Matthew · chapter 19 · verse 22
Matthew 19:22 in Kannada
ಆದರೆ ಆ ಯೌವನಸ್ಥನು ಆತನು ಹೇಳಿದ್ದನ್ನು ಕೇಳಿ ದುಃಖ ದಿಂದ ಹೊರಟುಹೋದನು. ಯಾಕಂದರೆ ಅವನಿಗೆ ಬಹಳ ಆಸ್ತಿ ಇತ್ತು.
Aadare aa yauvanasthanu aatanu heliddannu keli duhkha dinda horatuhodanu. Yaakandare avanige bahala aasti ittu.
Matthew 19:22 in English
- King James Version (KJV)
- But when the young man heard that saying, he went away sorrowful: for he had great possessions.
- World English Bible (WEB)
- But when the young man heard this, he went away sad, for he was one who had great possessions.
- American Standard Version (ASV)
- But when the young man heard the saying, he went away sorrowful; for he was one that had great possessions.
- Bible in Basic English (BBE)
- But hearing these words the young man went away sorrowing: for he had much property.
- Darby Translation (DBY)
- But the young man, having heard the word, went away grieved, for he had large possessions.
- Webster's Bible (WBS)
- But when the young man heard that saying, he went away sorrowful: for he had great possessions.
- Young's Literal Translation (YLT)
- And the young man, having heard the word, went away sorrowful, for he had many possessions;
Read in context
- 20ಆಗ ಆ ಯೌವನಸ್ಥನು ಆತನಿಗೆ--ಇವೆಲ್ಲವುಗಳನ್ನು ನಾನು ಬಾಲ್ಯದಿಂದಲೇ ಕೈಕೊಂಡಿದ್ದೇನೆ; ಇನ್ನು ನನಗೇನು ಕಡಿಮೆಯಾಗಿದೆ ಎಂದು ಕೇಳಿದನು.
- 21ಯೇಸು ಅವನಿಗೆ--ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ ಹೋಗಿ ನಿನಗೆ ಇದ್ದದ್ದನ್ನು ಮಾರಿ ಬಡವರಿಗೆ ಕೊಡು; ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವದು; ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು.
- 22ಆದರೆ ಆ ಯೌವನಸ್ಥನು ಆತನು ಹೇಳಿದ್ದನ್ನು ಕೇಳಿ ದುಃಖ ದಿಂದ ಹೊರಟುಹೋದನು. ಯಾಕಂದರೆ ಅವನಿಗೆ ಬಹಳ ಆಸ್ತಿ ಇತ್ತು.
- 23ತರುವಾಯ ಯೇಸು ತನ್ನ ಶಿಷ್ಯರಿಗೆ-- ಐಶ್ವರ್ಯ ವಂತನು ಪರಲೋಕ ರಾಜ್ಯದಲ್ಲಿ ಸೇರುವದು ಕಷ್ಟ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- 24ತಿರಿಗಿ ನಾನು ನಿಮಗೆ ಹೇಳುವದೇನಂದರೆ-- ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಸೂಜಿಯ ಕಣ್ಣಿನೊಳಗೆ ಒಂಟೆಯು ನುಗ್ಗುವದು ಸುಲಭ ಅಂದನು.
Cross references
- Ezekiel 33:31 ಯೆಹೆಜ್ಕೇಲನು 33:31ಬೇರೆ ಜನರು ಬರುವ ಹಾಗೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು; ಅವರು ನಿನ್ನ ವಾಕ್ಯಗಳನ್ನು ಕೇಳುವರು, ಆದರೆ ಅವರು ಅವುಗಳನ್ನು ಮಾಡುವದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು; ಆದರೆ ಅವರ ಹೃದಯವು ಲೋಭತ್ವದ ಕಡೆಗೆ ಹೋಗುವದು.
- Matthew 6:24 ಮತ್ತಾಯನು 6:24ಯಾವ ಮನುಷ್ಯನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಇನ್ನೊಬ್ಬನನ್ನು ಪ್ರೀತಿಮಾಡುವನು; ಇಲ್ಲವಾದರೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬ ನನ್ನು ಅಸಡ್ಡೆ ಮಾಡುವನು. ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ.
- Matthew 13:22 ಮತ್ತಾಯನು 13:22ಮುಳ್ಳುಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಸಹ ಇವನೇ; ಇವನು ವಾಕ್ಯವನ್ನು ಕೇಳುತ್ತಾನೆ; ಆದರೆ ಈ ಪ್ರಪಂಚದ ಚಿಂತೆಯೂ ಐಶ್ವರ್ಯದ ಮೋಸವೂ ವಾಕ್ಯವನ್ನು ಅಡಗಿಸುವ ದರಿಂದ ಅವನು ಫಲ ಕೊಡಲಾರನು.
- Colossians 3:5 ಕೊಲೊಸ್ಸೆಯವರಿಗೆ 3:5ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಅಂದರೆ ಜಾರತ್ವ ಬಂಡುತನ ಕಾಮಾಭಿ ಲಾಷೆ ದುರಾಶೆ ವಿಗ್ರಹಾರಾಧನೆಯಾಗಿರುವ ಲೋಭ ಇವುಗಳನ್ನು ಸಾಯಿಸಿರಿ.
- Matthew 16:26 ಮತ್ತಾಯನು 16:26ಒಬ್ಬ ಮನುಷ್ಯನು ಇಡೀ ಲೋಕವನ್ನು ಸಂಪಾದಿಸಿ ಕೊಂಡು ತನ್ನ ಆತ್ಮವನ್ನು ನಷ್ಟಪಡಿಸಿ ಕೊಂಡರೆ ಅವನಿಗೆ ಲಾಭವೇನು? ಇಲ್ಲವೆ ತನ್ನ ಆತ್ಮಕ್ಕೆ ಬದಲಾಗಿ ಒಬ್ಬ ಮನುಷ್ಯನು ಏನು ಕೊಟ್ಟಾನು?
- Mark 10:22 ಮಾರ್ಕನು 10:22ಆ ಮಾತಿಗೆ ಅವನು ವ್ಯಸನಗೊಂಡು ದುಃಖದಿಂದ ಹೊರಟುಹೋದನು; ಯಾಕಂದರೆ ಅವನಿಗೆ ಬಹಳ ಆಸ್ತಿಯಿತ್ತು.
- Ephesians 5:5 ಎಫೆಸದವರಿಗೆ 5:5ಯಾವ ಜಾರನಾಗಲಿ, ಅಶುದ್ಧನಾಗಲಿ, ವಿಗ್ರಹಾರಾಧಕನಂತಿರುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯನಾಗುವದಿಲ್ಲವೆಂದು ನೀವು ಬಲ್ಲಿರಲ್ಲವೇ.
- Matthew 14:9 ಮತ್ತಾಯನು 14:9ಆಗ ಅರಸನು ದುಃಖಪಟ್ಟಾಗ್ಯೂ ತನ್ನ ಆಣೆಯ ನಿಮಿತ್ತದಿಂದಲೂ ತನ್ನೊಂದಿಗೆ ಊಟಕ್ಕೆ ಕೂತಿದ್ದವರ ನಿಮಿತ್ತದಿಂದಲೂ ಅದನ್ನು ಅವಳಿಗೆ ಕೊಡುವಂತೆ ಅಪ್ಪಣೆಕೊಟ್ಟನು.
- Luke 18:23 ಲೂಕನು 18:23ಅವನು ಇದನ್ನು ಕೇಳಿ ಬಹಳ ದುಃಖವುಳ್ಳವನಾದನು; ಯಾಕಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.
- Mark 6:26 ಮಾರ್ಕನು 6:26ಆಗ ಅರಸನು ಬಹಳವಾಗಿ ದುಃಖಪಟ್ಟನು; ಆದಾಗ್ಯೂ ತನ್ನ ಆಣೆಯ ನಿಮಿತ್ತವಾಗಿಯೂ ತನ್ನೊಂದಿಗೆ ಕೂತಿದ್ದವರ ನಿಮಿತ್ತವಾಗಿಯೂ ಅವಳನ್ನು ತಿರಸ್ಕರಿಸುವದಕ್ಕೆ ಮನಸ್ಸಿಲ್ಲದವನಾದನು.
- John 19:12–16 ಯೋಹಾನನು 19:12–16ಅಂದಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಪಟ್ಟನು. ಆದರೆ ಯೆಹೂದ್ಯರು--ನೀನು ಈ ಮನುಷ್ಯನನ್ನು ಹೋಗಗೊಡಿಸಿದರೆ ಕೈಸರನಿಗೆ ಸ್ನೇಹಿತನಲ್ಲ; ತನ್ನನ್ನು ಅರಸನನ್ನಾಗಿ ಮಾಡಿಕೊಳ್ಳು ವವನು ಕೈಸರನಿಗೆ ವಿರೋಧವಾಗಿ ಮಾತನಾಡುತ್ತಾನೆ ಎಂದು ಕೂಗಿ ಹೇಳಿದರು. ಆದದರಿಂದ ಪಿಲಾತನು ಆ ಮಾತನ್ನು ಕೇಳಿ ಯೇಸುವನ್ನು ಹೊರಗೆ ಕರ ಕೊಂಡು ಬಂದು ಇಬ್ರಿಯ ಮಾತಿನಲ್ಲಿ ಗಬ್ಬಥಾ ಎನಿಸಿಕೊಳ್ಳುವ ಕಲ್ಲು ಹಾಸಿದ ಕಟ್ಟೆ ಎಂದು ಕರೆಯಲ್ಪಟ್ಟ ಸ್ಥಳದಲ್ಲಿ ನ್ಯಾಯಾಸನದ ಮೇಲೆ ಕೂತುಕೊಂಡನು. ಅದು ಪಸ್ಕಕ್ಕೆ ಸಿದ್ಧಮಾಡುವ ದಿನದಲ್ಲಿ ಸುಮಾರು ಆರನೇ ತಾಸಾಗಿತ್ತು; ಅವನು ಯೆಹೂದ್ಯರಿಗೆ--ಇಗೋ, ನಿಮ್ಮ ಅರಸನು ಅಂದನು. ಆದರೆ ಅವರು--ತೆಗೆದುಹಾಕು, ತೆಗೆದುಹಾಕು, ಅವನನ್ನು ಶಿಲುಬೆಗೆ ಹಾಕು ಅಂದರು. ಅದಕ್ಕೆ ಪಿಲಾತನು ಅವರಿಗೆ--ನಿಮ್ಮ ಅರಸನನ್ನು ಶಿಲುಬೆಗೆ ಹಾಕಲೋ ಅಂದಾಗ ಪ್ರಧಾನಯಾಜಕರು--ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ ಎಂದು ಉತ್ತರ ಕೊಟ್ಟರು. ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವದಕ್ಕೆ ಅವರಿಗೆ ಒಪ್ಪಿಸಲಾಗಿ ಅವರು ಆತನನ್ನು ಸಾಗಿಸಿಕೊಂಡು ಹೋದರು.
- Daniel 6:14–17 ದಾನಿಯೇಲನು 6:14–17ಅರಸನು ಯಾವಾಗ ಈ ಮಾತುಗಳನ್ನು ಕೇಳಿದನೋ ಆಗ ತನ್ನಲ್ಲಿಯೇ ಬಹಳವಾಗಿ ಬೇಸರ ಗೊಂಡನು ಮತ್ತು ಅವನನ್ನು ಅದರಿಂದ ತಪ್ಪಿಸ ಬೇಕೆಂದು ತನ್ನ ಹೃದಯದಲ್ಲಿ ತಿಳಿದು ಸೂರ್ಯಾಸ್ತ ಮಾನದ ವರೆಗೂ ಪ್ರಯತ್ನಪಟ್ಟನು. ಆಗ ಆ ಮನುಷ್ಯರು ಅರಸನ ಬಳಿಗೆ ಕೂಡಿ ಬಂದು ಅರಸ ನಿಗೆ--ಓ ಅರಸನೇ, ನೀನು ಜಾರಿಗೆ ತಂದಿರುವ ಯಾವ ನಿರ್ಣಯವಾದರೂ ಆಜ್ಞೆಯಾದರೂ ಬದಲಾಯಿಸ ಬಾರದೆಂದು ಮೇದ್ಯಯರ ಮತ್ತು ಪಾರಸೀಯರ ನ್ಯಾಯ ಪ್ರಮಾಣದಲ್ಲಿದೆ ಎಂದು ನಿನಗೆ ತಿಳಿದರಲಿ ಅಂದನು. ಆಗ ರಾಜನು ಆಜ್ಞಾಪಿಸಲು ಅವರು ದಾನಿಯೇಲ ನನ್ನು ತಂದು ಸಿಂಹದ ಗವಿಯಲ್ಲಿ ಹಾಕಿದರು. ಅರಸನು ದಾನಿಯೇಲನಿಗೆ--ನೀನು ಯಾವಾಗಲೂ ಪ್ರಾರ್ಥಿ ಸುವ ನಿನ್ನ ದೇವರು ನಿನ್ನನ್ನು ಬಿಡಿಸುವನು ಎಂದು ಹೇಳಿದನು. ಬಂಡೆ ತರಿಸಲ್ಪಟ್ಟು ಗುಹೆಯ ಬಾಯಿಯು ಮುಚ್ಚಲ್ಪಟ್ಟಿತು. ಇದಲ್ಲದೆ ದಾನಿಯೇಲನ ವಿಷಯದಲ್ಲಿ ತನ್ನ ಆಲೋಚನೆಯು ಬದಲಾಗದ ಹಾಗೆ ಅರಸನು ತನ್ನ ಮುದ್ರೆಯನ್ನು ಮತ್ತು ತನ್ನ ಪ್ರಭುಗಳ ಮುದ್ರೆಯನ್ನೂ ಅದಕ್ಕೆ ಹಾಕಿದನು.