Luke · chapter 3 · verse 11
Luke 3:11 in Kannada
ಅವನು ಪ್ರತ್ಯುತ್ತರವಾಗಿ ಅವರಿಗೆ--ಎರಡು ಅಂಗಿಗಳುಳ್ಳವನು ಏನೂ ಇಲ್ಲದವ ನಿಗೆ ಕೊಡಲಿ; ಆಹಾರವುಳ್ಳವನು ಹಾಗೆಯೇ ಮಾಡಲಿ ಎಂದು ಹೇಳಿದನು.
Avanu pratyuttaravaagi avarige--eradu angigalullavanu enoo illadava nige kodali; aahaaravullavanu haageye maadali endu helidanu.
Luke 3:11 in English
- King James Version (KJV)
- He answereth and saith unto them, He that hath two coats, let him impart to him that hath none; and he that hath meat, let him do likewise.
- World English Bible (WEB)
- He answered them, “He who has two coats, let him give to him who has none. He who has food, let him do likewise.”
- American Standard Version (ASV)
- And he answered and said unto them, He that hath two coats, let him impart to him that hath none; and he that hath food, let him do likewise.
- Bible in Basic English (BBE)
- And he made answer and said to them, He who has two coats, let him give to him who has not even one; and he who has food, let him do the same.
- Darby Translation (DBY)
- And he answering says to them, He that has two body-coats, let him give to him that has none; and he that has food, let him do likewise.
- Webster's Bible (WBS)
- He answereth and saith to them, He that hath two coats, let him impart to him that hath none; and he that hath provisions, let him do likewise.
- Young's Literal Translation (YLT)
- and he answering saith to them, 'He having two coats — let him impart to him having none, and he having victuals — in like manner let him do.'
Read in context
- 9ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇಫಲ ಫಲಿ ಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುವದು ಎಂದು ಹೇಳಿದನು.
- 10ಆಗ ಜನರು ಅವನಿಗೆ--ಹಾಗಾದರೆ ನಾವೇನು ಮಾಡಬೇಕು ಎಂದು ಕೇಳಿದರು.
- 11ಅವನು ಪ್ರತ್ಯುತ್ತರವಾಗಿ ಅವರಿಗೆ--ಎರಡು ಅಂಗಿಗಳುಳ್ಳವನು ಏನೂ ಇಲ್ಲದವ ನಿಗೆ ಕೊಡಲಿ; ಆಹಾರವುಳ್ಳವನು ಹಾಗೆಯೇ ಮಾಡಲಿ ಎಂದು ಹೇಳಿದನು.
- 12ತರುವಾಯ ಸುಂಕದವರು ಸಹ ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕಾಗಿ ಬಂದು ಅವನಿಗೆ--ಬೋಧಕನೇ, ನಾವೇನು ಮಾಡಬೇಕು ಎಂದು ಕೇಳಿದರು.
- 13ಅದಕ್ಕವನು ಅವರಿಗೆ-- ನಿಮಗೆ ನೇಮಿಸಲ್ಪಟ್ಟದ್ದಕ್ಕಿಂತ ಹೆಚ್ಚೇನೂ ತೆಗೆದು ಕೊಳ್ಳಬೇಡಿರಿ ಅಂದನು.
Cross references
- Isaiah 58:7–11 ಯೆಶಾಯ 58:7–11ನಿನ್ನ ರೊಟ್ಟಿಯನ್ನು ಹಸಿದವರಿಗೆ ಹಂಚುವದೂ ಅಲೆಯು ತ್ತಿರುವ ಬಡವರನ್ನು ನಿನ್ನ ಮನೆಗೆ ಬರಮಾಡಿ ಕೊಳ್ಳುವದೂ ಬೆತ್ತಲೆಯವರನ್ನು ಕಂಡಾಗೆಲ್ಲ ಅವರಿಗೆ ಹೊದಿಸುವದೂ ನಿನ್ನ ಸ್ವಂತ ಶರೀರದಂತಿರುವವ ನಿಗೆ ನಿನ್ನನ್ನು ಮರೆಮಾಡಿಕೊಳ್ಳದಿರುವದೂ ಇದೇ ಅಲ್ಲವೋ? ಹೀಗಾದರೆ ನಿನ್ನ ಬೆಳಕು ಉದಯದಂತೆ ಪ್ರತ್ಯಕ್ಷವಾಗುವದು. ನಿನ್ನ ಕ್ಷೇಮವು ಬೇಗನೆ ಚಿಗುರು ವದು. ನಿನ್ನ ನೀತಿಯು ನಿನಗೆ ಮುಂಬಲವಾಗಿ ಮುಂದ ರಿಯುವದು. ಕರ್ತನ ಮಹಿಮೆಯು ನಿನಗೆ ಹಿಂಬಲ ವಾಗಿರುವದು. ಆಗ ನೀನು ಕರೆದರೆ ಕರ್ತನು ಉತ್ತರ ಕೊಡುವನು; ನೀನು ಕೂಗುವಿ ಆಗ ಆತನು--ನಾನು ಇಲ್ಲಿ ಇದ್ದೇನೆ ಅನ್ನುವನು. ನೀನು ನಿನ್ನ ಮಧ್ಯದೊಳ ಗಿಂದ ನೊಗವನ್ನೂ ಬೆರಳ ಸನ್ನೆಯನ್ನೂ ವ್ಯರ್ಥವಾದ ಸಂಭಾಷಣೆಯನ್ನೂ ತೆಗೆದುಹಾಕಿ, ಹಸಿದವನ ಕಡೆಗೆ ನಿನ್ನ ಮನಸ್ಸು ಹೋಗುವಂತೆ ಮಾಡಿ, ಕುಂದಿ ಹೋದವನ ಪ್ರಾಣವನ್ನು ತೃಪ್ತಿಪಡಿಸಿದರೆ ಆಗ ನಿನ್ನ ಬೆಳಕು ಕತ್ತಲೆಯಲ್ಲಿ ಉದಯಿಸುವದು. ನಿನ್ನ ಅಂಧ ಕಾರವು ಮಧ್ಯಾಹ್ನದ ಹಾಗೆ ಇರುವದು. ಕರ್ತನು ನಿನ್ನನ್ನು ನಿತ್ಯವೂ ನಡಿಸುತ್ತಾ ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ ನಿನ್ನ ಎಲುಬುಗಳನ್ನು ಬಲಪಡಿಸುವನು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಮುಗಿಯದ ಜಲಬುಗ್ಗೆಯ ಹಾಗೆಯೂ ಇರುವಿ.
- 1 John 3:17 1 ಯೋಹಾನನು 3:17ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ?
- 1 Timothy 6:18 1 ತಿಮೊಥೆಯನಿಗೆ 6:18ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲುಕೊಡುವದರಲ್ಲಿ ಸಿದ್ಧವಾಗಿ ರುವವರೂ ಪರೋಪಕಾರ ಮಾಡುವವರೂ ಆಗಿದ್ದು.
- Luke 18:22 ಲೂಕನು 18:22ಆಗ ಯೇಸು ಇವುಗಳನ್ನು ಕೇಳಿ ಅವನಿಗೆ--ಆದಾಗ್ಯೂ ನಿನಗೆ ಒಂದು ಕೊರತೆ ಇದೆ; ನಿನಗೆ ಇರುವದೆಲ್ಲವನ್ನು ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತು ಇರುವದು; ಬಂದು ನನ್ನನ್ನು ಹಿಂಬಾ ಲಿಸು ಅಂದನು.
- 1 John 4:20 1 ಯೋಹಾನನು 4:20ಒಬ್ಬನು--ನಾನು ದೇವರನ್ನು ಪ್ರೀತಿಸುತ್ತೇನೆ ಎಂದು ಹೇಳಿ ತನ್ನ ಸಹೋದರನನ್ನು ಹಗೆ ಮಾಡಿದರೆ ಅವನು ಸುಳ್ಳುಗಾರನಾಗಿದ್ದಾನೆ. ಯಾಕಂದರೆ ತಾನು ಕಾಣುವ ಸಹೋದರನನ್ನು ಪ್ರೀತಿಸದವನು ಕಾಣದಿರುವ ದೇವರನ್ನು ಅವನು ಹೇಗೆ ಪ್ರೀತಿಸಾನು?ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಈ ಆಜ್ಞೆ ಯನ್ನು ನಾವು ಆತನಿಂದ ಹೊಂದಿದ್ದೇವೆ.
- James 2:15–26 ಯಾಕೋಬನು 2:15–26ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದಿರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದವುಗಳನ್ನು ಕೊಡದೆ--ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿರಿ, ಹೊಟ್ಟೆತುಂಬಿಸಿ ಕೊಳ್ಳಿರಿ ಎಂದು ಹೇಳಿದರೆ ಪ್ರಯೋಜನವೇನು? ಹಾಗೆಯೇ ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ಒಂಟಿಯಾಗಿದ್ದು ಸತ್ತದ್ದಾಗಿದೆ. ಹೌದು, ಒಬ್ಬ ಮನುಷ್ಯನು--ನಿನಗೆ ನಂಬಿಕೆಯುಂಟು, ನನಗೆ ಕ್ರಿಯೆಗಳುಂಟು; ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆ ಯನ್ನು ನನಗೆ ತೋರಿಸು; ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ನಿನಗೆ ತೋರಿಸುತ್ತೇನೆ ಎಂದು ಹೇಳಬಹುದು. ದೇವರು ಒಬ್ಬನೇ ಎಂದು ನೀನು ನಂಬುವವನು, ನೀನು ಒಳ್ಳೇದು ಮಾಡುತ್ತೀ. ದೆವ್ವಗಳು ಕೂಡ ಹಾಗೆಯೇ ನಂಬಿ ನಡುಗುತ್ತವೆ. ಆದರೆ ಓ ವ್ಯರ್ಥವಾದವನೇ, ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದೆಂದು ತಿಳಿದುಕೊಳ್ಳಲು ನಿನಗೆ ಇಷ್ಟವಿದೆಯೋ? ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದಾಗ ನೀತಿ ನಿರ್ಣಯವನ್ನು ಹೊಂದಿದ್ದು ಕ್ರಿಯೆಗಳಿಂದಲ್ಲವೇ? ಅವನ ನಂಬಿಕೆಯು ಹೇಗೆ ತನ್ನ ಕ್ರಿಯೆಗಳೊಂದಿಗೆ ಕಾರ್ಯ ನಡಿಸಿ ಆ ಕ್ರಿಯೆ ಗಳಿಂದಲೇ ನಂಬಿಕೆಯು ಸಿದ್ಧಿಗೆ ಬಂತೆಂಬದನ್ನು ನೀನು ಕಾಣುತ್ತೀಯಲ್ಲಾ? ಹೀಗೆ--ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು ಎಂಬ ಬರಹವು ಹೇಳುವಂತೆ ನೆರವೇರಿತು. ಅವನು ದೇವರ ಸ್ನೇಹಿತ ನೆಂದು ಕರೆಯಲ್ಪಟ್ಟನು. ಹೀಗೆ ಮನುಷ್ಯನು ಕ್ರಿಯೆ ಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೆ ಹೊರತು ಬರೀ ನಂಬಿಕೆಯಿಂದಲ್ಲವೆಂದು ನೀವು ನೋಡುತ್ತೀರಿ. ಅದೇ ರೀತಿಯಾಗಿ ಸೂಳೆಯಾದ ರಹಾಬಳು ಸಹ ಗೂಢಚಾರರನ್ನು ಸೇರಿಸಿಕೊಂಡು ಬೇರೆ ದಾರಿಯಿಂದ ಅವರನ್ನು ಕಳುಹಿಸಿದ್ದರಲ್ಲಿ ಕ್ರಿಯೆಗಳಿಂದಲೇ ನೀತಿ ನಿರ್ಣಯವನ್ನು ಹೊಂದ ಲಿಲ್ಲವೇ?ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ. ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ.
- James 1:27 ಯಾಕೋಬನು 1:27ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆ ಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.
- Daniel 4:27 ದಾನಿಯೇಲನು 4:27ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.
- Luke 11:41 ಲೂಕನು 11:41ಆದರೆ ನಿಮಗೆ ಇರುವವುಗಳಲ್ಲಿ ನೀವು ದಾನಾಕೊಡಿರಿ; ಆಗ ಇಗೋ, ನಿಮಗೆ ಎಲ್ಲವು ಗಳು ಶುದ್ಧವಾಗಿರುವವು.
- Matthew 25:40 ಮತ್ತಾಯನು 25:40ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.
- Mark 14:5–8 ಮಾರ್ಕನು 14:5–8ಇದನ್ನು ಮುನ್ನೂರು (ಪೆನ್ಸ್) ಹಣಕ್ಕಿಂತ ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡ ಬಹುದಾಗಿತ್ತಲ್ಲಾ ಎಂದು ಅಂದುಕೊಂಡು ಆಕೆಗೆ ವಿರೋಧವಾಗಿ ಗುಣುಗುಟ್ಟಿದರು. ಆದರೆ ಯೇಸು --ಈಕೆಯನ್ನು ಬಿಟ್ಟುಬಿಡಿರಿ; ಈಕೆಗೆ ನೀವು ಯಾಕೆ ತೊಂದರೆ ಕೊಡುತ್ತೀರಿ? ಈಕೆಯು ನನಗೆ ಒಳ್ಳೇ ಕಾರ್ಯವನ್ನು ಮಾಡಿದ್ದಾಳೆ. ಯಾಕಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ನಿಮಗೆ ಮನಸ್ಸಿದ್ದರೆ ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು; ಆದರೆ ನಾನು ಯಾವಾ ಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ. ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ; ನನ್ನ ಶರೀರವನ್ನು ಹೂಣಿಡುವದಕ್ಕೆ ಅದನ್ನು ಅಭಿಷೇಕಿಸುವದಕ್ಕಾಗಿ ಈಕೆಯು ಮುಂದಾಗಿ ಮಾಡಿದ್ದಾಳೆ.
- Hebrews 6:10 ಇಬ್ರಿಯರಿಗೆ 6:10ನೀವು ಪರಿಶುದ್ಧರಿಗೆ ಉಪಚಾರ ಮಾಡಿದಿರಿ, ಇನ್ನು ಮಾಡುತ್ತಾ ಇದ್ದೀರಿ. ಈ ನಿಮ್ಮ ಕೆಲಸವನ್ನೂ ಇದರಲ್ಲಿ ನೀವು ಆತನ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯ ಪ್ರಯಾಸವನ್ನೂ ಮರೆಯು ವದಕ್ಕೆ ದೇವರು ಅನ್ಯಾಯಸ್ಥನಲ್ಲ.
Original words (Greek)
- answereth · G611ἀποκρίνομαι apokrínomai
- and · G1161δέ dé
- saith · G3004λέγω légō
- them · G846αὐτός autós
- hath · G2192ἔχω échō
- two · G1417δύο dýo
- coats · G5509χιτών chitṓn
- impart · G3330μεταδίδωμι metadídōmi
- hath · G2192ἔχω échō
- none · G3361μή mḗ
- and · G2532καί kaí
- hath · G2192ἔχω échō
- meat · G1033βρῶμα brōma
- do · G4160ποιέω poiéō
- likewise · G3668ὁμοίως homoíōs