Luke · chapter 19 · verse 10
Luke 19:10 in Kannada
ಯಾಕಂದರೆ ಮನುಷ್ಯಕುಮಾರನು ತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು.
Yaakandare manushyakumaaranu tappi hodaddannu huduki rakshisuvadakke bandanu endu helidanu.
Luke 19:10 in English
- King James Version (KJV)
- For the Son of man is come to seek and to save that which was lost.
- World English Bible (WEB)
- For the Son of Man came to seek and to save that which was lost.”
- American Standard Version (ASV)
- For the Son of man came to seek and to save that which was lost.
- Bible in Basic English (BBE)
- For the Son of man came to make search for those who are wandering from the way, and to be their Saviour.
- Darby Translation (DBY)
- for the Son of man has come to seek and to save that which is lost.
- Webster's Bible (WBS)
- For the Son of man is come to seek and to save that which was lost.
- Young's Literal Translation (YLT)
- for the Son of Man came to seek and to save the lost.'
Read in context
- 8ಆಗ ಜಕ್ಕಾಯನು ನಿಂತುಕೊಂಡು ಕರ್ತನಿಗೆ--ಕರ್ತನೇ, ಇಗೋ, ನನ್ನ ಸೊತ್ತಿನಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ; ನಾನು ಯಾರಿಂದಲಾದರೂ ಸುಳ್ಳಾಗಿ ದೂರು ಹೇಳಿ ಏನಾದರೂ ತಕ್ಕೊಂಡಿದ್ದರೆ ಅವನಿಗೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ ಅಂದನು.
- 9ಆಗ ಯೇಸು ಅವನಿಗೆ--ಈ ದಿನ ಈ ಮನೆಗೆ ರಕ್ಷಣೆ ಆಯಿತು. ಯಾಕಂದರೆ ಇವನು ಸಹ ಅಬ್ರಹಾಮನ ಮಗ ನಲ್ಲವೇ.
- 10ಯಾಕಂದರೆ ಮನುಷ್ಯಕುಮಾರನು ತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು.
- 11ಅವರು ಈ ಮಾತುಗಳನ್ನು ಕೇಳುತ್ತಿರಲಾಗಿ ಯೇಸು ತಾನು ಯೆರೂಸಲೇಮಿಗೆ ಸವಿಾಪವಾಗಿದ್ದದ ರಿಂದಲೂ ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗು ವದೆಂದು ಅವರು ಭಾವಿಸಿದ್ದದರಿಂದಲೂ ಆತನು ಇನ್ನೂ ಒಂದು ಸಾಮ್ಯವನ್ನು ಹೇಳಿದನು.
- 12ಅದೇ ನಂದರೆ--ಕೀರ್ತಿವಂತನಾದ ಒಬ್ಬಾನೊಬ್ಬ ಮನುಷ್ಯನು ತನಗೋಸ್ಕರ ರಾಜ್ಯವನ್ನು ಪಡೆದುಕೊಂಡು ತಿರಿಗಿ ಬರುವದಕ್ಕಾಗಿ ದೂರ ದೇಶಕ್ಕೆ ಹೊರಟುಹೋದನು.
Cross references
- Ezekiel 34:16 ಯೆಹೆಜ್ಕೇಲನು 34:16ಕಳೆದು ಹೋದದ್ದನ್ನು ನಾನೇ ಹುಡುಕುವೆನು; ಓಡಿಸಲ್ಪಟ್ಟಿದ್ದನ್ನು ನಾನೇ ಮತ್ತೆ ತರುವೆನು, ಮುರಿದದ್ದನ್ನು ನಾನೇ ಕಟ್ಟುವೆನು, ಬಲಹೀನವಾದದ್ದನ್ನು ನಾನೇ ಬಲಪಡಿಸುವೆನು. ಆದರೆ ಕೊಬ್ಬಿದ್ದನ್ನೂ ಬಲಿಷ್ಠವಾದದ್ದನ್ನೂ ನಾನೇ ಸಂಹರಿಸು ವೆನು; ನಾನೇ ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ಮೇಯಿಸುವೆನು.
- Matthew 1:21 ಮತ್ತಾಯನು 1:21ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ಯೇಸು ಎಂದು ಕರೆಯಬೇಕು; ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು.
- 1 Timothy 1:13–16 1 ತಿಮೊಥೆಯನಿಗೆ 1:13–16ಮೊದಲು ದೇವದೂಷಕನೂ ಹಿಂಸಕನೂ ಕೇಡು ಮಾಡುವವನೂ ಆಗಿದ್ದ ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು. ನಮ್ಮ ಕರ್ತನ ಕೃಪೆಯು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಯೊಂದಿಗೆ ಅತ್ಯಧಿಕವಾಯಿತು. ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂದು ಹೇಳುವದು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ; ಆ ಪಾಪಿಗಳಲ್ಲಿ ನಾನೇ ಮುಖ್ಯನು. ಹೇಗಿದ್ದರೂ ಇನ್ನು ಮುಂದೆ ನಿತ್ಯ ಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ದೃಷ್ಟಾಂತವಿರಬೇಕೆಂದು ಯೇಸು ಕ್ರಿಸ್ತನು ಮೊದಲು ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣದೀರ್ಘ ಶಾಂತಿಯನ್ನು ತೋರ್ಪಡಿಸಿದನು.
- Luke 5:31–32 ಲೂಕನು 5:31–32ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಕ್ಷೇಮದಲ್ಲಿ ಇರುವವರಿಗೆ ಅಲ್ಲ, ಆದರೆ ಕ್ಷೇಮವಿಲ್ಲದವರಿಗೆ ವೈದ್ಯನು ಬೇಕು. ನಾನು ನೀತಿವಂತರನ್ನಲ್ಲ, ಆದರೆ ಪಾಪಿಗಳನ್ನು ಮಾನಸಾಂತರಕ್ಕೆ ಕರೆಯುವದಕ್ಕಾಗಿ ಬಂದೆನು ಎಂದು ಹೇಳಿದನು.
- Luke 15:4–7 ಲೂಕನು 15:4–7ನಿಮ್ಮಲ್ಲಿ ಯಾವ ಮನುಷ್ಯನು ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದನ್ನು ಕಳೆದು ಕೊಂಡರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ವರೆಗೆ ಅದನ್ನು ಹುಡುಕಿಕೊಂಡು ಹೋಗದಿರುವನೇ? ಅವನು ಆ ಕುರಿಯನ್ನು ಕಂಡುಕೊಂಡ ಮೇಲೆ ಸಂತೋಷ ಪಡುತ್ತಾ ಅದನ್ನು ತನ್ನ ಹೆಗಲುಗಳ ಮೇಲೆ ಹೊತ್ತು ಕೊಳ್ಳುವನು. ಆಮೇಲೆ ಅವನು ಮನೆಗೆ ಬಂದು ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಾಗಿ ಕರೆದು ಅವರಿಗೆ--ನನ್ನ ಸಂಗಡ ಸಂತೋಷಪಡಿರಿ;ಯಾಕಂದರೆ ಕಳೆದುಹೋದ ನನ್ನ ಕುರಿಯನ್ನು ನಾನು ಕಂಡು ಕೊಂಡೆನು ಅನ್ನುವನು. ಆದರಂತೆಯೇ ಮಾನಸಾಂತ ರಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ನೀತಿವಂತರಿಗಿಂತ ಮಾನಸಾಂತರಪಡುವ ಒಬ್ಬಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Matthew 9:12–13 ಮತ್ತಾಯನು 9:12–13ಆದರೆ ಯೇಸು ಅದನ್ನು ಕೇಳಿ ಅವರಿಗೆ--ಕ್ಷೇಮದಿಂದಿರುವವರಿಗೆ ಅಲ್ಲ, ಆದರೆ ಕ್ಷೇಮವಿಲ್ಲದವ ರಿಗೆ ವೈದ್ಯನು ಬೇಕು. ನೀವು ಹೋಗಿ--ನಾನು ಯಜ್ಞವನ್ನಲ್ಲ; ಕರುಣೆಯನ್ನೇ ಅಪೇಕ್ಷಿಸುತ್ತೇನೆ ಎಂಬದರ ಅರ್ಥವನ್ನು ಕಲಿಯಿರಿ; ಯಾಕಂದರೆ ನಾನು ನೀತಿ ವಂತರನ್ನಲ್ಲ, ಪಾಪಿಗಳನ್ನು ಮಾನಸಾಂತರಪಡು ವದಕ್ಕಾಗಿ ಕರೆಯಲು ಬಂದೆನು ಎಂದು ಹೇಳಿದನು.
- Romans 5:6 ರೋಮಾಪುರದವರಿಗೆ 5:6ನಾವು ಅಶಕ್ತರಾಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲ ದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು.
- Matthew 15:24 ಮತ್ತಾಯನು 15:24ಆದರೆ ಆತನು ಪ್ರತ್ಯು ತ್ತರವಾಗಿ-- ತಪ್ಪಿಸಿಕೊಂಡ ಕುರಿಗಳಾಗಿರುವ ಇಸ್ರಾ ಯೇಲಿನ ಮನೆತನದವರ ಬಳಿಗೆ ಮಾತ್ರ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು.
- Luke 15:32 ಲೂಕನು 15:32ಆದರೆ ಈ ನಿನ್ನ ತಮ್ಮನು ಸತ್ತವನಾಗಿದ್ದನು, ತಿರಿಗಿ ಬದುಕಿದ್ದಾನೆ; ಕಳೆದು ಹೋದ ವನಾಗಿದ್ದನು, ಸಿಕ್ಕಿದ್ದಾನೆ. ಆದಕಾರಣ ನಾವು ಸಂತೋ ಷಿಸಿ ಆನಂದಪಡುವದು ಯುಕ್ತವಾದದ್ದೇ ಎಂದು ಹೇಳಿದನು ಅಂದನು.
- Hebrews 7:25 ಇಬ್ರಿಯರಿಗೆ 7:25ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿ ಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕವವನಾಗಿದ್ದಾನೆ.
- 1 John 4:9–14 1 ಯೋಹಾನನು 4:9–14ನಾವು ಆತನ ಮೂಲಕ ಜೀವಿಸು ವದಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮ ಕಡೆಗೆ ಪ್ರತ್ಯಕ್ಷವಾಗಿದೆ. ನಾವು ದೇವರನ್ನು ಪ್ರೀತಿಸಿ ದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ತನ್ನ ಮಗನನ್ನು ಕಳುಹಿಸಿ ಕೊಟ್ಟದ್ದರಲ್ಲಿಯೇ ಆತನ ಪ್ರೀತಿಯು ಇರುತ್ತದೆ. ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ. ದೇವರನ್ನು ಯಾರೂ ಎಂದೂ ನೋಡಿಲ್ಲ; ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ ಮತ್ತು ಆತನ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುತ್ತದೆ. ಆತನು ನಮಗೆ ತನ್ನ ಆತ್ಮದಲ್ಲಿ ಪಾಲನ್ನು ಅನುಗ್ರಹಿಸದ್ದರಿಂದಲೇ ನಾವು ಆತನಲ್ಲಿ ನೆಲೆಗೊಂಡಿದ್ದೇವೆಂತಲೂ ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂತಲೂ ತಿಳಿದುಕೊಳ್ಳು ತ್ತೇವೆ. ತಂದೆಯು ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವದನ್ನು ನಾವು ನೋಡಿದ್ದೇವೆ ಮತ್ತು ಸಾಕ್ಷಿ ಹೇಳುತ್ತೇವೆ.
- Matthew 10:6 ಮತ್ತಾಯನು 10:6ಆದರೆ ತಪ್ಪಿಸಿಕೊಂಡ ಕುರಿಗಳಾದ ಇಸ್ರಾಯೇಲಿನ ಮನೆತನದವರ ಬಳಿಗೆ ಮಾತ್ರ ಹೋಗಿರಿ.