Mark · chapter 4 · verse 13
Mark 4:13 in Kannada
ಮತ್ತು ಆತನು ಅವರಿಗೆ--ಈ ಸಾಮ್ಯವು ನಿಮಗೆ ತಿಳಿಯ ಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ನೀವು ಹೇಗೆ ತಿಳಿದುಕೊಳ್ಳುವಿರಿ?
Mattu aatanu avarige--ee saamyavu nimage tiliya lillavo? Haagaadare ellaa saamyagalannu neevu hege tilidukolluviri?
Mark 4:13 in English
- King James Version (KJV)
- And he said unto them, Know ye not this parable? and how then will ye know all parables?
- World English Bible (WEB)
- He said to them, “Don’t you understand this parable? How will you understand all of the parables?
- American Standard Version (ASV)
- And he saith unto them, Know ye not this parable? and how shall ye know all the parables?
- Bible in Basic English (BBE)
- And he said to them, If you are not clear about this story, how will you be clear about the others?
- Darby Translation (DBY)
- And he says to them, Do ye not know this parable? and how will ye be acquainted with all the parables?
- Webster's Bible (WBS)
- And he said to them, Know ye not this parable? and how then will ye know all parables?
- Young's Literal Translation (YLT)
- And he saith to them, 'Have ye not known this simile? and how shall ye know all the similes?
Read in context
- 11ಅದಕ್ಕೆ ಆತನು ಅವರಿಗೆ--ದೇವರ ರಾಜ್ಯದ ಮರ್ಮವನ್ನು ತಿಳಿದುಕೊಳ್ಳಲು ನಿಮಗೆ ಕೊಡಲ್ಪಟ್ಟಿದೆ. ಆದರೆ ಹೊರಗಿನವರಿಗೆ ಇವೆಲ್ಲವುಗಳು ಸಾಮ್ಯಗಳಿಂದ ಹೇಳಲ್ಪಡುತ್ತವೆ.
- 12ಯಾಕಂದರೆ ಅವರು ದೃಷ್ಟಿಯಿ ದ್ದರೂ ನೋಡಿ ತಿಳುಕೊಳ್ಳದಂತೆ ಕೇಳಿದರೂ ಕೇಳಿ ಗ್ರಹಿಸದಂತೆ ಮತ್ತು ಅವರು ತಿರುಗಿಕೊಂಡು ತಮ್ಮ ಪಾಪಗಳಿಂದ ಕ್ಷಮಿಸಲ್ಪಡದಂತೆ ಆಗುವದು.
- 13ಮತ್ತು ಆತನು ಅವರಿಗೆ--ಈ ಸಾಮ್ಯವು ನಿಮಗೆ ತಿಳಿಯ ಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ನೀವು ಹೇಗೆ ತಿಳಿದುಕೊಳ್ಳುವಿರಿ?
- 14ಬಿತ್ತುವವನು ವಾಕ್ಯವನ್ನು ಬಿತ್ತುತ್ತಾನೆ.
- 15ದಾರಿಯ ಮಗ್ಗುಲಲ್ಲಿ ವಾಕ್ಯವು ಬಿತ್ತಲ್ಪಟ್ಟವರು ಇವರೇ; ಆದರೆ ಇವರು ಕೇಳಿದಾಗ ಸೈತಾನನು ಕೂಡಲೆ ಬಂದು ಅವರ ಹೃದಯಗಳಲ್ಲಿ ಬಿತ್ತಲ್ಪಟ್ಟಿದ್ದ ವಾಕ್ಯವನ್ನು ತೆಗೆದು ಬಿಡುತ್ತಾನೆ.
Cross references
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- Matthew 15:15–17 ಮತ್ತಾಯನು 15:15–17ತರುವಾಯ ಪೇತ್ರನು ಪ್ರತ್ಯುತ್ತರವಾಗಿ ಆತ ನಿಗೆ--ಈ ಸಾಮ್ಯವನ್ನು ನಮಗೆ ತಿಳಿಯಪಡಿಸು ಅಂದನು. ಅದಕ್ಕೆ ಯೇಸು--ನೀವು ಸಹ ಇನ್ನೂ ಗ್ರಹಿಸದೆ ಇದ್ದೀರಾ? ಬಾಯೊಳಗೆ ಹೋಗಿ ಹೊಟ್ಟೆ ಯಲ್ಲಿ ಸೇರುವದೆಲ್ಲವೂ ಬಹಿರ್ಭೂಮಿಗೆ ಹೋಗುವ ದೆಂದು ನೀವು ಇನ್ನೂ ಗ್ರಹಿಸಲಿಲ್ಲವೋ?
- Matthew 13:51–52 ಮತ್ತಾಯನು 13:51–52ಇದಲ್ಲದೆ ಯೇಸು ಅವರಿಗೆ--ಇವುಗಳನ್ನೆಲ್ಲಾ ನೀವು ಗ್ರಹಿಸಿದ್ದೀರಾ ಎಂದು ಕೇಳಿದ್ದಕ್ಕೆ ಅವರು ಆತ ನಿಗೆ--ಕರ್ತನೇ, ಹೌದು ಎಂದು ಹೇಳಿದರು. ಆತನು ಅವರಿಗೆ--ಆದಕಾರಣ ಪರಲೋಕ ರಾಜ್ಯದ ವಿಷಯವಾಗಿ ಶಿಕ್ಷಣಹೊಂದಿದ ಪ್ರತಿಯೊಬ್ಬ ಶಾಸ್ತ್ರಿಯು ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೇ ಯಜಮಾನನಿಗೆ ಹೋಲಿಕೆಯಾಗಿದ್ದಾನೆ ಅಂದನು.
- Matthew 16:8–9 ಮತ್ತಾಯನು 16:8–9ಯೇಸು ಅದನ್ನು ತಿಳುಕೊಂಡವನಾಗಿ ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ರೊಟ್ಟಿಯನ್ನು ತಕ್ಕೊಂಡು ಬರಲಿಲ್ಲವೆಂದು ನಿಮ್ಮಲ್ಲಿ ಯಾಕೆ ಅಂದುಕೊಳ್ಳುತ್ತೀರಿ? ಐದು ರೊಟ್ಟಿಗಳನ್ನು ಐದು ಸಾವಿರ ಜನರಿಗೆ ಹಂಚಿದಾಗ ಎಷ್ಟು ಪುಟ್ಟಿಗಳನ್ನು ತುಂಬಿದಿರೆಂದು ನೀವು ಇನ್ನೂ ಗ್ರಹಿಸಲಿಲ್ಲವೋ? ಇಲ್ಲವೆ ನಿಮಗೆ ನೆನಪಿಲ್ಲವೋ?
- 1 Corinthians 3:1–2 1 ಕೊರಿಂಥದವರಿಗೆ 3:1–2ಸಹೋದರರೇ, ನಾನಂತೂ ಆತ್ಮನಿಂದ ನಡಿಸಿಕೊಳ್ಳುವವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತನಾಡಲಾರದೆ ಪ್ರಾಪಂಚಿಕರೂ ಕ್ರಿಸ್ತ ನಲ್ಲಿ ಎಳೆಕೂಸುಗಳೂ ಆಗಿರುವಂಥವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತನಾಡಬೇಕಾಯಿತು. ನಿಮಗೆ ಹಾಲು ಕುಡಿಸಿದೆನು, ಅನ್ನ ಕೊಡಲಿಲ್ಲ; ಅನ್ನ ತಿನು ್ನವದಕ್ಕೆ ನಿಮಗೆ ಶಕ್ತಿ ಇರಲಿಲ್ಲ, ಇಲ್ಲವೆ ಈಗಲಾದರೂ ಶಕ್ತಿಯಿಲ್ಲ;
- Matthew 13:18–23 ಮತ್ತಾಯನು 13:18–23ಆದದರಿಂದ ಬಿತ್ತುವವನ ಸಾಮ್ಯದ ವಿಷಯವಾಗಿ ನೀವು ಕೇಳಿರಿ: ಯಾವನಾದರೂ ರಾಜ್ಯದ ವಾಕ್ಯವನ್ನು ಕೇಳಿ ಗ್ರಹಿಸದೆ ಇರುವಾಗ ಕೆಡುಕನು ಬಂದು ಅವನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಬಿಡು ವನು; ದಾರಿಯ ಮಗ್ಗುಲಲ್ಲಿ ಬೀಜವನ್ನು ಅಂಗೀಕರಿ ಸಿದವನು ಇವನೇ. ಮತ್ತು ಬಂಡೆಯ ಸ್ಥಳಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಅಂಗೀಕರಿಸುತ್ತಾನೆ; ಆದರೂ ಅವನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇರುವನು; ಯಾಕಂದರೆ ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು. ಮುಳ್ಳುಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಸಹ ಇವನೇ; ಇವನು ವಾಕ್ಯವನ್ನು ಕೇಳುತ್ತಾನೆ; ಆದರೆ ಈ ಪ್ರಪಂಚದ ಚಿಂತೆಯೂ ಐಶ್ವರ್ಯದ ಮೋಸವೂ ವಾಕ್ಯವನ್ನು ಅಡಗಿಸುವ ದರಿಂದ ಅವನು ಫಲ ಕೊಡಲಾರನು. ಆದರೆ ಒಳ್ಳೇ ಭೂಮಿಯಲ್ಲಿ ಬೀಜ ವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯ ವನ್ನು ಕೇಳಿ ಅದನು ಗ್ರಹಿಸುತ್ತಾನೆ; ಇವನೇ ಫಲಫಲಿ ಸುವವನಾಗಿ ನೂರರಷ್ಟು ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾನೆ.
- Hebrews 5:11–14 ಇಬ್ರಿಯರಿಗೆ 5:11–14ಆತನ ವಿಷಯದಲ್ಲಿ ನಾವು ಹೇಳಬೇಕಾದ ಮಾತುಗಳು ಬಹಳ ಉಂಟು. ನಿಮ್ಮ ಕಿವಿಗಳು ಮಂದವಾದದರಿಂದ ಅದನ್ನು ವಿವರಿಸುವದು ಕಷ್ಟ ವಾಗಿದೆ. ನೀವು ಇಷ್ಟರೊಳಗೆ ಬೋಧಕರಾಗಿರ ಬೇಕಾಗಿದ್ದರೂ ಒಬ್ಬನು ನಿಮಗೆ ದೈವೋಕ್ತಿಗಳ ಮೂಲ ಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ; ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ. ಹಾಲು ಕುಡಿಯುವ ವನು ಕೂಸಿನಂತಿದ್ದು, ನೀತಿವಾಕ್ಯದಲ್ಲಿ ಅನುಭವವಿಲ್ಲದ ವನಾಗಿದ್ದಾನೆ.ಆದರೆ ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೊಸ್ಕರ ಅಂದರೆ ತಮ್ಮ ಜ್ಞಾನೇಂದ್ರಿ ಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿದವರಿಗೋಸ್ಕರವಾಗಿದೆ. ಆದರೆ ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೊಸ್ಕರ ಅಂದರೆ ತಮ್ಮ ಜ್ಞಾನೇಂದ್ರಿ ಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿದವರಿಗೋಸ್ಕರವಾಗಿದೆ.
- Luke 24:25 ಲೂಕನು 24:25ಆಗ ಆತನು ಅವರಿಗೆ--ಓ ಬುದ್ದಿಹೀನರೇ, ಪ್ರವಾದಿಗಳು ಹೇಳಿ ದ್ದೆಲ್ಲವನ್ನು ನಂಬುವದರಲ್ಲಿ ಮಂದ ಹೃದಯದವರೇ,
- Luke 8:11–15 ಲೂಕನು 8:11–15ಆ ಸಾಮ್ಯವು ಇದೇ; ಬೀಜವು ದೇವರ ವಾಕ್ಯವೇ. ವಾಕ್ಯವನ್ನು ಕೇಳಿದವರು ನಂಬಿ ರಕ್ಷಣೆಹೊಂದಿಕೊಳ್ಳದಂತೆ ಸೈತಾನನು ಬಂದು ಅವರ ಹೃದಯದೊಳಗಿಂದ ಆ ವಾಕ್ಯವನ್ನು ತೆಗೆದು ಬಿಡುವನು. ಇವರೇ ಆ ದಾರಿಯ ಮಗ್ಗುಲಾಗಿ ರುವವರು. ಬಂಡೆಯ ನೆಲದವರು ಯಾರಂದರೆ, ಅವರು ವಾಕ್ಯವನ್ನು ಕೇಳಿದಾಗ ಸಂತೋಷದಿಂದ ಅಂಗೀಕರಿಸುವರು; ಇವರು ಬೇರಿಲ್ಲದಿರುವದರಿಂದ ಸ್ವಲ್ಪಕಾಲ ನಂಬಿ ಶೋಧನೆ ಬಂದಾಗ ಬಿದ್ದು ಹೋಗುವರು. ಮುಳ್ಳುಗಳ ಮಧ್ಯದಲ್ಲಿ ಬಿದ್ದ ಬೀಜದವರು ಯಾರಂದರೆ ಅವರು ಕೇಳಿದ ಮೇಲೆ ಮುಂದರಿದು ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಭೋಗಗಳಿಂದಲೂ ಅಡಗಿಸ ಲ್ಪಟ್ಟು ಪರಿಪೂರ್ಣವಾಗಿ ಫಲಿಸದವರು. ಆದರೆ ಒಳ್ಳೇ ಭೂಮಿಯವರು ಯಾರಂದರೆ ಯಥಾರ್ಥವಾದ ಒಳ್ಳೇ ಹೃದಯದಿಂದ ವಾಕ್ಯವನ್ನು ಕೇಳಿ ಅದನು ಕೈಕೊಂಡು ತಾಳ್ಮೆಯಿಂದ ಫಲಿಸುವವರೇ.
- Mark 7:17–18 ಮಾರ್ಕನು 7:17–18ಆತನು ಜನರನ್ನು ಬಿಟ್ಟು ಮನೆಯೊಳಗೆ ಬಂದ ಮೇಲೆ ಆತನ ಶಿಷ್ಯರು ಆ ಸಾಮ್ಯದ ವಿಷಯವಾಗಿ ಆತನನ್ನು ಕೇಳಿದರು. ಆಗ ಆತನು ಅವರಿಗೆ-- ನೀವು ಸಹ ಗ್ರಹಿಕೆ ಇಲ್ಲದವರಾಗಿದ್ದೀರಾ? ಹೊರಗಿ ನಿಂದ ಮನುಷ್ಯನೊಳಗೆ ಸೇರುವಂಥದ್ದು ಯಾವದೂ ಅವನನ್ನು ಹೊಲೆಮಾಡಲಾರದು ಎಂದು ನೀವು ತಿಳಿದುಕೊಳ್ಳುವದಿಲ್ಲವೋ?