Mark · chapter 4 · verse 21
Mark 4:21 in Kannada
ಆತನು ಅವರಿಗೆ--ದೀಪವನ್ನು ಕೊಳಗದೊಳ ಗಾಗಲೀ ಮಂಚದ ಕೇಳಗಾಗಲೀ ಇಡುವದಕ್ಕೆ ತರುವದುಂಟೋ? ದೀಪಸ್ತಂಭದ ಮೇಲೆ ಇಡುವದಕ್ಕೆ ಅಲ್ಲವೋ?
Aatanu avarige--deepavannu kolagadola gaagalee manchada kelagaagalee iduvadakke taruvadunto? Deepastambhada mele iduvadakke allavo?
Mark 4:21 in English
- King James Version (KJV)
- And he said unto them, Is a candle brought to be put under a bushel, or under a bed? and not to be set on a candlestick?
- World English Bible (WEB)
- He said to them, “Is a lamp brought to be put under a basket or under a bed? Isn’t it put on a stand?
- American Standard Version (ASV)
- And he said unto them, Is the lamp brought to be put under the bushel, or under the bed, [and] not to be put on the stand?
- Bible in Basic English (BBE)
- And he said to them, When the light comes in, do people put it under a vessel, or under the bed, and not on its table?
- Darby Translation (DBY)
- And he said to them, Does the lamp come that it should be put under the bushel or under the couch? [Is it] not that it should be set upon the lamp-stand?
- Webster's Bible (WBS)
- And he said to them, Is a candle brought to be put under a close vessel, or under a bed? and not to be set on a candlestick?
- Young's Literal Translation (YLT)
- And he said to them, 'Doth the lamp come that under the measure it may be put, or under the couch — not that it may be put on the lamp-stand?
Read in context
- 19ಈ ಲೋಕದ ಚಿಂತೆಗಳೂ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.
- 20ಒಳ್ಳೆಯ ಭೂಮಿಯ ಮೇಲೆ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿ ಅಂಗೀಕರಿಸಿದ ಮೇಲೆ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಕೆಲವರು ನೂರರಷ್ಟು ಫಲಕೊಡುತ್ತಾರೆ ಅಂದನು.
- 21ಆತನು ಅವರಿಗೆ--ದೀಪವನ್ನು ಕೊಳಗದೊಳ ಗಾಗಲೀ ಮಂಚದ ಕೇಳಗಾಗಲೀ ಇಡುವದಕ್ಕೆ ತರುವದುಂಟೋ? ದೀಪಸ್ತಂಭದ ಮೇಲೆ ಇಡುವದಕ್ಕೆ ಅಲ್ಲವೋ?
- 22ಯಾಕಂದರೆ ಪ್ರಕಟವಾಗದಂತೆ ಅಡಗಿಸಲ್ಪಟ್ಟದ್ದು ಯಾವದೂ ಇಲ್ಲ; ಇಲ್ಲವೆ ರಹಸ್ಯವಾಗಿ ಇಡಲ್ಪಟ್ಟದ್ದು ಯಾವದೂ ಬಹಿರಂಗವಾಗಿ ಇರಲಾರದು.
- 23ಯಾವನಿಗಾದರೂ ಕೇಳುವದಕ್ಕೆ ಕಿವಿಗಳಿದ್ದರೆ ಅವನು ಕೇಳಲಿ ಅಂದನು.
Cross references
- Matthew 5:15 ಮತ್ತಾಯನು 5:15ಇಲ್ಲವೆ ಮನುಷ್ಯರು ದೀಪವನ್ನು ಹೊತ್ತಿಸಿ ಕೊಳಗದೊಳಗೆ ಇಡದೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವದು.
- Luke 11:33 ಲೂಕನು 11:33ಯಾರೂ ದೀಪವನ್ನು ಹಚ್ಚಿ ಗುಪ್ತ ಸ್ಥಳದಲ್ಲಾಗಲಿ ಇಲ್ಲವೆ ಕೊಳಗದೊಳಗಾಗಲಿ ಇಡುವದಿಲ್ಲ; ಆದರೆ ಒಳಗೆ ಬರುವವರು ಬೆಳಕನ್ನು ನೋಡುವಂತೆ ಅದನ್ನು ದೀಪಸ್ತಂಭದ ಮೇಲೆ ಇಡು ತ್ತಾರಷ್ಟೆ.
- Luke 8:16 ಲೂಕನು 8:16ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆ ಯಿಂದ ಮುಚ್ಚುವದಿಲ್ಲ; ಇಲ್ಲವೆ ಮಂಚದ ಕೆಳಗೆ ಇಡುವದಿಲ್ಲ; ಆದರೆ ಒಳಗೆ ಪ್ರವೇಶಿಸುವವರು ಬೆಳಕನ್ನು ನೋಡುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.
- Isaiah 60:1–3 ಯೆಶಾಯ 60:1–3ಏಳು, ಪ್ರಕಾಶಿಸು; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು. ಇಗೋ, ಕತ್ತಲೆ ಭೂಮಿಯನ್ನೂ ಗಾಢಾಂಧಕಾರವು ಜನಗಳನ್ನೂ ಮುಚ್ಚುವದು; ಆದರೆ ನಿನ್ನ ಮೇಲೆ ಕರ್ತನು ಉದಯಿ ಸುವನು; ಆತನ ಮಹಿಮೆಯು ನಿನ್ನ ಮೇಲೆ ಕಾಣ ಬರುವದು. ಅನ್ಯಜನಾಂಗಗಳು ನಿನ್ನ ಪ್ರಕಾಶಕ್ಕೂ ಅರಸರು ನಿನ್ನ ಉದಯದ ಕಾಂತಿಗೂ ಬರುವರು.
- Ephesians 5:3–15 ಎಫೆಸದವರಿಗೆ 5:3–15ಆದರೆ ನಿಮ್ಮೊಳಗೆ ಜಾರತ್ವವಾಗಲಿ ಯಾವ ಅಶುದ್ಧತ್ವವಾಗಲಿ ಇಲ್ಲವೆ ಲೋಭವಾಗಲಿ ಪರಿಶುದ್ಧರಿಗೆ ತಕ್ಕ ಹಾಗೆ ಇವುಗಳ ಹೆಸರನ್ನು ಒಂದು ಸಲವಾದರೂ ಎತ್ತಬಾರದು. ಇಲ್ಲವೆ ಹೊಲಸುತನ ಹುಚ್ಚು ಮಾತು ಕುಚೋದ್ಯ ಇವು ಬೇಡ, ಅಯುಕ್ತವಾಗಿವೆ; ಇವು ಗಳನ್ನು ಬಿಟ್ಟು ಆತನಿಗೆ ಉಪಕಾರ ಸ್ತುತಿಮಾಡುವದೇ ಉತ್ತಮ. ಯಾವ ಜಾರನಾಗಲಿ, ಅಶುದ್ಧನಾಗಲಿ, ವಿಗ್ರಹಾರಾಧಕನಂತಿರುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯನಾಗುವದಿಲ್ಲವೆಂದು ನೀವು ಬಲ್ಲಿರಲ್ಲವೇ. ಹುರುಳಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಯಾಕಂದರೆ ಇಂಥವುಗಳಿಂದ ದೇವರ ಕೋಪವು ಆತನಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ. ಆದದರಿಂದ ನೀವು ಅವರೊಂದಿಗೆ ಪಾಲುಗಾರ ರಾಗಿರಬೇಡಿರಿ. ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿ ಬೆಳಕಾಗಿರುವದರಿಂದ ಬೆಳಕಿನ ಮಕ್ಕಳಂತೆ ನಡೆದುಕೊಳ್ಳಿರಿ. ಆತ್ಮನ ಫಲವು ಎಲ್ಲಾ ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯ ದಲ್ಲಿಯೂ ಇರುತ್ತದೆ. ಕರ್ತನಿಗೆ ಮೆಚ್ಚಿಕೆಯಾದದ್ದೇ ನೆಂಬದನ್ನು ಪರಿಶೋಧಿಸಿರಿ. ತ್ತಲೆಗೆ ಸಂಬಂಧ ವಾದ ಕೃತ್ಯಗಳಿಂದ ಯಾವ ಫಲವೂ ಬರಲಾರದು; ಅವುಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಖಂಡಿಸಿರಿ. ಅವರು ರಹಸ್ಯವಾಗಿ ನಡಿಸುವ ಕೆಲಸ ಗಳನ್ನು ಕುರಿತು ಮಾತನಾಡುವದಾದರೂ ನಾಚಿಕೆಗೆ ಕಾರಣವಾಗಿದೆ. ಆದರೆ ಖಂಡನೆಯಾಗುವವು ಗಳೆಲ್ಲವೂ ಬೆಳಕಿನಿಂದ ಪ್ರಕಟವಾಗುತ್ತವೆ; ಯಾಕಂದರೆ ಪ್ರಕಟಪಡಿಸುವಂಥದ್ದು ಬೆಳಕೇ. ಆದದರಿಂದ-- ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು; ಕ್ರಿಸ್ತನು ನಿನಗೆ ಪ್ರಕಾಶಕೊಡುವನು ಎಂದು ಆತನು ಹೇಳುತ್ತಾನೆ. ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಜಾಗ್ರತೆಯಿಂದ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿ ರದೆ ಜ್ಞಾನವಂತರಾಗಿರ್ರಿ.
- 1 Corinthians 12:7 1 ಕೊರಿಂಥದವರಿಗೆ 12:7ಆದರೆ ಪವಿತ್ರಾತ್ಮನ ಪ್ರಕಟನೆಯು ಪ್ರತಿಯೊಬ್ಬನ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿದೆ.
- Philippians 2:15–16 ಫಿಲಿಪ್ಪಿಯವರಿಗೆ 2:15–16ಹೀಗೆ ನೀವು ದೋಷವಿಲ್ಲದವರೂ ಕೇಡುಮಾಡ ದವರೂ ನಿಂದಾರಹಿತರೂ ಆದ ದೇವಪುತ್ರರಾಗಿ ವಕ್ರವುಳ್ಳ ದುಷ್ಟಜನಾಂಗದ ಮಧ್ಯದಲ್ಲಿ ಜೀವದಾಯಕ ವಾಕ್ಯವನ್ನು ಹಿಡುಕೊಂಡು ಲೋಕದಲ್ಲಿ ಬೆಳಕುಗಳಂತೆ ಹೊಳೆಯುವವರಾಗಿದ್ದೀರಿ. ಹೀಗೆ ನಾನು ಕೆಲಸ ಸಾಧಿಸಿದ್ದೂ ಪ್ರಯಾಸಪಟ್ಟದ್ದೂ ವ್ಯರ್ಥವಾಗಲಿಲ್ಲ ವೆಂದು ತಿಳಿದು ಕ್ರಿಸ್ತನ ದಿನದಲ್ಲಿ ಸಂತೋಷಪಡುವೆನು.