Leviticus · chapter 7 · verse 5
Leviticus 7:5 in Kannada
ಆಗ ಯಾಜಕನು ಅವು ಗಳನ್ನು ಬೆಂಕಿಯಿಂದ ಕರ್ತನಿಗೆ ಸಮರ್ಪಿಸುವ ಯಜ್ಞ ವೇದಿಯ ಮೇಲೆ ಸುಡಬೇಕು. ಇದು ಅತಿಕ್ರಮದ ಬಲಿಯಾಗಿದೆ.
Aaga yaajakanu avu galannu benkiyinda kartanige samarpisuva yajnya vediya mele sudabeku. Idu atikramada baliyaagide.
Leviticus 7:5 in English
- King James Version (KJV)
- And the priest shall burn them upon the altar [for] an offering made by fire unto the LORD: it [is] a trespass offering.
- World English Bible (WEB)
- and the priest shall burn them on the altar for an offering made by fire to the LORD: it is a trespass offering.
- American Standard Version (ASV)
- and the priest shall burn them upon the altar for an offering made by fire unto Jehovah: it is a trespass-offering.
- Bible in Basic English (BBE)
- They are to be burned by the priest on the altar for an offering made by fire to the Lord: it is an offering for wrongdoing.
- Darby Translation (DBY)
- And the priest shall burn them on the altar, an offering by fire to Jehovah: it is a trespass-offering.
- Webster's Bible (WBS)
- And the priest shall burn them upon the altar [for] an offering made by fire to the LORD: it [is] a trespass-offering.
- Young's Literal Translation (YLT)
- and the priest hath made them a perfume on the altar, a fire-offering to Jehovah; it [is] a guilt-offering.
Read in context
- 3ಅವನು ಅದರ ಎಲ್ಲಾ ಕೊಬ್ಬನ್ನೂ ಹಿಂಭಾಗ ವನ್ನೂ ಕರುಳುಗಳ ಮೇಲಿರುವ ಕೊಬ್ಬನ್ನೂ
- 4ಬದಿಯ ಲ್ಲಿರುವ ಎರಡು ಮೂತ್ರಜನಕಾಂಗಗಳನ್ನೂ ಅವು ಗಳ ಮೇಲಿರುವ ಕೊಬ್ಬನ್ನೂ ಕಲಿಜದ ಮೇಲಿರುವ ಪೊರೆ ಯನ್ನೂ ಮೂತ್ರಜನಕಾಂಗಗಳೊಂದಿಗೆ ತೆಗೆದು ಕೊಂಡು ಅರ್ಪಿಸಬೇಕು.
- 5ಆಗ ಯಾಜಕನು ಅವು ಗಳನ್ನು ಬೆಂಕಿಯಿಂದ ಕರ್ತನಿಗೆ ಸಮರ್ಪಿಸುವ ಯಜ್ಞ ವೇದಿಯ ಮೇಲೆ ಸುಡಬೇಕು. ಇದು ಅತಿಕ್ರಮದ ಬಲಿಯಾಗಿದೆ.
- 6ಯಾಜಕರಲ್ಲಿ ಗಂಡಸರೆಲ್ಲರೂ ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಅದು ಅತಿ ಪರಿಶುದ್ಧವಾದದ್ದು.
- 7ಪಾಪದ ಬಲಿಯ ಹಾಗೆಯೇ ಅತಿಕ್ರಮದ ಬಲಿಯೂ ಆಗಿದೆ. ಅವುಗಳಿಗೆ ಇರುವದು ಒಂದೇ ನಿಯಮ; ಅವುಗಳಿಂದ ಪ್ರಾಯಶ್ಚಿತ್ತಮಾಡುವ ಯಾಜಕನೇ ಅವುಗಳನ್ನು ತೆಗೆದುಕೊಳ್ಳಬೇಕು.
Cross references
- Leviticus 3:16 ಯಾಜಕಕಾಂಡ 3:16ಯಾಜಕನು ಅವುಗಳನ್ನು ಯಜ್ಞವೇದಿಯ ಮೇಲೆ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಯಜ್ಞಾ ರ್ಪಣೆಯು ಸುವಾಸನೆಯ ಆಹಾರವಾಗಿರುವದು. ಎಲ್ಲಾ ಕೊಬ್ಬು ಕರ್ತನದೇ.ನೀವು ಕೊಬ್ಬನ್ನಾಗಲಿ ರಕ್ತವನ್ನಾಗಲಿ ತಿನ್ನದಂತೆ ಇದು ನಿಮ್ಮ ಸಂತತಿಯ ವರಿಗೆಲ್ಲಾ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವದು.
- Galatians 2:20 ಗಲಾತ್ಯದವರಿಗೆ 2:20ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಆದಾಗ್ಯೂ ನಾನು ಜೀವಿ ಸುತ್ತೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸುವದು ದೇವಕುಮಾರನ ಮೇಲಣ ನಂಬಿಕೆ ಯಲ್ಲಿಯೇ, ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನೇನಾನು ದೇವರ ಕೃಪೆಯನ್ನು ನಿರರ್ಥಕ ಮಾಡುವದಿಲ್ಲ. ನ್ಯಾಯಪ್ರಮಾಣದಿಂದ ನೀತಿಯುಂಟಾಗುವದಾದರೆ ಕ್ರಿಸ್ತನು ಮರಣವನ್ನು ಹೊಂದಿದ್ದು ವ್ಯರ್ಥವಾಯಿತು.
- Leviticus 1:9 ಯಾಜಕಕಾಂಡ 1:9ಅದರ ಕರುಳುಗಳನ್ನೂ ಕಾಲುಗಳನ್ನೂ ಅವನು ನೀರಿನಲ್ಲಿ ತೊಳೆಯಬೇಕು; ಯಾಜಕನು ಎಲ್ಲವನ್ನೂ ಯಜ್ಞವೇದಿಯ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ ಕರ್ತನಿಗೆ ಸುವಾಸನೆಯಾಗು ವಂತೆಯೂ ಸುಡಬೇಕು.
- Leviticus 2:2 ಯಾಜಕಕಾಂಡ 2:2ಇದಲ್ಲದೆ ಅವನು ಅದನ್ನು ಯಾಜಕರಾದ ಆರೋನನ ಕುಮಾರರ ಬಳಿಗೆ ತರಬೇಕು; ಅವನು ಹಿಟ್ಟಿನಲ್ಲಿಯೂ ಎಣ್ಣೆಯಲ್ಲಿಯೂ ಒಂದು ಹಿಡಿಯನ್ನು ಅದರ ಎಲ್ಲಾ ಸಾಂಬ್ರಾಣಿಯ ಸಂಗಡ ತೆಗೆದುಕೊಳ್ಳಬೇಕು. ಯಾಜ ಕನು ಅದನ್ನು ಜ್ಞಾಪಕಾರ್ಥವಾಗಿ ಯಜ್ಞವೇದಿಯ ಮೇಲೆ ಕರ್ತನಿಗೆ ಸುವಾಸನೆಯ ಸಮರ್ಪಣೆಯಾಗಿ ಬೆಂಕಿಯಿಂದ ಸುಡಬೇಕು.
- Leviticus 1:13 ಯಾಜಕಕಾಂಡ 1:13ಆದರೆ ಅವನು ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು; ಆಗ ಯಾಜಕನು ಅವೆಲ್ಲವುಗಳನ್ನು ತಂದು ಯಜ್ಞವೇದಿಯ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿಯ ಹಾಗೆಯೂ ಕರ್ತನಿಗೆ ಸುವಾಸನೆ ಯಾಗುವಂತೆಯೂ ಸುಡಬೇಕು.
- Leviticus 2:9 ಯಾಜಕಕಾಂಡ 2:9ಆಗ ಯಾಜಕನು ಅದರಿಂದ ಜ್ಞಾಪಕಾರ್ಥವಾದ ಆಹಾರ ಸಮರ್ಪಣೆ ಯನ್ನಾಗಿ ತೆಗೆದುಕೊಂಡು ಅದನ್ನು ಯಜ್ಞವೇದಿಯ ಮೇಲೆ ಸುಡಬೇಕು: ಅದು ಬೆಂಕಿಯಿಂದ ಮಾಡಿ ದ್ದಾಗಿದ್ದು ಕರ್ತನಿಗೆ ಸುವಾಸನೆಯ ಸಮರ್ಪಣೆಯಾಗಿ ರುವದು.
- 1 Peter 4:1–2 1 ಪೇತ್ರನು 4:1–2ಕ್ರಿಸ್ತನು ಶರೀರದಲ್ಲಿ ನಮಗೋಸ್ಕರ ಬಾಧೆಪಟ್ಟದ್ದರಿಂದ ನೀವು ಸಹ ಆತನಿಗಿದ್ದ ಮನಸ್ಸನ್ನು ಧರಿಸಿಕೊಳ್ಳಿರಿ. ಯಾಕಂದರೆ ಶರೀರ ದಲ್ಲಿ ಬಾಧೆಪಟ್ಟವನು ಪಾಪಮಾಡುವದನ್ನು ನಿಲ್ಲಿಸಿ ಬಿಟ್ಟಿದ್ದಾನೆ. ಹೀಗೆ ಶರೀರದಲ್ಲಿ ಇನ್ನು ಉಳಿದಿರುವ ತನ್ನ ಜೀವಿತಕಾಲದಲ್ಲಿ ಮನುಷ್ಯರ ದುರಾಶೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವನು.
- Leviticus 2:16 ಯಾಜಕಕಾಂಡ 2:16ಯಾಜಕನು ಬಡಿದ ಕಾಳುಗಳಲ್ಲಿ ಸ್ವಲ್ಪ ಭಾಗವನ್ನು ಮತ್ತು ಎಣ್ಣೆಯ ಸ್ವಲ್ಪ ಭಾಗವನ್ನು ಅದರ ಜೊತೆಯಲ್ಲಿ ಎಲ್ಲಾ ಸಾಂಬ್ರಾಣಿ ಯನ್ನು ಜ್ಞಾಪಕಾರ್ಥವಾಗಿ ಸುಡಬೇಕು: ಇದು ಕರ್ತ ನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯಾಗಿದೆ.
- Galatians 5:24 ಗಲಾತ್ಯದವರಿಗೆ 5:24ಕ್ರಿಸ್ತನವರು ತಮ್ಮ ಶರೀರವನ್ನು ಅದರ ಇಚ್ಛೆ ದುರಾಶೆ ಸಹಿತವಾಗಿ ಶಿಲುಬೆಗೆ ಹಾಕಿದ್ದಾರೆ.