Leviticus · chapter 9 · verse 10
Leviticus 9:10 in Kannada
ಆದರೆ ಪಾಪದ ಬಲಿಯ ಕೊಬ್ಬು, ಮೂತ್ರಜನಕಾಂಗಗಳು ಕಲಿಜದ ಮೇಲಿನ ಪೊರೆ ಇವುಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿ ದ್ದಂತೆಯೇ ಅವನು ಯಜ್ಞವೇದಿಯ ಮೇಲೆ ಸುಟ್ಟನು.
Aadare paapada baliya kobbu, mootrajanakaangagalu kalijada melina pore ivugalannu kartanu moshege aajnyaapisi ddanteye avanu yajnyavediya mele suttanu.
Leviticus 9:10 in English
- King James Version (KJV)
- But the fat, and the kidneys, and the caul above the liver of the sin offering, he burnt upon the altar; as the LORD commanded Moses.
- World English Bible (WEB)
- but the fat, and the kidneys, and the cover from the liver of the sin offering, he burned upon the altar, as the LORD commanded Moses.
- American Standard Version (ASV)
- but the fat, and the kidneys, and the caul from the liver of the sin-offering, he burnt upon the altar; as Jehovah commanded Moses.
- Bible in Basic English (BBE)
- But the fat and the kidneys and the fat on the liver of the sin-offering were burned by him on the altar as the Lord gave orders to Moses.
- Darby Translation (DBY)
- And the fat, and the kidneys, and the net above the liver, of the sin-offering, he burned on the altar, as Jehovah had commanded Moses.
- Webster's Bible (WBS)
- But the fat, and the kidneys, and the caul above the liver of the sin-offering, he burnt upon the altar; as the LORD commanded Moses.
- Young's Literal Translation (YLT)
- and the fat, and the kidneys, and the redundance of the liver, of the sin-offering, he hath made a perfume on the altar, as Jehovah hath commanded Moses;
Read in context
- 8ಆದದರಿಂದ ಆರೋನನು ಯಜ್ಞವೇದಿಯ ಕಡೆಗೆ ಹೋಗಿ ತನಗಾಗಿ ಪಾಪದ ಬಲಿಯ ಕರುವನ್ನು ವಧಿಸಿದನು.
- 9ಆಗ ಆರೋನನ ಕುಮಾರರು ಅವನ ಬಳಿಗೆ ರಕ್ತವನ್ನು ತಂದರು; ಅವನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ಅದನ್ನು ಯಜ್ಞವೇದಿಯ ಕೊಂಬು ಗಳಿಗೆ ಹಚ್ಚಿದನು; ಉಳಿದ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ದನು.
- 10ಆದರೆ ಪಾಪದ ಬಲಿಯ ಕೊಬ್ಬು, ಮೂತ್ರಜನಕಾಂಗಗಳು ಕಲಿಜದ ಮೇಲಿನ ಪೊರೆ ಇವುಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿ ದ್ದಂತೆಯೇ ಅವನು ಯಜ್ಞವೇದಿಯ ಮೇಲೆ ಸುಟ್ಟನು.
- 11ಮಾಂಸವನ್ನೂ ಚರ್ಮವನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.
- 12ಅವನು ದಹನ ಬಲಿಯನ್ನು ವಧಿಸಿದಾಗ ಆರೋನನ ಕುಮಾರರು ಅವನಿಗೆ ರಕ್ತವನ್ನು ತಂದು ಕೊಟ್ಟರು, ಅದನ್ನು ಅವನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು.
Cross references
- Proverbs 23:26 ಜ್ಞಾನೋಕ್ತಿಗಳು 23:26ನನ್ನ ಮಗನೇ, ನಿನ್ನ ಹೃದಯ ವನ್ನು ನನಗೆ ಕೊಡು; ನನ್ನ ಮಾರ್ಗಗಳನ್ನು ನಿನ್ನ ಕಣ್ಣುಗಳು ದೃಷ್ಟಿಯಿಟ್ಟು ನೋಡಲಿ.
- Leviticus 4:34–35 ಯಾಜಕಕಾಂಡ 4:34–35ಯಾಜಕನು ಅದರ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು ದಹನಬಲಿ ಯಜ್ಞವೇದಿಯ ಕೊಂಬುಗಳಿಗೆ ಹಚ್ಚ ಬೇಕು. ಉಳಿದ ಎಲ್ಲಾ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು.ಇದಲ್ಲದೆ ಸಮಾಧಾನ ಯಜ್ಞ ಸಮರ್ಪಣೆಗಳ ಕುರಿಮರಿಯ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನೂ ತೆಗೆಯಬೇಕು; ಯಾಜಕನು ಬೆಂಕಿಯ ಸಮರ್ಪಣೆಗಳನ್ನು ಕರ್ತನಿಗೆ ಮಾಡಿ ದಂತೆಯೇ ಯಜ್ಞವೇದಿಯ ಮೇಲೆ ಅವುಗಳನ್ನು ಸುಡ ಬೇಕು; ಅವನು ಮಾಡಿದ ಪಾಪಕ್ಕೆ ಯಾಜಕನು ಪ್ರಾಯಶ್ಚಿತ್ತ ಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು. ಇದಲ್ಲದೆ ಸಮಾಧಾನ ಯಜ್ಞ ಸಮರ್ಪಣೆಗಳ ಕುರಿಮರಿಯ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನೂ ತೆಗೆಯಬೇಕು; ಯಾಜಕನು ಬೆಂಕಿಯ ಸಮರ್ಪಣೆಗಳನ್ನು ಕರ್ತನಿಗೆ ಮಾಡಿ ದಂತೆಯೇ ಯಜ್ಞವೇದಿಯ ಮೇಲೆ ಅವುಗಳನ್ನು ಸುಡ ಬೇಕು; ಅವನು ಮಾಡಿದ ಪಾಪಕ್ಕೆ ಯಾಜಕನು ಪ್ರಾಯಶ್ಚಿತ್ತ ಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
- Isaiah 66:2 ಯೆಶಾಯ 66:2ಇವುಗಳ ನ್ನೆಲ್ಲಾ ನನ್ನ ಕೈ ಉಂಟುಮಾಡಿತು; ಇವುಗಳೆಲ್ಲಾ ಇದ್ದವೆಂದು ಕರ್ತನು ಅನ್ನುತ್ತಾನೆ. ಆದರೆ ಇವನ ಮೇಲೆ ದೃಷ್ಟಿ ಇಡುವೆನು ದೀನನೂ ಜಜ್ಜಿದ ಆತ್ಮವುಳ್ಳ ವನೂ ನನ್ನ ವಾಕ್ಯಕ್ಕೆ ನಡುಗುವವನೂ ಯಾವನೋ ಅವನ ಮೇಲೆಯೂ ದೃಷ್ಟಿ ಇಡುವೆನು.
- Leviticus 3:3–5 ಯಾಜಕಕಾಂಡ 3:3–5ಅವನು ಸಮಾಧಾನದ ಕಾಣಿಕೆಯ ಯಜ್ಞಾ ರ್ಪಣೆಯನ್ನು ಅಂದರೆ ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಜನಕಾಂಗಗಳನ್ನೂ ಪಕ್ಕೆಯ ಬದಿ ಯಲ್ಲಿ ಅವುಗಳ ಮೇಲಿರುವ ಕೊಬ್ಬನ್ನೂ ಮೂತ್ರಜನ ಕಾಂಗಗಳ ಮೇಲಿರುವ ಪೊರೆಯನ್ನೂ ಮೂತ್ರಜನ ಕಾಂಗಗಳೊಂದಿಗೆ ಅದನ್ನು ತೆಗೆದುಕೊಂಡು ಕರ್ತನಿಗೆ ಬೆಂಕಿಯಿಂದ ಕಾಣಿಕೆಯಾಗಿ ಸಮರ್ಪಿಸಬೇಕು. ಆರೋನನ ಕುಮಾರರು ಅದನ್ನು ಯಜ್ಞವೇದಿಯಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನ ಬಲಿಯಾಗಿ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು ಕರ್ತನಿಗೆ ಸುವಾಸನೆಯಾಗಿರುವದು.
- Leviticus 8:16–17 ಯಾಜಕಕಾಂಡ 8:16–17ಕರುಳುಗಳ ಮೇಲಿ ರುವ ಎಲ್ಲಾ ಕೊಬ್ಬನ್ನೂ ಕಲಿಜದ ಮೇಲಿರುವ ಪೊರೆ ಯನ್ನೂ ಎರಡು ಮೂತ್ರಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಮೋಶೆಯು ತೆಗೆದುಕೊಂಡು ಯಜ್ಞ ವೇದಿಯ ಮೇಲೆ ಸುಟ್ಟನು. ಆದರೆ ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಅವನು ಹೋರಿ ಯನ್ನೂ ಚರ್ಮವನ್ನೂ ಮಾಂಸವನ್ನೂ ಅದರ ಸಗಣಿಯನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.
- Isaiah 53:10 ಯೆಶಾಯ 53:10ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು.
- Psalm 51:17 ಕೀರ್ತನೆಗಳು 51:17ಮುರಿದ ಮನಸ್ಸೇ ದೇವರ ಯಜ್ಞಗಳು. ಓ ದೇವರೇ, ಪಶ್ಚಾತ್ತಾಪದಿಂದ ಜಜ್ಜಿ ಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.
- Leviticus 3:9–11 ಯಾಜಕಕಾಂಡ 3:9–11ಅದರ ಇಡೀ ಹಿಂಭಾಗವನ್ನೂ ಕೊಬ್ಬನ್ನೂ ಅವನು ಬೆನ್ನೆಲುಬಿನಿಂದ ತೆಗೆದು ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳು ಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ ಪೊರೆಯನ್ನೂ ಮೂತ್ರಜನ ಕಾಂಗಗಳೊಂದಿಗೆ ತೆಗೆದುಕೊಂಡು ಸಮಾಧಾನದ ಕಾಣಿಕೆಯ ಯಜ್ಞಾರ್ಪಣೆಯನ್ನು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಕರ್ತನಿಗೆ ಸಮರ್ಪಿಸಬೇಕು. ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಸುಡಬೇಕು; ಅದು ಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯ ಆಹಾರವಾಗಿರುತ್ತದೆ.
- Isaiah 57:15 ಯೆಶಾಯ 57:15ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
- Leviticus 4:8–12 ಯಾಜಕಕಾಂಡ 4:8–12ಅವನು ಪಾಪದ ಬಲಿಗಾಗಿರುವ ಹೋರಿಯ ಎಲ್ಲಾ ಕೊಬ್ಬನ್ನು ಅದರಿಂದ ತೆಗೆಯಬೇಕು; ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಜನಕಾಂಗಗಳನ್ನೂ ಪಕ್ಕೆಯ ಬದಿಯಲ್ಲಿರುವ ಕೊಬ್ಬನ್ನೂ ಮೂತ್ರಜನಕಾಂಗಗಳೊಂದಿಗೆ ಕಲಿಜದ ಮೇಲಿರುವ ಪೊರೆಯನ್ನೂ ಅವನು ತೆಗೆಯಬೇಕು. ಸಮಾಧಾನದ ಯಜ್ಞಸಮರ್ಪಣೆಯನ್ನು ಹೋರಿ ಯಿಂದ ತೆಗೆಯಲ್ಪಟ್ಟಂತೆಯೇ ತೆಗೆಯಬೇಕು; ಯಾಜಕನು ದಹನಬಲಿ ಯಜ್ಞವೇದಿಯ ಮೇಲೆ ಅವುಗಳನ್ನು ಸುಡಬೇಕು. ಆ ಹೋರಿಯ ಚರ್ಮ ವನ್ನು, ಅದರ ಎಲ್ಲಾ ಮಾಂಸವನ್ನು, ತಲೆ, ಕಾಲುಗಳು, ಕರುಳುಗಳು, ಅದರ ಸಗಣಿಯೊಂದಿಗೆ ಇಡೀ ಹೋರಿಯನ್ನು ಪಾಳೆಯದ ಆಚೆಗಿರುವ ಶುದ್ಧವಾದ ಸ್ಥಳಕ್ಕೆ ಅಂದರೆ ಬೂದಿ ಚೆಲ್ಲುವ ಸ್ಥಳಕ್ಕೆ ತಂದು ಅದನ್ನು ಕಟ್ಟಿಗೆಯ ಮೇಲೆ ಬೆಂಕಿಯಿಂದ ಸುಡ ಬೇಕು. ಅದನ್ನು ಬೂದಿ ಚೆಲ್ಲುವ ಸ್ಥಳದಲ್ಲಿ ಸುಡಬೇಕು.