Luke · chapter 9 · verse 10
Luke 9:10 in Kannada
ತರುವಾಯ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದವುಗಳನ್ನೆಲ್ಲಾ ಆತನಿಗೆ ತಿಳಿಸಿದರು. ಆಗ ಆತನು ಬೇತ್ಸಾಯಿದ ಎಂದು ಕರೆಯಲ್ಪಟ್ಟ ಪಟ್ಟಣಕ್ಕೆ ಸಂಬಂಧಿಸಿದ ಅರಣ್ಯಸ್ಥಳಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದನು.
Taruvaaya apostalaru hintirugi bandu taavu maadidavugalannellaa aatanige tilisidaru. Aaga aatanu betsaayida endu kareyalpatta pattanakke sambandhisida aranyasthalakke pratyekavaagi avarannu karedukondu hodanu.
Luke 9:10 in English
- King James Version (KJV)
- And the apostles, when they were returned, told him all that they had done. And he took them, and went aside privately into a desert place belonging to the city called Bethsaida.
- World English Bible (WEB)
- The apostles, when they had returned, told him what things they had done. He took them and withdrew apart to a desert region of a city called Bethsaida.
- American Standard Version (ASV)
- And the apostles, when they were returned, declared unto him what things they had done. And he took them, and withdrew apart to a city called Bethsaida.
- Bible in Basic English (BBE)
- And the twelve, when they came back, gave him an account of what they had done. And he took them with him and went away from the people to a town named Beth-saida.
- Darby Translation (DBY)
- And the apostles having returned related to him whatever they had done. And he took them and withdrew apart into [a desert place of] a city called Bethsaida.
- Webster's Bible (WBS)
- And the apostles, when they had returned, told him all that they had done. And he took them, and went aside privately into a desert place, belonging to the city called Bethsaida.
- Young's Literal Translation (YLT)
- And the apostles having turned back, declared to him how great things they did, and having taken them, he withdrew by himself to a desert place of a city called Bethsaida,
Read in context
- 8ಎಲೀಯನು ಪ್ರತ್ಯಕ್ಷವಾಗಿದ್ದಾನೆಂದು ಕೆಲವರು ಹಿಂದಿನ ಕಾಲದ ಪ್ರವಾದಿಗಳಲ್ಲಿ ಒಬ್ಬನು ಎದ್ದಿದ್ದಾನೆಂದು ಇನ್ನು ಬೇರೆ ಯವರು ಹೇಳುತ್ತಿದ್ದರು.
- 9ಆಗ ಹೆರೋದನು--ನಾನು ಯೋಹಾನನ ತಲೆ ಹೊಯ್ಸಿದ್ದೇನೆ; ಆದರೆ ನಾನು ಯಾರನ್ನು ಕುರಿತು ಈ ವಿಷಯಗಳನ್ನು ಕೇಳು ತ್ತೇನೋ ಇವನು ಯಾರು ಎಂದು ಹೇಳಿ ಅವನು ಆತನನ್ನು ನೋಡಲು ಅಪೇಕ್ಷಿಸಿದನು.
- 10ತರುವಾಯ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದವುಗಳನ್ನೆಲ್ಲಾ ಆತನಿಗೆ ತಿಳಿಸಿದರು. ಆಗ ಆತನು ಬೇತ್ಸಾಯಿದ ಎಂದು ಕರೆಯಲ್ಪಟ್ಟ ಪಟ್ಟಣಕ್ಕೆ ಸಂಬಂಧಿಸಿದ ಅರಣ್ಯಸ್ಥಳಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದನು.
- 11ಆಗ ಜನರು ಅದನ್ನು ತಿಳಿದು ಆತನನ್ನು ಹಿಂಬಾಲಿಸಲು ಆತನು ಅವರನ್ನು ಅಂಗೀಕರಿಸಿ ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ ಸ್ವಸ್ಥತೆ ಬೇಕಾಗಿದ್ದವರನ್ನು ಸ್ವಸ್ಥ ಮಾಡಿದನು.
- 12ಸಂಜೆಯಾಗು ತ್ತಿದ್ದಾಗ ಹನ್ನೆರಡು ಮಂದಿ ಬಂದು ಆತನಿಗೆ--ಈ ಜನಸಮೂಹವು ಸುತ್ತಲಿರುವ ಊರುಗಳಿಗೂ ಸೀಮೆಗಳಿಗೂ ಹೋಗಿ ಇಳುಕೊಂಡು ಆಹಾರವನ್ನು ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡು; ಯಾಕಂದರೆ ನಾವು ಇಲ್ಲಿ ಅರಣ್ಯ ಸ್ಥಳದಲ್ಲಿ ಇದ್ದೇವಲ್ಲಾ ಅಂದರು.
Cross references
- Matthew 11:21 ಮತ್ತಾಯನು 11:21ಖೊರಾಜಿನೇ, ನಿನಗೆ ಅಯ್ಯೋ! ಬೆತ್ಸಾಯಿದವೇ, ನಿನಗೆ ಅಯ್ಯೋ! ಯಾಕಂದರೆ ನಿನ್ನೊಳಗೆ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ಗಳಲ್ಲಿ ನಡೆಯುತ್ತಿದ್ದರೆ ಅವುಗಳು ಆಗಲೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರಪಡುತ್ತಿದ್ದವು.
- Hebrews 13:17 ಇಬ್ರಿಯರಿಗೆ 13:17ನಿಮ್ಮ ನಾಯಕರಿಗೆ ವಿಧೇಯರಾಗಿದ್ದು ಅವರಿಗೆ ಅಧೀನರಾಗಿರ್ರಿ. ಯಾಕಂದರೆ ಅವರು ಲೆಕ್ಕ ಒಪ್ಪಿಸಬೇಕಾ ದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವವರಾಗಲಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.
- Matthew 14:13–21 ಮತ್ತಾಯನು 14:13–21ಯೇಸು ಆ ವಿಷಯವನ್ನು ಕೇಳಿದಾಗ ದೋಣಿ ಯನ್ನು ಹತ್ತಿ ಅಲ್ಲಿಂದ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಹೊರಟುಹೋದನು. ಇದನ್ನು ಕೇಳಿ ಜನರು ಪಟ್ಟಣ ಗಳಿಂದ ಕಾಲು ನಡಿಗೆಯಾಗಿ ಆತನನ್ನು ಹಿಂಬಾಲಿ ಸಿದರು. ಆಗ ಯೇಸು ಹೊರಟುಹೋಗಿ ಜನರ ಮಹಾಸಮೂಹವನ್ನು ಕಂಡು ಅವರ ಮೇಲೆ ಕನಿಕರ ಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು. ಸಾಯಂಕಾಲವಾದಾಗ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅಡವಿಯ ಸ್ಥಳ, ಸಮಯವು ದಾಟಿತು; ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು ಅಂದರು. ಆದರೆ ಯೇಸು ಅವ ರಿಗೆ--ಅವರು ಹೋಗುವದು ಅವಶ್ಯವಿಲ್ಲ; ಅವರು ಊಟಮಾಡುವದಕ್ಕೆ ನೀವೇ ಕೊಡಿರಿ ಎಂದು ಹೇಳಿದನು. ಅವರು ಆತನಿಗೆ--ನಮ್ಮ ಹತ್ತಿರ ಐದು ರೊಟ್ಟಿ ಎರಡು ಮಾನುಗಳು ಮಾತ್ರ ಇವೆ ಎಂದು ಹೇಳಿದರು. ಆತನು--ಅವುಗಳನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಅಂದನು. ಜನ ಸಮೂಹವು ಹುಲ್ಲಿನಮೇಲೆ ಕೂತುಕೊಳ್ಳಬೇಕೆಂದು ಆತನು ಅಪ್ಪಣೆಕೊಟ್ಟು ಆ ಐದು ರೊಟ್ಟಿ ಎರಡು ಮಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಮುರಿದು ಆ ರೊಟ್ಟಿಗಳನ್ನು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು. ಅವರೆಲ್ಲರೂ ತಿಂದು ತೃಪ್ತರಾದರು; ಮತ್ತು ಅವರು ಉಳಿದ ತುಂಡುಗಳನ್ನು ಕೂಡಿಸಿ ಹನ್ನೆ ರಡು ಪುಟ್ಟಿಗಳಲ್ಲಿ ತುಂಬಿಸಿದರು. ಊಟ ಮಾಡಿ ದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಇದ್ದರು.
- Mark 2:7 ಮಾರ್ಕನು 2:7ಈ ಮನುಷ್ಯನು ಯಾಕೆ ಹೀಗೆ ದೇವದೂಷಣೆಗಳನ್ನು ಮಾಡುತ್ತಾನೆ? ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು ಎಂದು ತಮ್ಮ ಹೃದಯ ಗಳಲ್ಲಿ ಅಂದುಕೊಂಡರು.
- John 6:5–13 ಯೋಹಾನನು 6:5–13ಜನರ ದೊಡ್ಡ ಗುಂಪು ತನ್ನ ಕಡೆಗೆ ಬರುವದನ್ನು ಯೇಸು ಕಣ್ಣೆತ್ತಿ ನೋಡಿ ಫಿಲಿಪ್ಪ ನಿಗೆ--ಇವರು ಊಟ ಮಾಡುವಂತೆ ನಾವು ರೊಟ್ಟಿ ಯನ್ನು ಎಲ್ಲಿಂದ ಕೊಂಡು ತರೋಣ ಅಂದನು. ಅವ ನನ್ನು ಪರೀಕ್ಷಿಸುವದಕ್ಕಾಗಿ ಆತನು ಇದನ್ನು ಹೇಳಿದನು; ಯಾಕಂದರೆ ತಾನು ಮಾಡಬೇಕೆಂದಿದ್ದದ್ದು ಆತನು ತಾನೇ ತಿಳಿದವನಾಗಿದ್ದನು. ಫಿಲಿಪ್ಪನು ಪ್ರತ್ಯುತ್ತರ ವಾಗಿ ಆತನಿಗೆ--ಇವರಲ್ಲಿ ಪ್ರತಿಯೊಬ್ಬನು ಸ್ವಲ್ಪ ಸ್ವಲ್ಪ ತಿಂದರೂ ಇನ್ನೂರು ಹಣಗಳಷ್ಟು ರೊಟ್ಟಿಗಳು ಅವ ರಿಗೆ ಸಾಲುವದಿಲ್ಲ ಅಂದನು. ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ಸಹೋದರನಾದ ಅಂದ್ರೆಯನು ಆತನಿಗೆ-- ಇಲ್ಲಿ ಒಬ್ಬ ಹುಡುಗನಿ ದ್ದಾನೆ; ಅವನಲ್ಲಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಸಣ್ಣ ವಿಾನುಗಳೂ ಅವೆ; ಆದರೆ ಇಷ್ಟೊಂದು ಜನರಿಗೆ ಅವು ಯಾತಕ್ಕಾದಾವು ಅಂದನು. ಆಗ ಯೇಸು--ಜನರನ್ನು ಕೂಡ್ರಿಸಿರಿ ಅಂದನು. ಆ ಸ್ಥಳ ದಲ್ಲಿ ಬಹಳ ಹುಲ್ಲು ಇರಲಾಗಿ ಜನರೆಲ್ಲರು ಕುಳಿತು ಕೊಂಡರು ಅವರಲ್ಲಿ ಸುಮಾರು ಐದು ಸಾವಿರ ಪುರುಷರೇ ಇದ್ದರು. ತರುವಾಯ ಯೇಸು ರೊಟ್ಟಿ ಗಳನ್ನು ತೆಗೆದುಕೊಂಡು ಸ್ತೋತ್ರಮಾಡಿ ಶಿಷ್ಯರಿಗೆ ಹಂಚಿದನು; ಅವರು ಕುಳಿತುಕೊಂಡವರಿಗೆ ಹಂಚಿ ದರು; ಅದೇ ರೀತಿಯಲ್ಲಿ ವಿಾನುಗಳನ್ನು ಅವರಿಗೆ ಬೇಕಾದಷ್ಟು ಹಂಚಿದರು. ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ--ಏನೂ ನಷ್ಟವಾಗ ದಂತೆ ಮಿಕ್ಕಿದ ತುಂಡುಗಳನ್ನು ಕೂಡಿಸಿರಿ ಅಂದನು. ಆದದರಿಂದ ಅವರು ಐದು ಜವೆಗೋದಿಯ ರೊಟ್ಟಿಗಳಲ್ಲಿ ತಿಂದವರಿಂದ ಮಿಕ್ಕಿದ ತುಂಡುಗಳನ್ನು ಕೂಡಿಸಿ ಹನ್ನೆರಡು ಪುಟ್ಟಿಗಳಲ್ಲಿ ತುಂಬಿದರು.
- John 1:44 ಯೋಹಾನನು 1:44ಫಿಲಿಪ್ಪನು ಅಂದ್ರೆಯನ ಮತ್ತು ಪೇತ್ರನ ಪಟ್ಟಣವಾದ ಬೇತ್ಸಾಯಿ ದವನು.
- Luke 10:17 ಲೂಕನು 10:17ತರುವಾಯ ಆ ಎಪ್ಪತ್ತು ಮಂದಿ ಸಂತೋಷದಿಂದ ಹಿಂತಿರುಗಿ--ಕರ್ತನೇ, ನಿನ್ನ ಹೆಸರಿನಲ್ಲಿ ದೆವ್ವಗಳು ಸಹ ನಮಗೆ ಅಧೀನವಾದವು ಅಂದರು.
- Luke 9:10–17 ಲೂಕನು 9:10–17ತರುವಾಯ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದವುಗಳನ್ನೆಲ್ಲಾ ಆತನಿಗೆ ತಿಳಿಸಿದರು. ಆಗ ಆತನು ಬೇತ್ಸಾಯಿದ ಎಂದು ಕರೆಯಲ್ಪಟ್ಟ ಪಟ್ಟಣಕ್ಕೆ ಸಂಬಂಧಿಸಿದ ಅರಣ್ಯಸ್ಥಳಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದನು. ಆಗ ಜನರು ಅದನ್ನು ತಿಳಿದು ಆತನನ್ನು ಹಿಂಬಾಲಿಸಲು ಆತನು ಅವರನ್ನು ಅಂಗೀಕರಿಸಿ ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ ಸ್ವಸ್ಥತೆ ಬೇಕಾಗಿದ್ದವರನ್ನು ಸ್ವಸ್ಥ ಮಾಡಿದನು. ಸಂಜೆಯಾಗು ತ್ತಿದ್ದಾಗ ಹನ್ನೆರಡು ಮಂದಿ ಬಂದು ಆತನಿಗೆ--ಈ ಜನಸಮೂಹವು ಸುತ್ತಲಿರುವ ಊರುಗಳಿಗೂ ಸೀಮೆಗಳಿಗೂ ಹೋಗಿ ಇಳುಕೊಂಡು ಆಹಾರವನ್ನು ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡು; ಯಾಕಂದರೆ ನಾವು ಇಲ್ಲಿ ಅರಣ್ಯ ಸ್ಥಳದಲ್ಲಿ ಇದ್ದೇವಲ್ಲಾ ಅಂದರು. ಆದರೆ ಆತನು ಅವರಿಗೆ--ನೀವೇ ಅವ ರಿಗೆ ಊಟಕ್ಕೆ ಕೊಡಿರಿ ಅಂದನು. ಅದಕ್ಕೆ ಅವರು--ನಾವು ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡುಕೊಳ್ಳದ ಹೊರತು ನಮ್ಮಲ್ಲಿ ಐದು ರೊಟ್ಟಿ ಎರಡು ವಿಾನುಗಳಿಗಿಂತ ಹೆಚ್ಚೇನೂ ಇಲ್ಲ ಅಂದರು. ಯಾಕಂದರೆ ಅವರು ಹೆಚ್ಚು ಕಡಿಮೆ ಗಂಡಸರೇ ಐದು ಸಾವಿರ ಇದ್ದರು. ಆಗ ಆತನು ತನ್ನ ಶಿಷ್ಯ ರಿಗೆ--ಪಂಕ್ತಿಗಳಲ್ಲಿ ಐವತ್ತರಂತೆ ಅವರನ್ನು ಕೂಡ್ರಿಸಿರಿ ಅಂದನು. ಅವರು ಅದರಂತೆಯೇ ಮಾಡಿ ಅವರೆ ಲ್ಲರನ್ನೂ ಕೂಡ್ರಿಸಿದರು. ತರುವಾಯ ಆತನು ಐದು ರೊಟ್ಟಿಗಳನ್ನೂ ಎರಡು ವಿಾನುಗಳನ್ನೂ ತಕ್ಕೊಂಡು ಪರಲೋಕದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ ಮುರಿದು ಜನಸಮೂಹಕ್ಕೆ ಹಂಚುವಂತೆ ಶಿಷ್ಯರಿಗೆ ಕೊಟ್ಟನು. ಆಗ ಅವರೆಲ್ಲರೂ ತಿಂದು ತೃಪ್ತರಾದರು; ಉಳಿದ ತುಂಡುಗಳನ್ನು ಕೂಡಿಸಲು ಅವರಿಗೆ ಹನ್ನೆರಡು ಪುಟ್ಟಿಗಳು ಉಳಿದವು.
- Mark 6:30–45 ಮಾರ್ಕನು 6:30–45ಅಪೊಸ್ತಲರು ಯೇಸುವಿನ ಬಳಿಗೆ ಒಟ್ಟಾಗಿ ಕೂಡಿಬಂದು ತಾವು ಮಾಡಿದ್ದ ಮತ್ತು ಬೋಧಿಸಿದ್ದೆಲ್ಲ ವುಗಳನ್ನು ಆತನಿಗೆ ತಿಳಿಸಿದರು. ಆಗ ಆತನು ಅವರಿಗೆ--ನೀವು ಮಾತ್ರ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಬಂದು ಸ್ವಲ್ಪ ಸಮಯ ವಿಶ್ರಮಿಸಿಕೊಳ್ಳಿರಿ ಅಂದನು. ಯಾಕಂದರೆ ಅಲ್ಲಿ ಅನೇಕರು ಬರುತ್ತಾ ಹೋಗುತ್ತಾ ಇದ್ದದರಿಂದ ಊಟಮಾಡುವದಕ್ಕೂ ಅವರಿಗೆ ಸಮಯವಿರಲಿಲ್ಲ. ಆಗ ಅವರು ದೋಣಿ ಯಲ್ಲಿ ಏಕಾಂತವಾಗಿ ಅರಣ್ಯಸ್ಥಳಕ್ಕೆ ಹೊರಟು ಹೋದರು. ಅವರು ಹೊರಡುವದನ್ನು ಜನರು ನೋಡಿ ಅನೇಕರು ಆತನ ಗುರುತು ಹಿಡಿದು ಎಲ್ಲಾ ಪಟ್ಟಣಗಳಿಂದ ಕಾಲುನಡಿಗೆಯಾಗಿ ಅಲ್ಲಿಗೆ ಓಡುತ್ತಾ ಅವರಿಗಿಂತಲೂ ಮುಂದಾಗಿ ಆತನ ಬಳಿಗೆ ಸೇರಿಬಂದರು. ಯೇಸು ಹೊರಗೆ ಬಂದು ಬಹು ಜನರನ್ನು ನೋಡಿ ಅವರ ಮೇಲೆ ಕನಿಕರ ಪಟ್ಟನು; ಅವರು ಕುರುಬನಿಲ್ಲದ ಕುರಿಗಳಂತೆ ಇದ್ದರು; ಆತನು ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದನು. ಆಗಲೇ ಹಗಲು ಬಹಳ ಮಟ್ಟಿಗೆ ಕಳೆದದ್ದರಿಂದ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅರಣ್ಯ ಸ್ಥಳ ಮತ್ತು ಈಗ ಸಮಯವು ಬಹಳವಾಗಿ ದಾಟಿದೆ; ಇವರು ಸುತ್ತ ಲಿನ ಸೀಮೆಗೂ ಹಳ್ಳಿಗಳಿಗೂ ಹೋಗಿ ತಮಗೋಸ್ಕರ ರೊಟ್ಟಿಯನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿ ಬಿಡು; ಯಾಕಂದರೆ ಅವರಿಗೆ ತಿನ್ನುವದಕ್ಕೆ ಏನೂ ಇಲ್ಲ ಅಂದರು. ಆತನು ಪ್ರತ್ಯುತ್ತರವಾಗಿ ಅವ ರಿಗೆ--ನೀವೇ ಅವರಿಗೆ ತಿನ್ನುವದಕ್ಕೆ ಕೊಡಿರಿ ಅಂದನು. ಅದಕ್ಕೆ ಅವರು ಆತನಿಗೆ--ನಾವು ಹೋಗಿ ಎರಡು ನೂರು ಹಣದ (ಪೆನ್ನಿ: ಇಂಗ್ಲೀಷ್ಹಣ) ರೊಟಿಯನ್ನು ಕೊಂಡುಕೊಂಡು ಅವರಿಗೆ ತಿನ್ನುವದಕ್ಕೆ ಕೊಡೋಣವೋ ಅಂದರು. ಆತನು ಅವರಿಗೆ--ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿರಿ ಅನ್ನಲು ಅವರು ತಿಳಿದುಕೊಂಡು--ಐದು ರೊಟ್ಟಿ ಮತ್ತು ಎರಡು ವಿಾನುಗಳು ಇವೆ ಎಂದು ಹೇಳಿದರು. ಆಗ ಎಲ್ಲರೂ ಹಸುರು ಹುಲ್ಲಿನ ಮೇಲೆ ಪಂಕ್ತಿ ಪಂಕ್ತಿಗಳಾಗಿ ಕೂತುಕೊಳ್ಳುವಂತೆ ಆತನು ಅವರಿಗೆ ಅಪ್ಪಣೆಕೊಟ್ಟನು. ಅವರು ನೂರರಂತೆ ಐವತ್ತರಂತೆ ಸಾಲುಸಾಲಾಗಿ ಕೂತುಕೊಂಡರು. ಆಗ ಆತನು ಐದು ರೊಟ್ಟಿ ಎರಡು ವಿಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಆ ರೊಟ್ಟಿಗಳನ್ನು ಮುರಿದು, ಅವರಿಗೆ ಹಂಚುವದಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು; ಮತ್ತು ಎರಡು ವಿಾನುಗಳನ್ನು ಆತನು ಅವರೆಲ್ಲರಿಗೂ ಹಂಚಿದನು. ಅವರೆಲ್ಲರೂ ತಿಂದು ತೃಪ್ತರಾದರು. ಆಗ ಅವರು ಹನ್ನೆರಡು ಪುಟ್ಟಿಗಳಲ್ಲಿ ರೊಟ್ಟಿ ಮತ್ತು ವಿಾನಿನ ತುಂಡುಗಳನ್ನು ತುಂಬಿದರು. ಆ ರೊಟ್ಟಿಗಳನ್ನು ತಿಂದವರು ಸುಮಾರು ಐದು ಸಾವಿರ ಗಂಡಸರು. ಆತನು ಜನರನ್ನು ಕಳುಹಿಸುವಷ್ಟರಲ್ಲಿ ತನ್ನ ಶಿಷ್ಯರು ಕೂಡಲೆ ದೋಣಿಯನ್ನು ಹತ್ತಿ ಮುಂದಾಗಿ ಆಚೇ ಕಡೆಯ ಬೇತ್ಸಾಯಿದಕ್ಕೆ ಹೋಗುವಂತೆ ಅವರನ್ನು ಬಲವಂತ ಮಾಡಿದನು.
- Zechariah 1:10 ಜೆಕರ್ಯ 1:10ಆಗ ಗಂಧದ ಗಿಡಗಳ ನಡುವೆ ನಿಂತ ಮನುಷ್ಯನು ಉತ್ತರಕೊಟ್ಟು ಹೇಳಿದ್ದೇನಂದರೆ--ಇವರು ಭೂಮಿ ಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ನಡೆದಾಡುವದಕ್ಕೆ ಕರ್ತನು ಕಳುಹಿಸಿದವರು ಅಂದನು.
Original words (Greek)
- And · G2532καί kaí
- apostles · G652ἀπόστολος apóstolos
- returned · G5290ὑποστρέφω hypostréphō
- told · G1334διηγέομαι diēgéomai
- him · G846αὐτός autós
- that · G3745ὅσος hósos
- done · G4160ποιέω poiéō
- And · G2532καί kaí
- took · G3880παραλαμβάνω paralambánō
- them · G846αὐτός autós
- aside · G5298ὑποχωρέω hypochōréō
- privately · G2398ἴδιος ídios
- into · G1519εἰς eis
- a · G5117τόπος tópos
- desert · G2048ἔρημος érēmos
- place · G5117τόπος tópos
- city · G4172πόλις pólis
- called · G2564καλέω kaléō
- Bethsaida · G966Βηθσαϊδά Bēthsaïdá