Mark · chapter 14 · verse 66
Mark 14:66 in Kannada
ಇದಲ್ಲದೆ ಪೇತ್ರನು ಭವನದ ಕೆಳಭಾಗದಲ್ಲಿದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಅಲ್ಲಿಗೆ ಬಂದಳು.
Idallade petranu bhavanada kelabhaagadalliddaaga mahaayaajakana daasiyaralli obbalu allige bandalu.
Mark 14:66 in English
- King James Version (KJV)
- And as Peter was beneath in the palace, there cometh one of the maids of the high priest:
- World English Bible (WEB)
- As Peter was in the courtyard below, one of the maids of the high priest came,
- American Standard Version (ASV)
- And as Peter was beneath in the court, there cometh one of the maids of the high priest;
- Bible in Basic English (BBE)
- And while Peter was down in the open square of the building, one of the servant-girls of the high priest came;
- Darby Translation (DBY)
- And Peter being below in the palace-court, there comes one of the maids of the high priest,
- Webster's Bible (WBS)
- And as Peter was below in the palace, there cometh one of the maids of the high priest:
- Young's Literal Translation (YLT)
- And Peter being in the hall beneath, there doth come one of the maids of the chief priest,
Read in context
- 64ನೀವು ಈ ದೇವದೂಷಣೆಯನ್ನು ಕೇಳಿದ್ದೀರಲ್ಲಾ; ನಿಮಗೆ ಹೇಗೆ ತೋರುತ್ತದೆ ಎಂದು ಕೇಳಲು ಅವರೆಲ್ಲರೂ ಅವನು ಮರಣದಂಡನೆ ಹೊಂದತಕ್ಕವನು ಎಂದು ತೀರ್ಪುಮಾಡಿದರು
- 65ತರು ವಾಯ ಕೆಲವರು ಆತನ ಮೇಲೆ ಉಗುಳಿ ಆತನ ಮುಖವನ್ನು ಮುಚ್ಚಿ ಆತನನ್ನು ಗುದ್ದುವದಕ್ಕೆ ಆರಂಭಿಸಿ ಆತನಿಗೆ--ಪ್ರವಾದನೆ ಹೇಳು ಅಂದರು. ಆಳು ಗಳು ಆತನನ್ನು ಹೊಡೆದರು.
- 66ಇದಲ್ಲದೆ ಪೇತ್ರನು ಭವನದ ಕೆಳಭಾಗದಲ್ಲಿದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಅಲ್ಲಿಗೆ ಬಂದಳು.
- 67ಪೇತ್ರನು ಚಳಿಕಾಯಿಸಿಕೊಳ್ಳುತ್ತಿರು ವದನ್ನು ಆಕೆಯು ಕಂಡು ಅವನನ್ನು ದೃಷ್ಟಿಸಿ ನೋಡಿ--ನೀನು ಸಹ ಆ ನಜರೇತಿನ ಯೇಸುವಿ ನೊಂದಿಗೆ ಇದ್ದವನು ಅಂದಳು.
- 68ಆದರೆ ಅವನು ಅಲ್ಲಗಳೆದು--ನನಗೆ ಗೊತ್ತಿಲ್ಲ, ನೀನು ಏನು ಹೇಳುತ್ತೀಯೋ ನನಗೆ ತಿಳಿಯುವದಿಲ್ಲ ಎಂದು ಹೇಳಿ ಅಲ್ಲಗಳೆದು ಹೊರಗೆ ದ್ವಾರಾಂಗಳದೊಳಗೆ ಹೋದನು; ಆಗ ಹುಂಜ ಕೂಗಿತು.
Cross references
- Mark 14:54 ಮಾರ್ಕನು 14:54ಆದರೆ ಪೇತ್ರನು ಮಹಾಯಾಜಕನ ಭವನದವರೆಗೂ ದೂರ ದಿಂದ ಆತನನ್ನು ಹಿಂಬಾಲಿಸಿ ಆಳುಗಳ ಸಂಗಡ ಕೂತುಕೊಂಡು ಬೆಂಕಿಯ ಹತ್ತಿರ ಚಳಿ ಕಾಯಿಸಿಕೊಳ್ಳು ತ್ತಿದ್ದನು.
- Matthew 26:69–75 ಮತ್ತಾಯನು 26:69–75ಆಗ ಪೇತ್ರನು ಭವನದ ಹೊರಗೆ ಕೂತಿರಲು ಒಬ್ಬ ಹುಡುಗಿಯು ಅವನ ಬಳಿಗೆ ಬಂದು-- ನೀನೂ ಗಲಿಲಾಯದ ಯೇಸುವಿನೊಂದಿಗೆ ಇದ್ದವನು ಅಂದಳು. ಆದರೆ ಅವನು ಎಲ್ಲರ ಮುಂದೆ-- ನೀನು ಏನು ಹೇಳುತ್ತಿಯೋ ನಾನು ಅರಿಯೆನು ಎಂದು ಅಲ್ಲಗಳೆದನು. ಅವನು ದ್ವಾರಾಂಗಳ ದೊಳಗೆ ಹೋದಾಗ ಮತ್ತೊಬ್ಬ ಹುಡುಗಿಯು ಅವನನ್ನು ನೋಡಿ ಅಲ್ಲಿದ್ದವರಿಗೆ--ಇವನು ಸಹ ನಜರೇತಿನ ಯೇಸುವಿನೊಂದಿಗೆ ಇದ್ದವನು ಅಂದಳು. ಆಗ ಅವನು ಪ್ರಮಾಣಮಾಡಿ--ನಾನು ಆ ಮನುಷ್ಯನನ್ನು ಅರಿಯೆನು ಎಂದು ತಿರಿಗಿ ಅಲ್ಲಗಳೆ ದನು. ಮತ್ತೆ ಸ್ವಲ್ಪ ಸಮಯವಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನಿಗೆ--ನಿಶ್ಚಯವಾಗಿ ನೀನು ಸಹ ಅವರಲ್ಲಿ ಒಬ್ಬನು; ಯಾಕಂದರೆ ನಿನ್ನ ಭಾಷೆಯು ನಿನ್ನನ್ನು ತೋರಿಸಿಕೊಡುತ್ತದೆ ಅಂದರು. ಅದಕ್ಕೆ ಅವನು--ಆ ಮನುಷ್ಯನನ್ನು ನಾನು ಅರಿಯೆನು ಎಂದು ಶಪಿಸಿಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಪ್ರಾರಂಭಿಸಿದನು. ಕೂಡಲೆ ಹುಂಜವು ಕೂಗಿತು.ಆಗ ಪೇತ್ರನು--ಹುಂಜವು ಕೂಗುವದಕ್ಕಿಂತ ಮುಂಚಿತವಾಗಿ ನೀನು ಮೂರು ಸಾರಿ ನನ್ನನ್ನು ಅಲ್ಲಗಳೆ ಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು. ಆಗ ಪೇತ್ರನು--ಹುಂಜವು ಕೂಗುವದಕ್ಕಿಂತ ಮುಂಚಿತವಾಗಿ ನೀನು ಮೂರು ಸಾರಿ ನನ್ನನ್ನು ಅಲ್ಲಗಳೆ ಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.
- John 18:15–18 ಯೋಹಾನನು 18:15–18ಸೀಮೋನ ಪೇತ್ರನು ಯೇಸುವನ್ನು ಹಿಂಬಾಲಿಸಿದನು; ಹಾಗೆಯೇ ಬೇರೊಬ್ಬ ಶಿಷ್ಯನೂ ಆತನನ್ನು ಹಿಂಬಾಲಿಸಿದನು; ಆ ಶಿಷ್ಯನು ಮಹಾಯಾಜಕನಿಗೆ ಪರಿಚಯವಿದ್ದದರಿಂದ ಯೇಸು ವಿನ ಸಂಗಡ ಮಹಾಯಾಜಕನ ಭವನದೊಳಗೆ ಹೋದನು. ಪೇತ್ರನು ಬಾಗಲಿನ ಬಳಿಯಲ್ಲಿ ಹೊರಗೆ ನಿಂತಿದ್ದನು; ಹೀಗಿರಲಾಗಿ ಮಹಾಯಾಜಕನಿಗೆ ಪರಿಚಯವಿದ್ದ ಆ ಮತ್ತೊಬ್ಬ ಶಿಷ್ಯನು ಹೊರಗೆ ಹೋಗಿ ಬಾಗಲು ಕಾಯುವವಳ ಸಂಗಡ ಮಾತನಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು. ಆಗ ಬಾಗಲು ಕಾಯುವವಳಾದ ಆ ಹುಡುಗಿಯು ಪೇತ್ರ ನಿಗೆ--ನೀನು ಸಹ ಈ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ಲವೋ ಎಂದು ಕೇಳಲು ಅವನು--ನಾನಲ್ಲ ಅಂದನು. ಆಗ ಚಳಿಯಾಗಿದ್ದದರಿಂದ ಆಳುಗಳೂ ಅಧಿಕಾರಿಗಳೂ ಇದ್ದಲುಗಳಿಂದ ಬೆಂಕಿಮಾಡಿ ಚಳಿ ಕಾಯಿಸಿಕೊಳ್ಳುತ್ತಿದ್ದರು; ಪೇತ್ರನೂ ಅವರೊಂದಿಗೆ ನಿಂತು ಕಾಯಿಸಿಕೊಳ್ಳುತ್ತಿದ್ದನು.
- John 18:25–27 ಯೋಹಾನನು 18:25–27ತರುವಾಯ ಸೀಮೋನ ಪೇತ್ರನು ಚಳಿಕಾಯಿಸಿ ಕೊಳ್ಳುತ್ತಾ ನಿಂತಿದ್ದನು; ಆದದರಿಂದ ಅವರು ಅವ ನಿಗೆ--ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ ಎಂದು ಅವನನ್ನು ಕೇಳಿದರು. ಅದಕ್ಕೆ ಅವನು ಅದನ್ನು ಅಲ್ಲಗಳೆದು--ನಾನಲ್ಲ ಅಂದನು. ಮಹಾಯಾಜ ಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧು ವಾಗಿದ್ದ ಒಬ್ಬನು--ನಾನು ನಿನ್ನನ್ನು ತೋಟದಲ್ಲಿ ಆತನ ಸಂಗಡ ನೋಡಲಿಲ್ಲವೋ ಅಂದನು. ಪೇತ್ರನು ತಿರಿಗಿ ಅಲ್ಲಗಳೆದನು; ಆಗ ಕೂಡಲೆ ಹುಂಜ ಕೂಗಿತು.
- Matthew 26:58 ಮತ್ತಾಯನು 26:58ಆದರೆ ಪೇತ್ರನು ಮಹಾ ಯಾಜಕನ ಭವನದವರೆಗೆ ದೂರದಿಂದ ಆತನನ್ನು ಹಿಂಬಾಲಿಸಿ ಒಳಗೆ ಹೋಗಿ ಅಂತ್ಯವೇನಾಗುವದೆಂದು ನೋಡಲು ಸೇವಕರೊಂದಿಗೆ ಕೂತುಕೊಂಡನು.
- Luke 22:55–62 ಲೂಕನು 22:55–62ಅವರು ಅಂಗಳದ ನಡುವೆ ಬೆಂಕಿ ಉರಿಸಿ ಒಟ್ಟಾಗಿ ಕೂತು ಕೊಂಡಾಗ ಪೇತ್ರನೂ ಅವರ ನಡುವೆ ಕೂತು ಕೊಂಡನು. ಆದರೆ ಒಬ್ಬ ಹುಡುಗಿಯು ಬೆಂಕಿಯ ಬಳಿಯಲ್ಲಿ ಕೂತುಕೊಂಡಿದ್ದ ಪೇತ್ರನನ್ನು ದೃಷ್ಟಿಸಿ ನೋಡಿ--ಈ ಮನುಷ್ಯನು ಸಹ ಆತನೊಂದಿಗೆ ಇದ್ದ ವನು ಅಂದಳು. ಆದರೆ ಅವನು ಆತನನ್ನು ಅಲ್ಲ ಗಳೆದು--ಸ್ತ್ರೀಯೇ, ನಾನು ಅವನನ್ನು ಅರಿಯೆನು ಅಂದನು. ಸ್ವಲ್ಪ ಸಮಯದ ಮೇಲೆ ಮತ್ತೊಬ್ಬನು ಅವನನ್ನು ನೋಡಿ--ನೀನು ಸಹ ಅವರಲ್ಲಿ ಇದ್ದವನು ಅಂದನು. ಅದಕ್ಕೆ ಪೇತ್ರನು--ಮನುಷ್ಯನೇ, ನಾನಲ್ಲ ಅಂದನು. ಹೆಚ್ಚು ಕಡಿಮೆ ಒಂದು ತಾಸು ಕಳೆದ ನಂತರ ಮತ್ತೊಬ್ಬನು ದೃಢನಿಶ್ಚಯವಾಗಿ--ನಿಜವಾ ಗಿಯೂ ಇವನು ಸಹ ಅವನೊಂದಿಗೆ ಇದ್ದನು; ಯಾಕಂದರೆ ಇವನು ಗಲಿಲಾಯದವನಾಗಿದ್ದಾನೆ ಅಂದನು. ಆದರೆ ಪೇತ್ರನು--ಮನುಷ್ಯನೇ, ನೀನು ಏನು ಹೇಳುತ್ತೀಯೋ ನಾನರಿಯೆ ಅಂದನು. ಕೂಡಲೆ ಅವನು ಇನ್ನೂ ಮಾತನಾಡುತ್ತಿರುವಾಗಲೇ ಹುಂಜ ಕೂಗಿತು. ಆಗ ಕರ್ತನು ತಿರುಗಿಕೊಂಡು ಪೇತ್ರನ ಕಡೆಗೆ ನೋಡಿದನು; ಆಗ ಪೇತ್ರನು--ಹುಂಜ ಕೂಗುವದಕ್ಕಿಂತ ಮುಂಚಿತವಾಗಿ ಮೂರು ಸಾರಿ ನೀನು ನನ್ನನ್ನು ಅಲ್ಲಗಳೆಯುವಿ ಎಂದು ಕರ್ತನು ಹೇಳಿದ್ದ ಮಾತನ್ನು ನೆನಪು ಮಾಡಿಕೊಂಡನು. ಆಗ ಪೇತ್ರನು ಹೊರಗೆಹೋಗಿ ಬಹು ವ್ಯಥೆಪಟ್ಟು ಅತ್ತನು.