Luke · chapter 14 · verse 3
Luke 14:3 in Kannada
ಆಗ ಯೇಸು ನ್ಯಾಯಶಾಸ್ತ್ರಿಗಳಿಗೂ ಫರಿಸಾಯರಿಗೂ--ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವದು ನ್ಯಾಯವೋ ಎಂದು ಕೇಳಿದನು.
Aaga yesu nyaayashaastrigaligoo pharisaayarigoo--sabbat dinadalli svasthamaaduvadu nyaayavo endu kelidanu.
Luke 14:3 in English
- King James Version (KJV)
- And Jesus answering spake unto the lawyers and Pharisees, saying, Is it lawful to heal on the sabbath day?
- World English Bible (WEB)
- Jesus, answering, spoke to the lawyers and Pharisees, saying, “Is it lawful to heal on the Sabbath?”
- American Standard Version (ASV)
- And Jesus answering spake unto the lawyers and Pharisees, saying, Is it lawful to heal on the sabbath, or not?
- Bible in Basic English (BBE)
- And Jesus, answering, said to the scribes and Pharisees, Is it right to make people well on the Sabbath or not?
- Darby Translation (DBY)
- And Jesus answering spoke unto the doctors of the law and Pharisees, saying, Is it lawful to heal on the sabbath?
- Webster's Bible (WBS)
- And Jesus answering, spoke to the lawyers and Pharisees, saying, Is it lawful to heal on the sabbath?
- Young's Literal Translation (YLT)
- and Jesus answering spake to the lawyers and Pharisees, saying, 'Is it lawful on the sabbath-day to heal?'
Read in context
- 1ಇದಾದ ಮೇಲೆ ಆತನು ಸಬ್ಬತ್ ದಿನದಲ್ಲಿ ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಯೊಳಗೆ ಊಟಕ್ಕೆ ಹೋದಾಗ ಅವರು ಆತನನ್ನು ಹೊಂಚಿನೋಡುತ್ತಾ ಇದ್ದರು.
- 2ಇಗೋ, ಅಲ್ಲಿ ಜಲೊದರವುಳ್ಳ ಒಬ್ಬ ಮನುಷ್ಯನು ಆತನ ಎದು ರಿನಲ್ಲಿ ಇದ್ದನು.
- 3ಆಗ ಯೇಸು ನ್ಯಾಯಶಾಸ್ತ್ರಿಗಳಿಗೂ ಫರಿಸಾಯರಿಗೂ--ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವದು ನ್ಯಾಯವೋ ಎಂದು ಕೇಳಿದನು.
- 4ಆದರೆ ಅವರು ಮೌನವಾಗಿದ್ದರು. ಆಗ ಆತನು ಅವನನ್ನು ಕೈಹಿಡಿದು ಸ್ವಸ್ಥಪಡಿಸಿಕಳುಹಿಸಿದನು.
- 5ಅವರಿಗೆ ಉತ್ತರಕೊಟ್ಟು-- ನಿಮ್ಮಲ್ಲಿ ಒಬ್ಬನ ಕತ್ತೆಯಾಗಲೀ ಎತ್ತಾಗಲೀ ಒಂದು ಕುಣಿಯಲ್ಲಿ ಬಿದ್ದರೆ ಅದನ್ನು ತಕ್ಷಣವೇ ಸಬ್ಬತ್ತಿನಲ್ಲಿ ಮೇಲಕ್ಕೆ ಎಳೆಯುವದಿಲ್ಲವೇ ಅಂದನು.
Cross references
- Matthew 12:10 ಮತ್ತಾಯನು 12:10ಇಗೋ, ಅಲ್ಲಿ ಕೈ ಬತ್ತಿದ್ದ ಒಬ್ಬ ಮನುಷ್ಯನಿದ್ದನು. ಆಗ ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ-- ಸಬ್ಬತ್ ದಿನಗಳಲ್ಲಿ ಸ್ವಸ್ಥ ಮಾಡುವದು ನ್ಯಾಯವೋ ಎಂದು ಕೇಳಿದರು.
- Luke 6:9 ಲೂಕನು 6:9ತರು ವಾಯ ಯೇಸು ಅವರಿಗೆ--ನಿಮಗೆ ಒಂದು ಸಂಗತಿ ಯನ್ನು ನಾನು ಕೇಳುತ್ತೇನೆ; ಸಬ್ಬತ್ ದಿನಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ? ಇಲ್ಲವೆ ಕೆಟ್ಟದ್ದು ಮಾಡುವದೋ? ಪ್ರಾಣವನ್ನು ರಕ್ಷಿಸುವದೋ, ಇಲ್ಲವೆ ಅದನ್ನು ನಾಶಮಾಡುವದೋ ಅಂದನು.
- Luke 13:14–16 ಲೂಕನು 13:14–16ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ--ಆರು ದಿವಸಗಳಲ್ಲಿ ಮನು ಷ್ಯರು ಕೆಲಸ ಮಾಡತಕ್ಕದ್ದು. ಆದದರಿಂದ ಅವುಗಳಲ್ಲಿ ಅವರು ಬಂದು ಸ್ವಸ್ಥತೆ ಹೊಂದಲಿ; ಸಬ್ಬತ್ ದಿನದಲ್ಲಿ ಬೇಡ ಅಂದನು. ಅದಕ್ಕೆ ಕರ್ತನು ಪ್ರತ್ಯುತ್ತರವಾಗಿ ಅವನಿಗೆ--ಕಪಟಿಯೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ತಿನಲ್ಲಿ ತನ್ನ ಎತ್ತನ್ನಾಗಲಿ ಇಲ್ಲವೆ ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವದಕ್ಕಾಗಿ ಹೋಗುವನಲ್ಲವೇ? ಹಾಗಾದರೆ ಇಗೋ, ಅಬ್ರ ಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರುಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನ ದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೋ ಅಂದನು.
- Mark 3:4 ಮಾರ್ಕನು 3:4ಆತನು ಅವರಿಗೆ --ಸಬ್ಬತ್ ದಿವಸಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ ಇಲ್ಲವೆ ಕೆಟ್ಟದ್ದನ್ನು ಮಾಡುವದು ನ್ಯಾಯವೋ? ಪ್ರಾಣವನ್ನು ಉಳಿಸುವದೋ ಇಲ್ಲವೆ ಕೊಲ್ಲುವದೋ ಎಂದು ಕೇಳಿದನು; ಆದರೆ ಅವರು ಸುಮ್ಮನಿದ್ದರು.
- John 7:23 ಯೋಹಾನನು 7:23ಒಬ್ಬ ಮನುಷ್ಯನು ಮೋಶೆಯ ನ್ಯಾಯಪ್ರಮಾಣವನ್ನು ವಿಾರದ ಹಾಗೆ ಸಬ್ಬತ್ ದಿನ ದಲ್ಲಿ ಸುನ್ನತಿಯನ್ನು ಮಾಡಿಸಿಕೊಂಡರೆ ನಾನು ಒಬ್ಬ ಮನುಷ್ಯನನ್ನು ಸಬ್ಬತ್ದಿನದಲ್ಲಿ ಸಂಪೂರ್ಣವಾಗಿ ಸ್ವಸ್ಥ ಮಾಡಿದ್ದಕ್ಕೆ ನನ್ನ ಮೇಲೆ ನೀವು ಕೋಪಗೊಳ್ಳು ತ್ತೀರೋ?
- Matthew 22:35 ಮತ್ತಾಯನು 22:35ಅವರಲ್ಲಿ ನ್ಯಾಯಶಾಸ್ತ್ರಿಯಾಗಿದ್ದ ಒಬ್ಬನು ಆತನನ್ನು ಶೋಧಿಸುವದಕ್ಕಾಗಿ--
- Luke 11:44–45 ಲೂಕನು 11:44–45ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೊ! ಯಾಕಂದರೆ ನೀವು ಕಾಣಿಸದ ಸಮಾಧಿಗಳಂತೆ ಇದ್ದೀರಿ; ಅವುಗಳ ಮೇಲೆ ನಡೆದಾಡುವ ಮನುಷ್ಯರು ಅವುಗಳನ್ನು ಅರಿಯರು ಎಂದು ಹೇಳಿದನು. ಆಗ ನ್ಯಾಯಶಾಸ್ತ್ರಿಗಳಲ್ಲಿ ಒಬ್ಬನು ಆತನಿಗೆ-- ಬೋಧಕನೇ, ನೀನು ಇವುಗಳನ್ನು ಹೇಳುವದರಿಂದ ನಮ್ಮನ್ನು ಸಹ ಅವಮಾನಪಡಿಸುತ್ತೀ ಅಂದನು.
- Matthew 12:2 ಮತ್ತಾಯನು 12:2ಆದರೆ ಫರಿಸಾಯರು ಅದನ್ನು ನೋಡಿ ಆತನಿಗೆ--ಇಗೋ, ನಿನ್ನ ಶಿಷ್ಯರು ಸಬ್ಬತ್ದಿನದಲ್ಲಿ ಮಾಡ ಬಾರದ್ದನ್ನು ಮಾಡುತ್ತಾರೆ ಅಂದರು.