Malachi · chapter 3 · verse 12
Malachi 3:12 in Kannada
ಜನಾಂಗಗಳೆಲ್ಲಾ ನಿಮ್ಮನ್ನು ಧನ್ಯರು ಎಂದು ಕರೆಯುವರು; ಯಾಕಂದರೆ ನೀವು ರಮ್ಯವಾದ ದೇಶವಾಗುವಿರೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
Janaangagalellaa nimmannu dhanyaru endu kareyuvaru; yaakandare neevu ramyavaada deshavaaguvirendu sainyagala kartanu heluttaane.
Malachi 3:12 in English
- King James Version (KJV)
- And all nations shall call you blessed: for ye shall be a delightsome land, saith the LORD of hosts.
- World English Bible (WEB)
- “All nations shall call you blessed, for you will be a delightful land,” says the LORD of Armies.
- American Standard Version (ASV)
- And all nations shall call you happy; for ye shall be a delightsome land, saith Jehovah of hosts.
- Bible in Basic English (BBE)
- And you will be named happy by all nations: for you will be a land of delight, says the Lord of armies.
- Darby Translation (DBY)
- And all nations shall call you blessed; for ye shall be a delightsome land, saith Jehovah of hosts.
- Webster's Bible (WBS)
- And all nations shall call you blessed: for ye shall be a delightsome land, saith the LORD of hosts.
- Young's Literal Translation (YLT)
- And declared you happy have all the nations, For ye are a delightful land, said Jehovah of Hosts.
Read in context
- 10ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 11ಇದಲ್ಲದೆ ನಾನು ನಿಮ್ಮ ನಿಮಿತ್ತ ನುಂಗಿ ಬಿಡುವವನನ್ನು ಗದರಿಸುವೆನು; ಅವನು ನಿಮ್ಮ ಭೂಮಿಯ ಫಲವನ್ನು ಕೆಡಿಸನು; ಇಲ್ಲವೆ ನಿಮ್ಮ ದ್ರಾಕ್ಷೇಬಳ್ಳಿ ಹೊಲದಲ್ಲಿ ತನ್ನ ಫಲ ವನ್ನು ಕಾಲಕ್ಕೆ ಮುಂಚೆ ಉದುರಿಸಿಬಿಡುವದಿಲ್ಲವೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 12ಜನಾಂಗಗಳೆಲ್ಲಾ ನಿಮ್ಮನ್ನು ಧನ್ಯರು ಎಂದು ಕರೆಯುವರು; ಯಾಕಂದರೆ ನೀವು ರಮ್ಯವಾದ ದೇಶವಾಗುವಿರೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 13ನಿಮ್ಮ ಮಾತುಗಳು ನನಗೆ ವಿರೋಧವಾಗಿ ಬಲವಾಗಿದ್ದವೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ, ನೀವು--ನಿನಗೆ ವಿರೋಧವಾಗಿ ಇಷ್ಟೊಂದು ನಾವು ಏನು ಮಾತಾಡಿದ್ದೇವೆ ಅನ್ನುತ್ತೀರಿ.
- 14ನೀವು--ದೇವರನ್ನು ಸೇವಿಸುವದು ವ್ಯರ್ಥವೆಂದೂ ನಾವು ಆತನ ನಿಯಮಗಳನ್ನು ಕೈಕೊಂಡು ಸೈನ್ಯಗಳ ಕರ್ತನ ಮುಂದೆ ದುಃಖವಾಗಿ ನಡೆದದ್ದರಿಂದ ಏನು ಪ್ರಯೋ ಜನವೆಂದೂ ಹೇಳಿದಿರಿ.
Cross references
- Isaiah 61:9 ಯೆಶಾಯ 61:9ಆಗ ಅವರ ಸಂತಾನವು ಅನ್ಯ ಜನಾಂಗಗಳಲ್ಲಿಯೂ ಅವರಿಂದಾದ ಸಂತತಿಯು ಜನ ಗಳ ಮಧ್ಯದಲ್ಲಿಯೂ ತಿಳಿಸಲ್ಪಡುವದು; ಅವರನ್ನು ನೋಡುವವರೆಲ್ಲರೂ--ಅವರೇ ಕರ್ತನು ಆಶೀರ್ವದಿ ಸಿದ ಸಂತಾನವೆಂದು ಒಪ್ಪಿಕೊಳ್ಳುವರು.
- Isaiah 62:4 ಯೆಶಾಯ 62:4ಇನ್ನು ಮೇಲೆ ನೀನು ಬಿಡಲ್ಪಟ್ಟವಳೆಂದು ಹೇಳಲ್ಪಡುವದಿಲ್ಲ, ಇಲ್ಲವೆ ನಿನ್ನ ದೇಶಕ್ಕೆ ಹಾಳಾದದ್ದೆಂದು ಹೇಳಲ್ಪಡುವದಿಲ್ಲ: ಆದರೆ ನೀನು (ಹೆಫ್ಜೀಬಾ) ಮೆಚ್ಚಿದವಳೆಂದೂ ನಿನ್ನ ದೇಶವು (ಬೆಯೂಲಾ) ಮದುವೆಯಾದದ್ದೆಂದೂ ಕರೆಯಲ್ಪ ಡುವದು; ಯಾಕಂದರೆ ಕರ್ತನು ನಿನ್ನಲ್ಲಿ ಉಲ್ಲಾಸಿಸು ವನು; ನಿನ್ನ ದೇಶವು ಮದುವೆಯಾಗುವದು.
- Zechariah 8:23 ಜೆಕರ್ಯ 8:23ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.
- Luke 1:48 ಲೂಕನು 1:48ಆತನು ತನ್ನ ದಾಸಿಯ ದೀನಸ್ಥಿತಿಯನ್ನು ಲಕ್ಷಿಸಿದ್ದಾನೆ. ಇಗೋ, ಇಂದಿನಿಂದ ತಲತಲಾಂತರಗಳವರು ನನ್ನನ್ನು ಧನ್ಯಳೆಂದು ಕರೆಯುವರು.
- Jeremiah 33:9 ಯೆರೆಮೀಯ 33:9ಅದು ನನಗೆ ಆನಂದದ ಹೆಸರೂ ನಾನು ಅವರಿಗೆ ಒಳ್ಳೇದನ್ನೆಲ್ಲಾ ಮಾಡುವದನ್ನು ಕೇಳುವ ಭೂಮಿಯಲ್ಲಿರುವ ಎಲ್ಲಾ ಜನಾಂಗಗಳ ಮುಂದೆ ಸ್ತೋತ್ರವೂ ಮಹಿಮೆಯೂ ಆಗುವದು; ನಾನು ಅದಕ್ಕೆ ಉಂಟು ಮಾಡುವ ಮೇಲಿಗಾಗಿಯೂ ಎಲ್ಲಾ ಅಭಿವೃದ್ಧಿಗಾಗಿಯೂ ಅವರು ಹೆದರಿ ನಡುಗುವರು.
- Daniel 8:9 ದಾನಿಯೇಲನು 8:9ಅವುಗಳಲ್ಲಿ ಒಂದರೊಳಗಿಂದ ಚಿಕ್ಕ ಕೊಂಬು ಮೊಳೆತು, ಬಹಳ ದೊಡ್ಡದಾಗಿ ಬೆಳೆದು, ದಕ್ಷಿಣದ ಕಡೆಗೂ ಪೂರ್ವದ ಕಡೆಗೂ ರಮ್ಯ ದೇಶದ ಕಡೆಗೂ ಪ್ರಬಲವಾಯಿತು.
- 2 Chronicles 32:23 2 ಪೂರ್ವಕಾಲವೃತ್ತಾಂತ 32:23ಅನೇಕರು ಯೆರೂಸಲೇಮಿ ನಲ್ಲಿರುವ ಕರ್ತನಿಗೆ ಅರ್ಪಣೆಗಳನ್ನೂ ಯೆಹೂದದ ಅರಸನಾದ ಹಿಜ್ಕೀಯನಿಗೆ ವಸ್ತುಗಳನ್ನೂ ತಂದರು. ಅಂದಿನಿಂದ ಅವನು ಸಮಸ್ತ ಜನಾಂಗಗಳ ಸಮ್ಮುಖ ದಲ್ಲಿ ಉನ್ನತಕ್ಕೇರಿಸಲ್ಪಟ್ಟನು.
- Deuteronomy 8:7–10 ಧರ್ಮೋಪದೇಶಕಾಂಡ 8:7–10ನಿನ್ನ ದೇವರಾದ ಕರ್ತನು ನಿನ್ನನ್ನು ಉತ್ತಮ ದೇಶಕ್ಕೆ ಬರಮಾಡುತ್ತಾನೆ; ಅದು ನೀರಿನ ಹಳ್ಳಗಳೂ ತಗ್ಗಿನಲ್ಲಿಯೂ ಬೆಟ್ಟದಲ್ಲಿಯೂ ಉಕ್ಕುವ ಬುಗ್ಗೆಗಳುಳ್ಳ ದೇಶವೇ. ಗೋಧಿಯೂ ಜವೆಗೋಧಿಯೂ ದ್ರಾಕ್ಷೆಯೂ ಅಂಜೂರ ಮರಗಳೂ ದಾಳಿಂಬರಗಳೂ ಇರುವ ದೇಶವೇ; ಅದು ಹಿಪ್ಪೇ ಎಣ್ಣೆಯೂ ಜೇನೂ ಉಳ್ಳದೇಶವೇ. ನೀನು ಕೊರತೆಯಿಲ್ಲದೆ ರೊಟ್ಟಿ ತಿನ್ನುವ ಆ ದೇಶದಲ್ಲಿ ಯಾವದರ ಕೊರತೆ ನಿನಗೆ ಆಗದು; ಅದರ ಕಲ್ಲುಗಳು ಕಬ್ಬಿಣವಾಗಿಯೂ ಅದರ ಬೆಟ್ಟ ಗಳೊಳಗಿಂದ ತಾಮ್ರವನ್ನು ಅಗಿಯಬಹುದಾದದ್ದೂ ಆಗಿರುವ ದೇಶ. ನೀನು ತಿಂದು ತೃಪ್ತಿ ಹೊಂದಿದಾಗ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಉತ್ತಮ ದೇಶದಲ್ಲಿ ಆತನನ್ನು ಸ್ತುತಿಸಬೇಕು.
- Psalm 72:17 ಕೀರ್ತನೆಗಳು 72:17ಆತನ ನಾಮವು ಎಂದೆಂದಿಗೂ ಇರುವದು; ಸೂರ್ಯನು ಇರುವವರೆಗೂ ಆತನ ಹೆಸರು ಇರು ವದು. ಮನುಷ್ಯರು ಆತನಲ್ಲಿ ಆಶೀರ್ವಾದ ಹೊಂದು ವರು. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತ ನೆಂದು ಕರೆಯುವರು.
- Zephaniah 3:19–20 ಚೆಫನ್ಯ 3:19–20ಇಗೋ, ಆ ಕಾಲದಲ್ಲಿ ನಿನ್ನನ್ನು ಶ್ರಮೆ ಪಡಿಸುವವರನ್ನೆಲ್ಲಾ ತೀರಿಸಿಬಿಟ್ಟು, ಕುಂಟಾದ ದ್ದನ್ನು ರಕ್ಷಿಸಿ, ಹೊರಡಿಸಲ್ಪಟ್ಟವರನ್ನು ಕೂಡಿಸಿ, ಅವರಿಗೆ ನಾಚಿಕೆಯಾದ ದೇಶಗಳಲ್ಲೆಲ್ಲಾ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು.ಆ ಕಾಲದಲ್ಲಿ ಅಂದರೆ ನಾನು ನಿಮ್ಮನ್ನು ಕೂಡಿಸುವ ಕಾಲದಲ್ಲಿ ನಿಮ್ಮನ್ನು ಕರಕೊಂಡು ಬರುವೆನು; ನಾನು ನಿಮ್ಮ ಸೆರೆಯನ್ನು ನಿಮ್ಮ ಕಣ್ಣುಗಳ ಮುಂದೆ ತಿರುಗಿಸುವಾಗ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆ ಯನ್ನೂ ಉಂಟುಮಾಡುವೆನು ಎಂದು ಕರ್ತನು ಹೇಳುತ್ತಾನೆ. ಆ ಕಾಲದಲ್ಲಿ ಅಂದರೆ ನಾನು ನಿಮ್ಮನ್ನು ಕೂಡಿಸುವ ಕಾಲದಲ್ಲಿ ನಿಮ್ಮನ್ನು ಕರಕೊಂಡು ಬರುವೆನು; ನಾನು ನಿಮ್ಮ ಸೆರೆಯನ್ನು ನಿಮ್ಮ ಕಣ್ಣುಗಳ ಮುಂದೆ ತಿರುಗಿಸುವಾಗ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆ ಯನ್ನೂ ಉಂಟುಮಾಡುವೆನು ಎಂದು ಕರ್ತನು ಹೇಳುತ್ತಾನೆ.
- Daniel 11:41 ದಾನಿಯೇಲನು 11:41ಇದಲ್ಲದೆ ಅವನು ರಮ್ಯವಾದ ದೇಶದೊಳಕ್ಕೂ ನುಗ್ಗುವನು; ಅನೇಕ ದೇಶಗಳು ಕೆಡವಲ್ಪಡುವವು; ಆದರೆ ಎದೋಮು, ಮೋವಾಬು ಅಮ್ಮೋನನ ಮಕ್ಕಳಲ್ಲಿ ಮುಖ್ಯಸ್ಥರು ಆತನ ಕೈಯಿಂದ ತಪ್ಪಿಸಿಕೊಳ್ಳುವರು.
- Deuteronomy 11:12 ಧರ್ಮೋಪದೇಶಕಾಂಡ 11:12ಅದು ನಿನ್ನ ದೇವರಾದ ಕರ್ತನು ಪರಾಂಬರಿಸುವ ದೇಶವೇ; ವರುಷದ ಆರಂಭ ದಿಂದ ಅಂತ್ಯದ ವರೆಗೂ ಯಾವಾಗಲೂ ನಿನ್ನ ದೇವ ರಾದ ಕರ್ತನ ಕಣ್ಣುಗಳು ಅದರ ಮೇಲೆ ಇವೆ.