Mark · chapter 16 · verse 17
Mark 16:17 in Kannada
ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು;
Idallade nambuvavarinda ee soochakakaaryagalu untaaguvavu; avaru nanna hesarinalli devvagalannu bidisuvaru; avaru hosa bhaashegalalli maatanaaduvaru;
Mark 16:17 in English
- King James Version (KJV)
- And these signs shall follow them that believe; In my name shall they cast out devils; they shall speak with new tongues;
- World English Bible (WEB)
- These signs will accompany those who believe: in my name they will cast out demons; they will speak with new languages;
- American Standard Version (ASV)
- And these signs shall accompany them that believe: in my name shall they cast out demons; they shall speak with new tongues;
- Bible in Basic English (BBE)
- And these signs will be with those who have faith: in my name they will send out evil spirits; and they will make use of new languages;
- Darby Translation (DBY)
- And these signs shall follow those that have believed: in my name they shall cast out demons; they shall speak with new tongues;
- Webster's Bible (WBS)
- And these signs shall follow them that believe: In my name shall they cast out demons; they shall speak in new languages;
- Young's Literal Translation (YLT)
- 'And signs shall accompany those believing these things; in my name demons they shall cast out; with new tongues they shall speak;
Read in context
- 15ಆತನು ಅವರಿಗೆ--ನೀವು ಸಮಸ್ತ ಲೋಕಕ್ಕೆ ಹೋಗಿ ಎಲ್ಲಾ ಸೃಷ್ಟಿಗೆ ಸುವಾರ್ತೆಯನ್ನು ಸಾರಿರಿ.
- 16ನಂಬಿ ಬಾಪ್ತಿಸ್ಮ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.
- 17ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು;
- 18ಅವರು ಸರ್ಪಗಳನ್ನು ಎತ್ತುವರು; ಮರಣಕರವಾದದ್ದೇ ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವದಿಲ್ಲ; ಅವರು ರೋಗಿಗಳ ಮೇಲೆ ಕೈಗಳನ್ನಿಡು ವಾಗ ಅವರು ಸ್ವಸ್ಥರಾಗುವರು ಎಂದು ಹೇಳಿದನು.
- 19ಹೀಗೆ ಕರ್ತನು ಅವರೊಂದಿಗೆ ಮಾತನಾಡಿದ ನಂತರ ಆತನು ಮೇಲಕ್ಕೆ ಪರಲೋಕದಲ್ಲಿ ಸ್ವೀಕರಿ ಸಲ್ಪಟ್ಟು ದೇವರ ಬಲಪಾರ್ಶ್ವದಲ್ಲಿ ಕೂತುಕೊಂಡನು.ಮತ್ತು ಅವರು ಹೊರಟುಹೋಗಿ ಎಲ್ಲಾ ಕಡೆಯಲ್ಲಿ ಸಾರಿದರು. ಇದಲ್ಲದೆ ಕರ್ತನು ಅವರ ಜೊತೆಯಲ್ಲಿ ಕೆಲಸಮಾಡುತ್ತಾ ನಡೆದ ಸೂಚಕ ಕಾರ್ಯಗಳಿಂದ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದನು. ಆಮೆನ್.
Cross references
- Acts 5:16 ಅಪೊಸ್ತಲರ ಕೃತ್ಯಗಳು 5:16ಜನಸಮೂಹವು ಸುತ್ತಮುತ್ತಲಿನ ಪಟ್ಟಣ ಗಳಿಂದ ರೋಗಿಗಳನ್ನೂ ಅಶುದ್ಧಾತ್ಮಗಳಿಂದ ಪೀಡಿಸಲ್ಪಟ್ಟ ವರನ್ನೂ ತೆಗೆದುಕೊಂಡು ಯೆರೂಸಲೇಮಿಗೆ ಬಂದರು ಮತ್ತು ಅವರಲ್ಲಿ ಪ್ರತಿಯೊಬ್ಬನೂ ಗುಣಹೊಂದಿದನು.
- 1 Corinthians 12:28 1 ಕೊರಿಂಥದವರಿಗೆ 12:28ದೇವರು ಕೆಲವರನ್ನು ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಉಪದೇಶಕರನ್ನು ಇಟ್ಟಿದ್ದಾನೆ; ಆಮೇಲೆ ಮಹತ್ಕಾರ್ಯ ಗಳನ್ನೂ ವಾಸಿಮಾಡುವ ವರಗಳನ್ನೂ ಸಹಾಯ ಮಾಡುವದನ್ನೂ ಕಾರ್ಯಗಳನ್ನು ನಿರ್ವಹಿಸುವದನ್ನೂ ವಿವಿಧ ಭಾಷೆಗಳನಾ
- Luke 10:17 ಲೂಕನು 10:17ತರುವಾಯ ಆ ಎಪ್ಪತ್ತು ಮಂದಿ ಸಂತೋಷದಿಂದ ಹಿಂತಿರುಗಿ--ಕರ್ತನೇ, ನಿನ್ನ ಹೆಸರಿನಲ್ಲಿ ದೆವ್ವಗಳು ಸಹ ನಮಗೆ ಅಧೀನವಾದವು ಅಂದರು.
- Acts 8:7 ಅಪೊಸ್ತಲರ ಕೃತ್ಯಗಳು 8:7ಅನೇಕರನ್ನು ಹಿಡಿದಿದ್ದ ಅಶುದ್ಧಾತ್ಮಗಳು ಮಹಾಶಬ್ದದಿಂದ ಕೂಗಿ ಹೊರಗೆ ಬಂದವು; ಅನೇಕ ಪಾರ್ಶ್ವವಾಯು ರೋಗಿಗಳೂ ಕುಂಟರೂ ಸ್ವಸ್ಥರಾದರು.
- 1 Corinthians 12:10 1 ಕೊರಿಂಥದವರಿಗೆ 12:10ಒಬ್ಬನಿಗೆ ಮಹತುಗಳನ್ನು ಮಾಡುವ ವರವು, ಇನ್ನೊಬ್ಬನಿಗೆ ಪ್ರವಾದನೆಯ ವರವು, ಮತ್ತೊಬ್ಬನಿಗೆ ಆತ್ಮಗಳನ್ನು ವಿವೇಚಿಸುವ ವರವು, ಇನ್ನೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ವರವು, ಮತ್ತೊಬ್ಬನಿಗೆ ಭಾಷೆಗಳ ಅರ್ಥವನ್ನು ಹೇಳುವ ವರವು ಕೊಡಲ್ಪಡುತ್ತದೆ.
- John 14:12 ಯೋಹಾನನು 14:12ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನನ್ನನ್ನು ನಂಬುವವನು ನಾನು ಮಾಡುವ ಕ್ರಿಯೆ ಗಳನ್ನು ಸಹ ಮಾಡುವನು; ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಅವನು ಮಾಡುವನು; ಯಾಕಂದರೆ ನಾನು ನನ್ನ ತಂದೆಯ ಬಳಿಗೆ ಹೋಗುತ್ತೇನೆ.
- Acts 10:46 ಅಪೊಸ್ತಲರ ಕೃತ್ಯಗಳು 10:46ಯಾಕಂದರೆ ಅವರು ಭಾಷೆಗಳನ್ನು ಮಾತನಾಡುತ್ತಾ ದೇವರನ್ನು ಕೊಂಡಾಡುತ್ತಾ ಇದ್ದದ್ದನ್ನು ಅವರು ಕೇಳಿದರು. ಆಗ ಪೇತ್ರನು--
- Acts 19:6 ಅಪೊಸ್ತಲರ ಕೃತ್ಯಗಳು 19:6ಆಗ ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮನು ಅವರ ಮೇಲೆ ಬಂದನು; ಅವರು ಭಾಷೆಗಳನ್ನಾಡಿದರು ಮತ್ತು ಪ್ರವಾದಿಸಿದರು.
- 1 Corinthians 14:2 1 ಕೊರಿಂಥದವರಿಗೆ 14:2ಭಾಷೆಯನ್ನಾಡುವವನು ದೇವರ ಸಂಗಡಲೇ ಹೊರತು ಮನುಷ್ಯರ ಸಂಗಡ ಮಾತನಾಡು ವದಿಲ್ಲ. ಅವನು ಆತ್ಮನಲ್ಲಿದ್ದು ರಹಸ್ಯಗಳನ್ನು ನುಡಿ ಯುತ್ತಿದ್ದರೂ ಯಾರೂ ಅವನನ್ನು ತಿಳುಕೊಳ್ಳುವದಿಲ್ಲ.
- 1 Corinthians 12:30 1 ಕೊರಿಂಥದವರಿಗೆ 12:30ವಾಸಿ ಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ಭಾಷೆಗಳನ್ನಾಡುವರೋ? ಭಾಷೆಗಳ ಅರ್ಥವನ್ನು ಎಲ್ಲರೂ ಹೇಳುವರೋ?ಆದರೆ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಆದಾಗ್ಯೂ ನಾನು ನಿಮಗೆ ಉತ್ಕೃಷ್ಟವಾದ ಮಾರ್ಗವನ್ನು ತೋರಿಸುತ್ತೇನೆ.
- 1 Corinthians 14:4–26 1 ಕೊರಿಂಥದವರಿಗೆ 14:4–26ಭಾಷೆಯನ್ನಾಡುವವನು ತನಗೆ ಮಾತ್ರ ಭಕ್ತಿವೃದ್ಧಿಯನ್ನುಂಟು ಮಾಡಿಕೊಳ್ಳುತ್ತಾನೆ. ಪ್ರವಾದಿಸು ವವನಾದರೋ ಸಭೆಗೆ ಭಕ್ತಿವೃದ್ಧಿಯನ್ನುಂಟು ಮಾಡು ತ್ತಾನೆ. ನೀವೆಲ್ಲರೂ ಭಾಷೆಗಳನ್ನಾಡಬೇಕೆಂದು ನಾನು ಅಪೇಕ್ಷಿಸುತ್ತೇನೆ; ಆದರೆ ಅದಕ್ಕಿಂತಲೂ ನೀವು ಪ್ರವಾದಿಸಬೇಕೆಂಬದೇ ನನ್ನಿಷ್ಟ. ಭಾಷೆಗಳನ್ನಾಡು ವವನು ಸಭೆಗೆ ಭಕ್ತಿವೃದ್ಧಿಯಾಗುವದಕ್ಕಾಗಿ ಆ ಭಾಷೆಯ ಅರ್ಥವನ್ನು ಹೇಳದೆ ಹೋದರೆ ಅವನಿಗಿಂತ ಪ್ರವಾದಿಸುವವನು ಶ್ರೇಷ್ಠ. ಹೀಗಿರುವದರಿಂದ ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ಪ್ರಕಟ ವಾದದ್ದರಿಂದಾಗಲಿ ಇಲ್ಲವೆ ಜ್ಞಾನದಿಂದಾಗಲಿ ಇಲ್ಲವೆ ಪ್ರವಾದನೆಯಿಂದಾಗಲಿ ಇಲ್ಲವೆ ಬೋಧನೆಯಿಂದಾ ಗಲಿ ಮಾತನಾಡದೆ ಭಾಷೆಗಳಿಂದ ಮಾತ್ರ ಮಾತನಾಡಿ ದರೆ ನನ್ನಿಂದ ನಿಮಗೇನು ಪ್ರಯೋಜನ? ಕೊಳಲು ವೀಣೆ ಮೊದಲಾದ ಅಚೇತನವಾದ್ಯಗಳು ಸ್ವರಗಳಲಿ ಯಾವ ಭೇದವನ್ನೂ ತೋರಿಸದಿದ್ದರೆ ಊದಿದ್ದು ಅಥವಾ ಬಾರಿಸಿದ್ದು ತಿಳಿಯುವದು ಹೇಗೆ? ತುತೂರಿಯು ಗೊತ್ತಿಲ್ಲದ ಶಬ್ದವನ್ನು ಕೊಟ್ಟರೆ ತನ್ನನ್ನು ಯುದ್ಧಕ್ಕೆ ಸಿದ್ಧಮಾಡಿಕೊಳ್ಳುವವನು ಯಾರು? ಹಾಗೆಯೇ ನೀವು ಸುಲಭವಾಗಿ ತಿಳಿಯಬಹುದಾದ ಮಾತುಗಳನ್ನಾಡದೆ ಹೋದರೆ ಮಾತನಾಡಿದ್ದು ಏನೆಂದು ಹೇಗೆ ತಿಳಿದೀತು? ನೀವು ಗಾಳಿಯಲ್ಲಿ ಮಾತನಾಡಿದ ಹಾಗಿರುವದಷ್ಟೆ. ಲೋಕದಲ್ಲಿ ಅನೇಕ ವಿಧವಾದ ಸ್ವರಗಳು ಇದ್ದರೂ ಇರಬಹುದು; ಆದರೆ ಅವುಗಳಲ್ಲಿ ಅರ್ಥವಿಲ್ಲದ್ದು ಒಂದಾದರೂ ಇಲ್ಲ. ಆದದರಿಂದ ಭಾಷೆಯ ಅರ್ಥವು ನನಗೆ ಗೊತ್ತಿಲ್ಲ ದಿದ್ದರೆ ಮಾತನಾಡುವವನಿಗೆ ನಾನು ಅನ್ಯದೇಶ ದವನಂತಿರುವೆನು; ಮಾತನಾಡುವವನು ನನಗೆ ಅನ್ಯ ದೇಶದವನಂತಿರುವನು. ಅದರಂತೆಯೇ ನೀವು ಆತ್ಮಿಕ ವರಗಳಲ್ಲಿ ಆಸಕ್ತಿಯುಳ್ಳವರಾಗಿರುವದರಿಂದ ಸಭೆಯ ಹೆಚ್ಚಿನ ಭಕ್ತಿವೃದ್ಧಿಗಾಗಿ ತವಕಪಡಿರಿ. ಆದದರಿಂದ ಅನ್ಯಭಾಷೆಯಲ್ಲಿ ಮಾತನಾಡುವವನು ಅದರ ಅರ್ಥ ಹೇಳುವಂತೆ ಪ್ರಾರ್ಥಿಸಲಿ. ಅನ್ಯಭಾಷೆಯಲ್ಲಿ ನಾನು ಪ್ರಾರ್ಥಿಸಿದರೆ ನನ್ನ ಆತ್ಮವು ಪ್ರಾರ್ಥಿಸುವದು; ಆದರೆ ನನ್ನ ತಿಳುವಳಿಕೆಯು ನಿಷ್ಪಲವಾಗಿರುವದು. ಹಾಗಾದ ರೇನು? ನಾನು ಆತ್ಮದಿಂದ ಪ್ರಾರ್ಥಿಸುವೆನು, ಬುದ್ಧಿ ಯಿಂದಲೂ ಪ್ರಾರ್ಥಿಸುವೆನು; ಆತ್ಮದಿಂದ ಹಾಡು ವೆನು, ಬುದ್ಧಿಯಿಂದಲೂ ಹಾಡುವೆನು. ಇದಲ್ಲದೆ ನೀನು ಆತ್ಮದಿಂದ ಸ್ತೋತ್ರ ಮಾಡುವಾಗ ತಿಳುವಳಿಕೆ ಯಿಲ್ಲದವನು ನೀನು ಮಾಡುವ ಕೃತಜ್ಞತಾಸ್ತುತಿಯನ್ನು ತಿಳಿಯದೆ ಇರುವದರಿಂದ ನೀನು ಹೇಳುವದಕ್ಕೆ ಆಮೆನ್ ಎಂದು ಹೇಳುವದು ಹೇಗೆ? ನೀನಂತೂ ನಿಜ ವಾಗಿಯೂ ಚೆನ್ನಾಗಿ ಕೃತಜ್ಞತಾಸ್ತುತಿ ಮಾಡುತ್ತೀ; ಆದರೆ ಬೇರೊಬ್ಬನು ಭಕ್ತಿವೃದ್ದಿ ಹೊಂದುವದಿಲ್ಲ. ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಭಾಷೆಗಳನ್ನಾಡುತ್ತೇನೆಂದು ನನ್ನ ದೇವರನ್ನು ಕೊಂಡಾಡುತ್ತೇನೆ. ಆದರೂ ಸಭೆಯಲ್ಲಿ ಅನ್ಯಭಾಷೆಯಿಂದ ಹತ್ತುಸಾವಿರ ಮಾತು ಗಳನ್ನಾಡುವದಕ್ಕಿಂತ ನನ್ನ ಬುದ್ಧಿಯಿಂದ ಐದೇ ಮಾತು ಗಳನ್ನಾಡಿ ಇತರರಿಗೆ ಉಪದೇಶಮಾಡುವದು ನನಗೆ ಇಷ್ಟವಾದದ್ದು. ಸಹೋದರರೇ, ಬುದ್ಧಿಯ ವಿಷಯ ದಲ್ಲಿ ಬಾಲಕರಾಗಿರಬೇಡಿರಿ; ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಬೇಕು. ಬೇರೆ ಭಾಷೆಯವರ ಮೂಲಕವಾಗಿಯೂ ಬೇರೆ ಯವರ ತುಟಿಗಳಿಂದಲೂ ನಾನು ಈ ಜನರೊಂದಿಗೆ ಮಾತನಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಗೊಡುವದಿಲ್ಲ ಎಂದು ಕರ್ತನು ಹೇಳುತ್ತಾನೆಂಬ ದಾಗಿ ನ್ಯಾಯಪ್ರಮಾಣದಲ್ಲಿ ಬರೆದದೆ. ಆದದ ರಿಂದ ಭಾಷೆಗಳು ನಂಬುವವರಿಗೆ ಅಲ್ಲ, ನಂಬದವರಿಗೆ ಸೂಚನೆಯಾಗಿವೆ; ಆದರೆ ಪ್ರವಾದಿಸುವದು ನಂಬದ ವರಿಗಲ್ಲ, ನಂಬುವವರಿಗೆ ಸೂಚನೆಯಾಗಿದೆ. ಆದ ಕಾರಣ ಸಭೆಯೆಲ್ಲವೂ ಒಂದು ಸ್ಥಳದಲ್ಲಿ ಕೂಡಿ ಬಂದಾಗ ಎಲ್ಲರೂ ಭಾಷೆಗಳನ್ನಾಡುವದಾದರೆ ತಿಳುವಳಿಕೆ ಯಿಲ್ಲದವರು ಇಲ್ಲವೆ ಅವಿಶ್ವಾಸಿಗಳು ಒಳಗೆ ಬಂದು ನೀವು ಹುಚ್ಚರಾಗಿದ್ದೀರೆಂದು ಹೇಳುವದಿಲ್ಲವೇ? ಆದರೆ ಎಲ್ಲರೂ ಪ್ರವಾದಿಸುವಾಗ ಒಬ್ಬ ಅವಿಶ್ವಾಸಿ ಯಾಗಲಿ ಇಲ್ಲವೆ ತಿಳುವಳಿಕೆಯಿಲ್ಲದವನಾಗಲಿ ಒಳಗೆ ಬಂದರೆ ಅವನು ಎಲ್ಲರಿಂದ ಅರುಹು ಹೊಂದುತ್ತಾನೆ, ಎಲ್ಲರಿಂದ ಪರಿಶೋಧಿತನಾಗುತ್ತಾನೆ. ಹೀಗೆ ಅವನ ಹೃದಯದ ರಹಸ್ಯಗಳು ತೋರಿಬರುತ್ತವೆ; ಅವನು ಸಾಷ್ಟಾಂಗವೆರಗಿ ದೇವರನ್ನು ಆರಾಧಿಸಿ ನಿಜಕ್ಕೂ ನಿಮ್ಮಲ್ಲಿ ದೇವರಿದ್ದಾನೆಂದು ಹೇಳುವನು. ಹಾಗಾದರೇನು? ಸಹೋದರರೇ, ನೀವು ಕೂಡಿ ಬಂದಾಗ ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಕೀರ್ತನೆಯಾಗಲಿ, ಬೋಧನೆಯಾಗಲಿ, ಭಾಷೆಯಾಗಲಿ, ಪ್ರಕಟನೆಯಾ ಗಲಿ ಭಾಷೆಯ ಅರ್ಥ ಹೇಳುವದಾಗಲಿ ಇರುತ್ತದಷ್ಟೆ. ಎಲ್ಲವುಗಳು ಭಕ್ತವೃದ್ಧಿಗಾಗಿಯೇ ನಡೆಯಲಿ.
- 1 Corinthians 13:1 1 ಕೊರಿಂಥದವರಿಗೆ 13:1ನಾನು ಮನುಷ್ಯರ ಮತ್ತು ದೂತರ ಭಾಷೆಗಳನ್ನು ಆಡುವವನಾದರೂ ಪ್ರೀತಿ ಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿ ಸುವ ತಾಳವೂ ಆಗಿದ್ದೇನೆ.