Mark · chapter 13 · verse 14
Mark 13:14 in Kannada
ಇದಲ್ಲದೆ ಪ್ರವಾದಿಯಾದ ದಾನಿಯೇಲನು ಹೇಳಿದಂತೆ ಹಾಳುಮಾಡುವ ಅಸಹ್ಯವು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವದನ್ನು ನೀವು ನೋಡುವಾಗ (ಓದು ವವನು ತಿಳುಕೊಳ್ಳಲಿ) ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
Idallade pravaadiyaada daaniyelanu helidante haalumaaduva asahyavu nillabaarada sthaladalli nintiruvadannu neevu noduvaaga (odu vavanu tilukollali) yoodaayadalli iruvavaru bettagalige odihogali.
Mark 13:14 in English
- King James Version (KJV)
- But when ye shall see the abomination of desolation, spoken of by Daniel the prophet, standing where it ought not, (let him that readeth understand,) then let them that be in Judæa flee to the mountains:
- World English Bible (WEB)
- “But when you see the abomination of desolation, spoken of by Daniel the prophet, standing where it ought not” (let the reader understand), “then let those who are in Judea flee to the mountains,
- American Standard Version (ASV)
- But when ye see the abomination of desolation standing where he ought not (let him that readeth understand), then let them that are in Judæa flee unto the mountains:
- Bible in Basic English (BBE)
- But when you see the unclean thing which makes destruction, in the place where it has no right to be (let this be clear to the reader), then let those who are in Judaea go quickly to the mountains:
- Darby Translation (DBY)
- But when ye shall see the abomination of desolation standing where it should not, (he that reads let him consider [it],) then let those in Judaea flee to the mountains;
- Webster's Bible (WBS)
- But when ye shall see the abomination of desolation, spoken of by Daniel the prophet, standing where it ought not, (let him that readeth understand) then let them that are in Judea flee to the mountains:
- Young's Literal Translation (YLT)
- 'And when ye may see the abomination of the desolation, that was spoken of by Daniel the prophet, standing where it ought not, (whoever is reading let him understand), then those in Judea, let them flee to the mountains;
Read in context
- 12ಆಗ ಸಹೋದರನು ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವ ರನ್ನು ಕೊಲ್ಲಿಸುವದಕ್ಕೆ ಕಾರಣರಾಗುವರು.
- 13ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡು ವರು. ಆದರೆ ಕಡೇವರೆಗೂ ತಾಳುವವನೇ ರಕ್ಷಣೆ ಹೊಂದುವನು.
- 14ಇದಲ್ಲದೆ ಪ್ರವಾದಿಯಾದ ದಾನಿಯೇಲನು ಹೇಳಿದಂತೆ ಹಾಳುಮಾಡುವ ಅಸಹ್ಯವು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವದನ್ನು ನೀವು ನೋಡುವಾಗ (ಓದು ವವನು ತಿಳುಕೊಳ್ಳಲಿ) ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
- 15ಮನೇಮಾಳಿಗೆಯ ಮೇಲಿದ್ದವನು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದೆ ಯೂ ಇಲ್ಲವೆ ತನ್ನ ಮನೆಯೊಳಗೆ ಪ್ರವೇಶಿಸಿ ಅದರೊ ಳಗಿಂದ ಏನನ್ನೂ ತಕ್ಕೊಳ್ಳದೆಯೂ ಇರಲಿ.
- 16ಹೊಲ ದಲ್ಲಿರುವವನು ಮತ್ತೆ ತನ್ನ ಉಡುಪನ್ನು ತಕ್ಕೊಳ್ಳುವದಕ್ಕೆ ಹಿಂದಿರುಗದಿರಲಿ.
Cross references
- Daniel 9:27 ದಾನಿಯೇಲನು 9:27ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.
- Daniel 12:11 ದಾನಿಯೇಲನು 12:11ಪ್ರತಿದಿನದ ಯಜ್ಞವು ಸಕಾಲಕ್ಕೆ ತೆಗೆದುಹಾಕಲ್ಪಟ್ಟು ಹಾಳುಮಾಡುವಂಥ ಅಸಹ್ಯವು ಇರಿಸಲ್ಪಡುವ ವರೆಗೂ ಸಾವಿರದ ಇನ್ನೂರ ತೊಂಭತ್ತೊಂಭತ್ತು ದಿನಗಳು ಇರುವವು.
- Daniel 11:31 ದಾನಿಯೇಲನು 11:31ಅವನು ಕೂಡಿಸುವ ಸೈನ್ಯವು ಆಶ್ರಯ ದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ, ನಿತ್ಯ ಯಜ್ಞವನ್ನು ನೀಗಿಸಿ, ಹಾಳು ಮಾಡುವ ಅಸಹ್ಯವಾದವುಗಳನ್ನು ಪ್ರತಿಷ್ಠಿಸುವದು.
- Matthew 24:15–28 ಮತ್ತಾಯನು 24:15–28ಆದದರಿಂದ ಪ್ರವಾದಿಯಾದ ದಾನಿಯೇಲನಿಂದ ಹೇಳಲ್ಪಟ್ಟ ಹಾಳುಮಾಡುವ ಅಸಹ್ಯವು ಪರಿಶುದ್ಧ ಸ್ಥಳದಲ್ಲಿ ನಿಂತಿರುವದನ್ನು ನೀವು ನೋಡುವಾಗ (ಓದುವವನು ಗ್ರಹಿಸಲಿ) ಯೂದಾಯದಲ್ಲಿ ದ್ದವರು ಬೆಟ್ಟಗಳಿಗೆ ಓಡಿ ಹೋಗಲಿ; ಮಾಳಿಗೆಯ ಮೇಲಿರುವವನು ತನ್ನ ಮನೆಯೊಳಗಿಂದ ಏನಾದರೂ ತಕ್ಕೊಳ್ಳುವದಕ್ಕಾಗಿ ಕೆಳಗೆ ಇಳಿಯದಿರಲಿ; ಇಲ್ಲವೆ ಹೊಲದಲ್ಲಿರುವವನು ತನ್ನ ಬಟ್ಟೆಗಳನ್ನು ತಕ್ಕೊಳ್ಳುವ ದಕ್ಕಾಗಿ ಹಿಂತಿರುಗದೆ ಇರಲಿ. ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಮೊಲೆಕುಡಿಸುವ ಕೂಸುಗಳಿದ್ದ ವರಿಗೂ ಅಯ್ಯೋ! ಆದರೆ ನಿಮ್ಮ ಪಲಾಯನವು ಚಳಿಗಾಲದಲ್ಲಾಗಲೀ ಸಬ್ಬತ್ತಿನ ದಿನದಲ್ಲಾಗಲೀ ಆಗದಂತೆ ಪ್ರಾರ್ಥಿಸಿರಿ. ಅಂಥ ಮಹಾ ಸಂಕಟವು ಲೋಕಾದಿಯಿಂದ ಇಂದಿನವರೆಗೂ ಆಗಲಿಲ್ಲ, ಆಮೇಲೆ ಎಂದಿಗೂ ಆಗುವದಿಲ್ಲ. ಆ ದಿವಸಗಳು ಕಡಿಮೆ ಮಾಡಲ್ಪಡದಿದ್ದರೆ ಯಾವನೂ ಉಳಿಯು ವದಿಲ್ಲ; ಆದರೆ ಆಯಲ್ಪಟ್ಟವರಿಗಾಗಿ ಆ ದಿವಸಗಳು ಕಡಿಮೆ ಮಾಡಲ್ಪಡುವವು. ಆಗ ಯಾರಾದರೂ ನಿಮಗೆ--ಇಗೋ, ಕ್ರಿಸ್ತನು ಇಲ್ಲಿದ್ದಾನೆ ಇಲ್ಲವೆ ಅಲ್ಲಿದ್ದಾನೆ ಎಂದು ಹೇಳಿದರೆ ಅದನ್ನು ನಂಬಬೇಡಿರಿ. ಯಾಕಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಸಾಧ್ಯವಾದರೆ ಆಯಲ್ಪಟ್ಟವರನ್ನು ಸಹ ಮೋಸಗೊಳಿಸುವಂತೆ ದೊಡ್ಡ ಸೂಚಕ ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸು ವರು. ಇಗೋ, ಮುಂದಾಗಿ ನಾನು ನಿಮಗೆ ಹೇಳಿದ್ದೇನೆ. ಆದಕಾರಣ ಅವರು ನಿಮಗೆ--ಇಗೋ, ಆತನು ಅಡವಿಯಲ್ಲಿದ್ದಾನೆಂದು ಹೇಳಿದರೆ ಹೋಗಬೇಡಿರಿ; ಇಗೋ, ಆತನು ಗುಪ್ತವಾದ ಕೋಣೆಗಳಲ್ಲಿದ್ದಾನೆಂದು ಹೇಳಿದರೆ ಅದನ್ನು ನಂಬ ಬೇಡಿರಿ. ಯಾಕಂದರೆ ಮಿಂಚು ಪೂರ್ವದಿಂದ ಹೊರಟು ಬಂದು ಪಶ್ಚಿಮದವರೆಗೆ ಹೊಳೆಯು ವಂತೆಯೇ ಮನುಷ್ಯಕುಮಾರನ ಬರೋಣವೂ ಇರು ವದು. ಯಾಕಂದರೆ ಹೆಣ ಇದ್ದಲ್ಲಿ ಹದ್ದುಗಳು ಕೂಡಿಕೊಳ್ಳುವವು.
- Luke 21:20–24 ಲೂಕನು 21:20–24ಆದರೆ ಸೈನ್ಯಗಳು ಯೆರೂಸಲೇ ಮನ್ನು ಮುತ್ತಿಗೆ ಹಾಕುವದನ್ನು ನೀವು ನೋಡುವಾಗ ಅದು ಹಾಳಾಗುವ ಕಾಲವು ಸವಿಾಪಿಸಿದೆ ಎಂದು ತಿಳಿದುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಅದರ ಮಧ್ಯದಲ್ಲಿ ರುವವರು ಹೊರಟುಹೋಗಲಿ; ಇದಲ್ಲದೆ ಹಳ್ಳಿಗಳಲ್ಲಿ ಇರುವವರು ಅವುಗಳಲ್ಲಿ ಪ್ರವೇಶಿಸದೆ ಇರಲಿ. ಬರೆದಿರುವವುಗಳೆಲ್ಲವೂ ನೆರವೇರುವಂತೆ ಇವು ಮುಯ್ಯಿತೀರಿಸುವ ದಿವಸಗಳಾಗಿವೆ. ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಮೊಲೆ ಕುಡಿಸುವ ವರಿಗೂ ಅಯ್ಯೊ! ಯಾಕಂದರೆ ದೇಶದಲ್ಲಿ ಮಹಾ ವಿಪತ್ತೂ ಈ ಜನರ ಮೇಲೆ ಕೋಪವೂ ಆಗ ಇರು ವದು. ಇದಲ್ಲದೆ ಅವರು ಕತ್ತಿಯ ಬಾಯಿಗೆ ಬೀಳುವರು. ಸೆರೆಯಾಗಿ ಎಲ್ಲಾ ಜನಾಂಗಗಳಲ್ಲಿ ಒಯ್ಯ ಲ್ಪಡುವರು;ಅನ್ಯಜನಗಳ ಕಾಲಗಳು ಪರಿಪೂರ್ಣ ವಾಗುವ ವರೆಗೆ ಯೆರೂಸಲೇಮು ಅನ್ಯಜನಗಳಿಂದ ತುಳಿದಾಡಲ್ಪಡುವದು.
- 1 Corinthians 14:20 1 ಕೊರಿಂಥದವರಿಗೆ 14:20ಸಹೋದರರೇ, ಬುದ್ಧಿಯ ವಿಷಯ ದಲ್ಲಿ ಬಾಲಕರಾಗಿರಬೇಡಿರಿ; ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಬೇಕು.
- Acts 8:30–31 ಅಪೊಸ್ತಲರ ಕೃತ್ಯಗಳು 8:30–31ಫಿಲಿಪ್ಪನು ಓಡಿಹೋಗಿ ಆ ಮನುಷ್ಯನು ಯೆಶಾಯ ಪ್ರವಾದಿಯ ಗ್ರಂಥವನ್ನು ಓದುತ್ತಿರುವದನ್ನು ಕೇಳಿ--ನೀನು ಓದುವದು ನಿನಗೆ ತಿಳಿಯುತ್ತದೋ ಅನ್ನಲು ಅವನು-ಯಾರಾದರೂ ನನಗೆ ತಿಳಿಸದ ಹೊರತು ಅದು ನನಗೆ ಹೇಗೆ ತಿಳಿದೀತು ಎಂದು ಹೇಳಿ ಫಿಲಿಪ್ಪನು ಮೇಲಕ್ಕೆ ಬಂದು ತನ್ನ ಬಳಿಯಲ್ಲಿ ಕೂತುಕೊಳ್ಳಬೇಕೆಂದು ಅವನು ಅಪೇಕ್ಷೆಪಟ್ಟನು.
- Lamentations 1:10 ಪ್ರಲಾಪಗಳು 1:10ವೈರಿಯು ಆಕೆಯ ಎಲ್ಲಾ ರಮ್ಯವಾದ ವಸ್ತುಗಳ ಮೇಲೆ ತನ್ನ ಕೈ ಚಾಚಿದ್ದಾನೆ. ನಿನ್ನ ಸಭೆಯಲ್ಲಿ ಸೇರ ಬಾರದೆಂದು ನೀನು ಆಜ್ಞಾಪಿಸಿದ ಅನ್ಯ ಜನಾಂಗಗಳು ತನ್ನ ಪರಿಶುದ್ಧ ಸ್ಥಳದಲ್ಲಿ ಸೇರಿರುವದನ್ನು ನೋಡಿದ್ದಾಳೆ.
- Revelation 1:3 ಪ್ರಕಟನೆ 1:3ಇದನ್ನು ಓದುವಂಥ ವನೂ ಈ ಪ್ರವಾದನಾ ವಾಕ್ಯಗಳನ್ನು ಕೇಳುವಂಥವರೂ ಅದರಲ್ಲಿ ಬರೆದಿರುವಂಥವುಗಳನ್ನು ಕಾಪಾಡುವಂಥ ವರೂ ಧನ್ಯರು. ಯಾಕಂದರೆ ಕಾಲವು ಸವಿಾಪವಾಗಿದೆ.
- Daniel 8:13 ದಾನಿಯೇಲನು 8:13ಆ ಮೇಲೆ ಒಬ್ಬ ಪರಿಶುದ್ಧನು ಮಾತನಾಡುವದನ್ನು ಕೇಳಿದೆನು; ಮಾತನಾಡಿದಾತನಿಗೆ ಮತ್ತೊಬ್ಬ ಪರಿ ಶುದ್ಧನು ಹೇಳಿದ್ದೇನಂದರೆ--ನಿತ್ಯ ಯಜ್ಞವನ್ನು ನಿಲ್ಲಿಸು ವದೂ ಹಾಳು ಮಾಡುವ ಅಪರಾಧವನ್ನು ತಡೆಯು ವದೂ ಪರಿಶುದ್ಧ ಸ್ಥಳವನ್ನೂ ಸೈನ್ಯವನ್ನೂ ಕಾಲಡಿಯಲ್ಲಿ ತುಳಿಯುವದೂ ಆಗುವಂತೆ ಕನಸು ಎಷ್ಟು ಕಾಲ ನಿಲ್ಲುವದು ಅಂದಾಗ
- Revelation 13:18 ಪ್ರಕಟನೆ 13:18ಇದರಲ್ಲಿ ಜ್ಞಾನವಿದೆ. ತಿಳುವಳಿಕೆಯುಳ್ಳವನು ಆ ಮೃಗದ ಅಂಕೆಯನ್ನು ಎಣಿಸಲಿ; ಯಾಕಂದರೆ ಅದು ಒಬ್ಬ ಮನುಷ್ಯನ ಅಂಕೆಯಾಗಿದೆ; ಅವನ ಅಂಕೆಯು ಆರುನೂರ ಅರವತ್ತಾರು.
- Ezekiel 44:9 ಯೆಹೆಜ್ಕೇಲನು 44:9ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಹೃದಯದಲ್ಲಿಯೂ ಶರೀರದ ಲ್ಲಿಯೂ ಸುನ್ನತಿಯಿಲ್ಲದ ಯಾವೊಬ್ಬ ಪರಕೀಯನೂ ಇಸ್ರಾಯೇಲಿನ ಮಕ್ಕಳೊಳಗಿರುವ ಯಾವೊಬ್ಬ ಅಪರಿಚಿತನೂ ನನ್ನ ಪರಿಶುದ್ಧಸ್ಥಳದೊಳಗೆ ಪ್ರವೇಶಿಸ ಬಾರದು.