Luke · chapter 7 · verse 13
Luke 7:13 in Kannada
ಕರ್ತನು ಆಕೆಯನ್ನು ನೋಡಿ ಆಕೆಯ ಮೇಲೆ ಕನಿಕರಪಟ್ಟು ಆಕೆಗೆ--ಅಳಬೇಡ ಅಂದನು.
Kartanu aakeyannu nodi aakeya mele kanikarapattu aakege--alabeda andanu.
Luke 7:13 in English
- King James Version (KJV)
- And when the Lord saw her, he had compassion on her, and said unto her, Weep not.
- World English Bible (WEB)
- When the Lord saw her, he had compassion on her and said to her, “Don’t cry.”
- American Standard Version (ASV)
- And when the Lord saw her, he had compassion on her, and said unto her, Weep not.
- Bible in Basic English (BBE)
- And when the Lord saw her, he had pity on her and said to her, Be not sad.
- Darby Translation (DBY)
- And the Lord, seeing her, was moved with compassion for her, and said to her, Weep not;
- Webster's Bible (WBS)
- And when the Lord saw her, he had compassion on her, and said to her, Weep not.
- Young's Literal Translation (YLT)
- And the Lord having seen her, was moved with compassion towards her, and said to her, 'Be not weeping;'
Read in context
- 11ಇದಾದ ಮೇಲೆ ಮಾರಣೆಯ ದಿನ ಆತನು ನಾಯಿನೆಂಬ ಪಟ್ಟಣಕ್ಕೆ ಹೋದನು. ಆಗ ಆತನ ಶಿಷ್ಯರಲ್ಲಿ ಅನೇಕರೂ ಬಹು ಜನರೂ ಆತನ ಸಂಗಡ ಹೋದರು.
- 12ಆತನು ಪಟ್ಟಣ ದ್ವಾರದ ಸವಿಾಪಕ್ಕೆ ಬಂದಾಗ ಇಗೋ, ಸತ್ತುಹೋಗಿದ್ದ ಒಬ್ಬ ಮನುಷ್ಯನನ್ನು ಹೊತ್ತುಕೊಂಡು ಹೋಗುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನು; ಆಕೆಯು ವಿಧವೆಯಾಗಿ ದ್ದಳು. ಪಟ್ಟಣದ ಬಹಳ ಜನರು ಆಕೆಯೊಂದಿಗೆ ಇದ್ದರು.
- 13ಕರ್ತನು ಆಕೆಯನ್ನು ನೋಡಿ ಆಕೆಯ ಮೇಲೆ ಕನಿಕರಪಟ್ಟು ಆಕೆಗೆ--ಅಳಬೇಡ ಅಂದನು.
- 14ಆತನು ಬಂದು ಪೆಟ್ಟಿಗೆಯನ್ನು ಮುಟ್ಟಿದಾಗ ಅದನ್ನು ಹೊತ್ತುಕೊಂಡಿದ್ದವರು ಕದಲದೆ ನಿಂತರು; ಆಗ ಆತನು--ಯೌವನಸ್ಥನೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.
- 15ಆಗ ಸತ್ತವನು ಕೂತುಕೊಂಡು ಮಾತನಾಡಲಾರಂಭಿಸಿದನು. ಆತನು ಅವನನ್ನು ಅವನ ತಾಯಿಗೆ ಒಪ್ಪಿಸಿದನು.
Cross references
- Isaiah 63:9 ಯೆಶಾಯ 63:9ಅವರಿಗೆ ಆದ ಎಲ್ಲಾ ಶ್ರಮೆಯಲ್ಲಿ ಆತನಿಗೆ ಶ್ರಮೆ ಆಯಿತು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನ ಪ್ರೀತಿಯಲ್ಲಿಯೂ ತನ್ನ ಕನಿಕರ ದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು; ಪೂರ್ವಕಾಲದ ದಿನಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.
- Psalm 103:13 ಕೀರ್ತನೆಗಳು 103:13ತಂದೆಯು ಮಕ್ಕಳ ಮೇಲೆ ಅಂತಃಕರಣ ಪಡುವ ಪ್ರಕಾರ ಕರ್ತನು ತನಗೆ ಭಯಪಡುವವರ ಮೇಲೆ ಅಂತಃಕರಣಪಡುವವನಾಗಿದ್ದಾನೆ.
- Lamentations 3:32–33 ಪ್ರಲಾಪಗಳು 3:32–33ಆತನು ದುಃಖಪಡಿಸಿದರೂ ತನ್ನ ಕೃಪಾತಿಶಯದಿಂದ ಕನಿಕರಿಸುವನು. ಆತನು ಇಷ್ಟಪೂರ್ವಕವಾಗಿ ಮನುಷ್ಯರ ಮಕ್ಕಳನ್ನು ಬಾಧಿಸುವದು ಇಲ್ಲ ದುಃಖಿಸು ವದೂ ಇಲ್ಲ.
- Hebrews 4:15 ಇಬ್ರಿಯರಿಗೆ 4:15ಯಾಕಂದರೆ ನಮಗಿ ರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿ ಯಾದರೂ ಪಾಪರಹಿತನಾಗಿದ್ದನು.ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ.
- Psalm 86:15 ಕೀರ್ತನೆಗಳು 86:15ಆದರೆ ನೀನು ಓ ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.
- Jeremiah 31:20 ಯೆರೆಮೀಯ 31:20ಎಫ್ರಾಯಾಮನು ನನಗೆ ಪ್ರಿಯಕುಮಾರನೋ? ಅವನು ಆನಂದವುಳ್ಳ ಮಗುವೋ? ನಾನು ಅವನಿಗೆ ವಿರೋಧವಾಗಿ ಮಾತ ನಾಡಿದಂದಿನಿಂದ ಅವನನ್ನು ಇನ್ನು ಬಹಳವಾಗಿ ಜ್ಞಾಪಕಮಾಡುತ್ತೇನೆ; ಆದದರಿಂದ ನನ್ನ ಕರುಳುಗಳು ಅವನಿಗೋಸ್ಕರ ಕಳವಳಪಡುತ್ತವೆ. ನಾನು ನಿಶ್ಚಯವಾಗಿ ಅವನನ್ನು ಕನಿಕರಿಸುವೆನೆಂದು ಕರ್ತನು ಅನ್ನುತ್ತಾನೆ.
- Luke 8:52 ಲೂಕನು 8:52ಎಲ್ಲರೂ ಅಳುತ್ತಾ ಹುಡುಗಿಗಾಗಿ ಗೋಳಾಡುತ್ತಿದ್ದರು. ಆದರೆ ಆತನು-- ಅಳಬೇಡಿರಿ, ಆಕೆಯು ಸತ್ತಿಲ್ಲ; ಆದರೆ ನಿದ್ರೆ ಮಾಡು ತ್ತಾಳೆ ಅಂದನು.
- Psalm 86:5 ಕೀರ್ತನೆಗಳು 86:5ಕರ್ತನೇ, ನೀನು ಒಳ್ಳೆಯವನೂ ಕ್ಷಮಿಸುವದಕ್ಕೆ ಸಿದ್ಧನೂ ಆಗಿದ್ದೀ; ನಿನಗೆ ಮೊರೆಯಿಡುವವರೆಲ್ಲರಿಗೆ ಬಹು ಕೃಪೆಯುಳ್ಳವನೂ ಆಗಿದ್ದೀ.
- John 11:33–35 ಯೋಹಾನನು 11:33–35ಆಕೆಯು ಅಳುವದನ್ನು ಮತ್ತು ಆಕೆಯೊಂದಿಗೆ ಬಂದ ಯೆಹೂದ್ಯರು ಸಹ ಅಳುವದನ್ನು ಯೇಸು ನೋಡಿದಾಗ ಆತ್ಮದಲ್ಲಿ ಕಳವಳಪಟ್ಟು ಮೂಲ್ಗುತ್ತಾ-- ಅವನನ್ನು ಎಲ್ಲಿ ಇಟ್ಟಿದ್ದೀರಿ ಅಂದನು. ಅವರು ಆತನಿಗೆ--ಕರ್ತನೇ, ಬಂದು ನೋಡು ಅಂದರು. ಯೇಸು ಅತ್ತನು.
- Hebrews 2:17 ಇಬ್ರಿಯರಿಗೆ 2:17ಆದದರಿಂದ ಆತನು ಎಲ್ಲವುಗಳಲ್ಲಿ ತನ್ನ ಸಹೋದರರಿಗೆ ಸಮಾನ ವಾಗಿ ಮಾಡಲ್ಪಟ್ಟನು. ಹೀಗೆ ಆತನು ಜನರ ಪಾಪಗಳಿ ಗೋಸ್ಕರ ಶಾಂತಿ ಮಾಡುವದಕ್ಕೆ ದೇವರ ಕಾರ್ಯ ಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾ ಯಾಜಕನಾದನು.ತಾನೇ ಶೋಧಿಸಲ್ಪಟ್ಟು ಬಾಧೆ ಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡು ವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.
- John 20:15 ಯೋಹಾನನು 20:15ಯೇಸು ಆಕೆಗೆ--ಸ್ತ್ರೀಯೇ, ನೀನು ಯಾಕೆ ಅಳುತ್ತೀ? ಯಾರನ್ನು ಹುಡುಕುತ್ತೀ ಅನ್ನಲು ಆಕೆಯು ಆತನು ತೋಟಗಾರನೆಂದು ನೆನಸಿ ಆತನಿಗೆ--ಅಯ್ಯಾ, ನೀನು ಆತನನ್ನು ಇಲ್ಲಿಂದ ತೆಗೆದುಕೊಂಡು ಹೋಗಿದ್ದರೆ ಆತನನ್ನು ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು; ನಾನು ಆತನನ್ನು ತೆಗೆದುಕೊಂಡು ಹೋಗುತ್ತೇ
- Judges 10:16 ನ್ಯಾಯಸ್ಥಾಪಕರು 10:16ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು ಕರ್ತನನ್ನು ಸೇವಿಸಿ ದರು. ಆಗ ಆತನ ಮನಸ್ಸು ಇಸ್ರಾಯೇಲಿನ ಕಷ್ಟ ಕ್ಕೋಸ್ಕರ ನೊಂದುಕೊಂಡಿತು.