Leviticus · chapter 5 · verse 9
Leviticus 5:9 in Kannada
ಇದಲ್ಲದೆ ಅವನು ಪಾಪದ ಬಲಿಯ ರಕ್ತವನ್ನು ಯಜ್ಞವೇದಿಯ ಬದಿಯಲ್ಲಿ ಚಿಮುಕಿಸಬೇಕು. ಉಳಿದ ರಕ್ತವನ್ನು ಯಜ್ಞವೇದಿಯ ಬದಿಯಲ್ಲಿ ಹಿಂಡಬೇಕು; ಅದು ಪಾಪದ ಬಲಿಯಾಗಿದೆ.
Idallade avanu paapada baliya raktavannu yajnyavediya badiyalli chimukisabeku. Ulida raktavannu yajnyavediya badiyalli hindabeku; adu paapada baliyaagide.
Leviticus 5:9 in English
- King James Version (KJV)
- And he shall sprinkle of the blood of the sin offering upon the side of the altar; and the rest of the blood shall be wrung out at the bottom of the altar: it [is] a sin offering.
- World English Bible (WEB)
- He shall sprinkle some of the blood of the sin offering on the side of the altar; and the rest of the blood shall be drained out at the base of the altar. It is a sin offering.
- American Standard Version (ASV)
- and he shall sprinkle of the blood of the sin-offering upon the side of the altar; and the rest of the blood shall be drained out at the base of the altar: it is a sin-offering.
- Bible in Basic English (BBE)
- And he is to put drops of the blood of the offering on the side of the altar, and the rest of the blood is to be drained out at the base of the altar; it is a sin-offering.
- Darby Translation (DBY)
- and he shall sprinkle of the blood of the sin-offering on the wall of the altar; and the rest of the blood shall be wrung out at the bottom of the altar: it is a sin-offering.
- Webster's Bible (WBS)
- And he shall sprinkle of the blood of the sin-offering upon the side of the altar; and the rest of the blood shall be wrung out at the bottom of the altar: it [is] a sin-offering.
- Young's Literal Translation (YLT)
- and he hath sprinkled of the blood of the sin-offering on the side of the altar, and that which is left of the blood is wrung out at the foundation of the altar; it [is] a sin-offering.
Read in context
- 7ಅವನು ಒಂದು ಕುರಿಮರಿಯನ್ನು ತರುವದಕ್ಕೆ ಅಶಕ್ತನಾಗಿದ್ದರೆ ತಾನು ಮಾಡಿದ ಅಪರಾಧಕ್ಕಾಗಿ ಎರಡು ಬೆಳವಗಳನ್ನಾಗಲಿ ಇಲ್ಲವೆ ಎರಡು ಪಾರಿವಾಳದ ಮರಿ ಗಳನ್ನಾಗಲಿ ಕರ್ತನಿಗೆ ತರಬೇಕು; ಒಂದನ್ನು ಪಾಪದ ಬಲಿಗಾಗಿ ಮತ್ತೊಂದನ್ನು ದಹನಬಲಿಗಾಗಿ ತರಬೇಕು.
- 8ಅವನು ಅವುಗಳನ್ನು ಯಾಜಕರ ಬಳಿಗೆ ತಂದಾಗ ಪಾಪದ ಬಲಿಗೆ ತಂದಿರುವದನ್ನು ಮೊದಲು ಸಮರ್ಪಿಸಿ ಅದರ ತಲೆಯನ್ನು ಕುತ್ತಿಗೆಯಿಂದ ಮುರಿಯಬೇಕು, ಅದನ್ನು ವಿಭಾಗಿಸಬಾರದು.
- 9ಇದಲ್ಲದೆ ಅವನು ಪಾಪದ ಬಲಿಯ ರಕ್ತವನ್ನು ಯಜ್ಞವೇದಿಯ ಬದಿಯಲ್ಲಿ ಚಿಮುಕಿಸಬೇಕು. ಉಳಿದ ರಕ್ತವನ್ನು ಯಜ್ಞವೇದಿಯ ಬದಿಯಲ್ಲಿ ಹಿಂಡಬೇಕು; ಅದು ಪಾಪದ ಬಲಿಯಾಗಿದೆ.
- 10ಅವನು ಕ್ರಮದ ಪ್ರಕಾರ ಎರಡನೆಯದನ್ನು ದಹನ ಬಲಿಯಾಗಿ ಸಮರ್ಪಿಸಬೇಕು; ಅವನು ಮಾಡಿದ ಪಾಪಕ್ಕಾಗಿ ಯಾಜಕನು ಪ್ರಾಯಶ್ಚಿತ್ತಮಾಡಬೇಕು. ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
- 11ಆದರೆ ಅವನು ಎರಡು ಬೆಳವಗಳನ್ನಾಗಲಿ ಇಲ್ಲವೆ ಎರಡು ಪಾರಿವಾಳದ ಮರಿಗಳನ್ನಾಗಲಿ ತರುವದಕ್ಕೆ ಅಶಕ್ತನಾಗಿದ್ದರೆ ಪಾಪಮಾಡಿದವನು ತನ್ನ ಸಮರ್ಪಣೆ ಗಾಗಿ ಒಂದು ಎಫದ ಹತ್ತನೆಯ ಭಾಗದಷ್ಟು ನಯ ವಾದ ಹಿಟ್ಟನ್ನು ಪಾಪದ ಬಲಿಗಾಗಿ ತರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಇಲ್ಲವೆ ಸಾಂಬ್ರಾಣಿಯನ್ನು ಹಾಕಬಾರದು. ಅದು ಪಾಪದ ಬಲಿಯಾಗಿದೆ.
Cross references
- Leviticus 4:7 ಯಾಜಕಕಾಂಡ 4:7ಯಾಜಕನು ಸ್ವಲ್ಪ ರಕ್ತವನ್ನು ಸಭೆಯ ಗುಡಾರ ದೊಳಗಿರುವ ಸುವಾಸನೆಯುಳ್ಳ ಧೂಪ ಯಜ್ಞವೇದಿಯ ಕೊಂಬುಗಳಿಗೆ ಕರ್ತನ ಮುಂದೆ ಹಚ್ಚಬೇಕು; ಅಲ್ಲದೆ ಆ ಹೋರಿಯ ಎಲ್ಲಾ ರಕ್ತವನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ದಹನಬಲಿ ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು.
- Leviticus 4:30 ಯಾಜಕಕಾಂಡ 4:30ಆಗ ಯಾಜಕನು ತನ್ನ ಬೆರಳಿನಿಂದ ಅದರ ರಕ್ತವನ್ನು ತೆಗೆದುಕೊಂಡು ದಹನ ಬಲಿ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ಉಳಿದ ಎಲ್ಲಾ ರಕ್ತವನ್ನು ಆ ಯಜ್ಞವೇದಿಯ ಅಡಿಯಲ್ಲಿ ಹೊಯ್ಯ ಬೇಕು.
- Leviticus 4:18 ಯಾಜಕಕಾಂಡ 4:18ಇದಲ್ಲದೆ ಅವನು ಸ್ವಲ್ಪ ರಕ್ತ ವನ್ನು ಸಭೆಯ ಗುಡಾರದೊಳಗಿರುವ ಯಜ್ಞವೇದಿಯ ಕೊಂಬುಗಳಿಗೆ ಕರ್ತನ ಎದುರಿನಲ್ಲಿ ಹಚ್ಚಿ ಉಳಿದ ಎಲ್ಲಾ ರಕ್ತವನ್ನು ಸಭೆಯ ಗುಡಾರದೊಳಗಿರುವ ದಹನ ಬಲಿ ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು.
- Leviticus 4:34 ಯಾಜಕಕಾಂಡ 4:34ಯಾಜಕನು ಅದರ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು ದಹನಬಲಿ ಯಜ್ಞವೇದಿಯ ಕೊಂಬುಗಳಿಗೆ ಹಚ್ಚ ಬೇಕು. ಉಳಿದ ಎಲ್ಲಾ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು.ಇದಲ್ಲದೆ ಸಮಾಧಾನ ಯಜ್ಞ ಸಮರ್ಪಣೆಗಳ ಕುರಿಮರಿಯ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನೂ ತೆಗೆಯಬೇಕು; ಯಾಜಕನು ಬೆಂಕಿಯ ಸಮರ್ಪಣೆಗಳನ್ನು ಕರ್ತನಿಗೆ ಮಾಡಿ ದಂತೆಯೇ ಯಜ್ಞವೇದಿಯ ಮೇಲೆ ಅವುಗಳನ್ನು ಸುಡ ಬೇಕು; ಅವನು ಮಾಡಿದ ಪಾಪಕ್ಕೆ ಯಾಜಕನು ಪ್ರಾಯಶ್ಚಿತ್ತ ಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
- Leviticus 4:25 ಯಾಜಕಕಾಂಡ 4:25ಯಾಜಕನು ಪಾಪದ ಬಲಿಯ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು ದಹನಬಲಿ ಯಜ್ಞವೇದಿಯ ಕೊಂಬುಗಳ ಮೇಲೆ ಹಚ್ಚಿ ಅದರ ರಕ್ತವನ್ನು ದಹನಬಲಿ ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು.
- Isaiah 42:21 ಯೆಶಾಯ 42:21ಕರ್ತನು ಆತನ ನೀತಿಗೋಸ್ಕರ ಬಹಳವಾಗಿ ಮೆಚ್ಚುವನು, ಆತನು ನ್ಯಾಯಪ್ರಮಾಣವನ್ನು ಹೆಚ್ಚಿಸಿ ಘನಪಡಿಸುವನು.
- Hebrews 2:10 ಇಬ್ರಿಯರಿಗೆ 2:10ಸಮಸ್ತವು ಯಾವಾತನಿಗೋಸ್ಕರವೂ ಯಾವಾತನಿಂದಲೂ ಉಂಟಾಯಿತೋ ಆತನು ಬಹುಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ ಅವರ ರಕ್ಷಣಾ ನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು ಆತನಿಗೆ ಯುಕ್ತವಾಗಿತ್ತು.
- Hebrews 12:24 ಇಬ್ರಿಯರಿಗೆ 12:24ಹೊಸಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಹಿತಕರವಾಗಿ ಮಾತನಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
- Exodus 12:22–23 ವಿಮೋಚನಕಾಂಡ 12:22–23ಹಿಸ್ಸೋಪಿನ ಕಟ್ಟನ್ನು ತೆಗೆದುಕೊಂಡು ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ ಬಾಗಿ ಲಿನ ಮೇಲಿನ ಅಡ್ಡಗಂಬಕ್ಕೂ ಪಕ್ಕದಲ್ಲಿರುವ ಎರಡು ನಿಲುವುಗಂಬಗಳಿಗೂ ಹಚ್ಚಿರಿ. ನಿಮ್ಮಲ್ಲಿ ಯಾರೂ ಬೆಳಗಾಗುವ ವರೆಗೆ ಮನೆಯ ಬಾಗಿಲನ್ನು ಬಿಟ್ಟು ಹೋಗಬಾರದು. ಕರ್ತನು ಐಗುಪ್ತ್ಯರನ್ನು ಸಂಹರಿ ಸುವದಕ್ಕಾಗಿ ಹಾದುಹೋಗುವನು; ಆತನು ಮೇಲಿನ ಅಡ್ಡಗಂಬದ ಮೇಲೂ ಪಕ್ಕದ ಎರಡು ನಿಲುವು ಕಂಬಗಳ ಮೇಲೂ ರಕ್ತವನ್ನು ನೋಡಿದಾಗ ಸಂಹಾರಕನು ನಿಮ್ಮ ಮನೆಗಳೊಳಗೆ ಬಂದು ನಿಮ್ಮನ್ನು ಸಂಹಾರಮಾಡ ದಂತೆ ನಿಮ್ಮ ಬಾಗಿಲುಗಳನ್ನು ದಾಟಿ ಹೋಗುವನು.
- Leviticus 1:15 ಯಾಜಕಕಾಂಡ 1:15ಆಗ ಯಾಜಕನು ಅದನ್ನು ಯಜ್ಞವೇದಿಯ ಬಳಿಗೆ ತಂದು ಅದರ ತಲೆಯನ್ನು ಮುರಿದು ಯಜ್ಞವೇದಿಯ ಮೇಲೆ ಸುಡಬೇಕು; ಅದರ ರಕ್ತವನ್ನು ಯಜ್ಞವೇದಿಯ ಹೊರಬದಿಯಲ್ಲಿ ಹಿಂಡಬೇಕು.
- Leviticus 7:2 ಯಾಜಕಕಾಂಡ 7:2ದಹನಬಲಿಯನ್ನು ವಧಿಸಿದ ಸ್ಥಳದಲ್ಲಿಯೇ ಅತಿಕ್ರಮದ ಬಲಿಯನ್ನು ವಧಿಸಬೇಕು: ಅವನು ಅದರ ರಕ್ತವನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸ ಬೇಕು.
- Leviticus 1:5 ಯಾಜಕಕಾಂಡ 1:5ಅವನು ಆ ಹೋರಿಯನ್ನು ಕರ್ತನ ಮುಂದೆ ವಧಿಸಬೇಕು; ಆಗ ಆರೋನನ ಕುಮಾರರಾದ ಯಾಜಕರು ರಕ್ತವನ್ನು ತಂದು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.