Luke · chapter 13 · verse 3
Luke 13:3 in Kannada
ಆದರೆ--ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ; ನೀವು ಮಾನಸಾಂತರ ಪಡದೆಹೋದರೆ ನೀವೆಲ್ಲರೂ ಅವರಂತೆಯೇ ನಾಶವಾ ಗುವಿರಿ.
Aadare--haagallavendu naanu nimage heluttene; neevu maanasaantara padadehodare neevellaroo avaranteye naashavaa guviri.
Luke 13:3 in English
- King James Version (KJV)
- I tell you, Nay: but, except ye repent, ye shall all likewise perish.
- World English Bible (WEB)
- I tell you, no, but unless you repent, you will all perish in the same way.
- American Standard Version (ASV)
- I tell you, Nay: but, except ye repent, ye shall all in like manner perish.
- Bible in Basic English (BBE)
- I say to you, It is not so: but if your hearts are not changed, you will all come to the same end.
- Darby Translation (DBY)
- No, I say to you, but if ye repent not, ye shall all perish in the same manner.
- Webster's Bible (WBS)
- I tell you, No; but except ye repent, ye shall all likewise perish.
- Young's Literal Translation (YLT)
- No — I say to you, but, if ye may not reform, all ye even so shall perish.
Read in context
- 1ಇದಲ್ಲದೆ ಪಿಲಾತನು ಗಲಿಲಾಯದವರ ರಕ್ತವನ್ನು ಅವರ ಬಲಿಗಳೊಂದಿಗೆ ಬೆರಸಿದ ವಿಷಯವನ್ನು ಆತನಿಗೆ ತಿಳಿಸಿದ ಕೆಲವರು ಆ ಸಮಯ ದಲ್ಲಿ ಅಲ್ಲಿದ್ದರು.
- 2ಆಗ ಯೇಸು ಅವರಿಗೆ--ಈ ಗಲಿ ಲಾಯದವರು ಇಂಥವುಗಳನ್ನು ಅನುಭವಿಸಿದ ಕಾರಣ ಅವರು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ನೀವು ಭಾವಿಸುತ್ತೀರೋ?
- 3ಆದರೆ--ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ; ನೀವು ಮಾನಸಾಂತರ ಪಡದೆಹೋದರೆ ನೀವೆಲ್ಲರೂ ಅವರಂತೆಯೇ ನಾಶವಾ ಗುವಿರಿ.
- 4ಇಲ್ಲವೆ ಸಿಲೊವಾಮಿನಲ್ಲಿ ಗೋಪುರವು ಬಿದ್ದು ಸತ್ತ ಆ ಹದಿನೆಂಟು ಜನರು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಪಾಪಿಷ್ಠ ರೆಂದು ಯೋಚಿಸುತ್ತೀರೋ?
- 5ಆದರೆ--ಹಾಗಲ್ಲ ವೆಂದು ನಾನು ನಿಮಗೆ ಹೇಳುತ್ತೇನೆ; ನೀವು ಮಾನ ಸಾಂತರಪಡದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ ಅಂದನು.
Cross references
- Acts 3:19 ಅಪೊಸ್ತಲರ ಕೃತ್ಯಗಳು 3:19ಆದದರಿಂದ ನಿಮ್ಮ ಪಾಪಗಳು ಅಳಿಸಲ್ಪಡು ವಂತೆ ನೀವು ಮಾನಸಾಂತರಪಟ್ಟು ತಿರುಗಿಕೊಳ್ಳಿರಿ; ಆಗ ಕರ್ತನ ಸನ್ನಿಧಾನದಿಂದ ನಿಮಗೆ ವಿಶ್ರಾಂತಿಕಾಲಗಳು ಒದಗುವವು.
- Matthew 3:2 ಮತ್ತಾಯನು 3:2ನೀವು ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು.
- Luke 13:5 ಲೂಕನು 13:5ಆದರೆ--ಹಾಗಲ್ಲ ವೆಂದು ನಾನು ನಿಮಗೆ ಹೇಳುತ್ತೇನೆ; ನೀವು ಮಾನ ಸಾಂತರಪಡದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ ಅಂದನು.
- Revelation 2:21–22 ಪ್ರಕಟನೆ 2:21–22ಅವಳು ಮಾಡಿದ ಜಾರತ್ವಕ್ಕಾಗಿ ಮಾನ ಸಾಂತರಪಡುವದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು; ಆದರೆ ಅವಳು ಮಾನಸಾಂತರಪಡಲಿಲ್ಲ. ಇಗೋ, ನಾನು ಅವಳನ್ನು ಹಾಸಿಗೆಯಲ್ಲಿಯೂ ಅವಳೊಂದಿಗೆ ವ್ಯಭಿಚಾರ ಮಾಡಿದವರು ತಮ್ಮ ಕೃತ್ಯಗಳಿ ಗಾಗಿ ಮಾನಸಾಂತರಪಡದಿದ್ದರೆ ಅವರನ್ನು ಮಹಾಸಂಕ ಟದಲ್ಲಿಯೂ ಹಾಕುವೆನು.
- Acts 2:38–40 ಅಪೊಸ್ತಲರ ಕೃತ್ಯಗಳು 2:38–40ಆಗ ಪೇತ್ರನು ಅವರಿಗೆ--ನೀವು ಮಾನಸಾಂತರಪಟ್ಟು ಪಾಪಗಳ ಪರಿಹಾರಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನು ಯೇಸು ಕ್ರಿಸ್ತನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಳ್ಳಿರಿ; ಆಗ ನೀವು ಪವಿತ್ರಾತ್ಮನ ದಾನವನ್ನು ಹೊಂದುವಿರಿ. ಯಾಕಂದರೆ ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾದ ಕರ್ತನು ಕರೆಯುವವರೆಲ್ಲರಿಗೂ ಮಾಡಿಯದೆ ಎಂದು ಹೇಳಿದನು. ಅವನು ಇನ್ನೂ ಬೇರೆ ಅನೇಕ ಮಾತುಗಳಿಂದ ಸಾಕ್ಷಿಕೊಟ್ಟು--ಈ ಮೂರ್ಖ ಸಂತತಿಯವರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿರಿ ಎಂದು ಎಚ್ಚರಿಸಿ ಹೇಳಿದನು.
- Luke 23:28–30 ಲೂಕನು 23:28–30ಆದರೆ ಯೇಸು ಅವರ ಕಡೆಗೆ ತಿರುಗಿ ಕೊಂಡು--ಯೆರೂಸಲೇಮಿನ ಕುಮಾರ್ತೆಯರೇ, ನನ ಗಾಗಿ ಅಳಬೇಡಿರಿ; ಆದರೆ ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ. ಯಾಕಂದರೆ--ಇಗೋ, ಬಂಜೆಯರೂ ಎಂದಿಗೂ ಗರ್ಭಿಣಿಯಾಗದವರೂ ಎಂದಿಗೂ ಮೊಲೆ ಕುಡಿಸದವರೂ ಧನ್ಯರು ಎಂದು ಹೇಳುವ ದಿವಸಗಳು ಬರುತ್ತವೆ. ಆಗ ಅವರು ಬೆಟ್ಟಗಳಿಗೆ--ನಮ್ಮ ಮೇಲೆ ಬೀಳಿರಿ; ಗುಡ್ಡಗಳಿಗೆ-- ನಮ್ಮನ್ನು ಮುಚ್ಚಿಕೊಳ್ಳಿರಿ ಎಂದು ಹೇಳಲಾರಂಭಿಸು ವರು.
- Luke 21:22–24 ಲೂಕನು 21:22–24ಬರೆದಿರುವವುಗಳೆಲ್ಲವೂ ನೆರವೇರುವಂತೆ ಇವು ಮುಯ್ಯಿತೀರಿಸುವ ದಿವಸಗಳಾಗಿವೆ. ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಮೊಲೆ ಕುಡಿಸುವ ವರಿಗೂ ಅಯ್ಯೊ! ಯಾಕಂದರೆ ದೇಶದಲ್ಲಿ ಮಹಾ ವಿಪತ್ತೂ ಈ ಜನರ ಮೇಲೆ ಕೋಪವೂ ಆಗ ಇರು ವದು. ಇದಲ್ಲದೆ ಅವರು ಕತ್ತಿಯ ಬಾಯಿಗೆ ಬೀಳುವರು. ಸೆರೆಯಾಗಿ ಎಲ್ಲಾ ಜನಾಂಗಗಳಲ್ಲಿ ಒಯ್ಯ ಲ್ಪಡುವರು;ಅನ್ಯಜನಗಳ ಕಾಲಗಳು ಪರಿಪೂರ್ಣ ವಾಗುವ ವರೆಗೆ ಯೆರೂಸಲೇಮು ಅನ್ಯಜನಗಳಿಂದ ತುಳಿದಾಡಲ್ಪಡುವದು.
- Matthew 12:45 ಮತ್ತಾಯನು 12:45ತರುವಾಯ ಅದು ಹೋಗಿ ತನಗಿಂತ ಕೆಟ್ಟವುಗಳಾಗಿರುವ ಬೇರೆ ಏಳು ಆತ್ಮಗಳನ್ನು ಕರಕೊಂಡು ಅವು ಅದರೊಳಗೆ ಪ್ರವೇಶಿಸಿ ವಾಸಮಾಡುತ್ತವೆ; ಹೀಗೆ ಆ ಮನುಷ್ಯನ ಕಡೇ ಸ್ಥಿತಿಯು ಮೊದಲಿಗಿಂತಲೂ ಕೆಟ್ಟದ್ದಾಗಿರುವದು. ಅದರಂತೆಯೇ ಈ ಕೆಟ್ಟ ಸಂತತಿಗೂ ಆಗುವದು ಎಂದು ಹೇಳಿದನು.
- Luke 24:47 ಲೂಕನು 24:47ಯೆರೂಸಲೇಮು ಮೊದಲುಗೊಂಡು ಎಲ್ಲಾ ಜನಾಂಗದವ ರೊಳಗೆ ಆತನ ಹೆಸರಿನಲ್ಲಿ ಮಾನಸಾಂತರ ಮತ್ತು ಪಾಪಗಳ ಕ್ಷಮಾಪಣೆ ಸಾರಲ್ಪಡಬೇಕೆಂತಲೂ ಬರೆಯ ಲ್ಪಟ್ಟಿದೆ.
- Matthew 23:35–38 ಮತ್ತಾಯನು 23:35–38ಹೀಗೆ ನೀತಿವಂತನಾದ ಹೇಬೆಲನ ರಕ್ತ ಮೊದಲು ಗೊಂಡು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ನೀವು ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತಾಪರಾಧವು ನಿಮ್ಮ ಮೇಲೆ ಬರುವದು. ನಿಮಗೆ ನಿಜವಾಗಿ ಹೇಳು ತ್ತೇನೆ--ಇವೆಲ್ಲವುಗಳು ಈ ಸಂತತಿಯವರ ಮೇಲೆ ಬರುವವು. ಓ ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸ ಲ್ಪಟ್ಟವರನ್ನು ಕಲ್ಲೆಸೆಯುವವಳೇ, ಕೋಳಿಯು ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಿನ್ನ ಮಕ್ಕಳನ್ನು ಕೂಡಿಸುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನ ಇಗೋ, ನಿಮ್ಮ ಮನೆಯು ನಿಮಗೆ ಹಾಳಾದದ್ದಾಗಿ ಬಿಡಲ್ಪಡುವದು.ಇಂದಿನಿಂದ ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ವರೆಗೆ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Matthew 3:10–12 ಮತ್ತಾಯನು 3:10–12ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು. ನಾನು ಮಾನ ಸಾಂತರದ ನಿಮಿತ್ತ ನಿಮಗೆ ನೀರಿನಲ್ಲಿ ಬಾಪ್ತಿಸ್ಮ ಮಾಡಿಸುವದು ನಿಜವೇ; ಆದರೆ ನನ್ನ ಹಿಂದೆ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ಆತನ ಕೆರಗಳನ್ನು ಹೊರುವದಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾ ತ್ಮನಿಂದಲೂ ಬೆಂಕಿಯಿಂದಲೂ ನಿಮಗೆ ಬಾಪ್ತಿಸ್ಮ ಮಾಡಿ ಸುವನು. ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು.
- Matthew 22:7 ಮತ್ತಾಯನು 22:7ಆದರೆ ಅರಸನು ಅದನ್ನು ಕೇಳಿ ಕೋಪೋದ್ರೇಕವುಳ್ಳವನಾಗಿ ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹ ರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.