Luke · chapter 12 · verse 58
Luke 12:58 in Kannada
ನೀನು ನಿನ್ನ ಎದುರಾಳಿಯ ಸಂಗಡ ನ್ಯಾಯಾ ಧಿಪತಿಯ ಎದುರಿಗೆ ಹೋಗುವಾಗ ಮಾರ್ಗದಲ್ಲಿಯೇ ಅವನಿಂದ ಬಿಡಿಸಿಕೊಳ್ಳುವದಕ್ಕೆ ಪ್ರಯತ್ನಮಾಡು; ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಬಲವಂತವಾಗಿ ಎಳೆದಾನು; ಆಗ ನ್ಯಾಯಾಧಿ ಪತಿಯು ನಿನ್ನನ್ನು ಅಧಿಕಾರಿಗೆ ಒಪ್ಪಿಸಾನು ಮತ್ತು ಅಧಿಕಾರಿಯು ನಿನ್ನನ್ನು ಸೆನೀನು ಕೊನೆಯ ಕಾಸನ್ನು ಸಲ್ಲಿಸುವವರೆಗೂ ಅಲ್ಲಿಂದ ಬರುವದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ ಅಂದನು.
Neenu ninna eduraaliya sangada nyaayaa dhipatiya edurige hoguvaaga maargadalliye avaninda bidisikolluvadakke prayatnamaadu; illadiddare avanu ninnannu nyaayaadhipatiya balige balavantavaagi eledaanu; aaga nyaayaadhi patiyu ninnannu adhikaarige oppisaanu mattu adhikaariyu ninnannu seneenu koneya kaasannu sallisuvavaregoo allinda baruvade illavendu naanu ninage heluttene andanu.
Luke 12:58 in English
- King James Version (KJV)
- When thou goest with thine adversary to the magistrate, [as thou art] in the way, give diligence that thou mayest be delivered from him; lest he hale thee to the judge, and the judge deliver thee to the officer, and the officer cast thee into prison.
- World English Bible (WEB)
- For when you are going with your adversary before the magistrate, try diligently on the way to be released from him, lest perhaps he drag you to the judge, and the judge deliver you to the officer, and the officer throw you into prison.
- American Standard Version (ASV)
- For as thou art going with thine adversary before the magistrate, on the way give diligence to be quit of him; lest haply he drag thee unto the judge, and the judge shall deliver thee to the officer, and the officer shall cast thee into prison.
- Bible in Basic English (BBE)
- For if anyone has a cause at law against you, and you are going with him before the ruler, make an attempt, on the way, to come to an agreement with him, for if you do not, he may take you before the judge and the judge will give you up to the police, and they will put you in prison.
- Darby Translation (DBY)
- For as thou goest with thine adverse party before a magistrate, strive in the way to be reconciled with him, lest he drag thee away to the judge, and the judge shall deliver thee to the officer, and the officer cast thee into prison.
- Webster's Bible (WBS)
- When thou goest with thy adversary to the magistrate, [as thou art] in the way, give diligence that thou mayest be delivered from him; lest he draw thee before the judge, and the judge deliver thee to the officer, and the officer cast thee into prison.
- Young's Literal Translation (YLT)
- for, as thou art going away with thy opponent to the ruler, in the way give diligence to be released from him, lest he may drag thee unto the judge, and the judge may deliver thee to the officer, and the officer may cast thee into prison;
Read in context
- 56ಕಪಟಿಗಳೇ, ಭೂಮ್ಯಾಕಾಶಗಳ ಭಾವವನ್ನು ಅರಿತು ಕೊಳ್ಳುತ್ತೀರಿ; ಆದರೆ ಈ ಕಾಲವನ್ನು ನೀವು ಅರಿತು ಕೊಳ್ಳದಿರುವದು ಹೇಗೆ?
- 57ಹೌದು, ನಿಮ್ಮಷ್ಟಕ್ಕೆ ನೀವು ಸರಿಯಾದದ್ದನ್ನು ಯಾಕೆ ನಿರ್ಣಯಿಸಿಕೊಳ್ಳುವದಿಲ್ಲ?
- 58ನೀನು ನಿನ್ನ ಎದುರಾಳಿಯ ಸಂಗಡ ನ್ಯಾಯಾ ಧಿಪತಿಯ ಎದುರಿಗೆ ಹೋಗುವಾಗ ಮಾರ್ಗದಲ್ಲಿಯೇ ಅವನಿಂದ ಬಿಡಿಸಿಕೊಳ್ಳುವದಕ್ಕೆ ಪ್ರಯತ್ನಮಾಡು; ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಬಲವಂತವಾಗಿ ಎಳೆದಾನು; ಆಗ ನ್ಯಾಯಾಧಿ ಪತಿಯು ನಿನ್ನನ್ನು ಅಧಿಕಾರಿಗೆ ಒಪ್ಪಿಸಾನು ಮತ್ತು ಅಧಿಕಾರಿಯು ನಿನ್ನನ್ನು ಸೆನೀನು ಕೊನೆಯ ಕಾಸನ್ನು ಸಲ್ಲಿಸುವವರೆಗೂ ಅಲ್ಲಿಂದ ಬರುವದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ ಅಂದನು.
- 59ನೀನು ಕೊನೆಯ ಕಾಸನ್ನು ಸಲ್ಲಿಸುವವರೆಗೂ ಅಲ್ಲಿಂದ ಬರುವದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ ಅಂದನು.
Cross references
- Matthew 5:23–26 ಮತ್ತಾಯನು 5:23–26ಆದದರಿಂದ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಬಳಿಗೆ ತಂದಾಗ ನಿನಗೆ ವಿರೋಧ ವಾದದ್ದು ನಿನ್ನ ಸಹೋದರನಿಗೆ ಇದೆಯೆಂದು ನೆನಪಿಗೆ ಬಂದರೆ ನಿನ್ನ ಕಾಣಿಕೆಯನ್ನು ನೀನು ಅಲ್ಲಿಯೇ ಯಜ್ಞವೇದಿಯ ಮುಂದೆ ಬಿಟ್ಟು ಹೊರಟು ಹೋಗಿ ಮೊದಲು ನಿನ್ನ ಸಹೋದರನೊಂದಿಗೆ ಒಂದಾಗು; ತರುವಾಯ ಬಂದು ನಿನ್ನ ಕಾಣಿಕೆಯನ್ನು ಅರ್ಪಿಸು. ನಿನ್ನ ವಿರೋಧಿಯ ಸಂಗಡ ನೀನು ದಾರಿಯ ಲ್ಲಿರುವಾಗಲೇ ತ್ವರೆಯಾಗಿ ಅವನ ಕೂಡ ಒಂದಾಗು; ಇಲ್ಲವಾದರೆ ಯಾವ ಸಮಯದಲ್ಲಿಯಾದರೂ ಆ ವಿರೋಧಿಯು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಾನು ಮತ್ತು ನ್ಯಾಯಾಧಿಪತಿಯು ನಿನ್ನನ್ನು ಅಧಿಕಾರಿಗೆ ಒಪ್ಪಿಸಾನು; ಆಗ ನೀನು ಸೆರೆಯಲ್ಲಿ ಹಾಕಲ್ಪಡುವಿ. ನಾನು ನಿನಗೆ ನಿಜವಾಗಿ ಹೇಳುವದೇನಂದರೆ--ನೀನು ಕೊನೆಯ ಕಾಸನ್ನು ಸಲ್ಲಿಸುವ ತನಕ ಯಾವ ವಿಧದಿಂದಲೂ ಅಲ್ಲಿಂದ ಹೊರಗೆ ಬರುವದೇ ಇಲ್ಲ.
- Proverbs 25:8–9 ಜ್ಞಾನೋಕ್ತಿಗಳು 25:8–9ನಿನ್ನ ನೆರೆಯವನು ನಿನ್ನನ್ನು ಅವಮಾನಕ್ಕೆ ಗುರಿಮಾಡಿದಾಗ ಕಡೆಯಲ್ಲಿ ಏನು ಮಾಡಬೇಕೆಂಬದು ನೀನು ತಿಳಿಯ ದಂತೆ ದುಡುಕಿನಿಂದ ಕಲಹಮಾಡುವದಕ್ಕಾಗಿ ಹೋಗ ಬೇಡ. ನಿನ್ನ ನೆರೆಯವನೊಂದಿಗೆ ನಿನ್ನ ವ್ಯಾಜ್ಯವನ್ನು ಚರ್ಚಿಸು; ಗುಟ್ಟನ್ನು ಬೇರೊಬ್ಬನಿಗೆ ಹೊರಪಡಿಸಬೇಡ;
- Job 23:7 ಯೋಬನು 23:7ಅಲ್ಲಿ ನೀತಿವಂತನು ಅವನ ಸಂಗಡ ತರ್ಕ ಮಾಡುವನು; ನಾನು ನಿತ್ಯವಾಗಿ ನನ್ನ ನ್ಯಾಯಾಧಿಪತಿಗೆ ತಪ್ಪಿಸಿಕೊಳ್ಳುವೆನು.
- Isaiah 55:6 ಯೆಶಾಯ 55:6ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ.
- Luke 13:24–28 ಲೂಕನು 13:24–28ಇಕ್ಕಟ್ಟಾದ ಬಾಗಲಿನಿಂದ ಒಳಗೆ ಪ್ರವೇಶಿಸುವದಕ್ಕೆ ಪ್ರಯಾಸಪಡಿರಿ; ಯಾಕಂ ದರೆ ಅನೇಕರು ಒಳಗೆ ಪ್ರವೇಶಿಸುವದಕ್ಕೆ ಪ್ರಯತ್ನಿಸಿ ದರೂ ಆಗುವದಿಲ್ಲ ಎಂದು ನಾನು ನಿಮಗೆ ಹೇಳು ತ್ತೇನೆ. ಮನೇಯಜಮಾನನು ಒಂದು ಸಾರಿ ಎದ್ದು ಬಾಗಲನ್ನು ಮುಚ್ಚಿಕೊಂಡರೆ ನೀವು ಹೊರಗೆ ನಿಂತು ಕೊಂಡು ಬಾಗಲನ್ನು ತಟ್ಟುತ್ತಾ--ಕರ್ತನೇ, ಕರ್ತನೇ, ನಮಗಾಗಿ ತೆರೆ ಎಂದು ಹೇಳುವದಕ್ಕೆ ಆರಂಭಿಸಿದಾಗ ಆತನು ನಿಮಗೆ ಪ್ರತ್ಯುತ್ತರವಾಗಿ--ನೀವು ಎಲ್ಲಿಯ ವರೋ ನಾನರಿಯೆ ಎಂದು ಹೇಳುವನು. ಆಗ ನೀವು--ನಿನ್ನ ಸನ್ನಿಧಿಯಲ್ಲಿ ನಾವು ತಿಂದು ಕುಡಿದೆವು; ಮತ್ತು ನೀನು ನಮ್ಮ ಬೀದಿಗಳಲ್ಲಿ ಬೋಧಿಸಿದಿ ಎಂದು ಹೇಳಲಾರಂಭಿಸುವಿರಿ. ಆದರೆ ಆತನು--ನೀವು ಎಲ್ಲಿ ಯವರೋ ನಾನರಿಯೆ; ಅಕ್ರಮ ಮಾಡುವವರಾದ ನೀವೆಲ್ಲರೂ ನನ್ನಿಂದ ಹೊರಟುಹೋಗಿರಿ ಎಂದು ಹೇಳುವನೆಂದು ನಾನು ನಿಮಗೆ ಹೇಳುತ್ತೇನೆ. ಆದರೆ ನೀವು ಅಬ್ರಹಾಮ ಇಸಾಕ ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರರಾಜ್ಯದಲ್ಲಿ ಇರುವದನ್ನೂ ನೀವು ಮಾತ್ರ ಹೊರಗೆ ದೊಬ್ಬಲ್ಪಟ್ಟಿರುವದನ್ನೂ ನೋಡು ವಾಗ ಅಲ್ಲಿ ನಿಮಗೆ ಗೋಳಾಟವೂ ಹಲ್ಲುಕಡಿ ಯೋಣವೂ ಇರುವವು.
- Genesis 32:3–28 ಆದಿಕಾಂಡ 32:3–28ಯಾಕೋಬನು ಎದೋಮ್ಯರ ದೇಶವಾದ ಸೇಯಾರಿನ ಸೀಮೆಯಲ್ಲಿರುವ ತನ್ನ ಸಹೋದರನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು. ಕಳುಹಿಸುವಾಗ ಅವರಿಗೆ--ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳ ಬೇಕು--ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ--ಲಾಬಾನನ ಸಂಗಡ ನಾನು ಈಗಿನ ವರಗೆ ಪ್ರವಾಸಿಯಾಗಿದ್ದೆನು; ನನಗೆ ಎತ್ತು ಕತ್ತೆ ಕುರಿಗಳು ದಾಸದಾಸಿಯರು ಇದ್ದಾರೆ; ನಾವು ನಿನ್ನ ದೃಷ್ಟಿಯಲ್ಲಿ ಕೃಪೆಹೊಂದುವ ಹಾಗೆ ನನ್ನ ಯಜಮಾನ ನಿಗೆ ತಿಳಿಸುವದಕ್ಕೆ ಕಳುಹಿಸಿದ್ದೇನೆ ಎಂದು ಹೇಳಿರಿ ಅಂದನು. ಆಗ ದೂತರು ಯಾಕೋಬನ ಬಳಿಗೆ ಹಿಂತಿರುಗಿ ಬಂದು--ನಾವು ನಿನ್ನ ಸಹೋದರನಾದ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರಕೊಂಡು ನಿನ್ನನ್ನು ಎದುರುಗೊಳ್ಳುವದಕ್ಕೆ ಬರುತ್ತಾನೆ ಅಂದರು. ಆಗ ಯಾಕೋಬನು ಬಹಳವಾಗಿ ಭಯಪಟ್ಟು ಕುಂದಿ ಹೋಗಿ ತನ್ನ ಸಂಗಡ ಇದ್ದ ಜನರನ್ನೂ ಕುರಿಗಳನ್ನೂ ದನಗಳನ್ನೂ ಒಂಟೆಗಳನ್ನೂ ಎರಡು ಗುಂಪುಗಳಾಗಿ ವಿಭಾಗಿಸಿದನು. ಏಸಾವನು ಒಂದು ಗುಂಪಿನ ಮೇಲೆ ಬಿದ್ದು ಅದನ್ನು ಹೊಡೆದರೆ ಉಳಿದ ಗುಂಪು ತಪ್ಪಿಸಿಕೊಂಡು ಹೋದೀತೆಂದು ಅಂದು ಕೊಂಡನು. ಇದಲ್ಲದೆ ಯಾಕೋಬನು ಹೇಳಿದ್ದೇ ನಂದರೆ--ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರೇ, ನಿನ್ನ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ತಿರಿಗಿ ಹೋಗು, ಆಗ ನಿನಗೆ ಒಳ್ಳೇದನ್ನು ಮಾಡುವೆನು ಎಂದು ನನಗೆ ಹೇಳಿದ ಕರ್ತನೇ, ನೀನು ನಿನ್ನ ದಾಸನಿಗೆ ತೋರಿಸಿದ ಎಲ್ಲಾ ಕರುಣೆಗಳಿಗೂ ಎಲ್ಲಾ ಸತ್ಯಕ್ಕೂ ಅಯೋಗ್ಯನಾಗಿದ್ದೇನೆ. ಯಾಕಂದರೆ ನಾನು ಮೊದಲು ಈ ಯೊರ್ದನ್ ಹೊಳೆಯನ್ನು ದಾಟಿದಾಗ ನನಗೆ ಕೋಲು ಮಾತ್ರವೇ ಇತ್ತು; ಈಗ ಎರಡು ಗುಂಪುಗಳುಳ್ಳವನಾದೆನು. ಈಗ ನನ್ನ ಸಹೋದರನಾದ ಏಸಾವನ ಕೈಯಿಂದ ನನ್ನನ್ನು ತಪ್ಪಿಸು. ಅವನು ಬಂದು ನನ್ನನ್ನು ಮಕ್ಕಳ ಸಂಗಡ ತಾಯಿಯನ್ನು ಕೊಲ್ಲುವನೇನೋ ಎಂದು ನಾನು ಅವನಿಗೆ ಭಯಪಡುತ್ತೇನೆ. ನಾನು --ನಿನಗೆ ಖಂಡಿತ ವಾಗಿ ಒಳ್ಳೆಯದನ್ನು ಮಾಡುವೆನು, ನಿನ್ನ ಸಂತತಿಯನ್ನು ಎಣಿಸುವದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು ಎಂದು ಹೇಳಿದಿಯಲ್ಲಾ ಎಂದು ಬೇಡಿಕೊಂಡನು. ಯಾಕೋಬನು ಅದೇ ರಾತ್ರಿಯಲ್ಲಿ ಅಲ್ಲಿ ಇಳುಕೊಂಡನು; ತಾನು ತಕ್ಕೊಂಡು ಬಂದವುಗಳಲ್ಲಿ ತನ್ನ ಸಹೋದರನಾದ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು. ಅವು ಯಾವವಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು; ಹಾಲು ಕೊಡುವ ಮೂವತ್ತು ಒಂಟೆಗಳು ಅವುಗಳ ಮರಿಗಳು, ನಾಲ್ವತ್ತು ಆಕಳುಗಳು, ಹತ್ತು ಹೋರಿಗಳು, ಇಪ್ಪತ್ತು ಹೆಣ್ಣು ಕತ್ತೆಗಳು, ಹತ್ತು ಕತ್ತೆ ಮರಿಗಳು; ಇವುಗಳಲ್ಲಿ ಪ್ರತಿಯೊಂದು ಮಂದೆಯನ್ನು ಪ್ರತ್ಯೇಕವಾಗಿ ಅವನು ತನ್ನ ಸೇವಕರಿಗೆ ಒಪ್ಪಿಸಿ ಅವರಿಗೆ--ನನ್ನ ಮುಂದೆ ನಡೆದು ಮಂದೆ ಮಂದೆಗೂ ಮಧ್ಯದಲ್ಲಿ ಸ್ಥಳಬಿಡಿರಿ ಅಂದನು. ಅವನು ಮೊದಲನೆಯವನಿಗೆ--ನನ್ನ ಸಹೋದರನಾದ ಏಸಾವನು ನಿನ್ನೆದುರಿಗೆ ಬಂದು-- ನೀನು ಯಾರವನು? ಎಲ್ಲಿಗೆ ಹೋಗುತ್ತೀ? ಇಲ್ಲಿ ನಿನ್ನ ಮುಂದೆ ಇರುವವುಗಳು ಯಾರವು ಎಂದು ಕೇಳಿದರೆ ನೀನು ಅವನಿಗೆ--ಅವು ನಿನ್ನ ದಾಸನಾದ ಯಾಕೋಬನವುಗಳೇ; ಇದು ನನ್ನ ಯಜಮಾನನಾದ ಏಸಾವನಿಗೆ ಕಳುಹಿಸಲ್ಪಟ್ಟ ಕಾಣಿಕೆ; ಇಗೋ, ಅವನೂ ನಮ್ಮ ಹಿಂದೆ ಇದ್ದಾನೆ ಎಂದು ಅವನಿಗೆ ಹೇಳಬೇಕೆಂದು ಆಜ್ಞಾಪಿಸಿದನು. ಎರಡನೆಯ ವನಿಗೂ ಮೂರನೆಯವನಿಗೂ ಮಂದೆಗಳ ಹಿಂದೆ ಹೋಗುವವರೆಲ್ಲರಿಗೂನೀವು ಏಸಾವನನ್ನು ಕಂಡರೆ ಅವನಿಗೆ ಹಾಗೆಯೇ ಹೇಳಬೇಕು. ಇದಲ್ಲದೆ--ನಿನ್ನ ದಾಸನಾದ ಯಾಕೋಬನು ನಮ್ಮ ಹಿಂದೆ ಬರುತ್ತಾನೆಂದು ಹೇಳಬೇಕು ಎಂದು ಆಜ್ಞಾಪಿಸಿದನು. ಯಾಕಂದರೆ ನನ್ನ ಮುಂದೆ ಹೋಗುವ ಕಾಣಿಕೆಯಿಂದ ಅವನನ್ನು ಸಮಾಧಾನಪಡಿಸುವೆನು. ತರುವಾಯ ಅವನ ಮುಖವನ್ನು ನೋಡುವೆನು; ಅವನು ನನ್ನನ್ನು ಅಂಗೀಕರಿಸುವನೇನೋ ಎಂದು ಅಂದು ಕೊಂಡನು. ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟುಹೋಯಿತು. ತಾನಾದರೋ ಆ ರಾತ್ರಿ ಗುಂಪಿನಲ್ಲಿ ಇಳುಕೊಂಡನು. ಅವನು ಆ ರಾತ್ರಿಯಲ್ಲಿ ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ ಇಬ್ಬರು ದಾಸಿಯರನ್ನೂ ತನ್ನ ಹನ್ನೊಂದು ಮಂದಿ ಕುಮಾರರನ್ನೂ ತಕ್ಕೊಂಡು ಯಬ್ಬೋಕ್ ಎಂಬ ಸ್ಥಳದಲ್ಲಿ ದಾಟಿದನು. ಅವನು ಅವರನ್ನು ಕರಕೊಂಡು ಹೊಳೆ ದಾಟಿಸಿದ್ದಲ್ಲದೆ ತನಗಿದ್ದದ್ದನ್ನೆಲ್ಲಾ ದಾಟಿಸಿದನು. ಆಗ ಯಾಕೋಬನು ಒಬ್ಬನೇ ಉಳಿದಾಗ ಒಬ್ಬ ಮನುಷ್ಯನು ಉದಯ ವಾಗುವ ವರೆಗೆ ಅವನ ಸಂಗಡ ಹೋರಾಡಿದನು. ಆ ಮನುಷ್ಯನು ಅವನನ್ನು ಜಯಿಸದೆ ಇರುವದನ್ನು ನೋಡಿ ಅವನ ತೊಡೆಯ ಕೀಲನ್ನು ಮುಟ್ಟಿದನು. ಅವನು ಹಾಗೆಯೇ ಆತನ ಸಂಗಡ ಹೋರಾಡುವಲ್ಲಿ ಯಾಕೋಬನ ತೊಡೆಯ ಕೀಲು ತಪ್ಪಿತು. ಆತನು ಯಾಕೋಬನಿಗೆ--ಉದಯವಾಯಿತು, ನನ್ನನು ಬಿಡು ಅಂದಾಗ ಅವನು--ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡೆನು ಅಂದನು. ಆತನು ಅವನಿಗೆ--ನಿನ್ನ ಹೆಸರು ಏನು ಅಂದಾಗ ಅವನು--ಯಾಕೋಬ ಅಂದನು. ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.
- Matthew 18:30 ಮತ್ತಾಯನು 18:30ಅವನು ಅದಕ್ಕೆ ಒಪ್ಪದೆ ಹೊರಟುಹೋಗಿ ತನ್ನ ಸಾಲವನ್ನು ತೀರಿಸುವ ವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು.
- Psalm 50:22 ಕೀರ್ತನೆಗಳು 50:22ದೇವರನ್ನು ಮರೆತು ಬಿಡುವವರೇ, ನಾನು ನಿಮ್ಮನ್ನು ಹರಿದು ಚೂರುಮಾಡ ದಂತೆ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವವರು ಯಾರೂ ಇರುವದಿಲ್ಲವೆಂಬದನ್ನು ಗ್ರಹಿಸಿಕೊಳ್ಳಿರಿ.ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ; ತನ್ನ ನಡವಳಿಕೆಯನ್ನು ಕ್ರಮಪಡಿಸಿ ಕೊಳ್ಳುವವನಿಗೆ ದೇವರ ರಕ್ಷಣೆಯನ್ನು ನಾನು ತೋರಿಸುವೆನು.
- Hebrews 3:7–13 ಇಬ್ರಿಯರಿಗೆ 3:7–13ಆದದರಿಂದ(ಪವಿತ್ರಾತ್ಮನು ಹೇಳುವ ಪ್ರಕಾರ--ನೀವು ಈ ದಿನ ದೇವರ ಶಬ್ದಕ್ಕೆ ಕಿವಿಗೊಟ್ಟರೆ ಅರಣ್ಯ ದಲ್ಲಿದ್ದಾಗ ಶೋಧನೆಯ ದಿನದಲ್ಲಿ ದೇವರಿಗೆ ಕೋಪ ವನ್ನೆಬ್ಬಿಸಿದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿ ಕೊಳ್ಳಬೇಡಿರಿ. ನಿಮ್ಮ ಪಿತೃಗಳು ನನ್ನನ್ನು ಶೋಧಿಸಿ ದರು, ನನ್ನನ್ನು ಪರೀಕ್ಷಿಸಿದರು, ನಾಲ್ವತ್ತು ವರುಷ ನನ್ನ ಕಾರ್ಯಗಳನ್ನು ನೋಡಿದರು. ಆದದರಿಂದ ನಾನು ಆ ಸಂತತಿಯವರ ಮೇಲೆ ಬಹಳವಾಗಿ ಸಂತಾಪಗೊಂಡು--ಅವರು ಯಾವಾ ಗಲೂ ಹೃದಯದಲ್ಲಿ ತಪ್ಪಿಹೋಗುತ್ತಾರೆ ಎಂದು ಹೇಳಿದನು. ಅವರು ನನ್ನ ಮಾರ್ಗಗಳನ್ನು ತಿಳ್ಳುಕೊಳ್ಳ ಲಿಲ್ಲ. ಹೀಗಿರಲು--ಅವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲವೆಂದು ನಾನು ನನ್ನ ಕೋಪದಲ್ಲಿ ಪ್ರಮಾಣಮಾಡಿದೆನು ಎಂದು ಆತನು ಹೇಳಿದ್ದಾನೆ). ಸಹೋದರರೇ, ಎಚ್ಚರಿಕೆಯಿಂದ ನೋಡಿಕೊ ಳ್ಳಿರಿ; ಜೀವಸ್ವರೂಪನಾದ ದೇವರನ್ನು ಬಿಟ್ಟು ಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು. ನಿಮ್ಮಲ್ಲಿ ಒಬ್ಬ ರಾದರೂ ಪಾಪದಿಂದ ಮೋಸಹೋಗಿ ಕಠಿಣರಾಗ ದಂತೆ--ಈ ದಿನ ಎಂದು ಕರೆಯಲ್ಪಡುವಾಗಲೇ ಪ್ರತಿ ನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ.
- Proverbs 6:1–5 ಜ್ಞಾನೋಕ್ತಿಗಳು 6:1–5ನನ್ನ ಮಗನೇ, ನಿನ್ನ ಸ್ನೇಹಿತನಿಗಾಗಿ ನೀನು ಹೊಣೆಯಾಗಿದ್ದರೆ ಪರನೊಂದಿಗೆ ನಿನ್ನ ಕೈಯನ್ನು ಒಡ್ಡಿದ್ದರೆ ನಿನ್ನ ಬಾಯಿ ಮಾತುಗಳಿಂದ ನೀನು ಸಿಕ್ಕಿಕೊಂಡಿದ್ದೀ. ನಿನ್ನ ಬಾಯಿ ಮಾತುಗಳಿಂದಲೇ ನೀನು ಹಿಡಿಯಲ್ಪಟ್ಟಿದ್ದೀ. ನನ್ನ ಮಗನೇ, ನಿನ್ನ ಸ್ನೇಹಿತನ ಕೈಗೆ ಸಿಕ್ಕಿದಾಗ ತಪ್ಪಿಸಿಕೊಳ್ಳಲು ಇದನ್ನು ಮಾಡು. ಹೋಗಿ ನಿನ್ನನ್ನು ನೀನು ತಗ್ಗಿಸಿಕೊಂಡು ನಿನ್ನ ಸ್ನೇಹಿತನಿಗೆ ಹೊಣೆಯಾಗು. ನಿನ್ನ ಕಣ್ಣುಗಳಿಗೆ ನಿದ್ರೆಯನ್ನೂ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡಬೇಡ. ಬೇಟೆ ಗಾರನ ಕೈಯಿಂದ ಜಿಂಕೆಯೂ ಪಕ್ಷಿಯೂ ತಪ್ಪಿಸಿಕೊಳ್ಳು ವಂತೆ ತಪ್ಪಿಸಿಕೋ.
- 2 Corinthians 6:2 2 ಕೊರಿಂಥದವರಿಗೆ 6:2(ಆತನು--ಅಂಗೀಕಾರದ ಸಮಯದಲ್ಲಿ ನಾನು ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯಮಾಡಿದೆನು ಎಂದು ಹೇಳುತ್ತಾನೆ; ಇಗೋ, ಈಗಲೇ ಆ ಅಂಗೀಕಾರದ ಸಮಯ; ಇಗೋ, ಈಗಲೇ ಆ ರಕ್ಷಣೆಯ ದಿನ).
- Psalm 32:6 ಕೀರ್ತನೆಗಳು 32:6ಇದಕ್ಕೋಸ್ಕರ ಭಕ್ತರೆಲ್ಲರು ನಿನ್ನನ್ನು ಕಂಡುಕೊಳ್ಳುವ ಕಾಲದಲ್ಲಿ ನಿನಗೆ ಪ್ರಾರ್ಥನೆ ಮಾಡುವರು; ನಿಶ್ಚಯವಾಗಿ ಬಹಳ ನೀರಿನ ಪ್ರವಾಹ ಗಳು ಅವನ ಸವಿಾಪಕ್ಕೆ ಬರುವದಿಲ್ಲ.