Luke · chapter 14 · verse 33
Luke 14:33 in Kannada
ಅದರಂತೆಯೇ ನಿಮ್ಮಲ್ಲಿ ಯಾವನಾ ದರೂ ತನಗಿರುವವುಗಳನ್ನೆಲ್ಲಾ ಬಿಟ್ಟುಬಿಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
Adaranteye nimmalli yaavanaa daroo tanagiruvavugalannellaa bittubidadiddare avanu nanna shishyanaagiralaaranu.
Luke 14:33 in English
- King James Version (KJV)
- So likewise, whosoever he be of you that forsaketh not all that he hath, he cannot be my disciple.
- World English Bible (WEB)
- So therefore, whoever of you who doesn’t renounce all that he has, he can’t be my disciple.
- American Standard Version (ASV)
- So therefore whosoever he be of you that renounceth not all that he hath, he cannot be my disciple.
- Bible in Basic English (BBE)
- And so whoever is not ready to give up all he has may not be my disciple.
- Darby Translation (DBY)
- Thus then every one of you who forsakes not all that is his own cannot be my disciple.
- Webster's Bible (WBS)
- So likewise, whoever he is of you that forsaketh not all that he hath, he cannot be my disciple.
- Young's Literal Translation (YLT)
- 'So, then, every one of you who doth not take leave of all that he himself hath, is not able to be my disciple.
Read in context
- 31ಇಲ್ಲವೆ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧ ವಾಗಿ ಯುದ್ಧಮಾಡುವದಕ್ಕೆ ಹೋಗುವಾಗ ಮೊದಲು ಕೂತುಕೊಂಡು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ (ಸೈನ್ಯ)ದೊಂದಿಗೆ ಬರುವ ಆ ಅರಸನನ್ನು ತನ್ನ ಹತು ಸಾವಿರ (ಸೈನ್ಯ)ದೊಂದಿಗೆ ಎದುರಿಸಲು ಸಮರ್ಥನೋ ಎಂದು ವಿಚಾರಿಸುವದಿಲ್ಲವೋ?
- 32ಇಲ್ಲವೆ ಅವನು ಇನ್ನು ದೂರದಲ್ಲಿರುವಾಗಲೇ ತನ್ನ ರಾಯಭಾರಿಗಳನ್ನು ಕಳುಹಿಸಿ ಸಮಾಧಾನದ ಶರತ್ತುಗಳಿಗಾಗಿ ಕೋರುವ ದಿಲ್ಲವೋ?
- 33ಅದರಂತೆಯೇ ನಿಮ್ಮಲ್ಲಿ ಯಾವನಾ ದರೂ ತನಗಿರುವವುಗಳನ್ನೆಲ್ಲಾ ಬಿಟ್ಟುಬಿಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
- 34ಉಪ್ಪು ಒಳ್ಳೇದು; ಆದರೆ ಉಪ್ಪು ತನ್ನ ರುಚಿ ಯನ್ನು ಕಳೆದುಕೊಂಡರೆ ಅದಕ್ಕೆ ಇನ್ನಾತರಿಂದ ರುಚಿ ಬಂದೀತು?ಅದು ಭೂಮಿಗಾದರೂ ತಿಪ್ಪೆ ಗಾದರೂ ಪ್ರಯೋಜನವಿಲ್ಲ; ಅದನ್ನು ಜನರು ಹೊರಗೆ ಹಾಕುತ್ತಾರೆ. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.
- 35ಅದು ಭೂಮಿಗಾದರೂ ತಿಪ್ಪೆ ಗಾದರೂ ಪ್ರಯೋಜನವಿಲ್ಲ; ಅದನ್ನು ಜನರು ಹೊರಗೆ ಹಾಕುತ್ತಾರೆ. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.
Cross references
- Philippians 3:7–8 ಫಿಲಿಪ್ಪಿಯವರಿಗೆ 3:7–8ಆದರೆ ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.
- 1 John 2:15–16 1 ಯೋಹಾನನು 2:15–16ಲೋಕವನ್ನಾಗಲಿ ಲೋಕದಲ್ಲಿರುವವುಗಳ ನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕ ವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವವುಗಳೆಲ್ಲವು ಅಂದರೆ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಗೆ ಸಂಬಂಧ ಪಟ್ಟವುಗಳಲ್ಲ, ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ.
- Luke 5:28 ಲೂಕನು 5:28ಅವನು ಎಲ್ಲವನ್ನು ಬಿಟ್ಟು ಎದ್ದು ಆತನನ್ನು ಹಿಂಬಾಲಿಸಿದನು.
- Luke 14:26 ಲೂಕನು 14:26ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ಹೌದು, ತನ್ನ ಸ್ವಂತ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರ ಲಾರನು.
- Luke 18:28–30 ಲೂಕನು 18:28–30ಆಗ ಪೇತ್ರನು--ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ ಎಂದು ಹೇಳಿದ್ದಕ್ಕೆ ಆತನು ಅವರಿಗೆ--ಒಬ್ಬನು ಮನೆ ಯನ್ನಾದರೂ ತಂದೆತಾಯಿಗಳನ್ನಾದರೂ ಸಹೋದರರನ್ನಾದರೂ ಹೆಂಡತಿಯನ್ನಾದರೂ ಇಲ್ಲವೆ ಮಕ್ಕಳ ನ್ನಾದರೂ ದೇವರ ರಾಜ್ಯಕ್ಕೋಸ್ಕರ ಬಿಟ್ಟುಬಿಡುವವನು ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಲೋಕದಲ್ಲಿ ನಿತ್ಯಜೀವವನ್ನೂ ಹೊಂದಿಯೇ ಹೊಂದು ವನು ಎಂದು ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ ಅಂದನು.
- Luke 18:22–23 ಲೂಕನು 18:22–23ಆಗ ಯೇಸು ಇವುಗಳನ್ನು ಕೇಳಿ ಅವನಿಗೆ--ಆದಾಗ್ಯೂ ನಿನಗೆ ಒಂದು ಕೊರತೆ ಇದೆ; ನಿನಗೆ ಇರುವದೆಲ್ಲವನ್ನು ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತು ಇರುವದು; ಬಂದು ನನ್ನನ್ನು ಹಿಂಬಾ ಲಿಸು ಅಂದನು. ಅವನು ಇದನ್ನು ಕೇಳಿ ಬಹಳ ದುಃಖವುಳ್ಳವನಾದನು; ಯಾಕಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.
- Luke 5:11 ಲೂಕನು 5:11ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದಾಗ ಎಲ್ಲವನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
- Acts 5:1–5 ಅಪೊಸ್ತಲರ ಕೃತ್ಯಗಳು 5:1–5ಆದರೆ ಅನನೀಯನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿಯಾದ ಸಪ್ಫೈರಳೊಂದಿಗೆ ತನ್ನ ಒಂದು ಆಸ್ತಿಯನ್ನು ಮಾರಿ ಅದರ ಕ್ರಯದಲ್ಲಿ ಒಂದು ಭಾಗವನ್ನು ತೆಗೆದಿಟ್ಟು ಇನ್ನೊಂದು ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು; ಇದು ಅವನ ಹೆಂಡತಿಗೂ ತಿಳಿದಿತ್ತು. ಆಗ ಪೇತ್ರನು--ಅನನೀಯನೇ, ಪವಿತ್ರಾತ್ಮನಿಗೆ ಸುಳ್ಳು ಹೇಳಿ ಹೊಲದ ಕ್ರಯದಲ್ಲಿ ಒಂದು ಭಾಗವನ್ನು ತೆಗೆದಿಡುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿ ಕೊಂಡದ್ದು ಯಾಕೆ? ಆ ಆಸ್ತಿಯು ಇದ್ದಾಗ ಅದು ನಿನ್ನ ಸ್ವಂತದ್ದಾಗಿತ್ತಲ್ಲವೇ? ಅದನ್ನು ಮಾರಿದ ಮೇಲೆಯೂ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ನಿನ್ನ ಹೃದಯದಲ್ಲಿ ಅದನ್ನು ಯಾಕೆ ಯೋಚಿಸಿದ್ದೀ? ನೀನು ಮನುಷ್ಯರಿಗಲ್ಲ, ದೇವರಿಗೇ ಸುಳ್ಳಾಡಿದ್ದೀ ಅಂದನು. ಅನನೀಯನು ಈ ಮಾತುಗಳನ್ನು ಕೇಳಿ ಕೆಳಗೆ ಬಿದ್ದು ಪ್ರಾಣಬಿಟ್ಟನು; ಇವುಗಳನ್ನು ಕೇಳಿದವರೆಲ್ಲರಿಗೂ ಮಹಾಭಯ ಉಂಟಾ ಯಿತು.
- Acts 8:19–22 ಅಪೊಸ್ತಲರ ಕೃತ್ಯಗಳು 8:19–22ನಾನು ಯಾರ ಮೇಲೆ ಕೈಗಳನ್ನಿಡುತ್ತೇನೋ ಅವರು ಪವಿತ್ರಾತ್ಮನನ್ನು ಹೊಂದುವಂತೆ ಈ ಅಧಿಕಾರ ವನ್ನು ನನಗೂ ಕೊಡಿರಿ ಅಂದನು. ಆದರೆ ಪೇತ್ರನು ಅವನಿಗೆ--ನಿನ್ನ ಹಣವು ನಿನ್ನ ಕೂಡ ಹಾಳಾಗಿ ಹೋಗಲಿ; ನೀನು ದೇವರ ದಾನವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಯೋಚಿಸುತ್ತೀ ಯಲ್ಲಾ. ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ; ನಿನ್ನ ಹೃದಯವು ದೇವರ ಮುಂದೆ ಸರಿಯಲ್ಲ. ಆದದರಿಂದ ಈ ನಿನ್ನ ಕೆಟ್ಟತನದ ವಿಷಯವಾಗಿ ಮಾನಸಾಂತರಪಟ್ಟು ದೇವರನ್ನು ಬೇಡಿಕೋ, ಆಗ ನಿನ್ನ ಹೃದಯದ ಆಲೋಚನೆಯು ಕ್ಷಮಿಸಲ್ಪಡಬಹುದು.
- 2 Timothy 4:10 2 ತಿಮೊಥೆಯನಿಗೆ 4:10ಯಾಕಂದರೆ ದೇಮನು ಇಹಲೋಕವನ್ನು ಪ್ರೀತಿಸಿ ನನ್ನನ್ನು ತೊರೆದುಬಿಟ್ಟು ಥೆಸಲೋನಿಕಕ್ಕೆ ಹೋದನು; ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು;