Mark · chapter 12 · verse 44
Mark 12:44 in Kannada
ಯಾಕಂದರೆ ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು; ಆದರೆ ಈಕೆಯು ತನ್ನ ಕೊರತೆಯಲ್ಲಿ ತನಗಿದ್ದದ್ದನ್ನೆಲ್ಲಾ ಅಂದರೆ ತನ್ನ ಜೀವನವನ್ನೆಲ್ಲಾ ಹಾಕಿದ್ದಾಳೆ ಅಂದನು.
Yaakandare ellaroo tamma samruddhiyalli haakidaru; aadare eekeyu tanna korateyalli tanagiddaddannellaa andare tanna jeevanavannellaa haakiddaale andanu.
Mark 12:44 in English
- King James Version (KJV)
- For all [they] did cast in of their abundance; but she of her want did cast in all that she had, [even] all her living.
- World English Bible (WEB)
- for they all gave out of their abundance, but she, out of her poverty, gave all that she had to live on.”
- American Standard Version (ASV)
- for they all did cast in of their superfluity; but she of her want did cast in all that she had, [even] all her living.
- Bible in Basic English (BBE)
- Because they all put in something out of what they had no need for; but she out of her need put in all she had, even all her living.
- Darby Translation (DBY)
- for all have cast in of that which they had in abundance, but she of her destitution has cast in all that she had, the whole of her living.
- Webster's Bible (WBS)
- For all [they] cast in of their abundance: but she of her want cast in all that she had, [even] all her living.
- Young's Literal Translation (YLT)
- for all, out of their abundance, put in, but she, out of her want, all that she had put in — all her living.'
Read in context
- 42ಆಗ ಅಲ್ಲಿ ಒಬ್ಬ ಬಡ ವಿಧವೆಯು ಬಂದು ಒಂದು ಫಾರ್ದಿಂಗದಷ್ಟು ಎರಡು ನಾಣ್ಯಗಳನ್ನು ಹಾಕಿದಳು.
- 43ಆಗ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ-- ಈ ಬೊಕ್ಕಸದಲ್ಲಿ ಹಾಕಿದವರೆಲ್ಲರಿಗಿಂತ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.ಯಾಕಂದರೆ ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು; ಆದರೆ ಈಕೆಯು ತನ್ನ ಕೊರತೆಯಲ್ಲಿ ತನಗಿದ್ದದ್ದನ್ನೆಲ್ಲಾ ಅಂದರೆ ತನ್ನ ಜೀವನವನ್ನೆಲ್ಲಾ ಹಾಕಿದ್ದಾಳೆ ಅಂದನು.
- 44ಯಾಕಂದರೆ ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು; ಆದರೆ ಈಕೆಯು ತನ್ನ ಕೊರತೆಯಲ್ಲಿ ತನಗಿದ್ದದ್ದನ್ನೆಲ್ಲಾ ಅಂದರೆ ತನ್ನ ಜೀವನವನ್ನೆಲ್ಲಾ ಹಾಕಿದ್ದಾಳೆ ಅಂದನು.
Cross references
- 2 Corinthians 8:2–3 2 ಕೊರಿಂಥದವರಿಗೆ 8:2–3ಆ ಸಭೆಗಳವರು ಬಹಳ ಹಿಂಸೆಯನ್ನು ತಾಳುವವರಾದರೂ ವಿಪರೀತ ವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು. ಅವರು ಶಕ್ತ್ಯಾನುಸಾರವಾಗಿ ಮಾತ್ರ ಕೊಡಲಿಲ್ಲ; ಹೌದು, ಶಕ್ತಿಯನ್ನು ವಿಾರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು; ಇದಕ್ಕೆ ನಾನು ಸಾಕ್ಷಿ.
- 1 John 3:17 1 ಯೋಹಾನನು 3:17ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ?
- Mark 14:8 ಮಾರ್ಕನು 14:8ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ; ನನ್ನ ಶರೀರವನ್ನು ಹೂಣಿಡುವದಕ್ಕೆ ಅದನ್ನು ಅಭಿಷೇಕಿಸುವದಕ್ಕಾಗಿ ಈಕೆಯು ಮುಂದಾಗಿ ಮಾಡಿದ್ದಾಳೆ.
- Ezra 2:68–69 ಎಜ್ರನು 2:68–69ಪಿತೃಗಳಲ್ಲಿ ಮುಖ್ಯರಾದ ಕೆಲವರು ಯೆರೂಸ ಲೇಮಿನಲ್ಲಿರುವ ಕರ್ತನ ಆಲಯಕ್ಕೆ ಬಂದ ತರುವಾಯ ದೇವರ ಆಲಯವನ್ನು ಅದರ ಸ್ಥಾನದಲ್ಲಿ ನಿಲ್ಲಿಸುವದಕ್ಕೆ ಉಚಿತವಾದ ಕಾಣಿಕೆಗಳನ್ನು ಕೊಟ್ಟರು. ಅವರು ತಮ್ಮ ಶಕ್ತಿಗೆ ತಕ್ಕ ಹಾಗೆ ಕೆಲಸದ ಬೊಕ್ಕಸಕ್ಕೆ ಅರವ ತ್ತೊಂದು ಸಾವಿರ ಬಂಗಾರದ ಪವನಗಳನ್ನು ಐದು ಸಾವಿರ ವಿಾನಾ ತೂಕ ಬೆಳ್ಳಿಯನ್ನೂ ನೂರು ಯಾಜಕರ ಅಂಗಿಗಳನ್ನೂ ಕೊಟ್ಟರು.ಯಾಜಕರೂ ಲೇವಿಯರೂ ಜನರಲ್ಲಿ ಕೆಲವರೂ ಹಾಡುಗಾರರೂ ಬಾಗಲು ಕಾಯುವವರು ನೆತನಿಮಿ ನವರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಇಸ್ರಾ ಯೇಲ್ಯರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು.
- Luke 21:2–4 ಲೂಕನು 21:2–4ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು ಅದರಲ್ಲಿ ಹಾಕುವದನ್ನು ಆತನು ನೋಡಿದನು. ಆತನು--ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಈ ಬಡ ವಿಧವೆಯು ಅವರೆಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ; ಯಾಕಂದರೆ ಇವರೆಲ್ಲರೂ ತಮಗಿರುವ ಸಮೃದ್ಧಿಯಲ್ಲಿ ದೇವರಿಗೆ ಕಾಣಿಕೆಗಳನ್ನು ಹಾಕಿದ್ದಾರೆ; ಆದರೆ ಈಕೆಯು ತನ್ನ ಬಡತನದಲ್ಲಿ ತನ್ನ ಜೀವನಕ್ಕೆ ಇದ್ದದ್ದನ್ನೆಲ್ಲಾ ಹಾಕಿದ್ದಾಳೆ ಅಂದನು.
- Luke 8:43 ಲೂಕನು 8:43ಆಗ ಹನ್ನೆರಡು ವರುಷಗಳಿಂದಲೂ ರಕ್ತಸ್ರಾವ ರೋಗವಿದ್ದು ತನ್ನ ಜೀವನಕ್ಕೆ ಇದ್ದದ್ದನ್ನು ವೈದ್ಯರಿಗೆ ವೆಚ್ಚಮಾಡಿದ್ದಾಗ್ಯೂ ಯಾರಿಂದಲೂ ವಾಸಿಯಾಗದೆ ಇದ್ದ ಒಬ್ಬ ಸ್ತ್ರೀಯು
- Luke 15:30 ಲೂಕನು 15:30ಆದರೆ ನಿನ್ನ ಬದುಕನ್ನು ಸೂಳೆಯ ರೊಂದಿಗೆ ನುಂಗಿಬಿಟ್ಟ ಈ ನಿನ್ನ ಮಗನು ಬಂದ ಕೂಡಲೆ ಅವನಿಗೋಸ್ಕರ ಕೊಬ್ಬಿದ ಕರುವನ್ನು ನೀನು ಕೊಯ್ಸಿದ್ದೀ ಅಂದನು.
- 2 Chronicles 24:10–14 2 ಪೂರ್ವಕಾಲವೃತ್ತಾಂತ 24:10–14ಆಗ ಎಲ್ಲಾ ಪ್ರಧಾನರೂ ಜನರೂ ಸಂತೋಷಪಟ್ಟು ತಕ್ಕೊಂಡು ಒಂದು ಪೆಟ್ಟಿಗೆಯೊಳಗೆ ತುಂಬುವಷ್ಟು ಹಾಕಿದರು. ಪೆಟ್ಟಿಗೆಯು ಲೇವಿಯರ ಕೈಯಿಂದ ಅರಸನ ಆಸ್ಥಾನಕ್ಕೆ ತರಲ್ಪಟ್ಟಾಗ ಅದರಲ್ಲಿ ಬಹಳ ಹಣ ಕಾಣಿಸಿದ್ದರಿಂದ ಅರಸನ ಶಾಸ್ತ್ರಿಯೂ ಪ್ರಧಾನ ಯಾಜಕನ ಪರಿಚಾರ ಕನೂ ಬಂದು ಪೆಟ್ಟಿಗೆಯನ್ನು ಬರಿದುಮಾಡಿ ತಕ್ಕೊಂಡು ತಿರಿಗಿ ಅದರ ಸ್ಥಳಕ್ಕೆ ಒಯ್ದಿಟ್ಟರು. ಹೀಗೆಯೇ ಅವರು ಪ್ರತಿದಿನ ಮಾಡಿ ಹಣವನ್ನು ಬಹಳ ಕೂಡಿಸಿದರು. ಆಗ ಅರಸನೂ ಯೆಹೋಯಾದನೂ ಅದನ್ನು ಕರ್ತನ ಆಲಯದ ಸೇವೆಯ ಕಾರ್ಯವನ್ನು ಮಾಡುವ ವರಿಗೆ ಕೊಟ್ಟು ಅವರಿಂದ ಮಾಡಿಸಿದನು. ಕರ್ತನ ಆಲಯವನ್ನು ದುರಸ್ತು ಪಡಿಸುವ ನಿಮಿತ್ತ ಕಲ್ಲು ಕಡಿಯುವವರನ್ನೂ ಬಡಿಗಿಯವರನ್ನೂ ಕೂಲಿಗೆ ಕರ ಕೊಂಡರು. ಕರ್ತನ ಆಲಯವನ್ನು ಭದ್ರಮಾಡುವ ನಿಮಿತ್ತ ಕಬ್ಬಿಣ ಹಿತ್ತಾಳೆ ಕೆಲಸ ಮಾಡುವವರನ್ನು ಕೂಲಿಗೆ ಕರಕೊಂಡರು. ಹೀಗೆಯೇ ಕೆಲಸದವರು ಕೆಲಸವನ್ನು ನಡಿಸಿದ್ದರಿಂದ ಕೆಲಸವು ಅವರ ಕೈಯಿಂದ ಪೂರ್ಣ ವಾಯಿತು, ಅವರು ಕರ್ತನ ಆಲಯವನ್ನು ಇದ್ದ ಸ್ಥಿತಿಯಲ್ಲಿ ನಿಲ್ಲಿಸಿ ಅದನ್ನು ಬಲಪಡಿಸಿದರು. ಅವರು ಅದನ್ನು ಮುಗಿಸಿದ ಮೇಲೆ ಮಿಕ್ಕ ಹಣವನ್ನು ಅರ ಸನ ಮುಂದೆಯೂ ಯೆಹೋಯಾದನ ಮುಂದೆಯೂ ತಂದರು. ಅದರಿಂದ ಕರ್ತನ ಆಲಯಕ್ಕೋಸ್ಕರ ಬಂಗಾ ರದ ಬೆಳ್ಳಿಪಾತ್ರೆಗಳಾದ ಸೇವೆಯ ಪಾತ್ರೆಗಳೂ ಅರ್ಪಣೆಯ ಪಾತ್ರೆಗಳೂ ಸೌಟುಗಳೂ ಮಾಡಲ್ಪ ಟ್ಟವು. ಯೆಹೋಯಾದನ ಸಮಸ್ತ ದಿವಸಗಳಲ್ಲಿ ಯಾವಾಗಲೂ ಕರ್ತನ ಆಲಯದಲ್ಲಿ ದಹನಬಲಿ ಗಳನ್ನು ಅರ್ಪಿಸಿದರು.
- Deuteronomy 24:6 ಧರ್ಮೋಪದೇಶಕಾಂಡ 24:6ಬೀಸುವ ಕಲ್ಲಿನಲ್ಲಿ ಅಡಿಕಲ್ಲಾದರೂ ಮೇಲ್ಕಲ್ಲಾ ದರೂ ಒತ್ತೆಯಾಗಿ ತಕ್ಕೊಳ್ಳಬಾರದು; ಹಾಗೆ ಮಾಡಿದರೆ ಪ್ರಾಣವನ್ನು ಒತ್ತೆಯಾಗಿ ತಕ್ಕೊಂಡ ಹಾಗಿರುವದು.
- Philippians 4:10–17 ಫಿಲಿಪ್ಪಿಯವರಿಗೆ 4:10–17ಈಗಲಾದರೋ ನನ್ನ ವಿಷಯವಾದ ನಿಮ್ಮ ಯೋಚನೆಯು ನಿಮ್ಮಲ್ಲಿ ಪುನಃ ಚಿಗುರಿದ್ದಕ್ಕೆ ನಾನು ಕರ್ತನಲ್ಲಿ ಬಹಳವಾಗಿ ಸಂತೋಷಪಟ್ಟೆನು. ಈ ವಿಷಯ ದಲ್ಲಿ ನೀವು ಯೋಚನೆಯುಳ್ಳವರಾಗಿದ್ದರೂ ನಿಮಗೆ ಸಂದರ್ಭ ಸಿಕ್ಕಲಿಲ್ಲವೇನೋ. ಕೊರತೆಯಲ್ಲಿದ್ದೇ ನೆಂದು ನಾನು ಇದನ್ನು ಹೇಳುವದಿಲ್ಲ; ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತು ಕೊಂಡಿದ್ದೇನೆ. ನಾನು ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು, ನಾನು ತೃಪ್ತನಾಗಿ ದ್ದರೂ ಹಸಿದವನಾಗಿದ್ದರೂ ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲಿರುವವನಾದರೂ ಅವೆಲ್ಲವುಗಳನ್ನು ನಾನು ಕಲಿತು ಕೊಂಡಿದ್ದೇನೆ. ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು. ಹೀಗಿದ್ದರೂ ನೀವು ನನ್ನ ಸಂಕಟದಲ್ಲಿ ಪಾಲುಗಾರ ರಾಗಿದ್ದದ್ದು ಒಳ್ಳೇದಾಯಿತು. ಇದಲ್ಲದೆ ಫಿಲಿಪ್ಪಿ ಯವರೇ, ಸುವಾರ್ತೆಯ ಪ್ರಾರಂಭದಲ್ಲಿ ನಾನು ಮಕೆದೋನ್ಯದಿಂದ ಹೊರಟಾಗ ಕೊಡುವದರ ಮತ್ತು ತೆಗೆದುಕೊಳ್ಳುವದರ ವಿಷಯದಲ್ಲಿ ನಿಮ್ಮ ಹೊರತು ಬೇರೆ ಸಭೆಯು ನನ್ನೊಂದಿಗೆ ಭಾಗವಹಿಸಲಿಲ್ಲವೆಂದು ನೀವು ಸಹ ಬಲ್ಲಿರಿ. ನಾನು ಥೆಸಲೋನಿಕದಲ್ಲಿ ದ್ದಾಗಲೂ ನೀವು ಕೆಲವು ಸಾರಿ ನನ್ನ ಕೊರತೆಯನ್ನು ನೀಗಿಸುವದಕ್ಕೆ ಕೊಟ್ಟು ಕಳುಹಿಸಿದಿರಲ್ಲಾ. ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವೆನೆಂತಲ್ಲ ಆದರೆ ನಿಮ್ಮ ಲೆಕ್ಕಕ್ಕೆ ಸಮೃದ್ಧಿಯಾದ ಫಲವನ್ನೇ ಅಪೇಕ್ಷಿಸು ತ್ತೇನೆ. ಆದರೆ ಬೇಕಾದದ್ದೆಲ್ಲ ನನಗುಂಟು, ಸಮೃದ್ಧಿ ಯಾಯಿತು.
- 2 Chronicles 31:5–10 2 ಪೂರ್ವಕಾಲವೃತ್ತಾಂತ 31:5–10ಈ ಆಜ್ಞೆ ಹೊರಗೆ ಬಂದಾಗಲೇ ಇಸ್ರಾಯೇಲ್ ಮಕ್ಕಳು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು, ಹೊಲಗಳ ಹುಟ್ಟುವಳಿ ಇವುಗಳ ಮೊದಲನೇ ಪಾಲನ್ನು ಬಹಳವಾಗಿ ಒಳಗೆ ತಂದರು. ಹಾಗೆಯೇ ಸಮಸ್ತ ವಸ್ತುಗಳಲ್ಲಿ ದಶಮಾಂಶದ ಪಾಲನ್ನು ಬಹಳ ವಾಗಿ ತಂದರು; ಇದಲ್ಲದೆ ಯೆಹೂದ ಪಟ್ಟಣಗಳಲ್ಲಿ ನಿವಾಸವಾಗಿರುವ ಇಸ್ರಾಯೇಲ್ ಯೆಹೂದ ಮಕ್ಕಳು ದನಗಳಲ್ಲಿಯೂ ಕುರಿಗಳಲ್ಲಿಯೂ ದಶಮಾಂಶ ತಂದರು. ತಮ್ಮ ದೇವರಾದ ಕರ್ತನಿಗೆ ಪರಿಶುದ್ಧ ಮಾಡಿದ ಪರಿಶುದ್ಧ ವಸ್ತುಗಳಲ್ಲಿ ದಶ ಮಾಂಶದ ಪಾಲು ತಂದು ರಾಶಿರಾಶಿಯಾಗಿ ಇಟ್ಟರು. ಮೂರನೇ ತಿಂಗಳಲ್ಲಿ ರಾಶಿಗಳ ತಳಹದಿ ಆರಂಭಿಸಿ ಏಳನೇ ತಿಂಗಳಲ್ಲಿ ತೀರಿಸಿದರು. ಹಿಜ್ಕೀಯನೂ ಪ್ರಧಾನರೂ ಬಂದು ರಾಶಿಗಳನ್ನು ನೋಡಿದಾಗ ಅವರು ಕರ್ತನನ್ನೂ ಆತನ ಜನವಾದ ಇಸ್ರಾಯೇ ಲನ್ನೂ ಸ್ತುತಿಸಿದರು. ಆಗ ಹಿಜ್ಕೀಯನು ರಾಶಿಗಳನ್ನು ಕುರಿತು ಯಾಜಕರನ್ನೂ ಲೇವಿಯರನ್ನೂ ವಿಚಾರಿಸಿದನು. ಚಾದೋಕನ ಮನೆಯವನಾಗಿರುವ ಪ್ರಧಾನ ಯಾಜಕನಾದ ಅಜರ್ಯನು ಅವನಿಗೆ -- ಕರ್ತನ ಮನೆಗೆ ಕಾಣಿಕೆಗಳನ್ನು ತರಲು ಆರಂಭಿಸಿದಂದಿನಿಂದ ನಿಮಗೆ ತಿನ್ನುವದಕ್ಕೆ ಸಂಪೂರ್ಣವಿತ್ತು; ಉಳಿದದ್ದು ಬಹಳವಾಯಿತು; ಯಾಕಂದರೆ ಕರ್ತನು ತನ್ನ ಜನ ರನ್ನು ಆಶೀರ್ವದಿಸಿದ್ದಾನೆ. ಆದದರಿಂದ ಉಳಿದದ್ದು ಈ ರಾಶಿಯಾಯಿತು ಎಂದು ಹೇಳಿದನು.
- 2 Chronicles 35:7–8 2 ಪೂರ್ವಕಾಲವೃತ್ತಾಂತ 35:7–8ಆಗ ಯೋಷೀಯನು ಸಿದ್ಧವಾಗಿದ್ದ ಸಮಸ್ತ ಜನ ರಿಗೆ ಪಸ್ಕದ ಬಲಿಗೋಸ್ಕರ ಮಂದೆಯಿಂದ ಮೂವತ್ತು ಸಾವಿರ ಕುರಿಮರಿಗಳನ್ನೂ ಮೇಕೆಯ ಮರಿಗಳನ್ನೂ ಕೊಟ್ಟನು. ಇದಲ್ಲದೆ ಮೂರು ಸಾವಿರ ಎತ್ತುಗಳನ್ನು ಕೊಟ್ಟನು; ಇವೆಲ್ಲಾ ಅರಸನ ಸೊತ್ತಿನಿಂದಲೇ ಹಾಗೆಯೇ ಅವನ ಪ್ರಧಾನರು ಜನರಿಗೂ ಯಾಜಕ ರಿಗೂ ಲೇವಿಯರಿಗೂ ಮನಃಪೂರ್ವಕವಾಗಿ ಕೊಟ್ಟರು. ದೇವರ ಆಲಯದ ನಾಯಕರಾದ ಹಿಲ್ಕೀಯನೂ ಜೆಕರೀಯನೂ ಯೆಹೀಯೇಲನೂ ಪಸ್ಕದ ಬಲಿ ಗೋಸ್ಕರ ಎರಡು ಸಾವಿರದ ಆರು ನೂರು ಮರಿ ಗಳನ್ನೂ ಮುನ್ನೂರು ಎತ್ತುಗಳನ್ನೂ ಯಾಜಕರಿಗೆ ಕೊಟ್ಟರು.