Malachi · chapter 1 · verse 9
Malachi 1:9 in Kannada
ಹಾಗಾದರೆ ಈಗ ದೇವರು ನಮ್ಮನ್ನು ಕನಿಕರಿಸುವ ಹಾಗೆ ಆತನನ್ನು ಬೇಡಿಕೊಳ್ಳಿರಿ ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು --ಇದು ನಿಮ್ಮಿಂದಲೇ ಆಯಿತು; ನಿಮಗೆ ಆತನು ಮುಖದಾಕ್ಷಿಣ್ಯ ತೋರಿಸುವನೋ?
Haagaadare eega devaru nammannu kanikarisuva haage aatanannu bedikolliri endu heluttaane. Sainyagala kartanu --idu nimmindale aayitu; nimage aatanu mukhadaakshinya torisuvano?
Malachi 1:9 in English
- King James Version (KJV)
- And now, I pray you, beseech God that he will be gracious unto us: this hath been by your means: will he regard your persons? saith the LORD of hosts.
- World English Bible (WEB)
- “Now, please entreat the favor of God, that he may be gracious to us. With this, will he accept any of you?” says the LORD of Armies.
- American Standard Version (ASV)
- And now, I pray you, entreat the favor of God, that he may be gracious unto us: this hath been by your means: will he accept any of your persons? saith Jehovah of hosts.
- Bible in Basic English (BBE)
- And now, make request for the grace of God so that he may have mercy on us: this has been your doing: will he give his approval to any of you? says the Lord of armies.
- Darby Translation (DBY)
- And now, I pray you, beseech God that he will be gracious unto us. This hath been of your hand: will he accept any of your persons? saith Jehovah of hosts.
- Webster's Bible (WBS)
- And now, I pray you, beseech God that he will be gracious to us: this hath been by your means: will he regard your person? saith the LORD of hosts.
- Young's Literal Translation (YLT)
- And now, appease, I pray thee, the face of God, And He doth favour us; From your own hand hath this been, Doth He accept of you appearances? Said Jehovah of Hosts.
Read in context
- 7ನನ್ನ ಬಲಿಪೀಠದ ಮೇಲೆ ಅಪವಿತ್ರವಾದ ರೊಟ್ಟಿಯನ್ನು ಅರ್ಪಿಸಿ--ಯಾವದರಲ್ಲಿ ನಿನ್ನನ್ನು ನಾವು ಅಪವಿತ್ರ ಮಾಡಿದ್ದೇವೆಂದು ಹೇಳುತ್ತೀರಿ. ಕರ್ತನ ಮೇಜು ಹೀನವಾದದ್ದೆಂದು ನೀವು ಹೇಳುವದರಿಂದಲೇ.
- 8ಇದ ಲ್ಲದೆ ನೀವು ಕುರುಡಾದದ್ದನ್ನು ಬಲಿಗಾಗಿ ಅರ್ಪಿಸಿ ದರೆ ಅದು ಕೆಟ್ಟದ್ದಲ್ಲವೋ? ಕುಂಟಾದದ್ದನ್ನೂ ರೋಗ ವುಳ್ಳದ್ದನ್ನೂ ಅರ್ಪಿಸಿದರೆ ಅದು ಕೆಟ್ಟದ್ದಲ್ಲವೋ? ಸೈನ್ಯ ಗಳ ಕರ್ತನು--ಅದನ್ನು ನಿನ್ನ ದೊರೆಗೆ ಅರ್ಪಿಸು, ಅವನು ನಿನಗೆ ಮೆಚ್ಚುವನೋ? ಇಲ್ಲವೆ ನಿನಗೆ ಮುಖ ದಾಕ್ಷಿಣ್ಯ ತೋರಿಸುವನೋ?
- 9ಹಾಗಾದರೆ ಈಗ ದೇವರು ನಮ್ಮನ್ನು ಕನಿಕರಿಸುವ ಹಾಗೆ ಆತನನ್ನು ಬೇಡಿಕೊಳ್ಳಿರಿ ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು --ಇದು ನಿಮ್ಮಿಂದಲೇ ಆಯಿತು; ನಿಮಗೆ ಆತನು ಮುಖದಾಕ್ಷಿಣ್ಯ ತೋರಿಸುವನೋ?
- 10ಉಚಿತವಾಗಿ ಬಾಗಲು ಗಳನ್ನಾದರೂ ಮುಚ್ಚವವನೂ ಇಲ್ಲವೆ ನನ್ನ ಬಲಿಪೀಠದಲ್ಲಿ ಉಚಿತವಾಗಿ ಬೆಂಕಿ ಹಚ್ಚುವವನೂ ನಿಮ್ಮಲ್ಲಿ ಯಾರು ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು--ನಿಮ್ಮಲ್ಲಿ ನನಗೆ ಇಷ್ಟವಿಲ್ಲ ಮತ್ತು ನಿಮ್ಮ ಕೈಯಿಂದ ನಾನು ಕಾಣಿಕೆಯನ್ನು ಅಂಗೀಕರಿಸುವದಿಲ್ಲ.
- 11ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
Cross references
- 1 Peter 1:17 1 ಪೇತ್ರನು 1:17ಪ್ರತಿಯೊಬ್ಬನ ಕೆಲಸವನ್ನು ನೋಡಿ ಪಕ್ಷಪಾತ ವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆ ಯೆಂದು ಬೇಡಿಕೊಳ್ಳುವವರಾಗಿರಲಾಗಿ ನಿಮ್ಮ ಪ್ರವಾಸ ಕಾಲವನ್ನು ಭಯದಿಂದ ಕಳೆಯಿರಿ.
- John 9:31 ಯೋಹಾನನು 9:31ದೇವರು ಪಾಪಿಗಳ ಪ್ರಾರ್ಥನೆ ಯನ್ನು ಕೇಳುವದಿಲ್ಲ; ಆದರೆ ಯಾವನಾದರೂ ದೇವ ರನ್ನು ಆರಾಧಿಸುವವನಾಗಿದ್ದು ಆತನ ಚಿತ್ತದಂತೆ ನಡೆದರೆ ಅವನ ಪ್ರಾರ್ಥನೆಯನ್ನು ಆತನು ಕೇಳು ತ್ತಾನೆಂದು ನಾವು ಬಲ್ಲೆವು.
- Exodus 32:11 ವಿಮೋಚನಕಾಂಡ 32:11ಅದಕ್ಕೆ ಮೋಶೆಯು ತನ್ನ ದೇವರಾದ ಕರ್ತನ ಸನ್ನಿಧಿಯಲ್ಲಿ ಬೇಡಿಕೊಂಡು ಹೇಳಿದ್ದೇನಂದರೆ--ಕರ್ತನೇ, ನೀನು ಮಹಾಶಕ್ತಿಯಿಂದಲೂ ಬಲವುಳ್ಳ ಕೈಯಿಂದಲೂ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡಿದ ನಿನ್ನ ಜನರ ಮೇಲೆ ನಿನ್ನ ಕೋಪವು ಯಾಕೆ ಉರಿಯುವದು?
- Jeremiah 27:18 ಯೆರೆಮೀಯ 27:18ಆದರೆ ಅವರು ಪ್ರವಾದಿಗಳಾಗಿದ್ದರೆ, ದೇವರ ವಾಕ್ಯವು ಅವರ ಸಂಗಡ ಇದ್ದರೆ ಕರ್ತನ ಆಲಯದಲ್ಲಿಯೂ ಯೆಹೂ ದದ ಅರಸನ ಮನೆಯಲ್ಲಿಯೂ ಯೆರೂಸಲೇಮಿ ನಲ್ಲಿಯೂ ಉಳಿದ ಪಾತ್ರೆಗಳು ಬಾಬೆಲಿಗೆ ಹೋಗದ ಹಾಗೆ ಅವರು ಸೈನ್ಯಗಳ ಕರ್ತನಿಗೆ ವಿಜ್ಞಾಪನೆ ಮಾಡಲಿ.
- Hebrews 7:26–27 ಇಬ್ರಿಯರಿಗೆ 7:26–27ಇಂಥವನೇ ನಮಗೆ ಬೇಕಾದ ಮಹಾ ಯಾಜಕನು. ಈತನು ಪರಿಶುದ್ಧನೂ ಕೇಡು ಮಾಡ ದವನೂ ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವಾತನು ಆಕಾಶಗಳಿಗಿಂತ ಉನ್ನತವಾಗಿ ಮಾಡಲ್ಪಟ್ಟಾತನೂ ಆಗಿದ್ದಾನೆ. ಮೊದಲು ತನ್ನ ಸ್ವಂತ ಪಾಪಪರಿಹಾರಕ್ಕಾಗಿ ಆಮೇಲೆ ಜನರ ಪಾಪ ಪರಿಹಾರಕ್ಕಾಗಿ ಯಜ್ಞಾರ್ಪಣೆ ಮಾಡುವ ಮಹಾ ಯಾಜಕರಂತೆ ಈತನು ಪ್ರತಿನಿತ್ಯವೂ ಸಮರ್ಪಿಸ ಬೇಕಾದ ಅವಶ್ಯವಿಲ್ಲ. ಯಾಕಂದರೆ ಈತನು ತನ್ನನ್ನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.ನ್ಯಾಯಪ್ರಮಾಣವು ನಿರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ಮಾಡುತ್ತದೆ; ಆದರೆ ನ್ಯಾಯಪ್ರಮಾಣದ ತರುವಾಯ ಆಣೆಯೊಡನೆ ಉಂಟಾದ ವಾಕ್ಯವು ಸದಾಕಾಲಕ್ಕೂ ಪ್ರತಿಷ್ಠೆ ಮಾಡಿಕೊಂಡ ಮಗನನ್ನೇ ಮಹಾಯಾಜಕ ನನ್ನಾಗಿ ಮಾಡುತ್ತದೆ.
- Romans 2:11 ರೋಮಾಪುರದವರಿಗೆ 2:11ದೇವರಲ್ಲಿ ಪಕ್ಷಪಾತವಿಲ್ಲ.
- Jeremiah 26:19 ಯೆರೆಮೀಯ 26:19ಅವನನ್ನು ಯೆಹೂದ ಅರಸನಾದ ಹಿಜ್ಕೀಯನೂ ಸಮಸ್ತ ಯೆಹೂದವೂ ಕೊಂದುಹಾಕಿದರೋ? ಅವನು ಕರ್ತನಿಗೆ ಭಯಪಟ್ಟು ಕರ್ತನ ಸಮ್ಮುಖದಲ್ಲಿ ಮೊರೆ ಯಿಟ್ಟನಲ್ಲವೋ? ಆ ಮೇಲೆ ಕರ್ತನು ಅವರಿಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪಪಡಲಿಲ್ಲವೋ? ಆದರೆ ನಾವು ದೊಡ್ಡ ಕೇಡನ್ನು ನಮ್ಮ ಪ್ರಾಣಗಳ ಮೇಲೆ ತಂದುಕೊಳ್ಳಬಹುದು.
- 2 Chronicles 30:27 2 ಪೂರ್ವಕಾಲವೃತ್ತಾಂತ 30:27ಆಗ ಲೇವಿಯರಾದ ಯಾಜಕರೂ ಎದ್ದು ಜನರನ್ನು ಆಶೀರ್ವದಿಸಿದರು. ಅವರ ಶಬ್ದವು ಕೇಳಲ್ಪಟ್ಟಿತು. ಅವರ ಪ್ರಾರ್ಥನೆಯು ಆತನ ಪರಿಶುದ್ಧವಾದ ನಿವಾಸಸ್ಥಾನಕ್ಕೆ ಅಂದರೆ ಪರಲೋಕಕ್ಕೆ ಮುಟ್ಟಿತು.
- Acts 19:15–16 ಅಪೊಸ್ತಲರ ಕೃತ್ಯಗಳು 19:15–16ಆದರೆ ದುರಾತ್ಮವು ಪ್ರತ್ಯುತ್ತರವಾಗಿ--ನಾನು ಯೇಸುವನ್ನು ಬಲ್ಲೆನು, ಪೌಲನನ್ನೂ ಬಲ್ಲೆನು; ನೀವಾದರೆ ಯಾರು ಎಂದು ಕೇಳಿತು. ದುರಾತ್ಮಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿಬಿದ್ದು ಅವರನ್ನು ಸೋಲಿಸಿ ಬಲಾತ್ಕರಿ ಸಿದ್ದರಿಂದ ಅವರು ಬೆತ್ತಲೆಯಾಗಿ ಗಾಯಗೊಂಡು ಆ ಮನೆಯೊಳಗಿಂದ ಓಡಿ ಹೋದರು.
- Lamentations 2:19 ಪ್ರಲಾಪಗಳು 2:19ಎದ್ದೇಳು, ರಾತ್ರಿಯಲ್ಲಿ ಕೂಗು; ನಿನ್ನ ಹೃದಯವನ್ನು ಕರ್ತನ ಸಮ್ಮುಖದಲ್ಲಿ ಆರಂಭದ ಜಾವಗಳಲ್ಲಿ (ನೀರಿನಂತೆ) ಹೊಯ್ಯಿ; ನಿನ್ನ ಕೈಗಳನ್ನು ಆತನ ಕಡೆಗೆ ಎತ್ತು, ಯಾಕಂದರೆ ನಿನ್ನ ಚಿಕ್ಕ ಮಕ್ಕಳ ಪ್ರಾಣವು ಪ್ರತಿಯೊಂದು ಬೀದಿಯ ಬದಿಯಲ್ಲಿ ಹಸಿವೆಯಿಂದ ದುರ್ಬಲವಾಗಿದೆ.
- Joel 2:17 ಯೋವೇಲ 2:17ಕರ್ತನ ಸೇವಕರಾದ ಯಾಜಕರು ಅಂಗಳಕ್ಕೂ ಬಲಿಪೀಠಕ್ಕೂ ನಡುವೆ ಅತ್ತು ಹೀಗೆ ಹೇಳಲಿ--ಓ ಕರ್ತನೇ, ನಿನ್ನ ಜನರನ್ನು ಕನಿಕರಿಸು, ಜನಾಂಗಗಳು ಅವರ ಮೇಲೆ ಆಳುವ ಹಾಗೆ ನಿನ್ನ ಬಾಧ್ಯತೆಯನ್ನು ನಿಂದೆಗೆ ಒಪ್ಪಿಸಬೇಡ; ಅವರ ದೇವರು ಎಲ್ಲಿ ಎಂದು ಅವರು ಜನಗಳಲ್ಲಿ ಯಾಕೆ ಹೇಳಬೇಕು?
- Zechariah 3:1–5 ಜೆಕರ್ಯ 3:1–5ಇದಲ್ಲದೆ ಆತನು ನನಗೆ--ಕರ್ತನ ದೂತನ ಮುಂದೆ ನಿಂತಿರುವ ಪ್ರಧಾನ ಯಾಜಕನಾದ ಯೆಹೋಶುವನನ್ನೂ ಅವನನ್ನು ಎದುರಿಸುವದಕ್ಕೆ ಅವನ ಬಲಪಾರ್ಶ್ವದಲ್ಲಿ ನಿಂತ ಸೈತಾನನನ್ನೂ ತೋರಿಸಿದನು. ಆಗ ಕರ್ತನ ದೂತನು ಸೈತಾನನಿಗೆ--ಸೈತಾನನೇ, ಕರ್ತನು ನಿನ್ನನ್ನು ಗದರಿಸಲಿ; ಹೌದು, ಯೆರೂಸಲೇಮನ್ನು ಆದುಕೊಂಡ ಕರ್ತನು ನಿನ್ನನ್ನು ಗದರಿಸಲಿ; ಅದು ಬೆಂಕಿಯೊಳಗಿಂದ ಎಳೆದ ಕೊಳ್ಳೆಯಾಗಿದೆಯಲ್ಲವೋ ಅಂದನು. ಯೆಹೋಶು ವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವ ನಾಗಿ ದೂತನ ಮುಂದೆ ನಿಂತನು. ಆಗ ಅವನು ಉತ್ತರಕೊಟ್ಟು ತನ್ನ ಮುಂದೆ ನಿಂತವರಿಗೆ--ಇವನ ಮೇಲಿನಿಂದ ಮೈಲಿಗೆಯಾದ ವಸ್ತ್ರಗಳನ್ನು ತೆಗೆದು ಹಾಕಿರಿ ಅಂದನು. ಅವನಿಗೆ--ಇಗೋ, ನಿನ್ನ ಅಕ್ರಮವು ನಿನ್ನನ್ನು ಬಿಟ್ಟುಹೋಗುವಂತೆ ಮಾಡಿದ್ದೇನೆ; ಬದಲು ವಸ್ತ್ರಗಳನ್ನು ನಿನಗೆ ತೊಡಿಸುವೆನು ಅಂದನು. ಆಗ ನಾನು--ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಡಿರಿ ಅಂದೆನು. ಆಗ ಅವರು ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಟ್ಟು ಅವನಿಗೆ ನಿಲು ವಂಗಿಗಳನ್ನು ತೊಡಿಸಿದರು; ಕರ್ತನ ದೂತನು ಪಕ್ಕ ದಲ್ಲಿ ನಿಂತಿದ್ದನು.