Luke · chapter 17 · verse 22
Luke 17:22 in Kannada
ಆತನು ತನ್ನ ಶಿಷ್ಯರಿಗೆ--ಮನುಷ್ಯಕುಮಾರನ ದಿವಸಗಳಲ್ಲಿ ಒಂದನ್ನು ನೋಡಬೇಕೆಂದು ನೀವು ಅಪೇಕ್ಷಿಸಿದರೂ ಅದನ್ನು ನೋಡದಂಥ ದಿನಗಳು ಬರುವವು.
Aatanu tanna shishyarige--manushyakumaarana divasagalalli ondannu nodabekendu neevu apekshisidaroo adannu nodadantha dinagalu baruvavu.
Luke 17:22 in English
- King James Version (KJV)
- And he said unto the disciples, The days will come, when ye shall desire to see one of the days of the Son of man, and ye shall not see [it].
- World English Bible (WEB)
- He said to the disciples, “The days will come when you will desire to see one of the days of the Son of Man, and you will not see it.
- American Standard Version (ASV)
- And he said unto the disciples, The days will come, when ye shall desire to see one of the days of the Son of man, and ye shall not see it.
- Bible in Basic English (BBE)
- And he said to his disciples, The time will come when you will have a great desire to see one of the days of the Son of man, but you will not see it.
- Darby Translation (DBY)
- And he said to the disciples, Days are coming, when ye shall desire to see one of the days of the Son of man, and shall not see [it].
- Webster's Bible (WBS)
- And he said to his disciples, The days will come, when ye will desire to see one of the days of the son of man, and ye shall not see [it] .
- Young's Literal Translation (YLT)
- And he said unto his disciples, 'Days will come, when ye shall desire to see one of the days of the Son of Man, and ye shall not behold [it];
Read in context
- 20ದೇವರ ರಾಜ್ಯವು ಯಾವಾಗ ಬರುವದೆಂದು ಫರಿಸಾಯರು ಆತನನ್ನು ಕೇಳಲು ಆತನು ಅವರಿಗೆ ಪ್ರತ್ಯುತ್ತರವಾಗಿ--ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವದಿಲ್ಲ.
- 21ಇದಲ್ಲದೆ--ಇಗೋ, ಇಲ್ಲಿದೆ! ಇಲ್ಲವೆ ಅಗೋ, ಅಲ್ಲಿದೆ ಎಂದು ಅವರು ಹೇಳುವದಕ್ಕಾಗು ವದಿಲ್ಲ; ಯಾಕಂದರೆ ಇಗೋ, ದೇವರ ರಾಜ್ಯವು ನಿಮ್ಮೊಳಗೆ ಇದೆ ಅಂದನು.
- 22ಆತನು ತನ್ನ ಶಿಷ್ಯರಿಗೆ--ಮನುಷ್ಯಕುಮಾರನ ದಿವಸಗಳಲ್ಲಿ ಒಂದನ್ನು ನೋಡಬೇಕೆಂದು ನೀವು ಅಪೇಕ್ಷಿಸಿದರೂ ಅದನ್ನು ನೋಡದಂಥ ದಿನಗಳು ಬರುವವು.
- 23ಅವರು ನಿಮಗೆ--ಇಲ್ಲಿ ನೋಡಿರಿ ಇಲ್ಲವೆ ಅಲ್ಲಿ ನೋಡಿರಿ ಎಂದು ಹೇಳಿದರೆ ಅಲ್ಲಿಗೆ ಹೋಗಬೇಡಿರಿ ಇಲ್ಲವೆ ಅವರನ್ನು ಹಿಂಬಾಲಿಸಬೇಡಿರಿ.
- 24ಯಾಕಂದರೆ ಮಿಂಚು ಆಕಾಶದ ಒಂದು ಭಾಗದಲ್ಲಿ ಮಿಂಚಿ ಆಕಾಶದ ಮತ್ತೊಂದು ಭಾಗದಲ್ಲಿ ಹೇಗೆ ಹೊಳೆಯುತ್ತದೆಯೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿ ಇರುವನು.
Cross references
- Matthew 9:15 ಮತ್ತಾಯನು 9:15ಅದಕ್ಕೆ ಯೇಸು ಅವರಿಗೆ--ಮದಲಿಂಗನು ತಮ್ಮ ಜೊತೆಯಲ್ಲಿರುವ ತನಕ ಮದಲಗಿತ್ತಿಯ ಮನೇ ಮಕ್ಕಳು ದುಃಖಪಡುವರೇ? ಆದರೆ ಮದಲಿಂಗನು ಅವರಿಂದ ತೆಗೆಯಲ್ಪಡುವ ದಿವಸಗಳು ಬರುವವು; ಆಗ ಅವರು ಉಪವಾಸ ಮಾಡುವರು.
- Luke 5:35 ಲೂಕನು 5:35ಆದರೆ ಮದುಮಗನು ಅವ ರಿಂದ ತೆಗೆಯಲ್ಪಡುವ ದಿವಸಗಳು ಬರುವವು; ಆಗ ಆ ದಿವಸಗಳಲ್ಲಿ ಅವರು ಉಪವಾಸ ಮಾಡುವರು ಎಂದು ಹೇಳಿದನು.
- John 16:5–7 ಯೋಹಾನನು 16:5–7ಆದರೆ ಈಗ ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹೋಗುತ್ತೇನೆ; ನಿಮ್ಮಲ್ಲಿ ಒಬ್ಬನಾದರೂ--ನೀನು ಎಲ್ಲಿಗೆ ಹೋಗುತ್ತೀ ಎಂದು ನನ್ನನ್ನು ಕೇಳುವದಿಲ್ಲ. ಆದರೆ ಇವುಗಳನ್ನು ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯದಲ್ಲಿ ದುಃಖವು ತುಂಬಿಯದೆ. ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ; ನಾನು ಹೋಗುವದು ನಿಮಗೆ ಹಿತಕರವಾಗಿದೆ; ಯಾಕಂದರೆ ನಾನು ಹೋಗದಿದ್ದರೆ ಆದರಿಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸುವೆನು.
- Mark 2:20 ಮಾರ್ಕನು 2:20ಆದರೆ ಮದಲಿಂಗನು ಅವರ ಬಳಿಯಿಂದ ತೆಗೆಯಲ್ಪಡುವ ದಿವಸಗಳು ಬರುತ್ತವೆ; ಆಗ ಅವರು ಆ ದಿವಸಗಳಲ್ಲಿ ಉಪವಾಸ ಮಾಡುವರು.
- John 8:21–24 ಯೋಹಾನನು 8:21–24ಯೇಸು ತಿರಿಗಿ ಅವರಿಗೆ--ನಾನು ಹೋಗುತ್ತೇನೆ; ನೀವು ನನ್ನನ್ನು ಹುಡುಕುವಿರಿ ಮತ್ತು ನಿಮ್ಮ ಪಾಪ ಗಳಲ್ಲಿ ಸಾಯುವಿರಿ; ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಅಂದನು. ಅದಕ್ಕೆ ಯೆಹೂದ್ಯರು--ಇವನು ತನ್ನನ್ನು ತಾನೇ ಕೊಂದುಕೊಳ್ಳಬೇಕೆಂದಿ ದ್ದಾನೋ? ಯಾಕಂದರೆ--ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ಹೇಳುತ್ತಾನಲ್ಲಾ ಅಂದರು. ಆತನು ಅವರಿಗೆ--ನೀವು ಕೆಳಗಿನವರು, ನಾನು ಮೇಲಿನವನು; ನೀವು ಈ ಲೋಕದವರು, ನಾನು ಈ ಲೋಕದವನಲ್ಲ. ಆದದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ ಎಂದು ನಾನು ನಿಮಗೆ ಹೇಳಿದೆನು. ಯಾಕಂದರೆ ನನ್ನನ್ನು ಆತನೆಂದು ನೀವು ನಂಬದೆ ಹೋದರೆ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ ಎಂದು ಹೇಳಿದನು.
- John 13:33 ಯೋಹಾನನು 13:33ಚಿಕ್ಕಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮ ಸಂಗಡ ಇರುತ್ತೇನೆ, ನೀವು ನನ್ನನ್ನು ಹುಡುಕುವಿರಿ; ನಾನು ಹೋಗುವಲ್ಲಿಗೆ ನೀವು ಬರಲಾರಿರೆಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.
- John 7:33–36 ಯೋಹಾನನು 7:33–36ತರುವಾಯ ಯೇಸು ಅವರಿಗೆ--ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿದ್ದು ಆಮೇಲೆ ನನ್ನನ್ನು ಕಳುಹಿಸಿದಾತನ ಬಳಿಗೆ ಹೋಗು ತ್ತೇನೆ. ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಾಣುವದಿಲ್ಲ; ನಾನಿರುವಲ್ಲಿಗೆ ನೀವು ಬರಲಾರಿರಿ ಅಂದನು. ಆಗ ಯೆಹೂದ್ಯರು--ನಾವು ಅವನನ್ನು ಕಾಣದ ಹಾಗೆ ಅವನು ಎಲ್ಲಿಗೆ ಹೋಗುವನು? ಅನ್ಯಜನರ ಮಧ್ಯದಲ್ಲಿ ಚದರಿಹೋದವರ ಬಳಿಗೆ ಹೋಗಿ ಅನ್ಯಜನರಿಗೆ ಬೋಧಿಸುವನೋ? ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಾಣಲಾರಿರಿ; ನಾನಿರುವಲ್ಲಿಗೆ ನೀವು ಬರಲಾರಿರಿ ಎಂದು ಇವನು ಹೇಳಿರುವದು ಎಂಥಾ ಮಾತಾಗಿರಬಹುದು ಎಂದು ತಮ್ಮಲ್ಲಿ ಅಂದುಕೊಂಡರು.
- John 16:16–22 ಯೋಹಾನನು 16:16–22ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವಿರಿ; ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಅಂದನು. ಆಗ ಆತನ ಶಿಷ್ಯರಲ್ಲಿ ಕೆಲವರು--ಈತನು ನಮಗೆ ಹೇಳುವದೇನು? ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪಕಾಲವಾದ ಮೇಲೆ ನೀವು ನನ್ನನ್ನು ನೋಡುವಿರಿ; ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಅನ್ನುತ್ತಾನಲಾ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡ ಆದದರಿಂದ ಅವರು--ಈತನು ಹೇಳುವ ಈ ಮಾತೇನು? ಸ್ವಲ್ಪಕಾಲ ಎಂದು ಹೇಳುತ್ತಾನಲ್ಲಾ? ಈತನು ಹೇಳುವದನ್ನು ನಾವು ಅರಿಯೆವು ಅಂದರು. ಯೇಸು ತನ್ನನ್ನು ಪ್ರಶ್ನಿಸುವದಕ್ಕೆ ಅಪೇಕ್ಷಿಸುತ್ತಿ ದ್ದಾರೆಂದು ತಿಳಿದು ಅವರಿಗೆ--ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಎಂದು ನಾನು ನಿಮಗೆ ಹೇಳಿದ್ದಕ್ಕೆ ನಿಮ್ಮ ನಿಮ್ಮೊಳಗೆ ವಿಚಾರಿಸಿಕೊಳ್ಳುತ್ತೀರೋ? ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ಅಳುತ್ತಾ ಗೋಳಾಡುವಿರಿ, ಆದರೆ ಲೋಕವು ಸಂತೋಷಿಸುವದು; ನೀವು ದುಃಖಿಸುವಿರಿ, ಆದರೆ ನಿಮ್ಮ ದುಃಖವು ಹೋಗಿ ಆನಂದವು ಬರುವದು. ಒಬ್ಬ ಸ್ತ್ರೀಗೆ ತನ್ನ ಪ್ರಸವವೇದನೆಯ ಗಳಿಗೆ ಬಂದಾಗ ದುಃಖವಿರುವದು; ಆಕೆಯು ಮಗುವನ್ನು ಹೆತ್ತಕೂಡಲೆ ಈ ಲೋಕದೊಳಗೆ ಒಬ್ಬ ಮನುಷ್ಯನು ಹುಟ್ಟಿದನೆಂದು ಸಂತೋಷದಿಂದ ಆ ನೋವನ್ನು ಆಕೆಯು ನೆನಪಿಗೆ ತರುವದೇ ಇಲ್ಲ. ಆದದರಿಂದ ಈಗ ನಿಮಗೆ ದುಃಖವುಂಟು; ಆದರೆ ನಾನು ನಿಮ್ಮನ್ನು ತಿರಿಗಿ ನೋಡುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವದು; ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವದಿಲ್ಲ.
- John 17:11–13 ಯೋಹಾನನು 17:11–13ಇನ್ನು ಮೇಲೆ ನಾನು ಲೋಕದಲ್ಲಿ ಇರುವದಿಲ್ಲ; ಆದರೆ ಇವರು ಲೋಕದಲ್ಲಿದ್ದಾರೆ; ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ, ನಾವು ಒಂದಾಗಿರುವ ಹಾಗೆಯೇ ಅವರು ಸಹ ಒಂದಾಗಿರುವಂತೆ ನೀನು ನನಗೆ ಕೊಟ್ಟಿರುವವರನ್ನು ನಿನ್ನ ಸ್ವಂತ ಹೆಸರಿನಲ್ಲಿ ಕಾಪಾಡು. ನಾನು ಅವರೊಂದಿಗೆ ಲೋಕದಲ್ಲಿದ್ದಾಗ ನಿನ್ನ ಹೆಸರಿನಲ್ಲಿ ಅವರನ್ನು ಕಾಪಾಡಿದೆನು; ನೀನು ನನಗೆ ಕೊಟ್ಟವರನ್ನು ನಾನು ಕಾಪಾಡಿದ್ದೇನೆ; ಬರಹವು ನೆರವೇರುವ ಹಾಗೆ ಆ ನಾಶನದ ಮಗನೇ ಹೊರತು ಅವರಲ್ಲಿ ಒಬ್ಬನೂ ನಾಶವಾಗಲಿಲ್ಲ. ಈಗ ನಾನು ನಿನ್ನ ಬಳಿಗೆ ಬರು ತ್ತೇನೆ ನನ್ನ ಆನಂದವು ಅವರೊಳಗೆ ಈಡೇರುವಂತೆ ನಾನು ಲೋಕದಲ್ಲಿ ಈ ವಿಷಯಗಳನ್ನು ಮಾತನಾಡು ತ್ತೇನೆ.
- Luke 13:35 ಲೂಕನು 13:35ಇಗೋ, ನಿಮ್ಮ ಮನೆಯು ಹಾಳಾಗಿ ನಿಮಗೆ ಬಿಡಲ್ಪಟ್ಟಿದೆ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- John 12:35 ಯೋಹಾನನು 12:35ಆಗ ಯೇಸು ಅವ ರಿಗೆ--ಇನ್ನು ಸ್ವಲ್ಪಕಾಲವೇ ಬೆಳಕು ನಿಮ್ಮೊಂದಿಗೆ ಇರು ತ್ತದೆ. ಕತ್ತಲೆ ನಿಮ್ಮನ್ನು ಮುಸುಕಿಕೊಳ್ಳದಂತೆ ನಿಮಗೆ ಬೆಳಕಿರುವಾಗಲೇ ನಡೆಯಿರಿ; ಯಾಕಂದರೆ ಕತ್ತಲೆಯಲ್ಲಿ ನಡೆಯುವವನು ತಾನು ಎಲ್ಲಿಗೆ ಹೋಗುತ್ತಾನೆಂದು ತಿಳಿಯನು.