Luke · chapter 17 · verse 3
Luke 17:3 in Kannada
ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯನ್ನು ತೆಗೆದುಕೊಳ್ಳಿರಿ; ನಿನ ಸಹೋದರನು ನಿನಗೆ ವಿರೋಧವಾಗಿ ತಪ್ಪು ಮಾಡಿದರೆ ಅವನನ್ನು ಗದರಿಸು; ಅವನು ಮಾನಸಾಂತರಪಟ್ಟರೆ ಅವನನ್ನು ಕ್ಷಮಿಸು.
Neevu nimma vishayadalli echcharikeyannu tegedukolliri; nina sahodaranu ninage virodhavaagi tappu maadidare avanannu gadarisu; avanu maanasaantarapattare avanannu kshamisu.
Luke 17:3 in English
- King James Version (KJV)
- Take heed to yourselves: If thy brother trespass against thee, rebuke him; and if he repent, forgive him.
- World English Bible (WEB)
- Be careful. If your brother sins against you, rebuke him. If he repents, forgive him.
- American Standard Version (ASV)
- Take heed to yourselves: if thy brother sin, rebuke him; and if he repent, forgive him.
- Bible in Basic English (BBE)
- Give attention to yourselves: if your brother does wrong, say a sharp word to him; and if he has sorrow for his sin, let him have forgiveness.
- Darby Translation (DBY)
- Take heed to yourselves: if thy brother should sin, rebuke him; and if he should repent, forgive him.
- Webster's Bible (WBS)
- Take heed to yourselves: If thy brother shall trespass against thee, rebuke him; and if he shall repent forgive him.
- Young's Literal Translation (YLT)
- 'Take heed to yourselves, and, if thy brother may sin in regard to thee, rebuke him, and if he may reform, forgive him,
Read in context
- 1ತರುವಾಯ ಆತನು ಶಿಷ್ಯರಿಗೆ-- ಆಟಂಕಗಳು ಬಾರದಿರುವದು ಅಸಾಧ್ಯ; ಆದರೆ ಯಾವನಿಂದ ಅವು ಬರುವವೋ ಅವನಿಗೆ ಅಯ್ಯೋ!
- 2ಅವನು ಈ ಚಿಕ್ಕವರಲ್ಲಿ ಒಬ್ಬನಿಗೆ ಆಟಂಕ ಪಡಿಸುವದಕ್ಕಿಂತ ಅವನ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವನನ್ನು ಸಮುದ್ರದೊಳಗೆ ಬಿಸಾಡು ವದು ಅವನಿಗೆ ಉತ್ತಮವಾಗಿದೆ.
- 3ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯನ್ನು ತೆಗೆದುಕೊಳ್ಳಿರಿ; ನಿನ ಸಹೋದರನು ನಿನಗೆ ವಿರೋಧವಾಗಿ ತಪ್ಪು ಮಾಡಿದರೆ ಅವನನ್ನು ಗದರಿಸು; ಅವನು ಮಾನಸಾಂತರಪಟ್ಟರೆ ಅವನನ್ನು ಕ್ಷಮಿಸು.
- 4ಅವನು ಒಂದು ದಿನದಲ್ಲಿ ಏಳು ಸಾರಿ ನಿನಗೆ ವಿರೋಧವಾಗಿ ತಪ್ಪು ಮಾಡಿ ಅದೇ ದಿನದಲ್ಲಿ ಏಳು ಸಾರಿ ನಿನ್ನ ಕಡೆಗೆ ತಿರುಗಿಕೊಂಡು-- ನಾನು ಮಾನಸಾಂತರಪಡುತ್ತೇನೆ ಎಂದು ಹೇಳಿದರೆ ನೀನು ಅವನನ್ನು ಕ್ಷಮಿಸಬೇಕು ಅಂದನು.
- 5ಆಗ ಅಪೋಸ್ತಲರು ಕರ್ತನಿಗೆ--ನಮ್ಮ ನಂಬಿಕೆ ಯನ್ನು ಹೆಚ್ಚಿಸು ಅಂದರು.
Cross references
- Leviticus 19:17 ಯಾಜಕಕಾಂಡ 19:17ನಿನ್ನ ಹೃದಯ ದಲ್ಲಿ ನಿನ್ನ ಸಹೋದರನನ್ನು ದ್ವೇಷಿಸಬೇಡ; ಹೇಗಾ ದರೂ ನಿನ್ನ ನೆರೆಯವನ ಪಾಪವು ನಿನ್ನ ಮೇಲೆ ಬಾರದಂತೆ ಅವನನ್ನು ತಪ್ಪದೆ ಗದರಿಸು.
- Matthew 18:15–17 ಮತ್ತಾಯನು 18:15–17ಇದಲ್ಲದೆ ನಿನ್ನ ಸಹೋದರನು ನಿನಗೆ ವಿರೋಧ ವಾಗಿ ತಪ್ಪು ಮಾಡಿದರೆ ನೀನೂ ಅವನೂ ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು; ಅವನು ನಿನ್ನ ಮಾತನ್ನು ಕೇಳಿದರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ. ಆದರೆ ಅವನು ನಿನ್ನ ಮಾತನ್ನು ಕೇಳದೆಹೋದರೆ ನಿನ್ನೊಂದಿಗೆ ಒಬ್ಬನನ್ನು ಅಥವಾ ಇಬ್ಬರನ್ನು ಕರಕೊಂಡು ಹೋಗು; ಹೀಗೆ ಇಬ್ಬರ ಇಲ್ಲವೆ ಮೂವರ ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಸ್ಥಾಪಿಸಲ್ಪಡುವದು. ಅವನು ಅವರ ಮಾತುಗಳನ್ನೂ ಕೇಳುವದಕ್ಕೆ ಅಲಕ್ಷ್ಯಮಾಡಿದರೆ ಅದನ್ನು ಸಭೆಗೆ ತಿಳಿಸು. ಆದರೆ ಅವನು ಸಭೆಯ ಮಾತನ್ನೂ ಅಲಕ್ಷ್ಯಮಾಡಿದರೆ ಅವನು ನಿನಗೆ ಅನ್ಯನಂತೆಯೂ ಸುಂಕದವನಂತೆಯೂ ಇರಲಿ.
- Matthew 18:21 ಮತ್ತಾಯನು 18:21ತರುವಾಯ ಪೇತ್ರನು ಆತನ ಬಳಿಗೆ ಬಂದು--ಕರ್ತನೇ, ನನ್ನ ಸಹೋದರನು ನನಗೆ ವಿರೋಧ ವಾಗಿ ಪಾಪಮಾಡಿದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು? ಏಳು ಸಾರಿಯೋ ಎಂದು ಕೇಳಿದನು.
- Proverbs 9:8 ಜ್ಞಾನೋಕ್ತಿಗಳು 9:8ಪರಿಹಾಸ್ಯಮಾಡುವವನು ನಿನ್ನನ್ನು ಹಗೆಮಾಡದಂತೆ ಅವನನ್ನು ಗದರಿಸಬೇಡ. ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು.
- 2 Chronicles 19:6–7 2 ಪೂರ್ವಕಾಲವೃತ್ತಾಂತ 19:6–7ನ್ಯಾಯಾಧಿಪತಿಗಳಿಗೆ -- ನೀವು ಮಾಡುವದನ್ನು ನೋಡಿಕೊಳ್ಳಿರಿ; ನೀವು ಮನುಷ್ಯರಿಗೋಸ್ಕರವಲ್ಲ, ನ್ಯಾಯತೀರಿಸುವ ಕಾರ್ಯದಲ್ಲಿ ನಿಮ್ಮ ಸಂಗಡ ಇರುವ ಕರ್ತನಿಗೋಸ್ಕರ ನ್ಯಾಯತೀರಿಸುತ್ತೀರಿ. ಆದಕಾರಣ ಕರ್ತನ ಭಯವು ನಿಮ್ಮ ಮೇಲೆ ಇರಲಿ. ನೀವು ಜಾಗ್ರತೆಯಾಗಿದ್ದು ನಡಿಸಿರಿ. ನಮ್ಮ ಕರ್ತನಾದ ದೇವರ ಬಳಿಯಲ್ಲಿ ಅನ್ಯಾಯವಾದರೂ ಮುಖದಾಕ್ಷಿಣ್ಯ ವಾದರೂ ಲಂಚ ತೆಗೆದುಕೊಳ್ಳುವದಾದರೂ ಇಲ್ಲ ಅಂದನು.
- Proverbs 27:5 ಜ್ಞಾನೋಕ್ತಿಗಳು 27:5ರಹಸ್ಯವಾದ ಪ್ರೀತಿಗಿಂತಲೂ ಬಹಿರಂಗವಾದ ಗದರಿಕೆಯೇ ಲೇಸು.
- James 5:19 ಯಾಕೋಬನು 5:19ಸಹೋದರರೇ, ನಿಮ್ಮಲ್ಲಿ ಯಾವನಾದರೂ ಸತ್ಯ ದಿಂದ ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಯಥಾಸ್ಥಾನಕ್ಕೆ ತಂದರೆಅವನು ಪಾಪಮಾಡಿದವ ನನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದ್ದಲ್ಲದೆ ಅವನ ಆತ್ಮವನ್ನು ಮರಣಕ್ಕೆ ತಪ್ಪಿಸಿ ಬಹುಪಾಪಗಳನ್ನು ಮುಚ್ಚಿದವನಾದನೆಂದು ತಿಳುಕೊಳ್ಳಲಿ.
- Exodus 34:12 ವಿಮೋಚನಕಾಂಡ 34:12ನೀನು ಹೋಗುವ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆಯನ್ನು ಮಾಡದಂತೆ ನೋಡಿಕೋ. ಒಂದು ವೇಳೆ ಮಾಡಿದರೆ ಅದು ನಿಮ್ಮ ಮಧ್ಯದಲ್ಲಿ ಉರುಲಾಗಿರುವದು.
- Deuteronomy 4:9 ಧರ್ಮೋಪದೇಶಕಾಂಡ 4:9ನಿನ್ನ ಕಣ್ಣುಗಳು ನೋಡಿದ ಕಾರ್ಯಗಳನ್ನು ನೀನು ಮರೆಯದ ಹಾಗೆಯೂ ನೀನು ಬದುಕುವ ದಿನಗಳೆಲ್ಲಾ ಅವು ನಿನ್ನ ಹೃದಯಕ್ಕೆ ದೂರವಾಗದ ಹಾಗೆಯೂ ಬಹು ಜಾಗ್ರತೆಯಾಗಿದ್ದು ನಿನ್ನ ಪ್ರಾಣ ವನ್ನು ಬಹಳವಾಗಿ ಕಾಪಾಡು; ಅವುಗಳನ್ನು ನಿನ್ನ ಮಕ್ಕಳಿಗೂ ನಿನ್ನ ಮಕ್ಕಳ ಮಕ್ಕಳಿಗೂ ಬೋಧಿಸು.
- Deuteronomy 4:23 ಧರ್ಮೋಪದೇಶಕಾಂಡ 4:23ನಿಮ್ಮ ದೇವರಾದ ಕರ್ತನು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತು ನಿಮ್ಮ ದೇವರಾದ ಕರ್ತನು ಬೇಡವೆಂದು ಕೆತ್ತಿದ ಯಾವ ರೂಪದ ವಿಗ್ರಹ ವನ್ನೂ ಮಾಡಿಕೊಳ್ಳದ ಹಾಗೆ ಜಾಗ್ರತೆಯಾಗಿರ್ರಿ.
- Hebrews 12:15 ಇಬ್ರಿಯರಿಗೆ 12:15ನಿಮ್ಮಲ್ಲಿ ಯಾವನಾದರೂ ದೇವರ ಕೃಪೆಗೆ ತಪ್ಪಿ ಹೋಗ ದಂತೆಯೂ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಕಳವಳ ಹುಟ್ಟಿಸಿ ಅದರಿಂದ ಅನೇಕರು ಅಶುದ್ಧರಾಗ ದಂತೆಯೂ
- Luke 21:34 ಲೂಕನು 21:34ಆದರೆ ನಿಮ್ಮ ಮೇಲೆ ಆ ದಿವಸವು ಫಕ್ಕನೆ ಬಾರದಂತೆ ನೀವು ಅತಿ ಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ ನಿಮ್ಮ ವಿಷಯದಲಿ ಜಾಗರೂಕರಾಗಿರ್ರಿ.