Luke · chapter 8 · verse 53
Luke 8:53 in Kannada
ಆಕೆಯು ಸತ್ತಿದ್ದಾಳೆಂದು ತಿಳಿದಿದ್ದ ರಿಂದ ಅವರು ಆತನನ್ನು ಹಾಸ್ಯಮಾಡಿ ನಕ್ಕರು
Aakeyu sattiddaalendu tilididda rinda avaru aatanannu haasyamaadi nakkaru
Luke 8:53 in English
- King James Version (KJV)
- And they laughed him to scorn, knowing that she was dead.
- World English Bible (WEB)
- They were ridiculing him, knowing that she was dead.
- American Standard Version (ASV)
- And they laughed him to scorn, knowing that she was dead.
- Bible in Basic English (BBE)
- And they were laughing at him, being certain that she was dead.
- Darby Translation (DBY)
- And they derided him, knowing that she had died.
- Webster's Bible (WBS)
- And they derided him, knowing that she was dead.
- Young's Literal Translation (YLT)
- and they were deriding him, knowing that she did die;
Read in context
- 51ಆತನು ಮನೆಯೊಳಕ್ಕೆ ಬಂದಾಗ ಪೇತ್ರ ಯಾಕೋಬ ಯೋಹಾನ ಮತ್ತು ಹುಡುಗಿಯ ತಂದೆತಾಯಿಗಳ ಹೊರತು ಯಾರನ್ನೂ ಒಳಗೆ ಹೋಗಗೊಡಿಸಲಿಲ್ಲ.
- 52ಎಲ್ಲರೂ ಅಳುತ್ತಾ ಹುಡುಗಿಗಾಗಿ ಗೋಳಾಡುತ್ತಿದ್ದರು. ಆದರೆ ಆತನು-- ಅಳಬೇಡಿರಿ, ಆಕೆಯು ಸತ್ತಿಲ್ಲ; ಆದರೆ ನಿದ್ರೆ ಮಾಡು ತ್ತಾಳೆ ಅಂದನು.
- 53ಆಕೆಯು ಸತ್ತಿದ್ದಾಳೆಂದು ತಿಳಿದಿದ್ದ ರಿಂದ ಅವರು ಆತನನ್ನು ಹಾಸ್ಯಮಾಡಿ ನಕ್ಕರು
- 54ಆದರೆ ಆತನು ಅವರೆಲ್ಲರನ್ನು ಹೊರಗೆ ಕಳುಹಿಸಿ ಆಕೆಯ ಕೈಹಿಡಿದು-- ಹುಡುಗಿಯೇ, ಎದ್ದೇಳು ಎಂದು ಕರೆದನು.
- 55ಆಗ ಆಕೆಯು ಬದುಕಿ ಕೂಡಲೆ ಎದ್ದಳು; ಆಕೆಗೆ ಊಟಕ್ಕೆ ಕೊಡುವಂತೆ ಆತನು ಅಪ್ಪಣೆ ಕೊಟ್ಟನು.ಆಗ ಆಕೆಯ ತಂದೆತಾಯಿಗಳು ಬೆರಗಾದರು; ಆದರೆ ನಡೆದದ್ದನ್ನು ಅವರು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು.
Cross references
- Luke 16:14 ಲೂಕನು 16:14ಆಗ ಲೋಭಿ ಗಳಾದ ಫರಿಸಾಯರು ಸಹ ಇವೆಲ್ಲವುಗಳನ್ನು ಕೇಳಿ ಆತನಿಗೆ ಪರಿಹಾಸ್ಯ ಮಾಡಿದರು.
- Isaiah 53:3 ಯೆಶಾಯ 53:3ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ.
- Psalm 22:7 ಕೀರ್ತನೆಗಳು 22:7ನನ್ನನ್ನು ನೋಡುವವರೆಲ್ಲರು ನನ್ನನ್ನು ಗೇಲಿ ಮಾಡಿ ನಗುವರು, ಅವರು ತುಟಿ ಅಗಲಮಾಡಿ ತಲೆ ಆಡಿಸುತ್ತಾ--
- Job 17:2 ಯೋಬನು 17:2ಹಾಸ್ಯಗಾರರು ನನ್ನ ಬಳಿಯಲ್ಲಿ ಇದ್ದಾರ ಲ್ಲವೋ? ಅವರ ಕೋಪದಲ್ಲಿ ನನ್ನ ಕಣ್ಣು ಮುಂದು ವರಿಯುತ್ತದಲ್ಲಾ.
- John 11:39 ಯೋಹಾನನು 11:39ಯೇಸು--ಆ ಕಲ್ಲನ್ನು ತೆಗೆದುಹಾಕಿರಿ ಅಂದನು. ಅದಕ್ಕೆ ಸತ್ತುಹೋದವನ ಸಹೋದರಿಯಾದ ಮಾರ್ಥಳು ಆತನಿಗೆ--ಕರ್ತನೇ, ಇಷ್ಟರೊಳಗೆ ಅವನು ನಾರುತ್ತಾನೆ; ಯಾಕಂದರೆ ಅವನು ಸತ್ತು ನಾಲ್ಕು ದಿನಗಳಾದವು ಅಂದಳು.
- Job 12:4 ಯೋಬನು 12:4ನಾನು ನೆರೆಯವನಿಗೆ ನಗೆಯಾದವನು; ದೇವರಿಗೆ ಕೂಗು ತ್ತೇನೆ. ಆತನು ಉತ್ತರ ಕೊಡುತ್ತಾನೆ; ನೀತಿವಂತ ಮನು ಷ್ಯನನ್ನು ಗೇಲಿಮಾಡಿ ನಗುವರು.
- John 19:33–35 ಯೋಹಾನನು 19:33–35ಆದರೆ ಅವರು ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವದನ್ನು ಕಂಡು ಆತನ ಕಾಲುಗಳನ್ನು ಮುರಿ ಯಲಿಲ್ಲ. ಆದರೆ ಸೈನಿಕರಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು; ಕೂಡಲೆ ರಕ್ತವೂ ನೀರೂ ಹೊರಗೆ ಬಂತು. ಅದನ್ನು ನೋಡಿದವನೇ ಸಾಕ್ಷಿ ಕೊಟ್ಟಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ನೀವು ನಂಬುವಂತೆ ಅವನು ಹೇಳುವದು ಸತ್ಯವೆಂದು ಅವನು ಬಲ್ಲನು.
- Mark 15:44–45 ಮಾರ್ಕನು 15:44–45ಆದರೆ ಆತನು ಆಗಲೇ ಸತ್ತನೋ ಎಂದು ಪಿಲಾತನು ಆಶ್ಚರ್ಯಪಟ್ಟು ಶತಾಧಿಪತಿಯನ್ನು ತನ್ನ ಬಳಿಗೆ ಕರೆದು--ಆತನು ಸತ್ತು ಎಷ್ಟು ಸಮಯ ವಾಯಿತು ಎಂದು ಅವನನ್ನು ಕೇಳಿದನು. ಅವನು ಶತಾಧಿಪತಿಯಿಂದ ಅದನ್ನು ತಿಳಿದುಕೊಂಡ ಮೇಲೆ ಆ ದೇಹವನ್ನು ಯೊಸೇಫನಿಗೆ ಕೊಟ್ಟನು.