Luke · chapter 5 · verse 28
Luke 5:28 in Kannada
ಅವನು ಎಲ್ಲವನ್ನು ಬಿಟ್ಟು ಎದ್ದು ಆತನನ್ನು ಹಿಂಬಾಲಿಸಿದನು.
Avanu ellavannu bittu eddu aatanannu himbaalisidanu.
Luke 5:28 in English
- King James Version (KJV)
- And he left all, rose up, and followed him.
- World English Bible (WEB)
- He left everything, and rose up and followed him.
- American Standard Version (ASV)
- And he forsook all, and rose up and followed him.
- Bible in Basic English (BBE)
- And giving up his business, he got up and went after him.
- Darby Translation (DBY)
- And having left all, rising up, he followed him.
- Webster's Bible (WBS)
- And he left all, arose, and followed him.
- Young's Literal Translation (YLT)
- and he, having left all, having arisen, did follow him.
Read in context
- 26ಅಲ್ಲಿದ್ದವ ರೆಲ್ಲರೂ ವಿಸ್ಮಯಗೊಂಡು ದೇವರನ್ನು ಮಹಿಮೆ ಪಡಿಸಿದರು. ಮತ್ತು ಅವರು ಭಯದಿಂದ ಕೂಡಿದ ವರಾಗಿ--ನಾವು ಈ ದಿನ ಅಪೂರ್ವವಾದವುಗಳನ್ನು ನೋಡಿದ್ದೇವೆ ಅಂದರು.
- 27ಇವುಗಳಾದ ಮೇಲೆ ಆತನು ಮುಂದೆ ಹೋಗಿ ತೆರಿಗೆಯ ಕಚೇರಿಯಲ್ಲಿ ಕೂತುಕೊಂಡಿದ್ದ ಲೇವಿಯ ನೆಂಬ ಹೆಸರುಳ್ಳ ಒಬ್ಬ ಸುಂಕದವನನ್ನು ನೋಡಿ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು.
- 28ಅವನು ಎಲ್ಲವನ್ನು ಬಿಟ್ಟು ಎದ್ದು ಆತನನ್ನು ಹಿಂಬಾಲಿಸಿದನು.
- 29ತರುವಾಯ ಲೇವಿಯು ತನ್ನ ಸ್ವಂತ ಮನೆಯಲ್ಲಿ ಆತನಿಗೆ ದೊಡ್ಡ ಔತಣವನ್ನು ಮಾಡಿಸಲು ಸುಂಕದವರು ಮತ್ತು ಬೇರೆ ಬಹಳ ಜನರು ಅವರೊಂದಿಗೆ ಕೂತುಕೊಂಡರು.
- 30ಆದರೆ ಅವರ ಶಾಸ್ತ್ರಿಗಳೂ ಫರಿಸಾಯರೂ ಆತನ ಶಿಷ್ಯರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಯಾಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ ಎಂದು ಕೇಳಿದರು.
Cross references
- Luke 5:11 ಲೂಕನು 5:11ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದಾಗ ಎಲ್ಲವನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
- 1 Kings 19:19–21 1 ಅರಸುಗಳು 19:19–21ಹಾಗೆಯೇ ಅವನು ಅಲ್ಲಿಂದ ಹೊರಟು ಶಾಫಾ ಟನ ಮಗನಾದ ಎಲೀಷನನ್ನು ಕಂಡುಕೊಂಡನು; ಅವನು ತನ್ನ ಮುಂದೆ ಇರುವ ಹನ್ನೆರಡು ಜೋಡು ಎತ್ತುಗಳಿಂದ ಉಳುತ್ತಿದ್ದನು; ಅವನು ಹನ್ನೆರಡನೇ ಜೋಡಿನ ಸಂಗಡ ಇದ್ದನು. ಎಲೀಯನು ಅವನ ಪಕ್ಕದಲ್ಲಿ ಹಾದು ಹೋಗಿ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು. ಆಗ ಅವನು ಎತ್ತುಗಳನ್ನು ಬಿಟ್ಟು ಎಲೀಯನ ಹಿಂದೆ ಓಡಿಹೋಗಿ ಅವನಿಗೆ --ಅಪ್ಪಣೆಯಾದರೆ ನಾನು ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ನಿನ್ನನ್ನು ಹಿಂಬಾಲಿಸುವೆನು ಅಂದನು. ಅವನು ಇವನಿಗೆ--ಹಿಂದಕ್ಕೆ ಹೋಗು; ನಾನು ನಿನಗೆ ಏನು ಮಾಡಿದೆನು ಅಂದನು.ಆಗ ಇವನು ಅವನನ್ನು ಬಿಟ್ಟು ತಿರುಗಿಕೊಂಡು ಒಂದು ಜೋಡು ಎತ್ತುಗಳನ್ನು ತಕ್ಕೊಂಡು ಅವುಗಳನ್ನು ಕೊಂದು ಆ ಜೋಡು ಎತ್ತು ಕುಂಟೆಗಳಿಂದ ಅವುಗಳ ಮಾಂಸ ವನ್ನು ಬೇಯಿಸಿ ಜನರಿಗೆ ಕೊಟ್ಟನು. ಅವರು ತಿಂದ ತರುವಾಯ ಅವನು ಎದ್ದು ಎಲೀಯನ ಹಿಂದೆ ಹೋಗಿ ಅವನಿಗೆ ಸೇವೆಮಾಡಿದನು. ಆಗ ಇವನು ಅವನನ್ನು ಬಿಟ್ಟು ತಿರುಗಿಕೊಂಡು ಒಂದು ಜೋಡು ಎತ್ತುಗಳನ್ನು ತಕ್ಕೊಂಡು ಅವುಗಳನ್ನು ಕೊಂದು ಆ ಜೋಡು ಎತ್ತು ಕುಂಟೆಗಳಿಂದ ಅವುಗಳ ಮಾಂಸ ವನ್ನು ಬೇಯಿಸಿ ಜನರಿಗೆ ಕೊಟ್ಟನು. ಅವರು ತಿಂದ ತರುವಾಯ ಅವನು ಎದ್ದು ಎಲೀಯನ ಹಿಂದೆ ಹೋಗಿ ಅವನಿಗೆ ಸೇವೆಮಾಡಿದನು.
- Matthew 19:22–27 ಮತ್ತಾಯನು 19:22–27ಆದರೆ ಆ ಯೌವನಸ್ಥನು ಆತನು ಹೇಳಿದ್ದನ್ನು ಕೇಳಿ ದುಃಖ ದಿಂದ ಹೊರಟುಹೋದನು. ಯಾಕಂದರೆ ಅವನಿಗೆ ಬಹಳ ಆಸ್ತಿ ಇತ್ತು. ತರುವಾಯ ಯೇಸು ತನ್ನ ಶಿಷ್ಯರಿಗೆ-- ಐಶ್ವರ್ಯ ವಂತನು ಪರಲೋಕ ರಾಜ್ಯದಲ್ಲಿ ಸೇರುವದು ಕಷ್ಟ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. ತಿರಿಗಿ ನಾನು ನಿಮಗೆ ಹೇಳುವದೇನಂದರೆ-- ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಸೂಜಿಯ ಕಣ್ಣಿನೊಳಗೆ ಒಂಟೆಯು ನುಗ್ಗುವದು ಸುಲಭ ಅಂದನು. ಇದನ್ನು ಕೇಳಿದಾಗ ಆತನ ಶಿಷ್ಯರು ಅತ್ಯಂತ ವಿಸ್ಮಯಗೊಂಡು-- ಹಾಗಾದರೆ ರಕ್ಷಿಸಲ್ಪಡುವವರು ಯಾರು ಎಂದು ಕೇಳಿದರು. ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ--ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು. ಆಮೇಲೆ ಪೇತ್ರನು ಆತನಿಗೆ--ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ಆದದ ರಿಂದ ನಮಗೆ ಏನು ದೊರೆಯುವದು ಎಂದು ಕೇಳಿದನು.
- Luke 9:59–62 ಲೂಕನು 9:59–62ಇದಲ್ಲದೆ ಆತನು ಮತ್ತೊಬ್ಬನಿಗೆ--ನನ್ನನ್ನು ಹಿಂಬಾಲಿಸು ಅಂದನು. ಆದರೆ ಅವನು--ಕರ್ತನೇ, ನಾನು ಹೋಗಿ ಮೊದಲು ನನ್ನ ತಂದೆಯನ್ನು ಹೂಣಿಡುವಂತೆ ಅಪ್ಪಣೆಕೊಡು ಅಂದನು. ಆದರೆ ಯೇಸು ಅವ ನಿಗೆ--ಸತ್ತವರು ತಮ್ಮ ಸತ್ತವರನ್ನು ಹೂಣಿಡಲಿ; ಆದರೆ ನೀನು ಹೋಗಿ ದೇವರ ರಾಜ್ಯವನ್ನು ಸಾರು ಅಂದನು. ಇದಲ್ಲದೆ ಮತ್ತೊಬ್ಬನು ಸಹ--ಕರ್ತನೇ, ನಾನು ನಿನ್ನನ್ನು ಹಿಂಬಾಲಿಸುವೆನು; ಆದರೆ ನಾನು ಮೊದಲು ಹೋಗಿ ನನ್ನ ಮನೆಯಲ್ಲಿದ್ದವರಿಗೆ ಬೀಳ್ಕೊಡುವಂತೆ ನನಗೆ ಅಪ್ಪಣೆಕೊಡು ಅಂದನು.ಆಗ ಯೇಸು ಅವನಿಗೆ--ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ ಅಂದನು. ಆಗ ಯೇಸು ಅವನಿಗೆ--ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ ಅಂದನು.