Luke · chapter 9 · verse 1
Luke 9:1 in Kannada
ತರುವಾಯ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವದಕ್ಕೂ ರೋಗಗಳನ್ನು ಸ್ವಸ್ಥ ಮಾಡುವದಕ್ಕೂ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟನು.
Taruvaaya aatanu tanna hanneradu mandi shishyarannu ottige karedu avarige ellaa devvagalannu bidisuvadakkoo rogagalannu svastha maaduvadakkoo shaktiyannu mattu adhikaaravannu kottanu.
Luke 9:1 in English
- King James Version (KJV)
- Then he called his twelve disciples together, and gave them power and authority over all devils, and to cure diseases.
- World English Bible (WEB)
- He called the twelve together and gave them power and authority over all demons, and to cure diseases.
- American Standard Version (ASV)
- And he called the twelve together, and gave them power and authority over all demons, and to cure diseases.
- Bible in Basic English (BBE)
- And getting the twelve together, he gave them power and authority over all evil spirits and over diseases, to make them well.
- Darby Translation (DBY)
- And having called together the twelve, he gave them power and authority over all demons, and to heal diseases,
- Webster's Bible (WBS)
- Then he called his twelve disciples together, and gave them power and authority over all demons, and to cure diseases.
- Young's Literal Translation (YLT)
- And having called together his twelve disciples, he gave them power and authority over all the demons, and to cure sicknesses,
Read in context
- 1ತರುವಾಯ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವದಕ್ಕೂ ರೋಗಗಳನ್ನು ಸ್ವಸ್ಥ ಮಾಡುವದಕ್ಕೂ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟನು.
- 2ದೇವರ ರಾಜ್ಯವನ್ನು ಸಾರುವದಕ್ಕೂ ರೋಗಿಗಳನ್ನು ಸ್ವಸ್ಥಮಾಡುವದಕ್ಕೂ ಆತನು ಅವರನ್ನು ಕಳುಹಿಸಿಕೊಟ್ಟನು.
- 3ಆತನು ಅವರಿಗೆ--ನೀವು ಪ್ರಯಾಣಕ್ಕಾಗಿ ಕೋಲುಗಳನ್ನಾಗಲೀ ಚೀಲವನ್ನಾ ಗಲೀ ರೊಟ್ಟಿಯನ್ನಾಗಲೀ ಹಣವನ್ನಾಗಲೀ ಏನೂ ತಕ್ಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು.
Cross references
- John 14:12 ಯೋಹಾನನು 14:12ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನನ್ನನ್ನು ನಂಬುವವನು ನಾನು ಮಾಡುವ ಕ್ರಿಯೆ ಗಳನ್ನು ಸಹ ಮಾಡುವನು; ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಅವನು ಮಾಡುವನು; ಯಾಕಂದರೆ ನಾನು ನನ್ನ ತಂದೆಯ ಬಳಿಗೆ ಹೋಗುತ್ತೇನೆ.
- Luke 10:19 ಲೂಕನು 10:19ಇಗೋ, ಸರ್ಪಗಳನ್ನೂ ಚೇಳುಗಳನ್ನೂ ತುಳಿಯುವದಕ್ಕೆ ಮತ್ತು ವಿರೋಧಿಯ ಎಲ್ಲಾ ಶಕ್ತಿಯ ಮೇಲೆ ನಾನು ನಿಮಗೆ ಅಧಿಕಾರ ಕೊಡುತ್ತೇನೆ; ಯಾವದೂ ಯಾವ ರೀತಿಯಲ್ಲಿಯೂ ನಿಮಗೆ ಕೇಡು ಮಾಡ ಲಾರದು.
- Matthew 16:19 ಮತ್ತಾಯನು 16:19ನಾನು ನಿನಗೆ ಪರಲೋಕ ರಾಜ್ಯದ ಬೀಗದ ಕೈಗಳನ್ನು ಕೊಡುತ್ತೇನೆ; ನೀನು ಯಾವದನ್ನು ಭೂಮಿಯ ಮೇಲೆ ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವದು; ನೀನು ಯಾವ ದನ್ನು ಭೂಮಿಯ ಮೇಲೆ ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವದು ಅಂದನು.
- Acts 4:30 ಅಪೊಸ್ತಲರ ಕೃತ್ಯಗಳು 4:30ನಿನ್ನ ಕೈಗಳನ್ನು ಚಾಚುವದರಿಂದ ಸ್ವಸ್ಥತೆಯನ್ನುಂಟು ಮಾಡುವಂತೆಯೂ ಸೂಚಕ ಕಾರ್ಯ ಗಳು ಅದ್ಭುತಕಾರ್ಯಗಳು ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನಲ್ಲಿ ನಡೆಯುವಂತೆಯೂ ಅನು ಗ್ರಹಿಸು ಎಂದು ಗಟ್ಟಿಯಾದ ಸ್ವರದಿಂದ ಪ್ರಾರ್ಥಿಸಿ ದರು.
- Mark 16:17–18 ಮಾರ್ಕನು 16:17–18ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು; ಅವರು ಸರ್ಪಗಳನ್ನು ಎತ್ತುವರು; ಮರಣಕರವಾದದ್ದೇ ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವದಿಲ್ಲ; ಅವರು ರೋಗಿಗಳ ಮೇಲೆ ಕೈಗಳನ್ನಿಡು ವಾಗ ಅವರು ಸ್ವಸ್ಥರಾಗುವರು ಎಂದು ಹೇಳಿದನು.
- Mark 6:7–13 ಮಾರ್ಕನು 6:7–13ಆತನು ಹನ್ನೆರಡು ಮಂದಿಯನ್ನು ತನ್ನ ಬಳಿಗೆ ಕರೆದು ಅವರಿಗೆ ಅಶುದ್ಧಾತ್ಮಗಳ ಮೇಲೆ ಅಧಿಕಾರ ಕೊಟ್ಟು ಇಬ್ಬಿಬ್ಬರನ್ನು ಕಳುಹಿಸಲಾರಂಭಿಸಿದನು. ಅವರು ತಮ್ಮ ಪ್ರಯಾಣಕ್ಕಾಗಿ ಒಂದು ಕೋಲಿನ ಹೊರತು ಚೀಲವನ್ನಾಗಲೀ ರೊಟ್ಟಿಯನ್ನಾಗಲೀ ಹವ್ಮೆಾಣಿಯಲ್ಲಿ ಹಣವನ್ನಾಗಲೀ ತಕ್ಕೊಳ್ಳಬಾರ ದೆಂತಲೂ ಕೆರಗಳನ್ನು ಮೆಟ್ಟಿಕೊಂಡಿರಬೇಕೆಂದೂ ಎರಡು ಅಂಗಿಗಳನ್ನು ಹಾಕಿಕೊಳ್ಳಬಾರದೆಂದೂ ಆಜ್ಞಾ ಪಿಸಿದನು. ಇದಲ್ಲದೆ ಆತನು ಅವರಿಗೆ--ಯಾವ ಸ್ಥಳದಲ್ಲಿಯಾದರೂ ಒಂದು ಮನೆಯೊಳಕ್ಕೆ ನೀವು ಪ್ರವೇಶಿಸಿದರೆ ಆ ಸ್ಥಳದಿಂದ ನೀವು ಹೊರಡುವ ತನಕ ಅಲ್ಲೇ ಇಳುಕೊಳ್ಳಿರಿ. ಯಾರಾದರೂ ನಿಮ್ಮನ್ನು ಅಂಗೀಕರಿಸದೆಯೂ ಇಲ್ಲವೆ ನಿಮ್ಮ ಮಾತನ್ನು ಕೇಳ ದೆಯೂ ಇದ್ದರೆ ನೀವು ಅಲ್ಲಿಂದ ಹೊರಡುವಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಢಿಸಿಬಿಡಿರಿ. ಮತ್ತು ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ನ್ಯಾಯತೀರ್ಪಿನ ದಿನದಲ್ಲಿ ಆ ಪಟ ಅವರು ಹೊರಟು ಹೋಗಿ ಜನರು ಮಾನಸಾಂತರಪಡಬೇಕೆಂದು ಸಾರಿದರು. ಅವರು ಅನೇಕ ದೆವ್ವಗಳನ್ನು ಬಿಡಿಸಿ ಬಹಳ ರೋಗಿಗಳಿಗೆ ಎಣ್ಣೆ ಹಚ್ಚಿ ಅವರನ್ನು ಸ್ವಸ್ಥಪಡಿಸಿದರು.
- Matthew 10:1–5 ಮತ್ತಾಯನು 10:1–5ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ತನ್ನ ಬಳಿಗೆ ಕರೆದು ಅಶುದ್ಧಾತ್ಮಗಳನ್ನು ಬಿಡಿಸುವಂತೆಯೂ ಎಲ್ಲಾ ತರವಾದ ರೋಗವನ್ನು ಮತ್ತು ಎಲ್ಲಾ ತರವಾದ ಅಸ್ವಸ್ಥತೆಯನ್ನು ಸ್ವಸ್ಥ ಮಾಡು ವಂತೆಯೂ ಅವರಿಗೆ ಅಧಿಕಾರ ಕೊಟ್ಟನು. ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು: ಮೊದಲನೆಯವನು ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರನಾದ ಅಂದ್ರೆಯ, ಜೆಬೆದಾಯನ ಮಗನಾದ ಯಾಕೋಬ ಮತ್ತು ಅವನ ಸಹೋದರನಾದ ಯೋಹಾನ, ಫಿಲಿಪ್ಪ, ಬಾರ್ತೊ ಲೊಮಾಯ, ತೋಮ, ಸುಂಕದವನಾದ ಮತ್ತಾಯ ಅಲ್ಫಾಯನ ಮಗನಾದ ಯಾಕೋಬ, ತದ್ದಾಯನೆಂಬ ಅಡ್ಡ ಹೆಸರಿನ ಲೆಬ್ಬಾಯ, ಕಾನಾನ್ಯನಾದ ಸೀಮೋನ ಮತ್ತು ಆತನನ್ನು ಹಿಡಿದುಕೊಟ್ಟ ಯೂದ ಇಸ್ಕರಿಯೋತ ಎಂಬಿವುಗಳೇ. ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿ ಸುವಾಗ ಅವರಿಗೆ ಅಪ್ಪಣೆಕೊಟ್ಟು ಹೇಳಿದ್ದೇನಂ ದರೆ--ಅನ್ಯಜನರ ದಾರಿಯಲ್ಲಿ ಹೋಗಬೇಡಿರಿ ಮತ್ತು ಸಮಾರ್ಯರ ಯಾವ ಪಟ್ಟಣದಲ್ಲಿಯೂ ನೀವು ಪ್ರವೇಶಿಸಬೇಡಿರಿ.
- Acts 1:8 ಅಪೊಸ್ತಲರ ಕೃತ್ಯಗಳು 1:8ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುವಿರಿ; ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯದ ಲ್ಲಿಯೂ ಸಮಾರ್ಯದಲ್ಲಿಯೂ ಭೂಮಿಯ ಕಟ್ಟ ಕಡೆಯವರೆಗೂ ನೀವು ನನಗೆ ಸಾಕ್ಷಿಗಳಾಗಿರುವಿರಿ ಎಂದು ಹೇಳಿದನು.
- Mark 3:13–19 ಮಾರ್ಕನು 3:13–19ತರುವಾಯ ಆತನು ಬೆಟ್ಟದ ಮೇಲೆ ಹೋಗಿ ತನಗೆ ಬೇಕಾದವರನ್ನು ಕರೆಯಲು ಅವರು ಆತನ ಬಳಿಗೆ ಬಂದರು. ಆತನು ಹನ್ನೆರಡು ಮಂದಿಯನ್ನು ತನ್ನೊಂದಿಗೆ ಇರುವದಕ್ಕೂ (ಸುವಾರ್ತೆ) ಸಾರುವದ ಕ್ಕಾಗಿ ತಾನು ಅವರನ್ನು ಕಳುಹಿಸುವದಕ್ಕೂ ವ್ಯಾಧಿ ಗಳನ್ನು ಸ್ವಸ್ಥಮಾಡುವದಕ್ಕೂ ದೆವ್ವಗಳನ್ನು ಬಿಡಿಸು ವದಕ್ಕೂ ನೇಮಿಸಿ ಅವರಿಗೆ ಅಧಿಕಾರ ಕೊಟ್ಟನು. ಆತನು ಸೀಮೋನನಿಗೆ ಪೇತ್ರನೆಂದು ಹೆಸರಿಟ್ಟನು. ಮತ್ತು ಜೆಬೆದಾಯನ ಮಗನಾದ ಯಾಕೋಬ ನಿಗೂ ಯಾಕೋಬನ ಸಹೋದರನಾದ ಯೋಹಾನ ನಿಗೂ ಬೊವನೆರ್ಗೆಸ್ ಎಂದು ಹೆಸರಿಟ್ಟನು ಅಂದರೆ ಗುಡುಗಿನ ಪುತ್ರರು ಎಂದರ್ಥ. ಮತ್ತು ಅಂದ್ರೆಯ, ಫಿಲಿಪ್ಪ, ಬಾರ್ತೂಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನ, ಆತನನ್ನು ಹಿಡು ಕೊಡಲಿಕ್ಕಿದ್ದ ಯೂದ ಇಸ್ಕರಿ ಯೋತ್ ಎಂಬವರೇ. ಮತ್ತು ಅವರು ಒಂದು ಮನೆಯೊಳಕ್ಕೆ ಹೋದರು.
- Acts 9:34 ಅಪೊಸ್ತಲರ ಕೃತ್ಯಗಳು 9:34ಪೇತ್ರನು ಅವನಿಗೆ--ಐನೇಯನೇ, ಯೇಸು ಕ್ರಿಸ್ತನು ನಿನ್ನನ್ನು ವಾಸಿಮಾಡು ತ್ತಾನೆ; ಎದ್ದು ನಿನ್ನ ಹಾಸಿಗೆಯನ್ನು ಹಾಸಿಕೋ ಎಂದು ಹೇಳಿದನು; ಕೂಡಲೆ ಅವನು ಎದ್ದನು.
- Acts 3:16 ಅಪೊಸ್ತಲರ ಕೃತ್ಯಗಳು 3:16ನೀವು ನೋಡಿ ತಿಳಿದಂಥ ಈ ಮನುಷ್ಯನು ಆತನ ಹೆಸರಿನಲ್ಲಿ ನಂಬಿಕೆ ಇಟ್ಟದ್ದರಿಂದ ಆ ಹೆಸರೇ ಇವನನ್ನು ಬಲಪಡಿಸಿತು; ಹೌದು, ಆತನಿಂದಾದ ನಂಬಿಕೆಯು ನಿಮ್ಮೆಲ್ಲರ ಮುಂದೆ ಇವನಿಗೆ ಇಂಥ ಪೂರ್ಣ ಸ್ವಸ್ಥತೆಯನ್ನು ಕೊಟ್ಟಿತು.
- Luke 6:13–16 ಲೂಕನು 6:13–16ಬೆಳಗಾದ ಮೇಲೆ ಆತನು ತನ್ನ ಶಿಷ್ಯರನ್ನು ತನ್ನ ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡದ್ದಲ್ಲದೆ ಅವರಿಗೆ ಅಪೊಸ್ತಲರೆಂದು ಹೆಸರಿಟ್ಟನು. ಅವರು (ಆತನು ಪೇತ್ರನೆಂದು ಕರೆದ) ಸೀಮೋನ, ಅವನ ಸಹೋದರನಾದ ಅಂದ್ರೆಯ, ಯಾಕೋಬ,ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ಮತಾಭಿಮಾನಿಯೆಂದು ಕರೆಯಲ್ಪಟ್ಟ ಸೀಮೋನ, ಯಾಕೋಬನ ಸಹೋದರನಾದ ಯೂದ, ಮತ್ತು ದ್ರೋಹಿಯಾದ ಇಸ್ಕರಿಯೋತ ಯೂದ ಎಂಬವರೇ.
Original words (Greek)
- Then · G1161δέ dé
- called · G4779συγκαλέω synkaléō
- his · G846αὐτός autós
- twelve · G1427δώδεκα dṓdeka
- disciples · G3101μαθητής mathētḗs
- together · G4779συγκαλέω synkaléō
- gave · G1325δίδωμι dídōmi
- them · G846αὐτός autós
- power · G1411δύναμις dýnamis
- and · G2532καί kaí
- authority · G1849ἐξουσία exousía
- over · G1909ἐπί epí
- all · G3956πᾶς pâs
- devils · G1140δαιμόνιον daimónion
- and · G2532καί kaí
- cure · G2323θεραπεύω therapeúō
- diseases · G3554νόσος nósos