Leviticus · chapter 9 · verse 8
Leviticus 9:8 in Kannada
ಆದದರಿಂದ ಆರೋನನು ಯಜ್ಞವೇದಿಯ ಕಡೆಗೆ ಹೋಗಿ ತನಗಾಗಿ ಪಾಪದ ಬಲಿಯ ಕರುವನ್ನು ವಧಿಸಿದನು.
Aadadarinda aaronanu yajnyavediya kadege hogi tanagaagi paapada baliya karuvannu vadhisidanu.
Leviticus 9:8 in English
- King James Version (KJV)
- Aaron therefore went unto the altar, and slew the calf of the sin offering, which [was] for himself.
- World English Bible (WEB)
- So Aaron came near to the altar, and killed the calf of the sin offering, which was for himself.
- American Standard Version (ASV)
- So Aaron drew near unto the altar, and slew the calf of the sin-offering, which was for himself.
- Bible in Basic English (BBE)
- So Aaron came near to the altar and put to death the ox for the sin-offering for himself;
- Darby Translation (DBY)
- And Aaron went to the altar and slaughtered the calf of the sin-offering which was for himself;
- Webster's Bible (WBS)
- Aaron therefore went to the altar, and slew the calf of the sin-offering, which [was] for himself.
- Young's Literal Translation (YLT)
- And Aaron draweth near unto the altar, and slaughtereth the calf of the sin-offering, which [is] for himself;
Read in context
- 6ಆಗ ಮೋಶೆಯು--ಕರ್ತನು ಆಜ್ಞಾಪಿಸಿದ್ದು ಇದೇ, ನೀವು ಇದನ್ನು ಮಾಡಿರಿ; ಕರ್ತನ ಮಹಿಮೆಯು ನಿಮಗೆ ಕಾಣಿಸಿಕೊಳ್ಳುವದು ಅಂದನು.
- 7ಮೋಶೆಯು ಆರೋನನಿಗೆ--ಯಜ್ಞವೇದಿಯ ಹತ್ತಿರಕ್ಕೆ ಹೋಗಿ ಕರ್ತನು ಆಜ್ಞಾಪಿಸಿದಂತೆಯೇ ನಿನ್ನ ಪಾಪದಬಲಿಯನ್ನೂ ದಹನಬಲಿಯನ್ನೂ ಅರ್ಪಿಸಿ, ನಿನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು; ಜನರ ಸಮರ್ಪಣೆಗಳನ್ನು ಸಮರ್ಪಿಸಿ ಅವರಿ ಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು ಅಂದನು.
- 8ಆದದರಿಂದ ಆರೋನನು ಯಜ್ಞವೇದಿಯ ಕಡೆಗೆ ಹೋಗಿ ತನಗಾಗಿ ಪಾಪದ ಬಲಿಯ ಕರುವನ್ನು ವಧಿಸಿದನು.
- 9ಆಗ ಆರೋನನ ಕುಮಾರರು ಅವನ ಬಳಿಗೆ ರಕ್ತವನ್ನು ತಂದರು; ಅವನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ಅದನ್ನು ಯಜ್ಞವೇದಿಯ ಕೊಂಬು ಗಳಿಗೆ ಹಚ್ಚಿದನು; ಉಳಿದ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ದನು.
- 10ಆದರೆ ಪಾಪದ ಬಲಿಯ ಕೊಬ್ಬು, ಮೂತ್ರಜನಕಾಂಗಗಳು ಕಲಿಜದ ಮೇಲಿನ ಪೊರೆ ಇವುಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿ ದ್ದಂತೆಯೇ ಅವನು ಯಜ್ಞವೇದಿಯ ಮೇಲೆ ಸುಟ್ಟನು.
Cross references
- Leviticus 4:29 ಯಾಜಕಕಾಂಡ 4:29ಅವನು ತನ್ನ ಕೈಯನ್ನು ಪಾಪದ ಬಲಿಯ ಮೇಲಿಟ್ಟು ಆ ಪಾಪದ ಬಲಿಯನ್ನು ದಹನಬಲಿಯ ಸ್ಥಳದಲ್ಲಿ ವಧಿಸಬೇಕು.
- Leviticus 4:1–12 ಯಾಜಕಕಾಂಡ 4:1–12ಇದಲ್ಲದೆ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- ಇಸ್ರಾ ಯೇಲನ ಮಕ್ಕಳಿಗೆ ಹೇಳಬೇಕಾದದ್ದೇನಂದರೆ--ಒಬ್ಬನು ಕರ್ತನ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಮಾಡಬಾರದವುಗಳನ್ನು ಮಾಡಿ ಪಾಪಿಯಾದರೆ, ಜನರು ಪಾಪಮಾಡುವ ಹಾಗೆ ಅಭಿಷಿಕ್ತನಾದ ಯಾಜಕನು ಪಾಪಮಾಡಿದರೆ ಅವನು ತನ್ನ ಪಾಪಕ್ಕಾಗಿ ದೋಷವಿಲ್ಲದ ಒಂದು ಎಳೇ ಹೋರಿಯನ್ನು ಪಾಪದ ಬಲಿಗಾಗಿ ಕರ್ತನಿಗೆ ತರಬೇಕು. ಅವನು ಆ ಹೋರಿ ಯನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಎದುರಿಗೆ ತಂದು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಆ ಹೋರಿಯನ್ನು ಕರ್ತನ ಮುಂದೆ ವಧಿಸ ಬೇಕು. ಆಗ ಅಭಿಷಿಕ್ತನಾದ ಯಾಜಕನು ಆ ಹೋರಿ ಯ ರಕ್ತವನ್ನು ತೆಗೆದುಕೊಂಡು ಸಭೆಯ ಗುಡಾರದ ಬಳಿಗೆ ತರಬೇಕು. ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಕರ್ತನ ಮುಂದೆಯೂ ಪವಿತ್ರ ಸ್ಥಳದ ಪರದೆಯ ಮುಂದೆಯೂ ಆ ರಕ್ತವನ್ನು ಏಳು ಸಾರಿ ಚಿಮುಕಿಸಬೇಕು. ಯಾಜಕನು ಸ್ವಲ್ಪ ರಕ್ತವನ್ನು ಸಭೆಯ ಗುಡಾರ ದೊಳಗಿರುವ ಸುವಾಸನೆಯುಳ್ಳ ಧೂಪ ಯಜ್ಞವೇದಿಯ ಕೊಂಬುಗಳಿಗೆ ಕರ್ತನ ಮುಂದೆ ಹಚ್ಚಬೇಕು; ಅಲ್ಲದೆ ಆ ಹೋರಿಯ ಎಲ್ಲಾ ರಕ್ತವನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ದಹನಬಲಿ ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು. ಅವನು ಪಾಪದ ಬಲಿಗಾಗಿರುವ ಹೋರಿಯ ಎಲ್ಲಾ ಕೊಬ್ಬನ್ನು ಅದರಿಂದ ತೆಗೆಯಬೇಕು; ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಜನಕಾಂಗಗಳನ್ನೂ ಪಕ್ಕೆಯ ಬದಿಯಲ್ಲಿರುವ ಕೊಬ್ಬನ್ನೂ ಮೂತ್ರಜನಕಾಂಗಗಳೊಂದಿಗೆ ಕಲಿಜದ ಮೇಲಿರುವ ಪೊರೆಯನ್ನೂ ಅವನು ತೆಗೆಯಬೇಕು. ಸಮಾಧಾನದ ಯಜ್ಞಸಮರ್ಪಣೆಯನ್ನು ಹೋರಿ ಯಿಂದ ತೆಗೆಯಲ್ಪಟ್ಟಂತೆಯೇ ತೆಗೆಯಬೇಕು; ಯಾಜಕನು ದಹನಬಲಿ ಯಜ್ಞವೇದಿಯ ಮೇಲೆ ಅವುಗಳನ್ನು ಸುಡಬೇಕು. ಆ ಹೋರಿಯ ಚರ್ಮ ವನ್ನು, ಅದರ ಎಲ್ಲಾ ಮಾಂಸವನ್ನು, ತಲೆ, ಕಾಲುಗಳು, ಕರುಳುಗಳು, ಅದರ ಸಗಣಿಯೊಂದಿಗೆ ಇಡೀ ಹೋರಿಯನ್ನು ಪಾಳೆಯದ ಆಚೆಗಿರುವ ಶುದ್ಧವಾದ ಸ್ಥಳಕ್ಕೆ ಅಂದರೆ ಬೂದಿ ಚೆಲ್ಲುವ ಸ್ಥಳಕ್ಕೆ ತಂದು ಅದನ್ನು ಕಟ್ಟಿಗೆಯ ಮೇಲೆ ಬೆಂಕಿಯಿಂದ ಸುಡ ಬೇಕು. ಅದನ್ನು ಬೂದಿ ಚೆಲ್ಲುವ ಸ್ಥಳದಲ್ಲಿ ಸುಡಬೇಕು.
- Leviticus 1:4–5 ಯಾಜಕಕಾಂಡ 1:4–5ಅವನು ತನ್ನ ಕೈಯನ್ನು ದಹನಬಲಿಯ ತಲೆಯ ಮೇಲೆ ಇಡಬೇಕು: ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವದು. ಅವನು ಆ ಹೋರಿಯನ್ನು ಕರ್ತನ ಮುಂದೆ ವಧಿಸಬೇಕು; ಆಗ ಆರೋನನ ಕುಮಾರರಾದ ಯಾಜಕರು ರಕ್ತವನ್ನು ತಂದು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.