Mark · chapter 10 · verse 17
Mark 10:17 in Kannada
ಆತನು ದಾರಿಯಲ್ಲಿ ಮುಂದಕ್ಕೆ ಹೋದಾಗ ಒಬ್ಬನು ಓಡುತ್ತಾ ಬಂದು ಆತನ ಮುಂದೆ ಮೊಣಕಾಲೂರಿ--ಒಳ್ಳೇ ಬೋಧಕನೇ, ನಾನು ನಿತ್ಯಜೀವ ವನ್ನು ಬಾಧ್ಯವಾಗಿ ಹೊಂದುವಂತೆ ಏನು ಮಾಡಬೇಕು ಎಂದು ಆತನನ್ನು ಕೇಳಿದನು.
Aatanu daariyalli mundakke hodaaga obbanu oduttaa bandu aatana munde monakaaloori--olle bodhakane, naanu nityajeeva vannu baadhyavaagi honduvante enu maadabeku endu aatanannu kelidanu.
Mark 10:17 in English
- King James Version (KJV)
- And when he was gone forth into the way, there came one running, and kneeled to him, and asked him, Good Master, what shall I do that I may inherit eternal life?
- World English Bible (WEB)
- As he was going out into the way, one ran to him, knelt before him, and asked him, “Good Teacher, what shall I do that I may inherit eternal life?”
- American Standard Version (ASV)
- And as he was going forth into the way, there ran one to him, and kneeled to him, and asked him, Good Teacher, what shall I do that I may inherit eternal life?
- Bible in Basic English (BBE)
- And while he was going out into the way, a man came running to him, and went down on his knees, saying, Good Master, what have I to do so that I may have eternal life?
- Darby Translation (DBY)
- And as he went forth into the way, a person ran up to [him], and kneeling to him asked him, Good Teacher, what shall I do that I may inherit eternal life?
- Webster's Bible (WBS)
- And when he had gone forth into the way, there came one running, and kneeled to him, and asked him, Good Master, what shall I do that I may inherit eternal life?
- Young's Literal Translation (YLT)
- And as he is going forth into the way, one having run and having kneeled to him, was questioning him, 'Good teacher, what may I do, that life age-during I may inherit?'
Read in context
- 15ನಾನು ನಿಮಗೆ ನಿಜವಾಗಿ ಹೇಳುವದೇ ನಂದರೆ--ಯಾವನಾದರೂ ಚಿಕ್ಕ ಮಗುವಿನಂತೆ ದೇವರ ರಾಜ್ಯವನ್ನು ಅಂಗೀಕರಿಸದಿದ್ದರೆ ಅವನು ಅದರೊಳಗೆ ಪ್ರವೇಶಿಸುವದಿಲ್ಲ.
- 16ಇದಲ್ಲದೆ ಆತನು ಆ ಮಕ್ಕಳನ್ನು ಎತ್ತಿಕೊಂಡು ತನ್ನ ಕೈಗಳನ್ನು ಅವುಗಳ ಮೇಲೆ ಇಟ್ಟು ಆಶೀರ್ವದಿಸಿದನು.
- 17ಆತನು ದಾರಿಯಲ್ಲಿ ಮುಂದಕ್ಕೆ ಹೋದಾಗ ಒಬ್ಬನು ಓಡುತ್ತಾ ಬಂದು ಆತನ ಮುಂದೆ ಮೊಣಕಾಲೂರಿ--ಒಳ್ಳೇ ಬೋಧಕನೇ, ನಾನು ನಿತ್ಯಜೀವ ವನ್ನು ಬಾಧ್ಯವಾಗಿ ಹೊಂದುವಂತೆ ಏನು ಮಾಡಬೇಕು ಎಂದು ಆತನನ್ನು ಕೇಳಿದನು.
- 18ಯೇಸು ಅವನಿಗೆ --ನೀನು ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವ ನಲ್ಲ.
- 19ವ್ಯಭಿಚಾರ ಮಾಡಬಾರದು, ಕೊಲ್ಲಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮೋಸ ಮಾಡಬಾರದು, ನಿನ್ನ ತಂದೆಯನ್ನೂ ತಾಯಿಯನ್ನೂ ಸನ್ಮಾನಿಸಬೇಕು ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆ ಯಲ್ಲಾ ಅಂದನು.
Cross references
- Matthew 19:16–30 ಮತ್ತಾಯನು 19:16–30ಆಗ ಇಗೋ, ಒಬ್ಬನು ಬಂದು ಆತನಿಗೆ-- ಒಳ್ಳೇ ಬೋಧಕನೇ, ನಾನು ನಿತ್ಯಜೀವವನ್ನು ಹೊಂದುವದಕ್ಕೆ ಯಾವ ಒಳ್ಳೇ ಕಾರ್ಯವನ್ನು ಮಾಡ ಬೇಕು ಎಂದು ಕೇಳಿದನು. ಆಗ ಆತನು ಅವನಿಗೆ--ನನ್ನನ್ನು ಒಳ್ಳೆಯವನೆಂದು ನೀನು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವ ನಲ್ಲ; ಆದರೆ ನೀನು ಜೀವದಲ್ಲಿ ಸೇರಬೇಕೆಂದು ಅಪೇ ಕ್ಷಿಸಿದರೆ(ದೇವರ)ಆಜ್ಞೆಗಳನ್ನು ಕೈಕೊಂಡು ನಡೆದುಕೋ ಅಂದನು. ಅವನು ಆತನಿಗೆ--ಅವು ಯಾವವು ಎಂದು ಕೇಳಿದನು. ಅದಕ್ಕೆ ಯೇಸು--ನೀನು ನರಹತ್ಯ ಮಾಡಬಾರದು, ನೀನು ವ್ಯಭಿಚಾರ ಮಾಡಬಾರದು, ನೀನು ಕದಿಯ ಬಾರದು, ನೀನು ಸುಳ್ಳುಸಾಕ್ಷಿ ಹೇಳ ಬಾರದು. ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕು; ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಮಾಡ ಬೇಕು ಎಂದು ಹೇಳಿದನು. ಆಗ ಆ ಯೌವನಸ್ಥನು ಆತನಿಗೆ--ಇವೆಲ್ಲವುಗಳನ್ನು ನಾನು ಬಾಲ್ಯದಿಂದಲೇ ಕೈಕೊಂಡಿದ್ದೇನೆ; ಇನ್ನು ನನಗೇನು ಕಡಿಮೆಯಾಗಿದೆ ಎಂದು ಕೇಳಿದನು. ಯೇಸು ಅವನಿಗೆ--ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ ಹೋಗಿ ನಿನಗೆ ಇದ್ದದ್ದನ್ನು ಮಾರಿ ಬಡವರಿಗೆ ಕೊಡು; ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವದು; ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು. ಆದರೆ ಆ ಯೌವನಸ್ಥನು ಆತನು ಹೇಳಿದ್ದನ್ನು ಕೇಳಿ ದುಃಖ ದಿಂದ ಹೊರಟುಹೋದನು. ಯಾಕಂದರೆ ಅವನಿಗೆ ಬಹಳ ಆಸ್ತಿ ಇತ್ತು. ತರುವಾಯ ಯೇಸು ತನ್ನ ಶಿಷ್ಯರಿಗೆ-- ಐಶ್ವರ್ಯ ವಂತನು ಪರಲೋಕ ರಾಜ್ಯದಲ್ಲಿ ಸೇರುವದು ಕಷ್ಟ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. ತಿರಿಗಿ ನಾನು ನಿಮಗೆ ಹೇಳುವದೇನಂದರೆ-- ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಸೂಜಿಯ ಕಣ್ಣಿನೊಳಗೆ ಒಂಟೆಯು ನುಗ್ಗುವದು ಸುಲಭ ಅಂದನು. ಇದನ್ನು ಕೇಳಿದಾಗ ಆತನ ಶಿಷ್ಯರು ಅತ್ಯಂತ ವಿಸ್ಮಯಗೊಂಡು-- ಹಾಗಾದರೆ ರಕ್ಷಿಸಲ್ಪಡುವವರು ಯಾರು ಎಂದು ಕೇಳಿದರು. ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ--ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು. ಆಮೇಲೆ ಪೇತ್ರನು ಆತನಿಗೆ--ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ಆದದ ರಿಂದ ನಮಗೆ ಏನು ದೊರೆಯುವದು ಎಂದು ಕೇಳಿದನು. ಯೇಸು ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನ ದಲ್ಲಿ ಕೂತುಕೊಂಡಿರಲು ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಗೋತ್ರ ಗಳವರಿಗೆ ನ್ಯಾ ಮತ್ತು ತನ್ನ ಮನೆಗಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ತಂದೆಯನ್ನಾಗಲೀ ತಾಯಿಯನ್ನಾಗಲೀ ಮಕ್ಕಳನ್ನಾಗಲೀ ಭೂಮಿಯನ್ನಾಗಲೀ ನನ್ನ ಹೆಸರಿ ನಿಮಿತ್ತವಾಗಿ ಬಿಟ್ಟುಬಿಡುವ ಪ್ರತಿಯೊಬ್ಬನು ನೂರರಷ್ಟು ಹೊಂದಿಕೊಳ್ಳುವನು; ಮತ್ತು ನಿತ್ಯಜೀವವನ್ನು ಬಾಧ್ಯ ವಾಗಿ ಹೊಂದುವನುಆದರೆ ಮೊದಲನೆಯ ವರಾದ ಬಹುಮಂದಿ ಕಡೆಯವರಾಗುವರು; ಮತ್ತು ಕಡೆಯವರಾದವರು ಮೊದಲನೆಯವರಾಗುವರು. ಆದರೆ ಮೊದಲನೆಯ ವರಾದ ಬಹುಮಂದಿ ಕಡೆಯವರಾಗುವರು; ಮತ್ತು ಕಡೆಯವರಾದವರು ಮೊದಲನೆಯವರಾಗುವರು.
- Luke 18:18–30 ಲೂಕನು 18:18–30ಆಗ ಒಬ್ಬಾನೊಬ್ಬ ಅಧಿಕಾರಿಯು ಆತನಿಗೆ--ಒಳ್ಳೇ ಬೋಧಕನೇ, ನಾನು ನಿತ್ಯಜೀವವನ್ನು ಬಾಧ್ಯ ವಾಗಿ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಿದನು. ಅದಕ್ಕೆ ಯೇಸು ಅವನಿಗೆ--ನೀನು ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಒಳ್ಳೆಯವನು ಯಾವನೂ ಇಲ್ಲ. ವ್ಯಭಿಚಾರ ಮಾಡಬೇಡ, ನರಹತ್ಯ ಮಾಡ ಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ನಿನ್ನ ತಂದೆಯನ್ನು ಮತ್ತು ನಿನ್ನ ತಾಯಿಯನ್ನು ಸನ್ಮಾನಿಸಬೇಕು ಎಂಬ ಆಜ್ಞೆಗಳನ್ನು ನೀನು ಬಲ್ಲವನಾಗಿದ್ದೀ ಅಂದನು. ಅದಕ್ಕವನು--ನನ್ನ ಬಾಲ್ಯದಿಂದ ನಾನು ಇವೆಲ್ಲವು ಗಳನ್ನು ಕೈಕೊಂಡಿದ್ದೇನೆ ಎಂದು ಹೇಳಿದನು. ಆಗ ಯೇಸು ಇವುಗಳನ್ನು ಕೇಳಿ ಅವನಿಗೆ--ಆದಾಗ್ಯೂ ನಿನಗೆ ಒಂದು ಕೊರತೆ ಇದೆ; ನಿನಗೆ ಇರುವದೆಲ್ಲವನ್ನು ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತು ಇರುವದು; ಬಂದು ನನ್ನನ್ನು ಹಿಂಬಾ ಲಿಸು ಅಂದನು. ಅವನು ಇದನ್ನು ಕೇಳಿ ಬಹಳ ದುಃಖವುಳ್ಳವನಾದನು; ಯಾಕಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು. ಅವನು ಬಹಳ ವ್ಯಥೆಗೊಂಡದ್ದನ್ನು ಯೇಸು ನೋಡಿ--ಐಶ್ವರ್ಯ ವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ. ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ತೂರುವದು ಸುಲಭ ಎಂದು ಹೇಳಿದನು. ಇದನ್ನು ಕೇಳಿದವರು--ಹಾಗಾದರೆ ರಕ್ಷಣೆ ಹೊಂದುವವರು ಯಾರು? ಅಂದರು. ಅದಕ್ಕೆ ಆತನು--ಮನುಷ್ಯರಿಗೆ ಅಸಾಧ್ಯವಾದವುಗಳು ದೇವರಿಗೆ ಸಾಧ್ಯವಾಗಿವೆ ಎಂದು ಹೇಳಿದನು. ಆಗ ಪೇತ್ರನು--ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ ಎಂದು ಹೇಳಿದ್ದಕ್ಕೆ ಆತನು ಅವರಿಗೆ--ಒಬ್ಬನು ಮನೆ ಯನ್ನಾದರೂ ತಂದೆತಾಯಿಗಳನ್ನಾದರೂ ಸಹೋದರರನ್ನಾದರೂ ಹೆಂಡತಿಯನ್ನಾದರೂ ಇಲ್ಲವೆ ಮಕ್ಕಳ ನ್ನಾದರೂ ದೇವರ ರಾಜ್ಯಕ್ಕೋಸ್ಕರ ಬಿಟ್ಟುಬಿಡುವವನು ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಲೋಕದಲ್ಲಿ ನಿತ್ಯಜೀವವನ್ನೂ ಹೊಂದಿಯೇ ಹೊಂದು ವನು ಎಂದು ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ ಅಂದನು.
- Romans 2:7 ರೋಮಾಪುರದವರಿಗೆ 2:7ಯಾರು ಒಳ್ಳೆಯದನ್ನು ಮಾಡುವದರಲ್ಲಿ ತಾಳ್ಮೆಯಿಂದಿದ್ದು ಮಹಿಮೆ ಮಾನ ಮತ್ತು ನಿರ್ಲಯತ್ವವನ್ನು ಹುಡುಕು ತ್ತಾರೋ ಅವರಿಗೆ ನಿತ್ಯಜೀವವನ್ನೂ
- John 6:27–28 ಯೋಹಾನನು 6:27–28ನಾಶವಾಗುವ ಆಹಾರಕ್ಕಾಗಿ ಅಲ್ಲ, ನಿತ್ಯಜೀವ ವನ್ನುಂಟು ಮಾಡುವ ಆಹಾರಕ್ಕೋಸ್ಕರ ದುಡಿಯಿರಿ; ಅದನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ತಂದೆಯಾದ ದೇವರು (ಇದಕ್ಕಾಗಿ) ಆತನಿಗೆ ಮುದ್ರೆ ಹಾಕಿದ್ದಾನೆ ಅಂದನು. ಆಗ ಅವರು ಆತನಿಗೆ--ನಾವು ದೇವರ ಕ್ರಿಯೆ ಗಳನ್ನು ಮಾಡುವಂತೆ ಏನು ಮಾಡಬೇಕು ಎಂದು ಕೇಳಿದ್ದಕ್ಕೆ
- Luke 10:25 ಲೂಕನು 10:25ಆಗ ಇಗೋ, ಒಬ್ಬಾನೊಬ್ಬ ನ್ಯಾಯಶಾಸ್ತ್ರಿಯು ಎದ್ದು ನಿಂತು ಆತನನ್ನು ಶೋಧಿಸುವದಕ್ಕಾಗಿ-- ಬೋಧಕನೇ, ನಾನು ನಿತ್ಯಜೀವವನ್ನು ಬಾಧ್ಯವಾಗಿ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಿದನು.
- Romans 10:2–4 ರೋಮಾಪುರದವರಿಗೆ 10:2–4ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ; ಆದರೂ ಅವರ ಆಸಕ್ತಿಯು ಜ್ಞಾನಾನುಸಾರವಾದದ್ದಲ್ಲ. ಅವರು ದೇವ ರಿಂದ ದೊರಕುವ ನೀತಿಯನ್ನರಿಯದೆ ಸ್ವನೀತಿಯನ್ನೇ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದ್ದದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ. ನಂಬುವ ಪ್ರತಿಯೊಬ್ಬನು ನೀತಿವಂತನಾಗುವಂತೆ ಕ್ರಿಸ್ತನು ನ್ಯಾಯಪ್ರಮಾಣದ ಅಂತ್ಯವಾಗಿದ್ದಾನೆ.
- Acts 20:32 ಅಪೊಸ್ತಲರ ಕೃತ್ಯಗಳು 20:32ಸಹೋದರರೇ, ನಿಮ್ಮನ್ನು ಕಟ್ಟುವ ದಕ್ಕೂ ಪವಿತ್ರರಾದವರೆಲ್ಲರಲ್ಲಿ ನಿಮಗೆ ಬಾಧ್ಯತೆಯನ್ನು ಅನುಗ್ರಹಿಸುವದಕ್ಕೂ ನಾನೀಗ ನಿಮ್ಮನ್ನು ದೇವರಿಗೂ ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತೇನೆ.
- Acts 2:37 ಅಪೊಸ್ತಲರ ಕೃತ್ಯಗಳು 2:37ಅವರು ಇದನ್ನು ಕೇಳಿ ತಮ್ಮ ಹೃದಯದಲ್ಲಿ ತಿವಿಯಲ್ಪಟ್ಟವರಾಗಿ ಪೇತ್ರನಿಗೂ ಉಳಿದ ಅಪೊಸ್ತಲರಿಗೂ--ಜನರೇ, ಸಹೋದರರೇ, ನಾವು ಏನು ಮಾಡಬೇಕು ಎಂದು ಕೇಳಿದರು.
- Acts 16:30 ಅಪೊಸ್ತಲರ ಕೃತ್ಯಗಳು 16:30ಅವರನ್ನು ಹೊರಗೆ ಕರಕೊಂಡು ಬಂದು--ಅಯ್ಯಗಳಿರಾ, ನಾನು ರಕ್ಷಣೆ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಲು
- Matthew 25:34 ಮತ್ತಾಯನು 25:34ಆಗ ಅರಸನು ತನ್ನ ಬಲಗಡೆಯಲ್ಲಿ ರುವವರಿಗೆ--ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ನೀವು ಬನ್ನಿರಿ; ಭೂಲೋಕಕ್ಕೆ ಅಸ್ತಿ ವಾರ ಹಾಕಿದಂದಿನಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಬಾಧ್ಯವಾಗಿ ಹೊಂದಿರಿ;
- John 6:40 ಯೋಹಾನನು 6:40ನನ್ನನ್ನು ಕಳುಹಿಸದಾತನ ಚಿತ್ತವೇನಂದರೆ, ಮಗನನ್ನು ನೋಡಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬನು ನಿತ್ಯ ಜೀವವನ್ನು ಹೊಂದುವದೇ; ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು ಎಂದು ಹೇಳಿದನು.
- Matthew 17:14 ಮತ್ತಾಯನು 17:14ಅವರು ಜನಸಮೂಹದ ಬಳಿಗೆ ಬಂದಾಗ ಒಬ್ಬ ಮನುಷ್ಯನು ಆತನ ಬಳಿಗೆ ಬಂದು ಮೊಣ ಕಾಲೂರಿ--
Original words (Greek)
- And · G2532καί kaí
- when · G1607ἐκπορεύομαι ekporeúomai
- he · G846αὐτός autós
- forth · G1607ἐκπορεύομαι ekporeúomai
- into · G1519εἰς eis
- way · G3598ὁδός hodós
- came · G4370προστρέχω prostréchō
- one · G1520εἷς heîs
- running · G4370προστρέχω prostréchō
- and · G2532καί kaí
- kneeled · G1120γονυπετέω gonypetéō
- him · G846αὐτός autós
- asked · G1905ἐπερωτάω eperōtáō
- him · G846αὐτός autós
- Good · G18ἀγαθός agathós
- Master · G1320διδάσκαλος didáskalos
- what · G5101τίς tís
- do · G4160ποιέω poiéō
- that · G2443ἵνα hína
- inherit · G2816κληρονομέω klēronoméō
- eternal · G166αἰώνιος aiṓnios
- life · G2222ζωή zōḗ