Luke · chapter 12 · verse 8
Luke 12:8 in Kannada
ಇದಲ್ಲದೆ ನಾನೂ ನಿಮಗೆ ಹೇಳುವದೇನಂದರೆ--ಯಾವನಾದರೂ ಮನು ಷ್ಯರ ಮುಂದೆ ನನ್ನನ್ನು ಒಪ್ಪಿಕೊಂಡರೆ ಮನುಷ್ಯ ಕುಮಾರನು ಸಹ ದೇವದೂತರ ಮುಂದೆ ಅವನನ್ನು ಒಪ್ಪಿಕೊಳ್ಳುವನು.
Idallade naanoo nimage heluvadenandare--yaavanaadaroo manu shyara munde nannannu oppikondare manushya kumaaranu saha devadootara munde avanannu oppikolluvanu.
Luke 12:8 in English
- King James Version (KJV)
- Also I say unto you, Whosoever shall confess me before men, him shall the Son of man also confess before the angels of God:
- World English Bible (WEB)
- “I tell you, everyone who confesses me before men, the Son of Man will also confess before the angels of God;
- American Standard Version (ASV)
- And I say unto you, Every one who shall confess me before men, him shall the Son of man also confess before the angels of God:
- Bible in Basic English (BBE)
- And I say to you that to everyone who gives witness to me before men, the Son of man will give witness before the angels of God.
- Darby Translation (DBY)
- But I say to you, Whosoever shall confess me before men, the Son of man will confess him also before the angels of God;
- Webster's Bible (WBS)
- Also I say to you, Whoever shall confess me before men, him will the Son of man also confess before the angels of God.
- Young's Literal Translation (YLT)
- 'And I say to you, Every one — whoever may confess with me before men, the Son of Man also shall confess with him before the messengers of God,
Read in context
- 6ಎರಡು ಕಾಸುಗಳಿಗೆ ಐದು ಗುಬ್ಬಿಗಳು ಮಾರಲ್ಪಡುತ್ತವಲ್ಲಾ? ಅವುಗಳಲ್ಲಿ ಒಂದಾದರೂ ದೇವರ ಮುಂದೆ ಮರೆತುಹೋಗುವದಿಲ್ಲ.
- 7ನಿಮ್ಮ ತಲೆಯ ಕೂದಲುಗಳು ಸಹ ಲೆಕ್ಕಿಸಲ್ಪಟ್ಟಿವೆ. ಆದದರಿಂದ ಭಯಪಡಬೇಡಿರಿ; ನೀವು ಬಹಳ ಗುಬ್ಬಿಗಳಿಗಿಂತಲೂ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.
- 8ಇದಲ್ಲದೆ ನಾನೂ ನಿಮಗೆ ಹೇಳುವದೇನಂದರೆ--ಯಾವನಾದರೂ ಮನು ಷ್ಯರ ಮುಂದೆ ನನ್ನನ್ನು ಒಪ್ಪಿಕೊಂಡರೆ ಮನುಷ್ಯ ಕುಮಾರನು ಸಹ ದೇವದೂತರ ಮುಂದೆ ಅವನನ್ನು ಒಪ್ಪಿಕೊಳ್ಳುವನು.
- 9ಆದರೆ ಯಾವನು ಮನುಷ್ಯರ ಮುಂದೆ ನನ್ನನ್ನು ಅಲ್ಲಗಳೆಯುವನೋ ಅವನು ದೇವದೂತರ ಮುಂದೆ ಅಲ್ಲಗಳೆಯಲ್ಪಡುವನು.
- 10ಯಾವನಾದರೂ ಮನುಷ್ಯಕುಮಾರನಿಗೆ ವಿರೋಧ ವಾಗಿ ಮಾತನಾಡಿದರೆ ಅದು ಅವನಿಗೆ ಕ್ಷಮಿಸ ಲ್ಪಡುವದು; ಆದರೆ ಪರಿಶುದ್ಧಾತ್ಮನಿಗೆ ವಿರೋಧವಾಗಿ ದೂಷಣೆ ಮಾಡಿದರೆ ಅದು ಅವನಿಗೆ ಕ್ಷಮಿಸಲ್ಪ ಡುವದಿಲ್ಲ.
Cross references
- Matthew 10:32–33 ಮತ್ತಾಯನು 10:32–33ಯಾವನಾದರೂ ಮನುಷ್ಯರ ಮುಂದೆ ನನ್ನನ್ನು ಒಪ್ಪಿಕೊಂಡರೆ ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನನ್ನು ಒಪ್ಪಿಕೊಳ್ಳುವೆನು; ಯಾವನಾದರೂ ಮನುಷ್ಯರ ಮುಂದೆ ನನ್ನನ್ನು ಅಲ್ಲಗಳೆದರೆ ಪರಲೋಕ ದಲ್ಲಿರುವ ನನ್ನ ತಂದೆಯ ಮುಂದೆ ನಾನೂ ಅವನನ್ನು ಅಲ್ಲಗಳೆಯುವೆನು.
- 1 John 2:23 1 ಯೋಹಾನನು 2:23ಯಾವನು ಮಗನನ್ನು ಅಲ್ಲಗಳೆ ಯುವನೋ ಅವನು ತಂದೆಗೆ ಸೇರಿದವನಲ್ಲ; ಯಾವನು ಮಗನನ್ನು ಒಪ್ಪಿಕೊಳ್ಳುವನೋ ಅವನು ತಂದೆಗೂ ಸೇರಿದವನಾಗಿದ್ದಾನೆ.
- Romans 10:9–10 ರೋಮಾಪುರದವರಿಗೆ 10:9–10ನೀನು ಕರ್ತನಾದ ಯೇಸು ವನ್ನು ಬಾಯಿಂದ ಅರಿಕೆಮಾಡಿ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ್ದಾನೆಂದು ನಿನ್ನ ಹೃದಯದಲ್ಲಿ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ. ಹೃದಯದಿಂದ ನಂಬುವದರ ಮೂಲಕ ನೀತಿಯು ದೊರೆಯುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ.
- 2 Timothy 2:12 2 ತಿಮೊಥೆಯನಿಗೆ 2:12ನಾವು ಬಾಧೆಪಡುವವರಾಗಿದ್ದರೆ ಆತನೊಂದಿಗೆ ನಾವು ಸಹ ಆಳುವೆವು; ಆತನನ್ನು ಅಲ್ಲಗಳೆದರೆ ಆತನು ಸಹ ನಮ್ಮನ್ನು ಅಲ್ಲಗಳೆಯುವನು.
- Luke 15:10 ಲೂಕನು 15:10ಅದೇ ಪ್ರಕಾರ ಮಾನಸಾಂತರಪಡುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Revelation 2:13 ಪ್ರಕಟನೆ 2:13ನಿನ್ನ ಕ್ರಿಯೆಗಳನ್ನೂ ನೀನು ವಾಸಮಾಡುವ ಸ್ಥಳವನ್ನೂ ಬಲ್ಲೆನು; ಅದು ಸೈತಾನನ ಆಸನವಿರುವ ಸ್ಥಳವಾಗಿದೆ; ನೀನು ನನ್ನ ಹೆಸರನ್ನು ಬಿಗಿಯಾಗಿ ಹಿಡುಕೊಂಡಿದ್ದೀ; ನಿಮ್ಮಲ್ಲಿರುವ ಸೈತಾನನ ನಿವಾಸದಲ್ಲಿ ನನಗೆ ನಂಬಿಗಸ್ತನಾದ ಹತಸಾಕ್ಷಿಯಾದ ಅಂತಿಪನು ಕೊಲ್ಲಲ್ಪಟ್ಟ ದಿನಗಳಲ್ಲಿ ಯಾದರೂ ನ
- Revelation 3:4–5 ಪ್ರಕಟನೆ 3:4–5ತಮ್ಮ ವಸ್ತ್ರಗಳನ್ನು ಮಲಿನಮಾಡಿ ಕೊಳ್ಳದಿರುವ ಕೆಲವರು ಸಾರ್ದಿಸಿನಲ್ಲಿ ಸಹ ನಿನ್ನಲ್ಲಿ ದ್ದಾರೆ. ಅವರು ಬಿಳೀ ವಸ್ತ್ರಗಳನ್ನು ಧರಿಸಿಕೊಂಡು ನನ್ನೊಂದಿಗೆ ನಡೆಯುವರು. ಯಾಕಂದರೆ ಅವರು ಯೋಗ್ಯರಾಗಿದ್ದಾರೆ. ಜಯಹೊಂದುವ ಇವನೇ ಬಿಳೀ ವಸ್ತ್ರದಿಂದ ಹೊದಿಸಲ್ಪಡುವನು; ಜೀವದ ಪುಸ್ತಕದಿಂದ ನಾನು ಅವನ ಹೆಸರನ್ನು ಅಳಿಸಿ ಬಿಡುವದೇ ಇಲ್ಲ, ಆದರೆ ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಅವನ ಹೆಸರನ್ನು ಒಪ್ಪಿಕೊಳ್ಳುವೆನು.
- Revelation 2:10 ಪ್ರಕಟನೆ 2:10ನಿನ್ನನ್ನು ಸಂಕಟಪಡಿಸುವವುಗಳಲ್ಲಿ ಯಾವ ದಕ್ಕೂ ಹೆದರಬೇಡ. ಇಗೋ, ನೀವು ಶೋಧಿಸಲ್ಪಡು ವಂತೆ ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವನು; ಹತ್ತು ದಿವಸಗಳ ತನಕ ನಿಮಗೆ ಸಂಕಟವಿ ರುವದು. ನೀನು ಸಾಯಬೇಕಾದರೂ ನಂಬಿಗಸ್ತ ನಾಗಿರು; ನಾನು ನಿನಗೆ
- Jude 1:24–25 ಯೂದನು 1:24–25ಎಡವಿಬೀಳದಂತೆ ನಿಮ್ಮನ್ನು ಕಾಪಾಡುವದಕ್ಕೂ ತನ್ನ ಪ್ರಭಾವದ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿ ಗಳನ್ನಾಗಿ ಅತ್ಯಂತ ಹರ್ಷದೊಡನೆ ನಿಲ್ಲಿಸುವದಕ್ಕೂ ಶಕ್ತನಾಗಿರುವಒಬ್ಬನೇ ಜ್ಞಾನವುಳ್ಳ ನಮ್ಮ ರಕ್ಷಕನಾದ ದೇವರಿಗೆ ಪ್ರಭಾವ ಮಹತ್ವ ಆಧಿಪತ್ಯ ಅಧಿಕಾರಗಳು ಈಗಲೂ ಯಾವಾಗಲೂ ಇರಲಿ. ಆಮೆನ್. ಒಬ್ಬನೇ ಜ್ಞಾನವುಳ್ಳ ನಮ್ಮ ರಕ್ಷಕನಾದ ದೇವರಿಗೆ ಪ್ರಭಾವ ಮಹತ್ವ ಆಧಿಪತ್ಯ ಅಧಿಕಾರಗಳು ಈಗಲೂ ಯಾವಾಗಲೂ ಇರಲಿ. ಆಮೆನ್.
- 1 Samuel 2:30 1 ಸಮುವೇಲನು 2:30ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳುವ ದೇನಂದರೆ--ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಕರ್ತನು ಹೇಳುವದೇನಂದರೆ--ನನಗೆ ಅದು ದೂರವಾಗಿರಲಿ; ಯಾಕಂದರೆ ನನ್ನನ್ನು ಸನ್ಮಾನಿಸು ವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸು ವವರನ್ನು ನಾನು ತಿರಸ್ಕರಿಸುವೆನು.
- Psalm 119:46 ಕೀರ್ತನೆಗಳು 119:46ನಿನ್ನ ಸಾಕ್ಷಿಗಳನ್ನು ಕುರಿತು ಅರಸರ ಮುಂದೆ ಮಾತನಾಡು ತ್ತೇನೆ, ನಾಚಿಕೆಪಡುವದಿಲ್ಲ.
- Matthew 25:31–34 ಮತ್ತಾಯನು 25:31–34ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವನು; ಮತ್ತು ಆತನ ಮುಂದೆ ಎಲ್ಲಾ ಜನಾಂಗಗಳವರು ಕೂಡಿಸಲ್ಪ ಡುವರು; ಆಗ ಕುರುಬನು ತನ್ನ ಕುರಿಗಳನ್ನು ಆಡುಗ ಳಿಂದ ಪ್ರತ್ಯೇಕಿಸುವಂತೆಯೇ ಆತನು ಅವರನ್ನು ಪ್ರತ್ಯೇ ಕಿಸುವನು; ಆತನು ಕುರಿಗಳನ್ನು ತನ್ನ ಬಲಗಡೆ ಯಲ್ಲಿಯೂ ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು. ಆಗ ಅರಸನು ತನ್ನ ಬಲಗಡೆಯಲ್ಲಿ ರುವವರಿಗೆ--ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ನೀವು ಬನ್ನಿರಿ; ಭೂಲೋಕಕ್ಕೆ ಅಸ್ತಿ ವಾರ ಹಾಕಿದಂದಿನಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಬಾಧ್ಯವಾಗಿ ಹೊಂದಿರಿ;