Luke · chapter 22 · verse 30
Luke 22:30 in Kannada
ಹೀಗೆ ನೀವು ನನ್ನ ರಾಜ್ಯದಲ್ಲಿ ನನ್ನ ಮೇಜಿನ ಬಳಿಯಲ್ಲಿ ತಿಂದು ಕುಡಿದು ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾ ಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ ಅಂದನು.
Heege neevu nanna raajyadalli nanna mejina baliyalli tindu kudidu mattu sinhaasanagala mele kootukondu israa yelina hanneradu kulagalige nyaayateerisuviri andanu.
Luke 22:30 in English
- King James Version (KJV)
- That ye may eat and drink at my table in my kingdom, and sit on thrones judging the twelve tribes of Israel.
- World English Bible (WEB)
- that you may eat and drink at my table in my Kingdom. You will sit on thrones, judging the twelve tribes of Israel.”
- American Standard Version (ASV)
- that ye may eat and drink at my table in my kingdom; and ye shall sit on thrones judging the twelve tribes of Israel.
- Bible in Basic English (BBE)
- So that you may take food and drink at my table in my kingdom, and be seated like kings, judging the twelve tribes of Israel.
- Darby Translation (DBY)
- that ye may eat and drink at my table in my kingdom, and sit on thrones judging the twelve tribes of Israel.
- Webster's Bible (WBS)
- That ye may eat and drink at my table in my kingdom, and sit on thrones, judging the twelve tribes of Israel.
- Young's Literal Translation (YLT)
- that ye may eat and may drink at my table, in my kingdom, and may sit on thrones, judging the twelve tribes of Israel.'
Read in context
- 28ಇದಲ್ಲದೆ ನನ್ನ ಸಂಗಡ ನನ್ನ ಕಷ್ಟಗಳಲ್ಲಿ ಎಡೆಬಿಡದೆ ಇದ್ದವರು ನೀವೇ.
- 29ನನ್ನ ತಂದೆಯು ನನಗೆ ರಾಜ್ಯವನ್ನು ನೇಮಕ ಮಾಡಿದ ಹಾಗೆಯೇ ನಾನೂ ನಿಮಗೆ ರಾಜ್ಯ ವನ್ನು ನೇಮಕ ಮಾಡುತ್ತೇನೆ.
- 30ಹೀಗೆ ನೀವು ನನ್ನ ರಾಜ್ಯದಲ್ಲಿ ನನ್ನ ಮೇಜಿನ ಬಳಿಯಲ್ಲಿ ತಿಂದು ಕುಡಿದು ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾ ಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ ಅಂದನು.
- 31ತರುವಾಯ ಕರ್ತನು--ಸೀಮೋನನೇ, ಸೀಮೋ ನನೇ, ಇಗೋ, ಸೈತಾನನು ನಿಮ್ಮನ್ನು ಗೋಧಿಯಂತೆ ಒನೆಯಬೇಕೆಂದು ಅಪೇಕ್ಷೆಪಟ್ಟಿದ್ದಾನೆ.
- 32ಆದರೆ ನಿನ್ನ ನಂಬಿಕೆಯು ಬಿದ್ದುಹೋಗದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ; ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು ಎಂದು ಹೇಳಿದನು.
Cross references
- Matthew 19:28 ಮತ್ತಾಯನು 19:28ಯೇಸು ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನ ದಲ್ಲಿ ಕೂತುಕೊಂಡಿರಲು ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಗೋತ್ರ ಗಳವರಿಗೆ ನ್ಯಾ
- Revelation 2:26–27 ಪ್ರಕಟನೆ 2:26–27ಯಾವನು ಜಯಹೊಂದಿ ನನ್ನ ಕ್ರಿಯೆಗಳನ್ನು ಕಡೇವರೆಗೂ ಕೈಕೊಳ್ಳುತ್ತಾನೋ ಅವನಿಗೆ ನಾನು ಜನಾಂಗಗಳ ಮೇಲೆ ಅಧಿಕಾರವನ್ನು ಕೊಡು ತ್ತೇನೆ. ನಾನು ನನ್ನ ತಂದೆಯಿಂದ ಹೊಂದಿದ ಪ್ರಕಾ ರವೇ ಅವನು ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವನು; ಅವರು ಕುಂಬಾರನ ಮಡಿಕೆಗಳಂತೆ ಒಡೆದು ಚೂರಾಗುವರು.
- Matthew 8:11 ಮತ್ತಾಯನು 8:11ನಾನು ನಿಮಗೆ ಹೇಳುವದೇನಂದರೆ--ಬಹಳ ಜನರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು ಪರ ಲೋಕರಾಜ್ಯದಲ್ಲಿ ಅಬ್ರಹಾಮ್ ಇಸಾಕ್ ಯಾಕೋಬ್ ಅವರೊಂದಿಗೆ ಕೂತುಕೊಳ್ಳುವರು.
- Luke 12:37 ಲೂಕನು 12:37ಒಡೆಯನು ಬಂದಾಗ ಯಾರು ಎಚ್ಚರವಾಗಿರುವದನ್ನು ಅವನು ಕಾಣುವನೋ ಆ ಸೇವಕರು ಧನ್ಯರು; ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಅವನು ಬಂದು ನಡುಕಟ್ಟಿಕೊಂಡು ಅವರನ್ನು ಊಟಕ್ಕೆ ಕೂಡ್ರಿಸಿ ಅವರಿಗೆ ತಾನೇ ಉಪಚರಿಸುವನು.
- Luke 14:15 ಲೂಕನು 14:15ಆಗ ಆತನ ಸಂಗಡ ಊಟಕ್ಕೆ ಕೂತವರಲ್ಲಿ ಒಬ್ಬನು ಈ ಸಂಗತಿಗಳನ್ನು ಕೇಳಿ ಆತನಿಗೆ--ದೇವರ ರಾಜ್ಯದಲ್ಲಿ ಊಟಮಾಡುವವನು ಧನ್ಯನು ಎಂದು ಹೇಳಿದನು.
- Revelation 3:21 ಪ್ರಕಟನೆ 3:21ನಾನು ಜಯಹೊಂದಿ ನನ್ನ ತಂದೆಯೊಡನೆ ಆತನ ಸಿಂಹಾಸನದಲ್ಲಿ ಕೂತುಕೊಂಡ ಹಾಗೆಯೇ ಜಯಹೊಂದುವವನನ್ನು ನನ್ನೊಡನೆ ನನ್ನ ಸಿಂಹಾಸನದಲ್ಲಿ ನನ್ನ ಕೂಡ ಕೂತುಕೊಳ್ಳುವಂತೆ ಅನು ಗ್ರಹಿಸುವೆನು.ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.
- 1 Corinthians 6:2–3 1 ಕೊರಿಂಥದವರಿಗೆ 6:2–3ಪರಿಶುದ್ಧರು ಲೋಕಕ್ಕೆ ತೀರ್ಪುಮಾಡು ವರೆಂಬದು ನಿಮಗೆ ತಿಳಿಯದೋ? ಲೋಕವು ನಿಮ್ಮಿಂದ ತೀರ್ಪು ಹೊಂದಬೇಕಾಗಿರುವಾಗ ಅತ್ಯಲ್ಪವಾದವುಗಳ ವಿಷಯದಲ್ಲಿ ತೀರ್ಪುಮಾಡು ವದಕ್ಕೆ ನೀವು ಅಯೋಗ್ಯರಾಗಿದ್ದೀರೋ? ನಾವು ದೂತರಿಗೆ ತೀರ್ಪುಮಾಡುವೆವೆಂದು ನಿಮಗೆ ಗೊತ್ತಿಲ್ಲವೋ? ಹಾಗಾದರೆ ಐಹಿಕ ಜೀವಿತಕ್ಕೆ ಸಂಬಂಧ ಪಟ್ಟ ವಿಷಯಗಳಲ್ಲಿ ಇನ್ನು ಎಷ್ಟೋ ಹೆಚ್ಚಾಗಿ ತೀರ್ಪುಮಾಡಬಹುದಲ್ಲವೇ?
- Revelation 19:9 ಪ್ರಕಟನೆ 19:9ಇದಲ್ಲದೆ ಅವನು--ಕುರಿಮರಿ ಯಾದಾತನ ವಿವಾಹದ ಔತಣಕ್ಕೆ ಕರೆಯಲ್ಪಟ್ಟವರು ಧನ್ಯರು ಎಂಬದಾಗಿ ಬರೆ ಎಂದು ನನಗೆ ಹೇಳಿದನು. ಇದಲ್ಲದೆ ಅವನು--ಇವುಗಳು ದೇವರ ನಿಜವಾದ ಮಾತುಗಳಾಗಿವೆ ಎಂದು ನನಗೆ ಹೇಳಿದನು.
- Luke 22:16–18 ಲೂಕನು 22:16–18ಇದು ದೇವರ ರಾಜ್ಯದೊಳಗೆ ನೆರವೇರುವ ತನಕ ನಾನು ಇನ್ನು ಮೇಲೆ ಇದನ್ನು ಊಟಮಾಡುವದೇ ಇಲ್ಲವೆಂದು ನಾನು ನಿಮಗೆ ಹೇಳುತ್ತೇನೆ ಅಂದನು. ಆತನು ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರ ಮಾಡಿ--ಇದನ್ನು ತಕ್ಕೊಳ್ಳಿರಿ ಮತ್ತು ನಿಮ್ಮೊಳಗೆ ಹಂಚಿಕೊಳ್ಳಿರಿ ಅಂದನು. ನಾನು ನಿಮಗೆ ಹೇಳುವ ದೇನಂದರೆ--ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವದೇ ಇಲ್ಲ ಅಂದನು.
- Revelation 4:4 ಪ್ರಕಟನೆ 4:4ಇದಲ್ಲದೆ ಸಿಂಹಾಸನದ ಸುತ್ತಲೂ ಇಪ್ಪತ್ತನಾಲ್ಕು ಆಸನಗಳಿದ್ದವು; ಆ ಆಸನಗಳ ಮೇಲೆ ಬಿಳೀ ವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ತು ನಾಲ್ಕು ಮಂದಿ ಹಿರಿಯರು ಕೂತಿದ್ದರು; ಅವರ ತಲೆಗಳ ಮೇಲೆ ಚಿನ್ನದ ಕಿರೀಟ ಗಳಿದ್ದವು.
- Psalm 49:14 ಕೀರ್ತನೆಗಳು 49:14ಅವರು ಕುರಿ ಗಳಂತೆ ಸಮಾಧಿಯಲ್ಲಿ ಹಾಕಲ್ಪಡುತ್ತಾರೆ; ಮರಣವು ಅವರನ್ನು ತಿನ್ನುತ್ತದೆ; ಯಥಾರ್ಥರು ಬೆಳಿಗ್ಗೆ ಅವರ ಮೇಲೆ ಆಳುವರು; ಅವರಿಗೆ ನಿವಾಸವಿರದ ಹಾಗೆ ಸಮಾಧಿಯಲ್ಲಿ ಅವರ ರೂಪವು ಕ್ಷಯಿಸುವದು.
- 2 Samuel 9:9–10 2 ಸಮುವೇಲನು 9:9–10ಆಗ ಅರಸನು ಸೌಲನ ದಾಸನಾದ ಚೀಬನನ್ನು ಕರೆದು ಅವನಿಗೆ--ನಾನು ಸೌಲನಿಗೂ ಅವನ ಎಲ್ಲ ಮನೆಗೂ ಹೊಂದಿದ ಎಲ್ಲವನ್ನೂ ನಿನ್ನ ಯಜಮಾನನ ಮಗನಿಗೆ ಕೊಟ್ಟಿದ್ದೇನೆ. ಆದದರಿಂದ ನೀನೂ ನಿನ್ನ ಕುಮಾರರೂ ನಿನ್ನ ದಾಸರೂ ನಿನ್ನ ಯಜಮಾನನ ಮಗನಿಗೆ ಆಹಾರ ಒದಗಿಸುವ ಹಾಗೆ ಅವನಿಗೋಸ್ಕರ ಭೂಮಿಯನ್ನು ವ್ಯವಸಾಯಮಾಡಿ ಅದರ ಫಲವನ್ನು ತರಬೇಕು. ಆದರೆ ನಿನ್ನ ಯಜಮಾನನ ಮಗನಾದ ಮೆಫೀಬೋಶೆ ತನು ನಿತ್ಯವೂ ನನ್ನ ಮೇಜಿನಲ್ಲಿ ಊಟ ಮಾಡುವನು ಅಂದನು. ಈ ಚೀಬನಿಗೆ ಹದಿನೈದು ಮಂದಿ ಕುಮಾ ರರೂ ಇಪ್ಪತ್ತು ಮಂದಿ ದಾಸರೂ ಇದ್ದರು.