Luke · chapter 6 · verse 20
Luke 6:20 in Kannada
ಆತನು ತನ್ನ ಕಣ್ಣುಗಳನ್ನೆತ್ತಿ ತನ್ನ ಶಿಷ್ಯರ ಕಡೆಗೆ ನೋಡಿ--ಬಡವರಾದ ನೀವು ಧನ್ಯರು; ಯಾಕಂದರೆ ದೇವರ ರಾಜ್ಯವು ನಿಮ್ಮದೇ.
Aatanu tanna kannugalannetti tanna shishyara kadege nodi--badavaraada neevu dhanyaru; yaakandare devara raajyavu nimmade.
Luke 6:20 in English
- King James Version (KJV)
- And he lifted up his eyes on his disciples, and said, Blessed [be ye] poor: for yours is the kingdom of God.
- World English Bible (WEB)
- He lifted up his eyes to his disciples, and said: “Blessed are you who are poor, for God’s Kingdom is yours.
- American Standard Version (ASV)
- And he lifted up his eyes on his disciples, and said, Blessed [are] ye poor: for yours is the kingdom of God.
- Bible in Basic English (BBE)
- And turning his eyes to his disciples he said, Happy are you who are poor: for the kingdom of God is yours.
- Darby Translation (DBY)
- And he, lifting up his eyes upon his disciples, said, Blessed [are] ye poor, for yours is the kingdom of God.
- Webster's Bible (WBS)
- And he lifted up his eyes on his disciples, and said, Blessed [are ye] poor: for yours is the kingdom of God.
- Young's Literal Translation (YLT)
- And he, having lifted up his eyes to his disciples, said: 'Happy the poor — because yours is the reign of God.
Read in context
- 18ಅಶುದ್ಧಾತ್ಮಗಳಿಂದ ಪೀಡಿತರಾದವರೂ ಬಂದು ಸ್ವಸ್ಥರಾದರು.
- 19ಆಗ ಸಮೂಹವೆಲ್ಲಾ ಆತ ನನ್ನು ಮುಟ್ಟಬೇಕೆಂದು ಪ್ರಯತ್ನಿಸಿದರು; ಯಾಕಂದರೆ ಆತನಿಂದ ಶಕ್ತಿಯು ಹೊರಟು ಅವರೆಲ್ಲರನ್ನು ಸ್ವಸ್ಥ ಮಾಡಿತು.
- 20ಆತನು ತನ್ನ ಕಣ್ಣುಗಳನ್ನೆತ್ತಿ ತನ್ನ ಶಿಷ್ಯರ ಕಡೆಗೆ ನೋಡಿ--ಬಡವರಾದ ನೀವು ಧನ್ಯರು; ಯಾಕಂದರೆ ದೇವರ ರಾಜ್ಯವು ನಿಮ್ಮದೇ.
- 21ಈಗ ಹಸಿದವರಾದ ನೀವು ಧನ್ಯರು; ಯಾಕಂದರೆ ನೀವು ತೃಪ್ತಿ ಹೊಂದುವಿರಿ. ಈಗ ಅಳುವವರಾದ ನೀವು ಧನ್ಯರು; ಯಾಕಂದರೆ ನೀವು ನಗುವಿರಿ.
- 22ಮನುಷ್ಯಕುಮಾರನ ನಿಮಿತ್ತ ಜನರು ನಿಮ್ಮನ್ನು ಹಗೆಮಾಡಿ ನಿಮ್ಮನ್ನು ಬಹಿಷ್ಕರಿಸಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದ್ದೆಂದು ತೆಗೆದುಹಾಕಿದರೆ ನೀವು ಧನ್ಯರು.
Cross references
- James 2:5 ಯಾಕೋಬನು 2:5ನನ್ನ ಪ್ರಿಯ ಸಹೋದರರೇ, ಕೇಳಿರಿ; ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ ತನ್ನನ್ನು ಪ್ರೀತಿಸುವವ ರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯ ರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?
- 2 Corinthians 8:9 2 ಕೊರಿಂಥದವರಿಗೆ 8:9ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು ನೀವು ಅರಿತವರಾಗಿದ್ದೀರಿ; ಹೇಗಂದರೆ ಆತನು ಐಶ್ವರ್ಯವಂತನಾಗಿದ್ದರೂ ಆತನ ಬಡತನದ ಮೂಲಕ ನೀವು ಐಶ್ವರ್ಯವಂತ ರಾಗುವಂತೆ ಆತನು ನಿಮಗೋಸ್ಕರ ಬಡವನಾದನು.
- Luke 6:20–24 ಲೂಕನು 6:20–24ಆತನು ತನ್ನ ಕಣ್ಣುಗಳನ್ನೆತ್ತಿ ತನ್ನ ಶಿಷ್ಯರ ಕಡೆಗೆ ನೋಡಿ--ಬಡವರಾದ ನೀವು ಧನ್ಯರು; ಯಾಕಂದರೆ ದೇವರ ರಾಜ್ಯವು ನಿಮ್ಮದೇ. ಈಗ ಹಸಿದವರಾದ ನೀವು ಧನ್ಯರು; ಯಾಕಂದರೆ ನೀವು ತೃಪ್ತಿ ಹೊಂದುವಿರಿ. ಈಗ ಅಳುವವರಾದ ನೀವು ಧನ್ಯರು; ಯಾಕಂದರೆ ನೀವು ನಗುವಿರಿ. ಮನುಷ್ಯಕುಮಾರನ ನಿಮಿತ್ತ ಜನರು ನಿಮ್ಮನ್ನು ಹಗೆಮಾಡಿ ನಿಮ್ಮನ್ನು ಬಹಿಷ್ಕರಿಸಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದ್ದೆಂದು ತೆಗೆದುಹಾಕಿದರೆ ನೀವು ಧನ್ಯರು. ಆ ದಿನದಲ್ಲಿ ನೀವು ಸಂತೋಷ ಪಡಿರಿ. ಉಲ್ಲಾಸದಿಂದ ಕುಣಿದಾಡಿರಿ; ಯಾಕಂದರೆ ಇಗೋ, ಪರಲೋಕದಲ್ಲಿ ನಿಮ್ಮ ಬಹುಮಾನವು ದೊಡ್ಡದು; ಅವರ ಪಿತೃಗಳು ಪ್ರವಾದಿಗಳಿಗೆ ಅದೇ ರೀತಿಯಲ್ಲಿ ಮಾಡಿದರು. ಆದರೆ ಐಶ್ವರ್ಯವಂತರೇ, ನಿಮಗೆ ಅಯ್ಯೋ! ನೀವು ನಿಮ್ಮ ಆದರಣೆಯನ್ನು ಹೊಂದಿದ್ದೀರಿ.
- Luke 12:32 ಲೂಕನು 12:32ಚಿಕ್ಕ ಹಿಂಡೇ, ಭಯಪಡಬೇಡ; ಯಾಕಂದರೆ ನಿಮಗೆ ರಾಜ್ಯವನ್ನು ಕೊಡುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.
- Matthew 25:34 ಮತ್ತಾಯನು 25:34ಆಗ ಅರಸನು ತನ್ನ ಬಲಗಡೆಯಲ್ಲಿ ರುವವರಿಗೆ--ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ನೀವು ಬನ್ನಿರಿ; ಭೂಲೋಕಕ್ಕೆ ಅಸ್ತಿ ವಾರ ಹಾಕಿದಂದಿನಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಬಾಧ್ಯವಾಗಿ ಹೊಂದಿರಿ;
- Matthew 5:2–12 ಮತ್ತಾಯನು 5:2–12ಆತನು ಬಾಯಿ ತೆರೆದು ಅವರಿಗೆ ಬೋಧಿಸಿ ಹೇಳಿದ್ದೇನಂದರೆ -- ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು. ದುಃಖಪಡುವವರು ಧನ್ಯರು; ಯಾಕಂದರೆ ಅವರು ಆದರಣೆ ಹೊಂದುವರು. ಸಾತ್ವಿಕರು ಧನ್ಯರು; ಯಾಕಂದರೆ ಅವರು ಭೂಮಿಯನ್ನು ಬಾಧ್ಯವಾಗಿ ಹೊಂದುವರು. ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು; ಯಾಕಂದರೆ ಅವರು ತೃಪ್ತಿ ಹೊಂದುವರು. ಕರುಣೆಯುಳ್ಳವರು ಧನ್ಯರು; ಯಾಕಂದರೆ ಅವರು ಕರುಣೆ ಹೊಂದುವರು. ಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ನೋಡುವರು. ಸಮಾಧಾನ ಮಾಡುವವರು ಧನ್ಯರು; ಯಾಕಂದರೆ ಅವರು ದೇವರ ಮಕ್ಕಳೆಂದು ಕರೆಯಲ್ಪಡುವರು. ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು. ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು. ಸಂತೋಷಿಸಿರಿ, ಅತಿ ಉಲ್ಲಾಸದಿಂದಿರ್ರಿ; ಯಾಕಂದರೆ ಪರಲೋಕದಲ್ಲಿ ನಿಮ್ಮ ಪ್ರತಿಫಲವು ದೊಡ್ಡದಾಗಿದೆ; ನಿಮಗಿಂತ ಮುಂಚೆ ಇದ್ದ ಪ್ರವಾದಿ ಗಳನ್ನು ಅವರು ಹೀಗೆಯೇ ಹಿಂಸಿಸಿದರಲ್ಲಾ.
- James 1:9–10 ಯಾಕೋಬನು 1:9–10ಹೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತ ಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ; ಐಶ್ವರ್ಯ ವಂತನಾದ ಸಹೋದರನು ತಾನು ದೀನಸ್ಥಿತಿಗೆ ಬಂದೆ ನೆಂದು ಉಲ್ಲಾಸಪಡಲಿ. ಆದರೆ ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸಿ ಹೋಗುವನು.
- Revelation 2:9 ಪ್ರಕಟನೆ 2:9ನಾನು ನಿನ್ನ ಕೃತ್ಯಗಳನ್ನೂ ಸಂಕಟವನ್ನೂ ಬಡತನವನೂ ಬಲ್ಲೆನು; (ಆದರೂ ನೀನು ಐಶ್ವರ್ಯವಂತನೇ). ಇದಲ್ಲದೆ ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳು ವವರ ದೂಷಣೆಯನ್ನು ನಾನು ಬಲ್ಲೆನು; ಅವರು ಯೆಹೂದ್ಯರಲ್ಲ, ಸೈತಾನನ ಸಭಾಮಂದಿರದವರಾಗಿ ದ್ದಾರೆ.
- 2 Corinthians 6:10 2 ಕೊರಿಂಥದವರಿಗೆ 6:10ದುಃಖಪಡುವ ವರಾಗಿದ್ದರೂ ಯಾವಾಗಲೂ ಸಂತೋಷಪಡು ವವರೂ ಬಡವರಾಗಿದ್ದರೂ ಅನೇಕರಿಗೆ ಐಶ್ವರ್ಯ ವನ್ನುಂಟು ಮಾಡುವವರೂ ಏನೂ ಇಲ್ಲದವ ರಾಗಿದ್ದರೂ ಎಲ್ಲಾ ಇದ್ದವರೂ ಆಗಿದ್ದೇವೆ.
- Isaiah 29:19 ಯೆಶಾಯ 29:19ದೀನರ ಸಂತೋಷವು ಕರ್ತನಲ್ಲಿ ಹೆಚ್ಚಾಗುವದು, ಮನುಷ್ಯರಲ್ಲಿ ಬಡವರು ಇಸ್ರಾಯೇಲಿನ ಪರಿಶುದ್ಧನಲ್ಲಿ ಹರ್ಷಿಸು ವರು.
- Zephaniah 3:12 ಚೆಫನ್ಯ 3:12ಇದಲ್ಲದೆ ನಿನ್ನ ಮಧ್ಯದಲ್ಲಿ ಬಡವರನ್ನೂ ಹೀನವಾದವರನ್ನೂ ಉಳಿಸುವೆನು; ಇವರು ಕರ್ತನ ಹೆಸರಿನಲ್ಲಿ ನಂಬಿಕೆ ಇಡುವರು.
- Isaiah 66:2 ಯೆಶಾಯ 66:2ಇವುಗಳ ನ್ನೆಲ್ಲಾ ನನ್ನ ಕೈ ಉಂಟುಮಾಡಿತು; ಇವುಗಳೆಲ್ಲಾ ಇದ್ದವೆಂದು ಕರ್ತನು ಅನ್ನುತ್ತಾನೆ. ಆದರೆ ಇವನ ಮೇಲೆ ದೃಷ್ಟಿ ಇಡುವೆನು ದೀನನೂ ಜಜ್ಜಿದ ಆತ್ಮವುಳ್ಳ ವನೂ ನನ್ನ ವಾಕ್ಯಕ್ಕೆ ನಡುಗುವವನೂ ಯಾವನೋ ಅವನ ಮೇಲೆಯೂ ದೃಷ್ಟಿ ಇಡುವೆನು.