಚಿತ್ತಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
- Leviticus 6:7 ಯಾಜಕಕಾಂಡ 6:7ಯಾಜಕನು ಅವನಿಗಾಗಿ ಕರ್ತನ ಮುಂದೆ ಪ್ರಾಯಶ್ಚಿತ್ತಮಾಡಬೇಕು. ಅತಿ ಕ್ರಮವಾಗಿ ಅವನು ಏನನ್ನಾದರೂ ಮಾಡಿದ್ದರೆ ಅದು ಅವನಿಗೆ ಕ್ಷಮಿಸಲ್ಪಡುವದು ಅಂದನು.
- Leviticus 5:13 ಯಾಜಕಕಾಂಡ 5:13ಇವು ಗಳಲ್ಲಿ ಒಂದನ್ನು ಪಾಪದ ವಿಷಯವಾಗಿ ಯಾಜಕನು ಅವನಿಗೋಸ್ಕರ ಪ್ರಾಯಶ್ಚಿತ್ತಮಾಡಬೇಕು. ಆಗ ಅದು ಅವನಿಗೆ ಕ್ಷಮಿಸಲ್ಪಡುವದು ಮತ್ತು ಉಳಿದದ್ದು ಯಾಜಕನಿಗೋಸ್ಕರ ಆಹಾರಬಲಿಯಾಗಿ ಇರುವದು ಅಂದನು.