Mark · chapter 5 · verse 1
Mark 5:1 in Kannada
ತರುವಾಯ ಅವರು ಸಮುದ್ರದ ಆಚೆಗೆ ಗದರೇನರ ಸೀಮೆಗೆ ಬಂದರು.
Taruvaaya avaru samudrada aachege gadarenara seemege bandaru.
Mark 5:1 in English
- King James Version (KJV)
- And they came over unto the other side of the sea, into the country of the Gadarenes.
- World English Bible (WEB)
- They came to the other side of the sea, into the country of the Gadarenes.
- American Standard Version (ASV)
- And they came to the other side of the sea, into the country of the Gerasenes.
- Bible in Basic English (BBE)
- And they came to the other side of the sea, into the country of the Gerasenes.
- Darby Translation (DBY)
- And they came to the other side of the sea, to the country of the Gadarenes.
- Webster's Bible (WBS)
- And they came over to the other side of the sea, into the country of the Gadarenes.
- Young's Literal Translation (YLT)
- And they came to the other side of the sea, to the region of the Gadarenes,
Read in context
- 1ತರುವಾಯ ಅವರು ಸಮುದ್ರದ ಆಚೆಗೆ ಗದರೇನರ ಸೀಮೆಗೆ ಬಂದರು.
- 2ಆತನು ದೋಣಿಯಿಂದ ಹೊರಗೆ ಬಂದಾಗ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನು ಕೂಡಲೆ ಸಮಾಧಿಗಳೊಳಗಿಂದ ಬಂದು ಆತನನ್ನು ಸಂಧಿಸಿದನು.
- 3ಇವನು ಸಮಾಧಿ ಗಳಲ್ಲಿ ವಾಸಿಸುತ್ತಿದ್ದನು. ಇವನನ್ನು ಯಾವ ಮನುಷ್ಯನೂ ಸಂಕೋಲೆಗಳಿಂದಲಾದರೂ ಕಟ್ಟಲಾರದೆ ಹೋದನು.
Cross references
- Luke 8:26–39 ಲೂಕನು 8:26–39ಅವರು ಗಲಿಲಾಯಕ್ಕೆ ಎದುರಾಗಿದ್ದ ಗದರೇನರ ಸೀಮೆಗೆ ತಲುಪಿದರು. ಆತನು ದಡಕ್ಕೆ ಸೇರಿದಾಗ ಬಹು ಕಾಲದಿಂದ ದೆವ್ವಗಳು ಹಿಡಿದು ಬಟ್ಟೆ ಧರಿಸಿಕೊಳ್ಳದೆಯೂ ಯಾವ ಮನೆಯಲ್ಲಿ ವಾಸಿ ಸದೆಯೂ ಸಮಾಧಿಗಳಲ್ಲಿ ಇದ್ದ ಒಬ್ಬ ಮನುಷ್ಯನು ಪಟ್ಟಣದೊಳಗಿಂದ ಹೊರಗೆ ಬಂದು ಅಲ್ಲಿ ಆತನನ್ನು ಸಂಧಿಸಿದನು. ಅವನು ಯೇಸುವನ್ನು ನೋಡಿದಾಗ ಆತನ ಮುಂದೆ ಬಿದ್ದು--ಯೇಸುವೇ, ಮಹೋನ್ನತ ನಾದ ದೇವರಕುಮಾರನೇ, ನನ್ನ ಗೊಡವೆ ನಿನಗೆ ಯಾಕೆ? ನನ್ನನ್ನು ಸಂಕಟಪಡಿಸಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಎಂದು ಗಟ್ಟಿಯಾದ ಸ್ವರದಿಂದ ಕೂಗಿ ಹೇಳಿದನು. (ಯಾಕಂದರೆ ಆ ಅಶುದ್ಧಾತ್ಮವು ಅವನಿಂದ ಹೊರಗೆ ಬರಬೇಕೆಂದು ಆತನು ಅಪ್ಪಣೆ ಕೊಟ್ಟಿದ್ದನು. ಅದು ಬಹಳ ಸಾರಿ ಅವನನ್ನು ಹಿಡಿಯುತ್ತಿ ದ್ದದರಿಂದ ಅವನು ಸರಪಣಿಗಳಿಂದಲೂ ಬೇಡಿಗಳಿಂ ದಲೂ ಕಟ್ಟಲ್ಪಡುತ್ತಿದ್ದರೂ ಅವನು ಆ ಬಂಧನಗಳನ್ನು ಮುರಿದುಬಿಡುತ್ತಿದ್ದನು ಮತ್ತು ದೆವ್ವವು ಅವನನ್ನು ಅ ಯೇಸು ಅವನಿಗೆ--ನಿನ್ನ ಹೆಸರು ಏನು ಎಂದು ಕೇಳಿದನು. ಅದಕ್ಕವನು--ಲೀಜೆನ್ (ದಂಡು) ಅಂದನು. ಯಾಕಂ ದರೆ ಬಹಳ ದೆವ್ವಗಳು ಅವನಲ್ಲಿ ಸೇರಿಕೊಂಡಿದ್ದವು. ಅವು ತಮ್ಮನ್ನು ಹೊರಗೆ ಅಗಾಧಕ್ಕೆ ಹೋಗುವಂತೆ ಅಪ್ಪಣೆ ಕೊಡಬಾರದೆಂದು ಆತನನ್ನು ಬೇಡಿಕೊಂಡವು. ಆಗ ಅಲ್ಲಿ ಬೆಟ್ಟದ ಮೇಲೆ ಬಹಳ ಹಂದಿಗಳ ಹಿಂಡು ಮೇಯುತ್ತಿದ್ದದರಿಂದ ಅವುಗಳೊಳಗೆ ತಾವು ಸೇರಿಕೊಳ್ಳಲು ಅಪ್ಪಣೆ ಕೊಡಬೇಕೆಂದು ಆತನನ್ನು ಬೇಡಿಕೊಂಡವು. ಆತನು ಅವುಗಳಿಗೆ ಅಪ್ಪಣೆಕೊಟ್ಟನು. ಆಗ ಆ ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು ಹಂದಿಗಳೊಳಗೆ ಸೇರಿದವು. ಆ ಗುಂಪು ಉಗ್ರತೆಯಿಂದ ಓಡಿ ಕಡಿದಾದ ಸ್ಥಳದಿಂದ ಕೆರೆಯೊಳಗೆ ಬಿದ್ದು ಉಸಿರುಗಟ್ಟಿ ಸತ್ತವು. ಅವುಗಳನ್ನು ಮೇಯಿಸು ತ್ತಿದ್ದವರು ಸಂಭವಿಸಿದ್ದನ್ನು ನೋಡಿ ಓಡಿಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ಅದನ್ನು ತಿಳಿಯ ಪಡಿಸಿದರು. ಆಗ ಜನರು ನಡೆದ ಸಂಗತಿ ಏನೆಂದು ನೋಡುವದಕ್ಕಾಗಿ ಹೊರಟು ಹೋಗಿ ಯೇಸುವಿನ ಬಳಿಗೆ ಬಂದು ದೆವ್ವಗಳು ಬಿಟ್ಟು ಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿ ಯುಳ್ಳವನಾಗಿ ಯೇಸುವಿನ ಪಾದಗಳ ಬಳಿಯಲ್ಲಿ ಕೂತಿರುವದನ್ನು ಕಂಡು ಭಯಪಟ್ಟರು. ಅದನ್ನು ನೋಡಿದವರು ಸಹ ಯಾವ ರೀತಿಯಲ್ಲಿ ದೆವ್ವಗಳಿಂದ ಹಿಡಿದಿದ್ದವನು ಸ್ವಸ್ಥಮಾಡಲ್ಪಟ್ಟನೆಂದು ಅವರಿಗೆ ತಿಳಿಯ ಪಡಿಸಿದರು. ಆಗ ಗದರೇನನ ಸೀಮೆಯ ಸುತ್ತು ಮುತ್ತಲಿನ ಜನಸಮೂಹವೆಲ್ಲವು ಬಹಳ ಭಯ ಹಿಡಿದವರಾದದರಿಂದ ಆತನು ತಮ್ಮ ಬಳಿಯಿಂದ ಹೊರಟುಹೋಗಬೇಕೆಂದು ಆತನನ್ನು ಬೇಡಿ ಕೊಂಡರು; ಆತನು ದೋಣಿಯನ್ನು ಹತ್ತಿಹಿಂದಿರುಗಿ ದನು. ಆಗ ದೆವ್ವಗಳು ಬಿಟ್ಟು ಹೋಗಿದ್ದ ಆ ಮನುಷ್ಯನು ತಾನು ಆತನ ಜೊತೆಯಲ್ಲಿ ಇರುವೆನೆಂದು ಆತನನ್ನು ಬೇಡಿಕೊಂಡನು. ಆದರೆ ಯೇಸು ಅವನನ್ನು ಕಳುಹಿಸಿಬಿಟ್ಟು ಅವನಿಗೆ-- ನೀನು ನಿನ್ನ ಸ್ವಂತ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಎಂಥಾ ಮಹತ್ವವಾದವುಗಳನ್ನು ಮಾಡಿದ್ದಾನೆಂಬದನ್ನು ತೋರಿಸು ಅಂದನು. ಅವನು ತನ್ನ ಮಾರ್ಗವಾಗಿ ಹೊರಟು ಯೇಸು ತನಗೆ ಎಂಥಾ ದೊಡ್ಡ ಕಾರ್ಯಗಳನ್ನು ಮಾಡಿದ್ದಾನೆಂದು ಪಟ್ಟಣದಲ್ಲೆಲಾ ಪ್ರಚಾರಮಾಡಿದನು.
- Matthew 8:28–34 ಮತ್ತಾಯನು 8:28–34ಆತನು ಆಚೆಯ ದಡದ ಗದರೇನರ ದೇಶಕ್ಕೆ ಬಂದಾಗ ದೆವ್ವಗಳು ಹಿಡಿದಿದ್ದ ಇಬ್ಬರು ಸಮಾಧಿ ಗಳೊಳಗಿಂದ ಆತನ ಎದುರಿಗೆ ಬಂದರು. ಅವರು ಬಹು ಉಗ್ರತೆಯುಳ್ಳವರಾಗಿದ್ದದರಿಂದ ಯಾವ ಮನು ಷ್ಯನೂ ಆ ಮಾರ್ಗವಾಗಿ ಹೋಗುವ ಹಾಗಿದ್ದಿಲ್ಲ. ಆಗ ಇಗೋ, ಅವರು--ಯೇಸುವೇ, ದೇವ ಕುಮಾರನೇ, ನಿನ್ನೊಂದಿಗೆ ನಮ್ಮ ಗೊಡವೆ ಏನು? ಸಮಯಕ್ಕೆ ಮುಂಚೆ ನಮ್ಮನ್ನು ಸಂಕಟಪಡಿಸು ವದಕ್ಕಾಗಿ ಇಲ್ಲಿಗೆ ಬಂದೆಯಾ ಎಂದು ಕೂಗಿ ಹೇಳಿದರು. ಆಗ ಅವರಿಗೆ ಬಹು ದೂರದಲ್ಲಿ ಬಹಳ ಹಂದಿಗಳ ಗುಂಪು ಮೇಯುತ್ತಿತ್ತು. ಆದದರಿಂದ ದೆವ್ವಗಳು ಆತನಿಗೆ--ನೀನು ನಮ್ಮನ್ನು ಹೊರಗೆ ಹಾಕುವದಾದರೆ ಆ ಹಂದಿಗಳ ಗುಂಪಿನೊಳಗೆ ಸೇರಿಕೊಳ್ಳುವದಕ್ಕೆ ನಮಗೆ ಅಪ್ಪಣೆ ಕೊಡು ಎಂದು ಬೇಡಿಕೊಂಡವು. ಆತನು ಅವುಗಳಿಗೆ--ಹೋಗಿರಿ ಅಂದನು. ಆಗ ಅವು ಹೊರಗೆ ಬಂದು ಹಂದಿಗಳ ಗುಂಪಿನೊಳಗೆ ಸೇರಿಕೊಂಡವು; ಆಗ ಇಗೋ, ಹಂದಿಗಳ ಗುಂಪೆಲ್ಲಾ ಸಮುದ್ರದ ಕಡಿದಾದ ಸ್ಥಳಕ್ಕೆ ಉಗ್ರವಾಗಿ ಓಡಿಹೋಗಿ ನೀರಿನಲ್ಲಿ ಬಿದ್ದು ಸತ್ತು ಹೋದವು. ಮತ್ತು ಅವುಗಳನ್ನು ಕಾಯುತ್ತಿದ್ದವರು ಪಟ್ಟಣ ದೊಳಕ್ಕೆ ಓಡಿಹೋಗಿ ಎಲ್ಲವನ್ನೂ ದೆವ್ವಗಳು ಹಿಡಿದಿದ್ದವರಿಗೆ ಸಂಭವಿಸಿದ್ದನ್ನೂ ತಿಳಿಯಪಡಿಸಿದರು.ಆಗ ಇಗೋ, ಪಟ್ಟಣದವರೆಲ್ಲರು ಯೇಸುವನ್ನು ಸಂಧಿಸುವದಕ್ಕೆ ಹೊರಗೆ ಬಂದರು; ಮತ್ತು ಅವರು ಆತನನ್ನು ನೋಡಿ ತಮ್ಮ ಮೇರೆಗಳನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು. ಆಗ ಇಗೋ, ಪಟ್ಟಣದವರೆಲ್ಲರು ಯೇಸುವನ್ನು ಸಂಧಿಸುವದಕ್ಕೆ ಹೊರಗೆ ಬಂದರು; ಮತ್ತು ಅವರು ಆತನನ್ನು ನೋಡಿ ತಮ್ಮ ಮೇರೆಗಳನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.
- Mark 4:35 ಮಾರ್ಕನು 4:35ಅದೇ ದಿವಸ ಸಾಯಂಕಾಲವಾದಾಗ ಆತನು ಅವರಿಗೆ--ನಾವು ಆಚೇದಡಕ್ಕೆ ಹೋಗೋಣ ಅಂದನು.