Luke · chapter 22 · verse 31
Luke 22:31 in Kannada
ತರುವಾಯ ಕರ್ತನು--ಸೀಮೋನನೇ, ಸೀಮೋ ನನೇ, ಇಗೋ, ಸೈತಾನನು ನಿಮ್ಮನ್ನು ಗೋಧಿಯಂತೆ ಒನೆಯಬೇಕೆಂದು ಅಪೇಕ್ಷೆಪಟ್ಟಿದ್ದಾನೆ.
Taruvaaya kartanu--seemonane, seemo nane, igo, saitaananu nimmannu godhiyante oneyabekendu apekshepattiddaane.
Luke 22:31 in English
- King James Version (KJV)
- And the Lord said, Simon, Simon, behold, Satan hath desired [to have] you, that he may sift [you] as wheat:
- World English Bible (WEB)
- The Lord said, “Simon, Simon, behold, Satan asked to have all of you, that he might sift you as wheat,
- American Standard Version (ASV)
- Simon, Simon, behold, Satan asked to have you, that he might sift you as wheat:
- Bible in Basic English (BBE)
- Simon, Simon, Satan has made a request to have you, so that he may put you to the test as grain is tested:
- Darby Translation (DBY)
- And the Lord said, Simon, Simon, behold, Satan has demanded to have you, to sift [you] as wheat;
- Webster's Bible (WBS)
- And the Lord said, Simon, Simon, behold, Satan hath desired [to have] you, that he may sift [you] as wheat:
- Young's Literal Translation (YLT)
- And the Lord said, 'Simon, Simon, lo, the Adversary did ask you for himself to sift as the wheat,
Read in context
- 29ನನ್ನ ತಂದೆಯು ನನಗೆ ರಾಜ್ಯವನ್ನು ನೇಮಕ ಮಾಡಿದ ಹಾಗೆಯೇ ನಾನೂ ನಿಮಗೆ ರಾಜ್ಯ ವನ್ನು ನೇಮಕ ಮಾಡುತ್ತೇನೆ.
- 30ಹೀಗೆ ನೀವು ನನ್ನ ರಾಜ್ಯದಲ್ಲಿ ನನ್ನ ಮೇಜಿನ ಬಳಿಯಲ್ಲಿ ತಿಂದು ಕುಡಿದು ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾ ಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ ಅಂದನು.
- 31ತರುವಾಯ ಕರ್ತನು--ಸೀಮೋನನೇ, ಸೀಮೋ ನನೇ, ಇಗೋ, ಸೈತಾನನು ನಿಮ್ಮನ್ನು ಗೋಧಿಯಂತೆ ಒನೆಯಬೇಕೆಂದು ಅಪೇಕ್ಷೆಪಟ್ಟಿದ್ದಾನೆ.
- 32ಆದರೆ ನಿನ್ನ ನಂಬಿಕೆಯು ಬಿದ್ದುಹೋಗದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ; ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು ಎಂದು ಹೇಳಿದನು.
- 33ಆದರೆ ಅವನು ಆತನಿಗೆ--ಕರ್ತನೇ, ನಾನು ನಿನ್ನ ಜೊತೆಯಲ್ಲಿ ಸೆರೆಮನೆಗೆ ಹೋಗುವದಕ್ಕೂ ಸಾಯು ವದಕ್ಕೂ ಸಿದ್ಧನಾಗಿದ್ದೇನೆ ಅಂದನು.
Cross references
- 1 Peter 5:8 1 ಪೇತ್ರನು 5:8ಸ್ವಸ್ಥಚಿತ್ತರಾಗಿರ್ರಿ. ಎಚ್ಚರವಾಗಿರ್ರಿ; ನಿಮ್ಮ ವಿರೋಧಿ ಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.
- Zechariah 3:1 ಜೆಕರ್ಯ 3:1ಇದಲ್ಲದೆ ಆತನು ನನಗೆ--ಕರ್ತನ ದೂತನ ಮುಂದೆ ನಿಂತಿರುವ ಪ್ರಧಾನ ಯಾಜಕನಾದ ಯೆಹೋಶುವನನ್ನೂ ಅವನನ್ನು ಎದುರಿಸುವದಕ್ಕೆ ಅವನ ಬಲಪಾರ್ಶ್ವದಲ್ಲಿ ನಿಂತ ಸೈತಾನನನ್ನೂ ತೋರಿಸಿದನು.
- Job 1:6–12 ಯೋಬನು 1:6–12ಒಂದು ದಿನ ದೇವರ ಪುತ್ರರು ಕರ್ತನ ಮುಂದೆ ನಿಂತುಕೊಳ್ಳುವದಕ್ಕೆ ಬಂದಾಗ ಸೈತಾನನು ಸಹ ಅವ ರೊಂದಿಗೆ ಬಂದನು. ಕರ್ತನು ಸೈತಾನನಿಗೆ--ನೀನು ಎಲ್ಲಿಂದ ಬಂದಿ ಅಂದನು. ಸೈತಾನನು ಕರ್ತನಿಗೆ ಪ್ರತ್ಯುತ್ತರವಾಗಿ--ಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ತಿರುಗಾಡಿ ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆದಾಡಿ ಬಂದೆನು ಅಂದನು. ಕರ್ತನು ಸೈತಾನನಿಗೆ--ನನ್ನ ಸೇವಕನಾದ ಯೋಬನ ಮೇಲೆ ನೀನು ಗಮನವಿಟ್ಟೆಯಾ? ಅವನು ಸಂಪೂರ್ಣನೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ಬಿಟ್ಟು ತೊಲಗುವವನೂ ಆಗಿದ್ದಾನೆ ಅವನ ಹಾಗೆ ಭೂಮಿಯಲ್ಲಿ ಒಬ್ಬನೂ ಇಲ್ಲ ಅಂದನು. ಆಗ ಸೈತಾನನು ಪ್ರತ್ಯುತ್ತರವಾಗಿ ಕರ್ತನಿಗೆ--ಯೋಬನು ಸುಮ್ಮನೆ ದೇವರಿಗೆ ಭಯಪಡುತ್ತಾನೋ? ನೀನು ಅವನಿಗೂ ಅವನ ಮನೆಗೂ ಅವನಿಗೆ ಉಂಟಾದ ಎಲ್ಲವುಗಳಿಗೂ ಸುತ್ತಲೂ ಬೇಲಿ ಕಟ್ಟಿದೆಯಲ್ಲಾ? ಅವನ ಕೈ ಕೆಲಸವನ್ನು ಆಶೀರ್ವದಿಸಿದಿ; ಅವನ ಸಂಪತ್ತು ದೇಶದಲ್ಲಿ ಹಬ್ಬಿಯದೆ. ಆದರೆ ನಿನ್ನ ಕೈ ಚಾಚಿ ಅವನಿಗಿದ್ದದ್ದನ್ನೆಲ್ಲಾ ಮುಟ್ಟು; ಅವನು ನಿನ್ನೆದುರಿನಲ್ಲಿಯೇ ನಿನ್ನನ್ನು ಶಪಿಸುವನು ಅಂದನು. ಕರ್ತನು ಸೈತಾನನಿಗೆ--ಇಗೋ, ಅವನದೆಲ್ಲಾ ನಿನ್ನ ಅಧಿಕಾರ ದಲ್ಲಿ ಅದೆ; ಅವನ ಮೇಲೆ ಮಾತ್ರ ನಿನ್ನ ಕೈ ಹಾಕಬೇಡ ಅಂದನು. ಆಗ ಸೈತಾನನು ಕರ್ತನ ಸಮ್ಮುಖದಿಂದ ಹೊರಟನು.
- Revelation 12:10 ಪ್ರಕಟನೆ 12:10ಆಗ ಪರಲೋಕದಲ್ಲಿ ಮಹಾಶಬ್ದವನ್ನು ನಾನು ಕೇಳಿದೆನು. ಅದು--ಈಗ ರಕ್ಷಣೆಯೂ ಶಕ್ತಿಯೂ ನಮ್ಮ ದೇವರ ರಾಜ್ಯವೂ ಆತನ ಕ್ರಿಸ್ತನ ಅಧಿಕಾರವೂ ಬಂದವು; ಯಾಕಂದರೆ ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರು ಗಾರನು ದೊಬ್ಬಲ್ಪಟ್ಟಿದ್ದಾನೆ.
- Job 2:1–6 ಯೋಬನು 2:1–6ತಿರಿಗಿ ಒಂದು ದಿನ ಕರ್ತನ ಬಳಿಯಲ್ಲಿ ನಿಂತುಕೊಳ್ಳುವದಕ್ಕೆ ದೇವರ ಪುತ್ರರು ಬಂದಾಗ ಸೈತಾನನು ಸಹ ಅವರ ಸಂಗಡ ಬಂದನು. ಆಗ ಕರ್ತನು ಸೈತಾನನಿಗೆ--ನೀನು ಎಲ್ಲಿಂದ ಬಂದೆ ಅಂದನು. ಸೈತಾನನು ಪ್ರತ್ಯುತ್ತರವಾಗಿ ಕರ್ತನಿಗೆಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ, ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆ ದಾಡಿ ಬಂದೆನು ಅಂದನು. ಆಗ ಕರ್ತನು ಸೈತಾನನಿಗೆ--ನೀನು ಎಲ್ಲಿಂದ ಬಂದೆ ಅಂದನು. ಸೈತಾನನು ಪ್ರತ್ಯುತ್ತರವಾಗಿ ಕರ್ತನಿಗೆಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ, ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆ ದಾಡಿ ಬಂದೆನು ಅಂದನು. ಸೈತಾನನು ಪ್ರತ್ಯುತ್ತರವಾಗಿ ಕರ್ತ ನಿಗೆ--ಹೌದು, ಚರ್ಮಕ್ಕೆ ಚರ್ಮ, ತನಗೆ ಉಂಟಾ ದದ್ದನ್ನೆಲ್ಲಾ ತನ್ನ ಪ್ರಾಣಕ್ಕೊಸ್ಕರ ಮನುಷ್ಯನು ಕೊಡು ವನು. ಆದರೆ ನಿನ್ನ ಕೈಚಾಚಿ ಅವನ ಎಲುಬನ್ನೂ ಅವನ ಮಾಂಸವನ್ನೂ ಮುಟ್ಟಿದರೆ ಅವನು ನಿನ್ನ ಎದುರಿನಲ್ಲಿ ನಿನ್ನನ್ನು ಶಪಿಸುವನು ಅಂದನು. ಆಗ ಕರ್ತನು ಸೈತಾನನಿಗೆ--ಇಗೋ, ಅವನು ನಿನ್ನ ಕೈಯಲ್ಲಿ ಇದ್ದಾನೆ; ಅವನ ಪ್ರಾಣವನ್ನಾದರೋ ಉಳಿಸಲೇ ಬೇಕು ಅಂದನು.
- Amos 9:9 ಆಮೋಸ 9:9ಇಗೋ, ಮೊರದಲ್ಲಿ ಧಾನ್ಯವನ್ನು ಕೇರುವಂತೆ ನಾನು ಆಜ್ಞಾಪಿಸಿ ಇಸ್ರಾಯೇಲಿನ ಮನೆತನದವ ರನ್ನು ಎಲ್ಲಾ ಜನಾಂಗಗಳಲ್ಲಿ ಕೇರುವೆನು; ಆದಾಗ್ಯೂ ಒಂದು ಕಾಳಾದರೂ ನೆಲಕ್ಕೆ ಬೀಳುವದಿಲ್ಲ.
- Luke 10:41 ಲೂಕನು 10:41ಆದರೆ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತಿಸಿ ತೊಂದರೆಗೆ ಒಳಗಾಗಿದ್ದೀ;ಆದರೆ ಅವಶ್ಯವಾದದ್ದು ಒಂದೇ; ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ. ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಅಂದನು.
- Acts 9:4 ಅಪೊಸ್ತಲರ ಕೃತ್ಯಗಳು 9:4ಆಗ ಅವನು ನೆಲಕ್ಕೆ ಬಿದ್ದು--ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆಪಡಿಸುತ್ತೀ ಎಂದು ಹೇಳುವ ಧ್ವನಿಯನ್ನು ಕೇಳಿದನು.