Mark · chapter 3 · verse 14
Mark 3:14 in Kannada
ಆತನು ಹನ್ನೆರಡು ಮಂದಿಯನ್ನು ತನ್ನೊಂದಿಗೆ ಇರುವದಕ್ಕೂ (ಸುವಾರ್ತೆ) ಸಾರುವದ ಕ್ಕಾಗಿ ತಾನು ಅವರನ್ನು ಕಳುಹಿಸುವದಕ್ಕೂ
Aatanu hanneradu mandiyannu tannondige iruvadakkoo (suvaarte) saaruvada kkaagi taanu avarannu kaluhisuvadakkoo
Mark 3:14 in English
- King James Version (KJV)
- And he ordained twelve, that they should be with him, and that he might send them forth to preach,
- World English Bible (WEB)
- He appointed twelve, that they might be with him, and that he might send them out to preach
- American Standard Version (ASV)
- And he appointed twelve, that they might be with him, and that he might send them forth to preach,
- Bible in Basic English (BBE)
- And he took twelve to be with him, so that he might send them out as preachers,
- Darby Translation (DBY)
- And he appointed twelve that they might be with him, and that he might send them to preach,
- Webster's Bible (WBS)
- And he ordained twelve, that they should be with him, and that he might send them forth to preach,
- Young's Literal Translation (YLT)
- and he appointed twelve, that they may be with him, and that he may send them forth to preach,
Read in context
- 12ಆದರೆ ಆತನು ತನ್ನನ್ನು ಯಾರಿಗೂ ತಿಳಿಯಪಡಿಸಬಾರದೆಂದು ಅವರಿಗೆ ನೇರವಾಗಿ ಆಜ್ಞಾಪಿಸಿದನು.
- 13ತರುವಾಯ ಆತನು ಬೆಟ್ಟದ ಮೇಲೆ ಹೋಗಿ ತನಗೆ ಬೇಕಾದವರನ್ನು ಕರೆಯಲು ಅವರು ಆತನ ಬಳಿಗೆ ಬಂದರು.
- 14ಆತನು ಹನ್ನೆರಡು ಮಂದಿಯನ್ನು ತನ್ನೊಂದಿಗೆ ಇರುವದಕ್ಕೂ (ಸುವಾರ್ತೆ) ಸಾರುವದ ಕ್ಕಾಗಿ ತಾನು ಅವರನ್ನು ಕಳುಹಿಸುವದಕ್ಕೂ
- 15ವ್ಯಾಧಿ ಗಳನ್ನು ಸ್ವಸ್ಥಮಾಡುವದಕ್ಕೂ ದೆವ್ವಗಳನ್ನು ಬಿಡಿಸು ವದಕ್ಕೂ ನೇಮಿಸಿ ಅವರಿಗೆ ಅಧಿಕಾರ ಕೊಟ್ಟನು.
- 16ಆತನು ಸೀಮೋನನಿಗೆ ಪೇತ್ರನೆಂದು ಹೆಸರಿಟ್ಟನು.
Cross references
- Acts 1:8 ಅಪೊಸ್ತಲರ ಕೃತ್ಯಗಳು 1:8ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುವಿರಿ; ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯದ ಲ್ಲಿಯೂ ಸಮಾರ್ಯದಲ್ಲಿಯೂ ಭೂಮಿಯ ಕಟ್ಟ ಕಡೆಯವರೆಗೂ ನೀವು ನನಗೆ ಸಾಕ್ಷಿಗಳಾಗಿರುವಿರಿ ಎಂದು ಹೇಳಿದನು.
- John 15:16 ಯೋಹಾನನು 15:16ನೀವು ನನ್ನನ್ನು ಆರಿಸಿಕೊಂಡಿಲ್ಲ; ಆದರೆ ನಾನು ನಿಮ್ಮನ್ನು ಆರಿಸಿ ಕೊಂಡು, ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ನೆಲೆಗೊಂಡಿರುವಂತೆಯೂ ನಿಮ್ಮನ್ನು ನೇಮಿಸಿದ್ದೇನೆ. ಆದಕಾರಣ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಆತನು ಅದನ್ನು ನಿಮಗೆ ಕೊಡುವನು.
- Luke 9:1–6 ಲೂಕನು 9:1–6ತರುವಾಯ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವದಕ್ಕೂ ರೋಗಗಳನ್ನು ಸ್ವಸ್ಥ ಮಾಡುವದಕ್ಕೂ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟನು. ದೇವರ ರಾಜ್ಯವನ್ನು ಸಾರುವದಕ್ಕೂ ರೋಗಿಗಳನ್ನು ಸ್ವಸ್ಥಮಾಡುವದಕ್ಕೂ ಆತನು ಅವರನ್ನು ಕಳುಹಿಸಿಕೊಟ್ಟನು. ಆತನು ಅವರಿಗೆ--ನೀವು ಪ್ರಯಾಣಕ್ಕಾಗಿ ಕೋಲುಗಳನ್ನಾಗಲೀ ಚೀಲವನ್ನಾ ಗಲೀ ರೊಟ್ಟಿಯನ್ನಾಗಲೀ ಹಣವನ್ನಾಗಲೀ ಏನೂ ತಕ್ಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು. ನೀವು ಯಾವದಾದರೂ ಮನೆಯನ್ನು ಪ್ರವೇಶಿಸಿದಾಗ ಅಲ್ಲೇ ಇದ್ದು ಅಲ್ಲಿಂದಲೇ ಹೊರಡಿರಿ. ಯಾರಾದರೂ ನಿಮ್ಮನ್ನು ಅಂಗೀಕರಿಸದೆ ಹೋದರೆ ನೀವು ಆ ಪಟ್ಟಣದ ಹೊರಗೆ ಹೋದಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದ ಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ ಅಂದನು. ಅವರು ಊರುಗಳನ್ನು ಹಾದು ಹೋಗುವಾಗ ಸುವಾರ್ತೆಯನ್ನು ಸಾರುತ್ತಾ ಎಲ್ಲಾ ಕಡೆಗಳಲ್ಲಿ ಸ್ವಸ್ಥ ಮಾಡುತ್ತಾ ಹೋದರು.
- Galatians 1:1 ಗಲಾತ್ಯದವರಿಗೆ 1:1ಮನುಷ್ಯರ ಕಡೆಯಿಂದಾಗಲಿ ಮನುಷ್ಯನ ಮುಖಾಂತರದಿಂದಾಗಲಿ ಅಪೊಸ್ತಲ ನಾಗಿರದೆ ಯೇಸು ಕ್ರಿಸ್ತನ ಮುಖಾಂತರವೂ ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ತಂದೆಯಾದ ದೇವ ರಿಂದಲೂ ಅಪೊಸ್ತಲನಾದ ಪೌಲನೆಂಬ ನಾನೂ
- Luke 10:1–11 ಲೂಕನು 10:1–11ಇವುಗಳಾದ ಮೇಲೆ ಕರ್ತನು ಬೇರೆ ಎಪ್ಪತ್ತು ಮಂದಿಯನ್ನು ಸಹ ನೇಮಿಸಿ ತಾನೇ ಸ್ವತಃ ಹೋಗಬೇಕೆಂದಿದ್ದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಇಬ್ಬಿಬ್ಬರನ್ನಾಗಿ ತನ್ನ ಮುಂದಾಗಿ ಕಳುಹಿಸಿದನು. ಆತನು ಅವರಿಗೆ--ಬೆಳೆಯು ನಿಜವಾಗಿಯೂ ಬಹಳ; ಆದರೆ ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನು ತನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ನೀವು ಪ್ರಾರ್ಥನೆಮಾಡಿರಿ. ಹೋಗಿರಿ, ಇಗೋ, ತೋಳಗಳ ಮಧ್ಯದಲ್ಲಿ ಕುರಿಮರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹವ್ಮೆಾಣಿಯನ್ನಾಗಲೀ ಚೀಲವನ್ನಾಗಲೀ ಕೆರಗಳನ್ನಾಗಲೀ ತಕ್ಕೊಳ್ಳಬೇಡಿರಿ; ಮತ್ತು ದಾರಿಯಲ್ಲಿ ಯಾರನ್ನೂ ವಂದಿಸಬೇಡಿರಿ. ನೀವು ಯಾವ ಮನೆಯಲ್ಲಿಯಾದರೂ ಪ್ರವೇಶಿಸುವಾಗ ಮೊದಲು--ಈ ಮನೆಗೆ ಸಮಾಧಾನವಾಗಲಿ ಎಂದು ಹೇಳಿರಿ. ಅಲ್ಲಿ ಸಮಾಧಾನದ ಮಗನು ಇದ್ದರೆ ನಿಮ್ಮ ಸಮಾಧಾನವು ಅವರ ಮೇಲೆ ಇರುವದು; ಇಲ್ಲದಿದ್ದರೆ ಅದು ನಿಮಗೆ ಹಿಂದಿರು ಗುವದು. ಅದೇ ಮನೆಯಲ್ಲಿದ್ದು ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ; ಯಾಕಂದರೆ ಕೆಲಸದವನು ತನ್ನ ಕೂಲಿಗೆ ಯೋಗ್ಯನು. ಮನೆಯಿಂದ ಮನೆಗೆ ಹೋಗ ಬೇಡಿರಿ; ಯಾವದಾದರೂ ಪಟ್ಟಣದೊಳಗೆ ನೀವು ಪ್ರವೇಶಿಸುವಾಗ ಅವರು ನಿಮ್ಮನ್ನು ಸೇರಿಸಿಕೊಂಡರೆ ನಿಮ್ಮ ಮುಂದೆ ಇಡುವಂಥವುಗಳನ್ನು ತಿನ್ನಿರಿ. ಅಲ್ಲಿರುವ ರೋಗಿಗಳನ್ನು ಸ್ವಸ್ಥಮಾಡಿರಿ; ಮತ್ತು ಅವರಿಗೆ--ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂದು ಹೇಳಿರಿ. ಆದರೆ ನೀವು ಪ್ರವೇಶಿ ಸುವ ಯಾವ ಪಟ್ಟಣದಲ್ಲಿಯಾದರೂ ಅವರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ ನೀವು ಹೊರಟು ಅದೇ ಬೀದಿ ಗಳಲ್ಲಿ ಹೋಗಿ-- ನಮ್ಮ ಮೇಲೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ; ಆದಾಗ್ಯೂ ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂಬದು ನಿಮಗೆ ಖಚಿತವಾಗಿ ತಿಳಿದಿರಲಿ ಎಂದು ಹೇಳಿರಿ.
- Acts 1:24–25 ಅಪೊಸ್ತಲರ ಕೃತ್ಯಗಳು 1:24–25ಅವರು ಪ್ರಾರ್ಥನೆ ಮಾಡುತ್ತಾ--ಎಲ್ಲರ ಹೃದಯಗಳನ್ನು ಬಲ್ಲವನಾದ ಕರ್ತನೇ, ಯೂದನು ತನ್ನ ಸ್ವಸ್ಥಳಕ್ಕೆ ಹೋಗುವ ದಕ್ಕಾಗಿ ಅಪರಾಧದ ನಿಮಿತ್ತ ಈ ಸೇವೆಯಿಂದಲೂ ಅಪೊಸ್ತಲತನದಿಂದಲೂ ಬಿದ್ದು ಹೋದನು. ಈಗ ಈ ಸೇವೆಯಲ್ಲಿಯೂ ಅಪೊಸ್ತಲತನದಿಂದಲೂ ಒಬ್ಬನು ಪಾಲುಹೊಂದುವಂತೆ ಈ ಇಬ್ಬರಲ್ಲಿ ಯಾರನ್ನು ನೀನು ಆರಿಸಿಕೊಳ್ಳುತ್ತೀಯೋ ತೋರಿಸು ಎಂದು ಹೇಳಿದರು.ತರುವಾಯ ಅವರು ತಮ್ಮ ಚೀಟುಗಳನ್ನು ಹಾಕಿದಾಗ ಚೀಟು ಮತ್ತೀಯನಿಗೆ ಬಂದದ್ದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎಣಿಸ ಲ್ಪಟ್ಟನು.
- Galatians 1:15–20 ಗಲಾತ್ಯದವರಿಗೆ 1:15–20ಆದರೆ ನಾನು ತಾಯಿಯ ಗರ್ಭದಲ್ಲಿದ್ದಾಗಲೇ ದೇವರು ನನ್ನನ್ನು ಪ್ರತ್ಯೇಕಿಸಿ ತನ್ನ ಕೃಪೆಯಿಂದ ನನ್ನನ್ನು ಕರೆದನು; ಇದಲ್ಲದೆ ದೇವರು ಅನ್ಯಜನರಲ್ಲಿ ತನ್ನ ಮಗನನ್ನು ನಾನು ಸಾರುವವನಾಗಬೇಕೆಂದು ಆತನನ್ನು ನನ್ನೊಳಗೆ ಪ್ರಕಟಿಸುವದಕ್ಕೆ ಇಚ್ಛೈಸಿದಾಗಲೇ ನಾನು ಮನುಷ್ಯರನ್ನು ವಿಚಾರಿಸದೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆ ಹೋಗಿ ತಿರಿಗಿ ದಮಸ್ಕಕ್ಕೆ ಬಂದೆನು. ಮೂರು ವರುಷಗಳಾದ ಮೇಲೆ ಪೇತ್ರನನ್ನು ನೋಡುವದಕ್ಕಾಗಿ ಯೆರೂಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿವಸ ಇದ್ದೆನು. ಆದರೆ ಕರ್ತನ ಸಹೋದರನಾದ ಯಾಕೋಬನನ್ನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ. ಈಗ ನಾನು ನಿಮಗೆ ಬರೆಯುವವುಗಳ ವಿಷಯ ದಲ್ಲಿ ಇಗೋ, ದೇವರ ಮುಂದೆ ನಾನು ಸುಳ್ಳಾಡು ವದಿಲ್ಲ.
- Luke 24:47 ಲೂಕನು 24:47ಯೆರೂಸಲೇಮು ಮೊದಲುಗೊಂಡು ಎಲ್ಲಾ ಜನಾಂಗದವ ರೊಳಗೆ ಆತನ ಹೆಸರಿನಲ್ಲಿ ಮಾನಸಾಂತರ ಮತ್ತು ಪಾಪಗಳ ಕ್ಷಮಾಪಣೆ ಸಾರಲ್ಪಡಬೇಕೆಂತಲೂ ಬರೆಯ ಲ್ಪಟ್ಟಿದೆ.