Mark · chapter 1 · verse 12
Mark 1:12 in Kannada
ತಕ್ಷಣವೇ ಆತ್ಮನು ಆತನನ್ನು ಅಡವಿಯೊಳಕ್ಕೆ ನಡಿಸಿದನು.
Takshanave aatmanu aatanannu adaviyolakke nadisidanu.
Mark 1:12 in English
- King James Version (KJV)
- And immediately the Spirit driveth him into the wilderness.
- World English Bible (WEB)
- Immediately the Spirit drove him out into the wilderness.
- American Standard Version (ASV)
- And straightway the Spirit driveth him forth into the wilderness.
- Bible in Basic English (BBE)
- And straight away the Spirit sent him out into the waste land.
- Darby Translation (DBY)
- And immediately the Spirit drives him out into the wilderness.
- Webster's Bible (WBS)
- And immediately the spirit driveth him into the wilderness.
- Young's Literal Translation (YLT)
- And immediately doth the Spirit put him forth to the wilderness,
Read in context
- 10ಆತನು ನೀರಿನೊಳಗಿಂದ ಮೇಲಕ್ಕೆ ಬಂದ ಕೂಡಲೆ ಆಕಾಶಗಳು ತೆರೆದಿರುವದನ್ನೂ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದು ಬರುವದನ್ನೂ ಯೋಹಾನನು ಕಂಡನು.
- 11ಆಗ--ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ನೀನೇ ಎಂಬ ಧ್ವನಿಯು ಪರಲೋಕ ದಿಂದ ಬಂದಿತು.
- 12ತಕ್ಷಣವೇ ಆತ್ಮನು ಆತನನ್ನು ಅಡವಿಯೊಳಕ್ಕೆ ನಡಿಸಿದನು.
- 13ಆತನು ನಾಲ್ವತ್ತು ದಿವಸ ಅಡವಿ ಯಲ್ಲಿ ಸೈತಾನನಿಂದ ಶೋಧಿಸಲ್ಪಡುತ್ತಾ ಕಾಡು ಮೃಗ ಗಳೊಂದಿಗೆ ಇದ್ದನು; ಮತ್ತು ದೂತರು ಆತನನ್ನು ಉಪಚರಿಸಿದರು.
- 14ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟ ತರು ವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ--
Cross references
- Matthew 4:1–11 ಮತ್ತಾಯನು 4:1–11ಆಗ ಯೇಸು ಸೈತಾನನಿಂದ ಶೋಧಿಸಲ್ಪಡು ವದಕ್ಕಾಗಿ ಆತ್ಮನಿಂದ ಅಡವಿಗೆ ನಡಿಸಲ್ಪಟ್ಟನು. ಆತನು ನಾಲ್ವತ್ತು ದಿವಸ ಹಗಲಿರುಳು ಉಪವಾಸವಿದ್ದ ತರುವಾಯ ಹಸಿದನು. ಆಗ ಆ ಶೋಧಕನು ಆತನ ಬಳಿಗೆ ಬಂದು--ನೀನು ದೇವಕುಮಾರನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆಕೊಡು ಅಂದನು. ಆದರೆ ಆತನು ಪ್ರತ್ಯುತ್ತರವಾಗಿ--ಮನುಷ್ಯನು ರೊಟ್ಟಿ ಮಾತ್ರದಿಂದಲೇ ಜೀವಿಸುವದಿಲ್ಲ, ಆದರೆ ದೇವರ ಬಾಯೊಳಗಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಬರೆದದೆ ಅಂದನು. ತರುವಾಯ ಸೈತಾನನು ಆತನನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡುಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ-- ನೀನು ದೇವ ಕುಮಾರನಾಗಿದ್ದರೆ ನೀನಾಗಿಯೇ ಕೆಳಗೆ ದುಮುಕು; ಯಾಕಂದರೆ--ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸದಂತೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಅಪ್ಪಣೆ ಕೊಡುವನು; ಮತ್ತು ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದ ಯೇಸು ಅವನಿಗೆ -- ನೀನು ನಿನ್ನ ದೇವರಾದ ಕರ್ತನನ್ನು ಶೋಧಿಸಬಾರದೆಂದು ಬರೆದದೆ ಎಂದು ಹೇಳಿದನು. ಮತ್ತೊಮ್ಮೆ ಸೈತಾನನು ಆತನನ್ನು ಅತ್ಯುನ್ನತವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ-- ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಾನು ನಿನಗೆ ಕೊಡುವೆನು ಅಂದನು. ಆಗ ಯೇಸು ಅವನಿಗೆ--ಸೈತಾನನೇ, ಇಲ್ಲಿಂದ ತೊಲಗಿಹೋಗು; ಯಾಕಂದರೆ--ನೀನು ನಿನ್ನ ದೇವ ರಾದ ಕರ್ತನನ್ನು ಮಾತ್ರ ಆರಾಧಿಸಿ ಆತನೊಬ್ಬನನ್ನೇ ಸೇವಿಸಬೇಕು ಎಂಬದಾಗಿ ಬರೆದದೆ ಅಂದನು. ಆಗ ಸೈತಾನನು ಆತನನ್ನು ಬಿಟ್ಟನು; ಮತ್ತು ಇಗೋ, ದೇವದೂತರು ಬಂದು ಆತನನ್ನು ಉಪಚರಿಸಿದರು.
- Luke 4:1–13 ಲೂಕನು 4:1–13ಯೇಸು ಪರಿಶುದ್ಧಾತ್ಮನಿಂದ ತುಂಬಿದವನಾಗಿ ಯೊರ್ದನಿನಿಂದ ಹಿಂತಿರುಗಿ ಬಂದು ಆತ್ಮ ನಿಂದ ಅಡವಿಯೊಳಕ್ಕೆ ನಡಿಸಲ್ಪಟ್ಟು ನಾಲ್ವತ್ತು ದಿನಗಳು ಸೈತಾನನಿಂದ ಶೋಧಿಸಲ್ಪಡುತ್ತಿದ್ದನು. ಆ ದಿನಗಳಲ್ಲಿ ಆತನು ಏನೂ ತಿನ್ನಲಿಲ್ಲ. ಅವು ಮುಗಿದ ಮೇಲೆ ಆತನು ಹಸಿದನು. ಆಗ ಸೈತಾನನು ಆತ ನಿಗೆ--ನೀನು ದೇವಕುಮಾರನಾಗಿದ್ದರೆ ಈ ಕಲ್ಲು ರೊಟ್ಟಿಯಾಗುವಂತೆ ಅಪ್ಪಣೆಕೊಡು ಅಂದನು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಮನುಷ್ಯನು ರೊಟ್ಟಿಯಿಂದ ಮಾತ್ರವೇ ಅಲ್ಲ, ಆದರೆ ದೇವರ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಬರೆದದೆ ಅಂದನು. ಬಳಿಕ ಸೈತಾನನು ಉನ್ನತವಾದ ಬೆಟ್ಟಕ್ಕೆ ಆತನನ್ನು ಕರಕೊಂಡುಹೋಗಿ ಲೋಕದ ಎಲ್ಲಾ ರಾಜ್ಯಗಳನ್ನು ಕ್ಷಣಮಾತ್ರದಲ್ಲಿ ಆತನಿಗೆ ತೋರಿಸಿದನು. ಸೈತಾನನು ಆತನಿಗೆ--ಈ ಎಲ್ಲಾ ಅಧಿಕಾರವನ್ನೂ ಅವುಗಳ ವೈಭವವನ್ನೂ ನಾನು ನಿನಗೆ ಕೊಡುವೆನು; ಯಾಕಂದರೆ ಅದು ನನಗೆ ಕೊಡಲ್ಪಟ್ಟಿರುವದರಿಂದ ನನಗೆ ಇಷ್ಟ ಬಂದ ಯಾರಿಗಾದರೂ ನಾನು ಕೊಡು ವೆನು. ಆದದರಿಂದ ನೀನು ನನ್ನನ್ನು ಆರಾಧಿಸಿದರೆ ಎಲ್ಲವುಗಳು ನಿನ್ನದಾಗುವವು ಎಂದು ಹೇಳಿದನು. ಯೇಸು ಅವನಿಗೆ ಪ್ರತ್ಯುತ್ತರವಾಗಿ--ಸೈತಾನನೇ, ನನ್ನ ಹಿಂದೆ ಹೋಗು; ಯಾಕಂದರೆ--ನೀನು ನಿನ್ನ ದೇವರಾದ ಕರ್ತನನ್ನು ಆರಾಧಿಸಿ ಆತನೊಬ್ಬನನ್ನೇ ಸೇವಿಸತಕ್ಕದ್ದು ಎಂದು ಬರೆದದೆ ಅಂದನು. ಇದಲ್ಲದೆ ಅವನು ಆತನನ್ನು ಯೆರೂಸಲೇಮಿಗೆ ಕರತಂದು ದೇವಾಲಯ ಗೋಪುರದ ಮೇಲೆ ನಿಲ್ಲಿಸಿ ಆತನಿಗೆ--ನೀನು ದೇವಕುಮಾರನಾಗಿದ್ದರೆ ಇಲ್ಲಿಂದ ಕೆಳಗೆ ದುಮುಕು; ಆತನು ನಿನ್ನನ್ನು ಕಾಯುವದಕ್ಕೆ ತನ್ನ ದೂತರಿಗೆ ಅಪ್ಪಣೆ ಕೊಡುವನು; ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸ ದಂತೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದನು. ಅದಕ್ಕೆ ಯೇಸು ಪ್ರತ್ಯು ತ್ತರವಾಗಿ ಅವನಿಗೆ--ನೀನು ನಿನ್ನ ದೇವರಾದ ಕರ್ತನನ್ನು ಶೋಧಿಸಬಾರದೆಂದು ಹೇಳಲ್ಪಟ್ಟಿದೆ ಅಂದನು. ಸೈತಾನನು ಎಲ್ಲಾ ಶೋಧನೆಯನ್ನು ಮುಗಿಸಿದ ಮೇಲೆ ಸ್ವಲ್ಪ ಕಾಲ ಆತನ ಬಳಿಯಿಂದ ಹೊರಟು ಹೋದನು.