Mark · chapter 14 · verse 30
Mark 14:30 in Kannada
ಆದರೆ ಯೇಸು ಅವನಿಗೆ--ಈ ದಿವಸ ಈ ರಾತ್ರಿಯೇ ಎರಡು ಸಾರಿ ಹುಂಜ ಕೂಗುವದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ಅಲ್ಲಗಳೆಯುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು.
Aadare yesu avanige--ee divasa ee raatriye eradu saari hunja kooguvadakkinta modalu mooru saari neenu nannannu allagaleyuvi endu naanu ninage nijavaagi heluttene andanu.
Mark 14:30 in English
- King James Version (KJV)
- And Jesus saith unto him, Verily I say unto thee, That this day, [even] in this night, before the cock crow twice, thou shalt deny me thrice.
- World English Bible (WEB)
- Jesus said to him, “Most certainly I tell you that you today, even this night, before the rooster crows twice, you will deny me three times.”
- American Standard Version (ASV)
- And Jesus saith unto him, Verily I say unto thee, that thou to-day, [even] this night, before the cock crow twice, shalt deny me thrice.
- Bible in Basic English (BBE)
- And Jesus said to him, Truly, I say to you that you, today, even this night, before the cock's second cry, will say three times that you have no knowledge of me.
- Darby Translation (DBY)
- And Jesus says to him, Verily I say to thee, that thou to-day, in this night, before [the] cock shall crow twice, thou shalt thrice deny me.
- Webster's Bible (WBS)
- And Jesus saith to him, Verily I say to thee, that this day, [even] in this night, before the cock shall crow twice, thou wilt deny me thrice.
- Young's Literal Translation (YLT)
- And Jesus said to him, 'Verily I say to thee, that to-day, this night, before a cock shall crow twice, thrice thou shalt deny me.'
Read in context
- 28ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗು ವೆನು ಎಂದು ಹೇಳಿದನು.
- 29ಆದರೆ ಪೇತ್ರನು ಆತ ನಿಗೆ ಎಲ್ಲರೂ ಅಭ್ಯಂತರಪಟ್ಟಾಗ್ಯೂ ನಾನು ಅಭ್ಯಂತರ ಪಡುವದಿಲ್ಲ ಎಂದು ಹೇಳಿದನು.
- 30ಆದರೆ ಯೇಸು ಅವನಿಗೆ--ಈ ದಿವಸ ಈ ರಾತ್ರಿಯೇ ಎರಡು ಸಾರಿ ಹುಂಜ ಕೂಗುವದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ಅಲ್ಲಗಳೆಯುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು.
- 31ಆದರೆ ಅವನು--ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅಲ್ಲಗಳೆಯುವದಿಲ್ಲ ಎಂದು ಬಹು ಆವೇಶದಿಂದ ಹೇಳಿದನು. ಅದರಂತೆಯೇ ಅವರೆಲ್ಲರೂ ಹೇಳಿದರು.
- 32ಆಗ ಅವರು ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದಾಗ ಆತನು ತನ್ನ ಶಿಷ್ಯರಿಗೆ--ನಾನು ಪ್ರಾರ್ಥನೆ ಮಾಡು ವಾಗ ನೀವು ಇಲ್ಲಿ ಕೂತುಕೊಂಡಿರ್ರಿ ಅಂದನು.
Cross references
- John 13:38 ಯೋಹಾನನು 13:38ಯೇಸು ಪ್ರತ್ಯುತ್ತರವಾಗಿ ಅವ ನಿಗೆ--ನೀನು ನನಗೋಸ್ಕರ ನಿನ್ನ ಪ್ರಾಣವನ್ನು ಕೊಡು ತ್ತೀಯೋ? ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವ ತನಕ ಹುಂಜವು ಕೂಗುವದಿಲ್ಲ ಅಂದನು.
- Mark 14:66–72 ಮಾರ್ಕನು 14:66–72ಇದಲ್ಲದೆ ಪೇತ್ರನು ಭವನದ ಕೆಳಭಾಗದಲ್ಲಿದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಅಲ್ಲಿಗೆ ಬಂದಳು. ಪೇತ್ರನು ಚಳಿಕಾಯಿಸಿಕೊಳ್ಳುತ್ತಿರು ವದನ್ನು ಆಕೆಯು ಕಂಡು ಅವನನ್ನು ದೃಷ್ಟಿಸಿ ನೋಡಿ--ನೀನು ಸಹ ಆ ನಜರೇತಿನ ಯೇಸುವಿ ನೊಂದಿಗೆ ಇದ್ದವನು ಅಂದಳು. ಆದರೆ ಅವನು ಅಲ್ಲಗಳೆದು--ನನಗೆ ಗೊತ್ತಿಲ್ಲ, ನೀನು ಏನು ಹೇಳುತ್ತೀಯೋ ನನಗೆ ತಿಳಿಯುವದಿಲ್ಲ ಎಂದು ಹೇಳಿ ಅಲ್ಲಗಳೆದು ಹೊರಗೆ ದ್ವಾರಾಂಗಳದೊಳಗೆ ಹೋದನು; ಆಗ ಹುಂಜ ಕೂಗಿತು. ಆ ದಾಸಿಯು ಅವನನ್ನು ತಿರಿಗಿ ನೋಡಿ ಪಕ್ಕದಲ್ಲಿ ನಿಂತಿದ್ದವರಿಗೆ--ಇವನು ಅವರಲ್ಲಿ ಒಬ್ಬನು ಎಂದು ಹೇಳಲಾರಂಭಿಸಿದಳು. ಆಗ ಅವನು ಮತ್ತೆ ಅಲ್ಲಗಳೆದನು. ತುಸು ಹೊತ್ತಾದ ಮೇಲೆ ಪಕ್ಕದಲ್ಲಿ ನಿಂತಿದ್ದವರು ತಿರಿಗಿ ಪೇತ್ರನಿಗೆ--ನಿಶ್ಚಯವಾಗಿಯೂ ನೀನು ಅವರಲ್ಲಿ ಒಬ್ಬನು; ಯಾಕಂದರೆ ನೀನು ಗಲಿಲಾಯದವನು ಮತ್ತು ನಿನ್ನ ಭಾಷೆ ಅದಕ್ಕೆ ಒಪ್ಪುತ್ತದೆ ಅಂದರು. ಆದರೆ ಅವನು ಶಪಿಸಿ ಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಆರಂ ಭಿಸಿ--ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ ಅಂದನು.ಆಗ ಎರಡನೇ ಸಾರಿ ಹುಂಜ ಕೂಗಿತು. ಹೀಗೆ--ಎರಡು ಸಾರಿ ಹುಂಜ ಕೂಗುವದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು ಅದನ್ನು ಯೋಚಿಸಿ ಅತ್ತನು. ಆಗ ಎರಡನೇ ಸಾರಿ ಹುಂಜ ಕೂಗಿತು. ಹೀಗೆ--ಎರಡು ಸಾರಿ ಹುಂಜ ಕೂಗುವದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು ಅದನ್ನು ಯೋಚಿಸಿ ಅತ್ತನು.
- 1 Corinthians 10:12 1 ಕೊರಿಂಥದವರಿಗೆ 10:12ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳ ದಂತೆ ಎಚ್ಚರಿಕೆಯಾಗಿರಲಿ.
- Genesis 1:8 ಆದಿಕಾಂಡ 1:8ದೇವರು ವಿಶಾಲಕ್ಕೆ ಆಕಾಶ ವೆಂದು ಕರೆದನು. ಹೀಗೆ ಸಾಯಂಕಾಲವೂ ಪ್ರಾತಃ ಕಾಲವೂ ಆಗಿ ಎರಡನೆಯ ದಿನವಾಯಿತು.
- Genesis 1:5 ಆದಿಕಾಂಡ 1:5ದೇವರು ಬೆಳಕಿಗೆ ಹಗ ಲೆಂದೂ ಕತ್ತಲೆಗೆ ರಾತ್ರಿಯೆಂದೂ ಕರೆದನು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೊದಲನೆಯ ದಿನವಾಯಿತು.
- John 18:25–27 ಯೋಹಾನನು 18:25–27ತರುವಾಯ ಸೀಮೋನ ಪೇತ್ರನು ಚಳಿಕಾಯಿಸಿ ಕೊಳ್ಳುತ್ತಾ ನಿಂತಿದ್ದನು; ಆದದರಿಂದ ಅವರು ಅವ ನಿಗೆ--ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ ಎಂದು ಅವನನ್ನು ಕೇಳಿದರು. ಅದಕ್ಕೆ ಅವನು ಅದನ್ನು ಅಲ್ಲಗಳೆದು--ನಾನಲ್ಲ ಅಂದನು. ಮಹಾಯಾಜ ಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧು ವಾಗಿದ್ದ ಒಬ್ಬನು--ನಾನು ನಿನ್ನನ್ನು ತೋಟದಲ್ಲಿ ಆತನ ಸಂಗಡ ನೋಡಲಿಲ್ಲವೋ ಅಂದನು. ಪೇತ್ರನು ತಿರಿಗಿ ಅಲ್ಲಗಳೆದನು; ಆಗ ಕೂಡಲೆ ಹುಂಜ ಕೂಗಿತು.
- John 18:17 ಯೋಹಾನನು 18:17ಆಗ ಬಾಗಲು ಕಾಯುವವಳಾದ ಆ ಹುಡುಗಿಯು ಪೇತ್ರ ನಿಗೆ--ನೀನು ಸಹ ಈ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ಲವೋ ಎಂದು ಕೇಳಲು ಅವನು--ನಾನಲ್ಲ ಅಂದನು.
- Luke 22:34 ಲೂಕನು 22:34ಆದರೆ ಆತನು--ಪೇತ್ರನೇ, ನೀನು ನನ್ನನ್ನು ಅರಿಯೆನೆಂದು ಮೂರು ಸಾರಿ ಅಲ್ಲಗಳೆಯುವದಕ್ಕಿಂತ ಮುಂಚೆ ಈ ದಿವಸ ಹುಂಜ ಕೂಗುವದಿಲ್ಲ ಎಂದು ನಿನಗೆ ಹೇಳು ತ್ತೇನೆ ಅಂದನು.
- Matthew 26:69–75 ಮತ್ತಾಯನು 26:69–75ಆಗ ಪೇತ್ರನು ಭವನದ ಹೊರಗೆ ಕೂತಿರಲು ಒಬ್ಬ ಹುಡುಗಿಯು ಅವನ ಬಳಿಗೆ ಬಂದು-- ನೀನೂ ಗಲಿಲಾಯದ ಯೇಸುವಿನೊಂದಿಗೆ ಇದ್ದವನು ಅಂದಳು. ಆದರೆ ಅವನು ಎಲ್ಲರ ಮುಂದೆ-- ನೀನು ಏನು ಹೇಳುತ್ತಿಯೋ ನಾನು ಅರಿಯೆನು ಎಂದು ಅಲ್ಲಗಳೆದನು. ಅವನು ದ್ವಾರಾಂಗಳ ದೊಳಗೆ ಹೋದಾಗ ಮತ್ತೊಬ್ಬ ಹುಡುಗಿಯು ಅವನನ್ನು ನೋಡಿ ಅಲ್ಲಿದ್ದವರಿಗೆ--ಇವನು ಸಹ ನಜರೇತಿನ ಯೇಸುವಿನೊಂದಿಗೆ ಇದ್ದವನು ಅಂದಳು. ಆಗ ಅವನು ಪ್ರಮಾಣಮಾಡಿ--ನಾನು ಆ ಮನುಷ್ಯನನ್ನು ಅರಿಯೆನು ಎಂದು ತಿರಿಗಿ ಅಲ್ಲಗಳೆ ದನು. ಮತ್ತೆ ಸ್ವಲ್ಪ ಸಮಯವಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನಿಗೆ--ನಿಶ್ಚಯವಾಗಿ ನೀನು ಸಹ ಅವರಲ್ಲಿ ಒಬ್ಬನು; ಯಾಕಂದರೆ ನಿನ್ನ ಭಾಷೆಯು ನಿನ್ನನ್ನು ತೋರಿಸಿಕೊಡುತ್ತದೆ ಅಂದರು. ಅದಕ್ಕೆ ಅವನು--ಆ ಮನುಷ್ಯನನ್ನು ನಾನು ಅರಿಯೆನು ಎಂದು ಶಪಿಸಿಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಪ್ರಾರಂಭಿಸಿದನು. ಕೂಡಲೆ ಹುಂಜವು ಕೂಗಿತು.ಆಗ ಪೇತ್ರನು--ಹುಂಜವು ಕೂಗುವದಕ್ಕಿಂತ ಮುಂಚಿತವಾಗಿ ನೀನು ಮೂರು ಸಾರಿ ನನ್ನನ್ನು ಅಲ್ಲಗಳೆ ಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು. ಆಗ ಪೇತ್ರನು--ಹುಂಜವು ಕೂಗುವದಕ್ಕಿಂತ ಮುಂಚಿತವಾಗಿ ನೀನು ಮೂರು ಸಾರಿ ನನ್ನನ್ನು ಅಲ್ಲಗಳೆ ಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.
- Luke 22:54–62 ಲೂಕನು 22:54–62ಆಗ ಅವರು ಆತನನ್ನು ತೆಗೆದುಕೊಂಡು ಮಹಾ ಯಾಜಕನ ಮನೆಯೊಳಕ್ಕೆ ಸಾಗಿಸಿಕೊಂಡು ಬಂದರು. ಪೇತ್ರನು ದೂರದಿಂದ ಹಿಂಬಾಲಿಸಿದನು. ಅವರು ಅಂಗಳದ ನಡುವೆ ಬೆಂಕಿ ಉರಿಸಿ ಒಟ್ಟಾಗಿ ಕೂತು ಕೊಂಡಾಗ ಪೇತ್ರನೂ ಅವರ ನಡುವೆ ಕೂತು ಕೊಂಡನು. ಆದರೆ ಒಬ್ಬ ಹುಡುಗಿಯು ಬೆಂಕಿಯ ಬಳಿಯಲ್ಲಿ ಕೂತುಕೊಂಡಿದ್ದ ಪೇತ್ರನನ್ನು ದೃಷ್ಟಿಸಿ ನೋಡಿ--ಈ ಮನುಷ್ಯನು ಸಹ ಆತನೊಂದಿಗೆ ಇದ್ದ ವನು ಅಂದಳು. ಆದರೆ ಅವನು ಆತನನ್ನು ಅಲ್ಲ ಗಳೆದು--ಸ್ತ್ರೀಯೇ, ನಾನು ಅವನನ್ನು ಅರಿಯೆನು ಅಂದನು. ಸ್ವಲ್ಪ ಸಮಯದ ಮೇಲೆ ಮತ್ತೊಬ್ಬನು ಅವನನ್ನು ನೋಡಿ--ನೀನು ಸಹ ಅವರಲ್ಲಿ ಇದ್ದವನು ಅಂದನು. ಅದಕ್ಕೆ ಪೇತ್ರನು--ಮನುಷ್ಯನೇ, ನಾನಲ್ಲ ಅಂದನು. ಹೆಚ್ಚು ಕಡಿಮೆ ಒಂದು ತಾಸು ಕಳೆದ ನಂತರ ಮತ್ತೊಬ್ಬನು ದೃಢನಿಶ್ಚಯವಾಗಿ--ನಿಜವಾ ಗಿಯೂ ಇವನು ಸಹ ಅವನೊಂದಿಗೆ ಇದ್ದನು; ಯಾಕಂದರೆ ಇವನು ಗಲಿಲಾಯದವನಾಗಿದ್ದಾನೆ ಅಂದನು. ಆದರೆ ಪೇತ್ರನು--ಮನುಷ್ಯನೇ, ನೀನು ಏನು ಹೇಳುತ್ತೀಯೋ ನಾನರಿಯೆ ಅಂದನು. ಕೂಡಲೆ ಅವನು ಇನ್ನೂ ಮಾತನಾಡುತ್ತಿರುವಾಗಲೇ ಹುಂಜ ಕೂಗಿತು. ಆಗ ಕರ್ತನು ತಿರುಗಿಕೊಂಡು ಪೇತ್ರನ ಕಡೆಗೆ ನೋಡಿದನು; ಆಗ ಪೇತ್ರನು--ಹುಂಜ ಕೂಗುವದಕ್ಕಿಂತ ಮುಂಚಿತವಾಗಿ ಮೂರು ಸಾರಿ ನೀನು ನನ್ನನ್ನು ಅಲ್ಲಗಳೆಯುವಿ ಎಂದು ಕರ್ತನು ಹೇಳಿದ್ದ ಮಾತನ್ನು ನೆನಪು ಮಾಡಿಕೊಂಡನು. ಆಗ ಪೇತ್ರನು ಹೊರಗೆಹೋಗಿ ಬಹು ವ್ಯಥೆಪಟ್ಟು ಅತ್ತನು.
- Genesis 1:13 ಆದಿಕಾಂಡ 1:13ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೂರನೆಯ ದಿನವಾಯಿತು.
- Genesis 1:19 ಆದಿಕಾಂಡ 1:19ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ನಾಲ್ಕನೆಯ ದಿನವಾಯಿತು.