Luke · chapter 11 · verse 42
Luke 11:42 in Kannada
ಆದರೆ ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಮರುಗಪತ್ರೆ ಸದಾಪು ಸಕಲ ವಿಧವಾದ ಸೊಪ್ಪುಗಳಲ್ಲಿ ದಶಮಭಾಗವನ್ನು ಕೊಟ್ಟು ನ್ಯಾಯತೀರ್ಪನ್ನೂ ದೇವರಪ್ರೀತಿಯನ್ನೂ ಲಕ್ಷಿಸದೆ ಹೋಗುತ್ತೀರಿ. ಇವುಗಳನ್ನು ತಪ್ಪದೆ ಮಾಡಿ ಬೇರೆಯವು ಗಳನ್ನು ಬಿಡದೆ ಮಾಡಬೇಕಾಗಿತ್ತು.
Aadare pharisaayare, nimage ayyo! Yaakandare neevu marugapatre sadaapu sakala vidhavaada soppugalalli dashamabhaagavannu kottu nyaayateerpannoo devarapreetiyannoo lakshisade hogutteeri. Ivugalannu tappade maadi bereyavu galannu bidade maadabekaagittu.
Luke 11:42 in English
- King James Version (KJV)
- But woe unto you, Pharisees! for ye tithe mint and rue and all manner of herbs, and pass over judgment and the love of God: these ought ye to have done, and not to leave the other undone.
- World English Bible (WEB)
- But woe to you Pharisees! For you tithe mint and rue and every herb, but you bypass justice and God’s love. You ought to have done these, and not to have left the other undone.
- American Standard Version (ASV)
- But woe unto you Pharisees! for ye tithe mint and rue and every herb, and pass over justice and the love of God: but these ought ye to have done, and not to leave the other undone.
- Bible in Basic English (BBE)
- But a curse is on you, Pharisees! for you make men give a tenth of every sort of plant, and give no thought to right and the love of God; but it is right for you to do these things, and not let the others be undone.
- Darby Translation (DBY)
- But woe unto you, Pharisees, for ye pay tithes of mint and rue and every herb, and pass by the judgment and the love of God: these ye ought to have done, and not have left those aside.
- Webster's Bible (WBS)
- But woe to you, Pharisees! for ye tithe mint, and rue, and all manner of herbs, and pass over judgment and the love of God: these ought ye to have done, and not to leave the others undone.
- Young's Literal Translation (YLT)
- 'But woe to you, the Pharisees, because ye tithe the mint, and the rue, and every herb, and ye pass by the judgment, and the love of God; these things it behoveth to do, and those not to be neglecting.
Read in context
- 40ಮೂರ್ಖರೇ, ಹೊರ ಭಾಗವನ್ನು ಮಾಡಿದಾತನು ಒಳಭಾಗವನ್ನು ಸಹ ಮಾಡಿದನಲ್ಲವೇ?
- 41ಆದರೆ ನಿಮಗೆ ಇರುವವುಗಳಲ್ಲಿ ನೀವು ದಾನಾಕೊಡಿರಿ; ಆಗ ಇಗೋ, ನಿಮಗೆ ಎಲ್ಲವು ಗಳು ಶುದ್ಧವಾಗಿರುವವು.
- 42ಆದರೆ ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಮರುಗಪತ್ರೆ ಸದಾಪು ಸಕಲ ವಿಧವಾದ ಸೊಪ್ಪುಗಳಲ್ಲಿ ದಶಮಭಾಗವನ್ನು ಕೊಟ್ಟು ನ್ಯಾಯತೀರ್ಪನ್ನೂ ದೇವರಪ್ರೀತಿಯನ್ನೂ ಲಕ್ಷಿಸದೆ ಹೋಗುತ್ತೀರಿ. ಇವುಗಳನ್ನು ತಪ್ಪದೆ ಮಾಡಿ ಬೇರೆಯವು ಗಳನ್ನು ಬಿಡದೆ ಮಾಡಬೇಕಾಗಿತ್ತು.
- 43ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸಭಾಮಂದಿರ ಗಳಲ್ಲಿ ಅತ್ಯುನ್ನತ ಸ್ಥಾನಗಳನ್ನೂ ಸಂತೆಗಳಲ್ಲಿ ವಂದನೆಗಳನ್ನೂ ಪ್ರೀತಿಸುತ್ತೀರಿ.
- 44ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೊ! ಯಾಕಂದರೆ ನೀವು ಕಾಣಿಸದ ಸಮಾಧಿಗಳಂತೆ ಇದ್ದೀರಿ; ಅವುಗಳ ಮೇಲೆ ನಡೆದಾಡುವ ಮನುಷ್ಯರು ಅವುಗಳನ್ನು ಅರಿಯರು ಎಂದು ಹೇಳಿದನು.
Cross references
- Matthew 23:23 ಮತ್ತಾಯನು 23:23ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಮರುಗ ಸೋಪು ಜೀರಿಗೆ ಗಳಲ್ಲಿ ದಶಮ ಭಾಗವನ್ನು ಸಲ್ಲಿಸುತ್ತೀರಿ. ಆದರೆ ನ್ಯಾಯ ಪ್ರಮಾಣದ ತೀರ್ಪು ಕರುಣೆ ನಂಬಿಕೆ ಎಂಬ ಈ ಪ್ರಾಮುಖ್ಯವಾದವುಗಳನ್ನು ಬಿಟ್ಟುಬಿಟ್ಟಿದ್ದೀರಿ. ಇವುಗ ಳೊಂದಿಗೆ ಆ ಬೇರೆಯವುಗಳನೂ
- Proverbs 21:3 ಜ್ಞಾನೋಕ್ತಿಗಳು 21:3ಯಜ್ಞಕ್ಕಿಂತ ನೀತಿನ್ಯಾಯಗಳನ್ನು ನಡಿಸುವದು ಕರ್ತ ನಿಗೆ ಎಷ್ಟೋ ಮೆಚ್ಚಿಕೆಯಾಗಿದೆ.
- Luke 18:12 ಲೂಕನು 18:12ನಾನು ವಾರದಲ್ಲಿ ಎರಡು ಸಾರಿ ಉಪವಾಸ ಮಾಡುತ್ತೇನೆ; ನನಗಿರುವದೆ ಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ ಎಂದು ಹೇಳಿದನು.
- Deuteronomy 10:12–13 ಧರ್ಮೋಪದೇಶಕಾಂಡ 10:12–13ಈಗ ಇಸ್ರಾಯೇಲೇ, ನಿನ್ನ ಕರ್ತನಾದ ದೇವರಿಗೆ ಭಯಪಟ್ಟು ಆತನ ಎಲ್ಲಾ ಮಾರ್ಗಗಳಲ್ಲಿ ನಡೆದು ಕೊಂಡು ಆತನನ್ನು ಪ್ರೀತಿಮಾಡಿ ನಿನ್ನ ಕರ್ತನಾದ ದೇವರಿಗೆ ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಸೇವೆಮಾಡಿ ನಾನು ಈ ಹೊತ್ತು ನಿನ್ನ ಮೇಲಿಗಾಗಿ ನಿನಗೆ ಆಜ್ಞಾಪಿಸುವ ಕರ್ತನ ಆಜ್ಞೆಗಳನ್ನೂ ಆತನ ನಿಯಮಗಳನ್ನೂ ಅನು ಸರಿಸುವದೇ ಹೊರತು ಮತ್ತೇನು ನಿನ್ನ ದೇವರಾಗಿ ರುವ ಕರ್ತನು ನಿನ್ನಿಂದ ಕೇಳುತ್ತಾನೆ?
- Malachi 3:8 ಮಲಾಕಿಯ 3:8ಮನುಷ್ಯನು ದೇವರದನ್ನು ಕಳ್ಳತನ ಮಾಡುವನೋ? ಆದರೆ ನೀವು ನನ್ನದನ್ನು ಕಳ್ಳತನ ಮಾಡಿದ್ದೀರಿ; ಆದರೆ ನೀವು--ಯಾವದರಲ್ಲಿ ನಿನ್ನದನ್ನು, ಕಳ್ಳತನ ಮಾಡಿದ್ದೇವೆಂದು ಅನ್ನುತ್ತೀರಿ? ದಶಮಭಾಗ ಮತ್ತು ಅರ್ಪಣೆಗಳನ್ನೇ.
- Micah 6:8 ಮೀಕ 6:8ಮನುಷ್ಯನೇ, ಉತ್ತಮವಾದ ದ್ದನ್ನು ನಿನಗೆ ಆತನು ತಿಳಿಸಿದ್ದಾನೆ; ಹೌದು, ನ್ಯಾಯ ವನ್ನು ಮಾಡುವದೂ ಕರುಣೆಯನ್ನು ಪ್ರೀತಿಮಾಡು ವದೂ ನಿನ್ನ ದೇವರ ಸಂಗಡ ವಿನಯವಾಗಿ ನಡ ಕೊಳ್ಳುವದೂ ಇದನ್ನೇ ಹೊರತು ಕರ್ತನು ಇನ್ನೇನು ನಿನ್ನಿಂದ ಕೇಳುತ್ತಾನೆ.
- 1 John 4:20 1 ಯೋಹಾನನು 4:20ಒಬ್ಬನು--ನಾನು ದೇವರನ್ನು ಪ್ರೀತಿಸುತ್ತೇನೆ ಎಂದು ಹೇಳಿ ತನ್ನ ಸಹೋದರನನ್ನು ಹಗೆ ಮಾಡಿದರೆ ಅವನು ಸುಳ್ಳುಗಾರನಾಗಿದ್ದಾನೆ. ಯಾಕಂದರೆ ತಾನು ಕಾಣುವ ಸಹೋದರನನ್ನು ಪ್ರೀತಿಸದವನು ಕಾಣದಿರುವ ದೇವರನ್ನು ಅವನು ಹೇಗೆ ಪ್ರೀತಿಸಾನು?ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಈ ಆಜ್ಞೆ ಯನ್ನು ನಾವು ಆತನಿಂದ ಹೊಂದಿದ್ದೇವೆ.
- 1 Samuel 15:22 1 ಸಮುವೇಲನು 15:22ಅದಕ್ಕೆ ಸಮುವೇಲನು--ಕರ್ತನ ವಾಕ್ಯಕ್ಕೆ ವಿಧೇಯನಾದರೆ ಕರ್ತನಿಗೆ ಆಗುವ ಸಂತೋಷ ದಹನ ಬಲಿಗಳಲ್ಲಿಯೂ ಬಲಿಗಳಲ್ಲಿಯೂ ಆಗುವದೋ? ಇಗೋ, ಬಲಿಗಿಂತ ವಿಧೇಯವಾಗುವದು ಟಗರುಗಳ ಕೊಬ್ಬಿಗಿಂತ ಆಲೈಸುವದು ಉತ್ತಮವಾಗಿರುವದು.
- Matthew 23:27 ಮತ್ತಾಯನು 23:27ಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸುಣ್ಣಾ ಹಚ್ಚಿದ ಸಮಾಧಿ ಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ; ಆದರೆ ಒಳಗೆ ಸತ್ತವರ ಎಲುಬು ಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರು ತ್ತವೆ.
- Leviticus 27:30–33 ಯಾಜಕಕಾಂಡ 27:30–33ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು. ಯಾವನಾದರೂ ತನ್ನ ಹತ್ತನೇ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ ಅದಕ್ಕಿಂತ ಹೆಚ್ಚಾಗಿ ಅದರ ಐದನೇ ಪಾಲನ್ನು ಕೊಡಬೇಕು. ಇದಲ್ಲದೆ ದನಕುರಿಗಳಲ್ಲಿಯೂ ಕೋಲಿನ ಕೆಳಗೆ ದಾಟುವ ಎಲ್ಲಾದರಲ್ಲಿಯೂ ಹತ್ತರಲ್ಲಿ ಒಂದು ಭಾಗ ಕರ್ತನಿಗೆ ಪರಿಶುದ್ಧವಾಗಿರುವದು. ಅದು ಒಳ್ಳೆ ಯದೋ ಕೆಟ್ಟದ್ದೋ ಎಂದು ಅವನು ವಿಚಾರಿಸ ಬಾರದು, ಅದನ್ನು ಬದಲು ಮಾಡಬಾರದು. ಹೇಗಾ ದರೂ ಅದನ್ನು ಬದಲು ಮಾಡಿದರೆ ಅದೂ ಬದಲು ಮಾಡಿದ್ದೂ ಪರಿಶುದ್ಧವಾಗಿರಬೇಕು. ಅದನ್ನು ವಿಮೋಚಿಸಬಾರದು.ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಇಸ್ರಾಯೇಲ್ ಮಕ್ಕಳಿಗಾಗಿ ಕೊಟ್ಟ ಆಜ್ಞೆಗಳು ಇವೇ.
- 2 Chronicles 31:5–10 2 ಪೂರ್ವಕಾಲವೃತ್ತಾಂತ 31:5–10ಈ ಆಜ್ಞೆ ಹೊರಗೆ ಬಂದಾಗಲೇ ಇಸ್ರಾಯೇಲ್ ಮಕ್ಕಳು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು, ಹೊಲಗಳ ಹುಟ್ಟುವಳಿ ಇವುಗಳ ಮೊದಲನೇ ಪಾಲನ್ನು ಬಹಳವಾಗಿ ಒಳಗೆ ತಂದರು. ಹಾಗೆಯೇ ಸಮಸ್ತ ವಸ್ತುಗಳಲ್ಲಿ ದಶಮಾಂಶದ ಪಾಲನ್ನು ಬಹಳ ವಾಗಿ ತಂದರು; ಇದಲ್ಲದೆ ಯೆಹೂದ ಪಟ್ಟಣಗಳಲ್ಲಿ ನಿವಾಸವಾಗಿರುವ ಇಸ್ರಾಯೇಲ್ ಯೆಹೂದ ಮಕ್ಕಳು ದನಗಳಲ್ಲಿಯೂ ಕುರಿಗಳಲ್ಲಿಯೂ ದಶಮಾಂಶ ತಂದರು. ತಮ್ಮ ದೇವರಾದ ಕರ್ತನಿಗೆ ಪರಿಶುದ್ಧ ಮಾಡಿದ ಪರಿಶುದ್ಧ ವಸ್ತುಗಳಲ್ಲಿ ದಶ ಮಾಂಶದ ಪಾಲು ತಂದು ರಾಶಿರಾಶಿಯಾಗಿ ಇಟ್ಟರು. ಮೂರನೇ ತಿಂಗಳಲ್ಲಿ ರಾಶಿಗಳ ತಳಹದಿ ಆರಂಭಿಸಿ ಏಳನೇ ತಿಂಗಳಲ್ಲಿ ತೀರಿಸಿದರು. ಹಿಜ್ಕೀಯನೂ ಪ್ರಧಾನರೂ ಬಂದು ರಾಶಿಗಳನ್ನು ನೋಡಿದಾಗ ಅವರು ಕರ್ತನನ್ನೂ ಆತನ ಜನವಾದ ಇಸ್ರಾಯೇ ಲನ್ನೂ ಸ್ತುತಿಸಿದರು. ಆಗ ಹಿಜ್ಕೀಯನು ರಾಶಿಗಳನ್ನು ಕುರಿತು ಯಾಜಕರನ್ನೂ ಲೇವಿಯರನ್ನೂ ವಿಚಾರಿಸಿದನು. ಚಾದೋಕನ ಮನೆಯವನಾಗಿರುವ ಪ್ರಧಾನ ಯಾಜಕನಾದ ಅಜರ್ಯನು ಅವನಿಗೆ -- ಕರ್ತನ ಮನೆಗೆ ಕಾಣಿಕೆಗಳನ್ನು ತರಲು ಆರಂಭಿಸಿದಂದಿನಿಂದ ನಿಮಗೆ ತಿನ್ನುವದಕ್ಕೆ ಸಂಪೂರ್ಣವಿತ್ತು; ಉಳಿದದ್ದು ಬಹಳವಾಯಿತು; ಯಾಕಂದರೆ ಕರ್ತನು ತನ್ನ ಜನ ರನ್ನು ಆಶೀರ್ವದಿಸಿದ್ದಾನೆ. ಆದದರಿಂದ ಉಳಿದದ್ದು ಈ ರಾಶಿಯಾಯಿತು ಎಂದು ಹೇಳಿದನು.
- Titus 2:11–12 ತೀತನಿಗೆ 2:11–12ಯಾಕಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟು ಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು. ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು ಈಗಿನ ಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕ ಬೇಕೆಂದು ಅದು (ಅ ಕೃಪೆಯು) ನಮಗೆ ಬೋಧಿಸು ತ್ತದೆ.