Matthew · chapter 14 · verse 13
Matthew 14:13 in Kannada
ಯೇಸು ಆ ವಿಷಯವನ್ನು ಕೇಳಿದಾಗ ದೋಣಿ ಯನ್ನು ಹತ್ತಿ ಅಲ್ಲಿಂದ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಹೊರಟುಹೋದನು. ಇದನ್ನು ಕೇಳಿ ಜನರು ಪಟ್ಟಣ ಗಳಿಂದ ಕಾಲು ನಡಿಗೆಯಾಗಿ ಆತನನ್ನು ಹಿಂಬಾಲಿ ಸಿದರು.
Yesu aa vishayavannu kelidaaga doni yannu hatti allinda vingadavaagi aranya sthalakke horatuhodanu. Idannu keli janaru pattana galinda kaalu nadigeyaagi aatanannu himbaali sidaru.
Matthew 14:13 in English
- King James Version (KJV)
- When Jesus heard [of it], he departed thence by ship into a desert place apart: and when the people had heard [thereof], they followed him on foot out of the cities.
- World English Bible (WEB)
- Now when Jesus heard this, he withdrew from there in a boat to a deserted place apart. When the multitudes heard it, they followed him on foot from the cities.
- American Standard Version (ASV)
- Now when Jesus heard [it], he withdrew from thence in a boat, to a desert place apart: and when the multitudes heard [thereof], they followed him on foot from the cities.
- Bible in Basic English (BBE)
- Now when it came to the ears of Jesus, he went away from there in a boat, to a waste place by himself: and the people hearing of it, went after him on foot from the towns.
- Darby Translation (DBY)
- And Jesus, having heard it, went away thence by ship to a desert place apart. And the crowds having heard [of it] followed him on foot from the cities.
- Webster's Bible (WBS)
- When Jesus heard [of it] , he departed thence in a boat, into a desert place apart: and when the people had heard [of it] , they followed him on foot out of the cities.
- Young's Literal Translation (YLT)
- and Jesus having heard, withdrew thence in a boat to a desolate place by himself, and the multitudes having heard did follow him on land from the cities.
Read in context
- 11ಇದಲ್ಲದೆ ಅವನ ತಲೆಯನ್ನು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತಂದಳು.
- 12ಆಗ ಅವನ ಶಿಷ್ಯರು ಬಂದು ದೇಹವನ್ನೆತ್ತಿಕೊಂಡು ಹೂಣಿಟ್ಟು ಹೋಗಿ ಯೇಸುವಿಗೆ ತಿಳಿಸಿದರು.
- 13ಯೇಸು ಆ ವಿಷಯವನ್ನು ಕೇಳಿದಾಗ ದೋಣಿ ಯನ್ನು ಹತ್ತಿ ಅಲ್ಲಿಂದ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಹೊರಟುಹೋದನು. ಇದನ್ನು ಕೇಳಿ ಜನರು ಪಟ್ಟಣ ಗಳಿಂದ ಕಾಲು ನಡಿಗೆಯಾಗಿ ಆತನನ್ನು ಹಿಂಬಾಲಿ ಸಿದರು.
- 14ಆಗ ಯೇಸು ಹೊರಟುಹೋಗಿ ಜನರ ಮಹಾಸಮೂಹವನ್ನು ಕಂಡು ಅವರ ಮೇಲೆ ಕನಿಕರ ಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು.
- 15ಸಾಯಂಕಾಲವಾದಾಗ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅಡವಿಯ ಸ್ಥಳ, ಸಮಯವು ದಾಟಿತು; ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು ಅಂದರು.
Cross references
- Luke 9:10–17 ಲೂಕನು 9:10–17ತರುವಾಯ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದವುಗಳನ್ನೆಲ್ಲಾ ಆತನಿಗೆ ತಿಳಿಸಿದರು. ಆಗ ಆತನು ಬೇತ್ಸಾಯಿದ ಎಂದು ಕರೆಯಲ್ಪಟ್ಟ ಪಟ್ಟಣಕ್ಕೆ ಸಂಬಂಧಿಸಿದ ಅರಣ್ಯಸ್ಥಳಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದನು. ಆಗ ಜನರು ಅದನ್ನು ತಿಳಿದು ಆತನನ್ನು ಹಿಂಬಾಲಿಸಲು ಆತನು ಅವರನ್ನು ಅಂಗೀಕರಿಸಿ ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ ಸ್ವಸ್ಥತೆ ಬೇಕಾಗಿದ್ದವರನ್ನು ಸ್ವಸ್ಥ ಮಾಡಿದನು. ಸಂಜೆಯಾಗು ತ್ತಿದ್ದಾಗ ಹನ್ನೆರಡು ಮಂದಿ ಬಂದು ಆತನಿಗೆ--ಈ ಜನಸಮೂಹವು ಸುತ್ತಲಿರುವ ಊರುಗಳಿಗೂ ಸೀಮೆಗಳಿಗೂ ಹೋಗಿ ಇಳುಕೊಂಡು ಆಹಾರವನ್ನು ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡು; ಯಾಕಂದರೆ ನಾವು ಇಲ್ಲಿ ಅರಣ್ಯ ಸ್ಥಳದಲ್ಲಿ ಇದ್ದೇವಲ್ಲಾ ಅಂದರು. ಆದರೆ ಆತನು ಅವರಿಗೆ--ನೀವೇ ಅವ ರಿಗೆ ಊಟಕ್ಕೆ ಕೊಡಿರಿ ಅಂದನು. ಅದಕ್ಕೆ ಅವರು--ನಾವು ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡುಕೊಳ್ಳದ ಹೊರತು ನಮ್ಮಲ್ಲಿ ಐದು ರೊಟ್ಟಿ ಎರಡು ವಿಾನುಗಳಿಗಿಂತ ಹೆಚ್ಚೇನೂ ಇಲ್ಲ ಅಂದರು. ಯಾಕಂದರೆ ಅವರು ಹೆಚ್ಚು ಕಡಿಮೆ ಗಂಡಸರೇ ಐದು ಸಾವಿರ ಇದ್ದರು. ಆಗ ಆತನು ತನ್ನ ಶಿಷ್ಯ ರಿಗೆ--ಪಂಕ್ತಿಗಳಲ್ಲಿ ಐವತ್ತರಂತೆ ಅವರನ್ನು ಕೂಡ್ರಿಸಿರಿ ಅಂದನು. ಅವರು ಅದರಂತೆಯೇ ಮಾಡಿ ಅವರೆ ಲ್ಲರನ್ನೂ ಕೂಡ್ರಿಸಿದರು. ತರುವಾಯ ಆತನು ಐದು ರೊಟ್ಟಿಗಳನ್ನೂ ಎರಡು ವಿಾನುಗಳನ್ನೂ ತಕ್ಕೊಂಡು ಪರಲೋಕದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ ಮುರಿದು ಜನಸಮೂಹಕ್ಕೆ ಹಂಚುವಂತೆ ಶಿಷ್ಯರಿಗೆ ಕೊಟ್ಟನು. ಆಗ ಅವರೆಲ್ಲರೂ ತಿಂದು ತೃಪ್ತರಾದರು; ಉಳಿದ ತುಂಡುಗಳನ್ನು ಕೂಡಿಸಲು ಅವರಿಗೆ ಹನ್ನೆರಡು ಪುಟ್ಟಿಗಳು ಉಳಿದವು.
- Matthew 14:1–2 ಮತ್ತಾಯನು 14:1–2ಆ ಕಾಲದಲ್ಲಿ ಚತುರಾಧಿಪತಿಯಾದ ಹೆರೋದನು ಯೇಸುವಿನ ಕೀರ್ತಿಯನ್ನು ಕೇಳಿ ತನ್ನ ಸೇವಕರಿಗೆ -- ಇವನು ಬಾಪ್ತಿಸ್ಮ ಮಾಡಿಸುವ ಯೋಹಾನನೇ; ಈಗ ಇವನು ಸತ್ತವರೊಳಗಿಂದ ಎದ್ದಿದ್ದಾನೆ; ಆದದರಿಂದಲೇ ಮಹತ್ಕಾರ್ಯಗಳು ಇವನಲ್ಲಿ ತೋರಿಬರುತ್ತವೆ ಎಂದು ಹೇಳಿದನು.
- Mark 6:30–44 ಮಾರ್ಕನು 6:30–44ಅಪೊಸ್ತಲರು ಯೇಸುವಿನ ಬಳಿಗೆ ಒಟ್ಟಾಗಿ ಕೂಡಿಬಂದು ತಾವು ಮಾಡಿದ್ದ ಮತ್ತು ಬೋಧಿಸಿದ್ದೆಲ್ಲ ವುಗಳನ್ನು ಆತನಿಗೆ ತಿಳಿಸಿದರು. ಆಗ ಆತನು ಅವರಿಗೆ--ನೀವು ಮಾತ್ರ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಬಂದು ಸ್ವಲ್ಪ ಸಮಯ ವಿಶ್ರಮಿಸಿಕೊಳ್ಳಿರಿ ಅಂದನು. ಯಾಕಂದರೆ ಅಲ್ಲಿ ಅನೇಕರು ಬರುತ್ತಾ ಹೋಗುತ್ತಾ ಇದ್ದದರಿಂದ ಊಟಮಾಡುವದಕ್ಕೂ ಅವರಿಗೆ ಸಮಯವಿರಲಿಲ್ಲ. ಆಗ ಅವರು ದೋಣಿ ಯಲ್ಲಿ ಏಕಾಂತವಾಗಿ ಅರಣ್ಯಸ್ಥಳಕ್ಕೆ ಹೊರಟು ಹೋದರು. ಅವರು ಹೊರಡುವದನ್ನು ಜನರು ನೋಡಿ ಅನೇಕರು ಆತನ ಗುರುತು ಹಿಡಿದು ಎಲ್ಲಾ ಪಟ್ಟಣಗಳಿಂದ ಕಾಲುನಡಿಗೆಯಾಗಿ ಅಲ್ಲಿಗೆ ಓಡುತ್ತಾ ಅವರಿಗಿಂತಲೂ ಮುಂದಾಗಿ ಆತನ ಬಳಿಗೆ ಸೇರಿಬಂದರು. ಯೇಸು ಹೊರಗೆ ಬಂದು ಬಹು ಜನರನ್ನು ನೋಡಿ ಅವರ ಮೇಲೆ ಕನಿಕರ ಪಟ್ಟನು; ಅವರು ಕುರುಬನಿಲ್ಲದ ಕುರಿಗಳಂತೆ ಇದ್ದರು; ಆತನು ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದನು. ಆಗಲೇ ಹಗಲು ಬಹಳ ಮಟ್ಟಿಗೆ ಕಳೆದದ್ದರಿಂದ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅರಣ್ಯ ಸ್ಥಳ ಮತ್ತು ಈಗ ಸಮಯವು ಬಹಳವಾಗಿ ದಾಟಿದೆ; ಇವರು ಸುತ್ತ ಲಿನ ಸೀಮೆಗೂ ಹಳ್ಳಿಗಳಿಗೂ ಹೋಗಿ ತಮಗೋಸ್ಕರ ರೊಟ್ಟಿಯನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿ ಬಿಡು; ಯಾಕಂದರೆ ಅವರಿಗೆ ತಿನ್ನುವದಕ್ಕೆ ಏನೂ ಇಲ್ಲ ಅಂದರು. ಆತನು ಪ್ರತ್ಯುತ್ತರವಾಗಿ ಅವ ರಿಗೆ--ನೀವೇ ಅವರಿಗೆ ತಿನ್ನುವದಕ್ಕೆ ಕೊಡಿರಿ ಅಂದನು. ಅದಕ್ಕೆ ಅವರು ಆತನಿಗೆ--ನಾವು ಹೋಗಿ ಎರಡು ನೂರು ಹಣದ (ಪೆನ್ನಿ: ಇಂಗ್ಲೀಷ್ಹಣ) ರೊಟಿಯನ್ನು ಕೊಂಡುಕೊಂಡು ಅವರಿಗೆ ತಿನ್ನುವದಕ್ಕೆ ಕೊಡೋಣವೋ ಅಂದರು. ಆತನು ಅವರಿಗೆ--ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿರಿ ಅನ್ನಲು ಅವರು ತಿಳಿದುಕೊಂಡು--ಐದು ರೊಟ್ಟಿ ಮತ್ತು ಎರಡು ವಿಾನುಗಳು ಇವೆ ಎಂದು ಹೇಳಿದರು. ಆಗ ಎಲ್ಲರೂ ಹಸುರು ಹುಲ್ಲಿನ ಮೇಲೆ ಪಂಕ್ತಿ ಪಂಕ್ತಿಗಳಾಗಿ ಕೂತುಕೊಳ್ಳುವಂತೆ ಆತನು ಅವರಿಗೆ ಅಪ್ಪಣೆಕೊಟ್ಟನು. ಅವರು ನೂರರಂತೆ ಐವತ್ತರಂತೆ ಸಾಲುಸಾಲಾಗಿ ಕೂತುಕೊಂಡರು. ಆಗ ಆತನು ಐದು ರೊಟ್ಟಿ ಎರಡು ವಿಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಆ ರೊಟ್ಟಿಗಳನ್ನು ಮುರಿದು, ಅವರಿಗೆ ಹಂಚುವದಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು; ಮತ್ತು ಎರಡು ವಿಾನುಗಳನ್ನು ಆತನು ಅವರೆಲ್ಲರಿಗೂ ಹಂಚಿದನು. ಅವರೆಲ್ಲರೂ ತಿಂದು ತೃಪ್ತರಾದರು. ಆಗ ಅವರು ಹನ್ನೆರಡು ಪುಟ್ಟಿಗಳಲ್ಲಿ ರೊಟ್ಟಿ ಮತ್ತು ವಿಾನಿನ ತುಂಡುಗಳನ್ನು ತುಂಬಿದರು. ಆ ರೊಟ್ಟಿಗಳನ್ನು ತಿಂದವರು ಸುಮಾರು ಐದು ಸಾವಿರ ಗಂಡಸರು.
- Matthew 12:15 ಮತ್ತಾಯನು 12:15ಆದರೆ ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು; ಮತ್ತು ದೊಡ್ಡ ಸಮೂಹಗಳು ಆತನನ್ನು ಹಿಂಬಾಲಿಸಿದರು. ಆಗ ಆತನು ಅವರೆಲ್ಲರನ್ನು ವಾಸಿ ಮಾಡಿದನು.
- John 6:1–15 ಯೋಹಾನನು 6:1–15ಇವುಗಳಾದ ಮೇಲೆ ಯೇಸು ತಿಬೇರಿ ಯವೆಂಬ ಗಲಿಲಾಯ ಸಮುದ್ರದ ಆಚೆಗೆ ಹೋದನು. ಆಗ ಆತನು ರೋಗಿಗಳಲ್ಲಿ ನಡಿಸಿದ ಆತನ ಅದ್ಭುತ ಕಾರ್ಯಗಳನ್ನು ನೋಡಿದ ಜನರ ದೊಡ್ಡ ಸಮೂಹವು ಆತನನ್ನು ಹಿಂಬಾಲಿಸುತ್ತಿತ್ತು. ಯೇಸು ಬೆಟ್ಟವನ್ನೇರಿ ಅಲ್ಲಿ ತನ್ನ ಶಿಷ್ಯರೊಂದಿಗೆ ಕೂತು ಕೊಂಡನು. ಆಗ ಯೆಹೂದ್ಯರ ಪಸ್ಕ ಹಬ್ಬವು ಸವಿಾಪವಾಗಿತ್ತು. ಜನರ ದೊಡ್ಡ ಗುಂಪು ತನ್ನ ಕಡೆಗೆ ಬರುವದನ್ನು ಯೇಸು ಕಣ್ಣೆತ್ತಿ ನೋಡಿ ಫಿಲಿಪ್ಪ ನಿಗೆ--ಇವರು ಊಟ ಮಾಡುವಂತೆ ನಾವು ರೊಟ್ಟಿ ಯನ್ನು ಎಲ್ಲಿಂದ ಕೊಂಡು ತರೋಣ ಅಂದನು. ಅವ ನನ್ನು ಪರೀಕ್ಷಿಸುವದಕ್ಕಾಗಿ ಆತನು ಇದನ್ನು ಹೇಳಿದನು; ಯಾಕಂದರೆ ತಾನು ಮಾಡಬೇಕೆಂದಿದ್ದದ್ದು ಆತನು ತಾನೇ ತಿಳಿದವನಾಗಿದ್ದನು. ಫಿಲಿಪ್ಪನು ಪ್ರತ್ಯುತ್ತರ ವಾಗಿ ಆತನಿಗೆ--ಇವರಲ್ಲಿ ಪ್ರತಿಯೊಬ್ಬನು ಸ್ವಲ್ಪ ಸ್ವಲ್ಪ ತಿಂದರೂ ಇನ್ನೂರು ಹಣಗಳಷ್ಟು ರೊಟ್ಟಿಗಳು ಅವ ರಿಗೆ ಸಾಲುವದಿಲ್ಲ ಅಂದನು. ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ಸಹೋದರನಾದ ಅಂದ್ರೆಯನು ಆತನಿಗೆ-- ಇಲ್ಲಿ ಒಬ್ಬ ಹುಡುಗನಿ ದ್ದಾನೆ; ಅವನಲ್ಲಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಸಣ್ಣ ವಿಾನುಗಳೂ ಅವೆ; ಆದರೆ ಇಷ್ಟೊಂದು ಜನರಿಗೆ ಅವು ಯಾತಕ್ಕಾದಾವು ಅಂದನು. ಆಗ ಯೇಸು--ಜನರನ್ನು ಕೂಡ್ರಿಸಿರಿ ಅಂದನು. ಆ ಸ್ಥಳ ದಲ್ಲಿ ಬಹಳ ಹುಲ್ಲು ಇರಲಾಗಿ ಜನರೆಲ್ಲರು ಕುಳಿತು ಕೊಂಡರು ಅವರಲ್ಲಿ ಸುಮಾರು ಐದು ಸಾವಿರ ಪುರುಷರೇ ಇದ್ದರು. ತರುವಾಯ ಯೇಸು ರೊಟ್ಟಿ ಗಳನ್ನು ತೆಗೆದುಕೊಂಡು ಸ್ತೋತ್ರಮಾಡಿ ಶಿಷ್ಯರಿಗೆ ಹಂಚಿದನು; ಅವರು ಕುಳಿತುಕೊಂಡವರಿಗೆ ಹಂಚಿ ದರು; ಅದೇ ರೀತಿಯಲ್ಲಿ ವಿಾನುಗಳನ್ನು ಅವರಿಗೆ ಬೇಕಾದಷ್ಟು ಹಂಚಿದರು. ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ--ಏನೂ ನಷ್ಟವಾಗ ದಂತೆ ಮಿಕ್ಕಿದ ತುಂಡುಗಳನ್ನು ಕೂಡಿಸಿರಿ ಅಂದನು. ಆದದರಿಂದ ಅವರು ಐದು ಜವೆಗೋದಿಯ ರೊಟ್ಟಿಗಳಲ್ಲಿ ತಿಂದವರಿಂದ ಮಿಕ್ಕಿದ ತುಂಡುಗಳನ್ನು ಕೂಡಿಸಿ ಹನ್ನೆರಡು ಪುಟ್ಟಿಗಳಲ್ಲಿ ತುಂಬಿದರು. ಬಳಿಕ ಆ ಜನರು ಯೇಸು ಮಾಡಿದ ಅದ್ಭುತ ಕಾರ್ಯವನ್ನು ನೋಡಿ--ನಿಜವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಆ ಪ್ರವಾದಿಯು ಈತನೇ ಅಂದರು. ಆದದರಿಂದ ಅವರು ಬಂದು ತನ್ನನ್ನು ಒತ್ತಾಯ ದಿಂದ ತೆಗೆದುಕೊಂಡು ಹೋಗಿ ಅರಸನನ್ನಾಗಿ ಮಾಡ ಬೇಕೆಂದಿದ್ದಾರೆಂದು ಯೇಸು ತಿಳಿದು ಅಲ್ಲಿಂದ ತಿರಿಗಿ ತಾನೊಬ್ಬನೇ ಒಂಟಿಗನಾಗಿ ಒಂದು ಬೆಟ್ಟಕ್ಕೆ ಹೊರಟು ಹೋದನು.
- Matthew 10:23 ಮತ್ತಾಯನು 10:23ಇದಲ್ಲದೆ ಈ ಪಟ್ಟಣದಲ್ಲಿ ಅವರು ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಪಟ್ಟಣಕ್ಕೆ ಓಡಿಹೋಗಿರಿ; ಯಾಕಂದರೆ-- ಮನುಷ್ಯ ಕುಮಾರನು ಬರುವದರೊಳಗಾಗಿ ಇಸ್ರಾಯೇಲಿನ ಪಟ್ಟಣಗಳ ಸಂಚಾರವನ್ನು ನೀವು ಮುಗಿಸುವದಕ್ಕಾಗುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- Matthew 15:32–38 ಮತ್ತಾಯನು 15:32–38ತರುವಾಯ ಯೇಸು ತನ್ನ ಶಿಷ್ಯರನ್ನು ಕರೆದು-- ನಾನು ಈ ಜನಸಮೂಹವನ್ನು ಕನಿಕರಿಸುತ್ತೇನೆ; ಯಾಕ ಂದರೆ ಈಗ ಬಿಟ್ಟೂಬಿಡದೆ ಮೂರು ದಿನಗಳಿಂದ ಅವರು ನನ್ನೊಂದಿಗಿದ್ದಾರೆ; ಮತ್ತು ಅವರಿಗೆ ತಿನ್ನುವದಕ್ಕೆ ಏನೂ ಇಲ್ಲ; ದಾರಿಯಲ್ಲಿ ಅವರು ಬಳಲಿಹೋದಾರೆಂದು ಅವ ರನ್ನು ಉಪವಾಸವಾಗಿ ಕಳುಹಿಸು ಅದಕ್ಕೆ ಆತನ ಶಿಷ್ಯರು ಆತನಿಗೆ--ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ಅರಣ್ಯದಲ್ಲಿ ನಮಗೆ ಎಲ್ಲಿಂದ ರೊಟ್ಟಿಯು ಸಿಕ್ಕೀತು ಅಂದರು. ಆಗ ಯೇಸು ಅವರಿಗೆ--ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ ಎಂದು ಕೇಳಿದನು. ಅವರು--ಏಳು ರೊಟ್ಟಿಗಳು ಮತ್ತು ಕೆಲವು ಚಿಕ್ಕ ಮಾನುಗಳಿವೆ ಅಂದರು. ಆಗ ಜನಸಮೂಹವು ನೆಲದ ಮೇಲೆ ಕೂತುಕೊಳ್ಳ ಬೇಕೆಂದು ಆತನು ಅಪ್ಪಣೆಕೊಟ್ಟನು. ಆತನು ಆ ಏಳು ರೊಟ್ಟಿಗಳನ್ನು ಮತ್ತು ಮಾನುಗಳನ್ನು ತಕ್ಕೊಂಡು ಸ್ತೋತ್ರಮಾಡಿ ಅವುಗಳನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು. ಅವರೆಲ್ಲರೂ ಊಟಮಾಡಿ ತೃಪ್ತರಾದರು; ಮತ್ತು ಅವರು ಮಿಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಪುಟ್ಟಿಗಳು ತುಂಬಿದವು. ಊಟಮಾಡಿದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ನಾಲ್ಕು ಸಾವಿರ ಗಂಡಸರು.ತರುವಾಯ ಆತನು ಜನಸಮೂಹವನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗ್ದಲ ತೀರಕ್ಕೆ ಬಂದನು.
Original words (Greek)
- When · G2532καί kaí
- Jesus · G2424Ἰησοῦς Iēsoûs
- heard · G191ἀκούω akoúō
- departed · G402ἀναχωρέω anachōréō
- thence · G1564ἐκεῖθεν ekeîthen
- by · G1722ἐν en
- ship · G4143πλοῖον ploîon
- into · G1519εἰς eis
- desert · G2048ἔρημος érēmos
- place · G5117τόπος tópos
- apart · G2398ἴδιος ídios
- when · G2532καί kaí
- people · G3793ὄχλος óchlos
- heard · G191ἀκούω akoúō
- followed · G190ἀκολουθέω akolouthéō
- him · G846αὐτός autós
- foot · G3979πεζῇ pezēi
- of · G575ἀπό apó
- cities · G4172πόλις pólis